ವಿವಾಹೇತರ ಸಂಬಂಧ ಸಂಗಾತಿಗೆ ಮಾಡುವ ಮೋಸ. ಆದ್ರೆ ಅನೇಕರು ಇದನ್ನು ಒಪ್ಪಿಕೊಳ್ಳೋದಿಲ್ಲ. ಸಂಗಾತಿ ಬಳಿ ಸಿಗದ ಸುಖವನ್ನು ಇನ್ನೊಬ್ಬರಿಂದ ಪಡೆಯುತ್ತಿದ್ದೇವೆ ಎನ್ನುವವರು ಈ ಸತ್ಯವನ್ನು ಸಂಗಾತಿ ಮುಂದೆ ಮುಚ್ಚಿಡುತ್ತಾರೆ.
ದಾಂಪತ್ಯ ಜೀವನದಲ್ಲಿದ್ದು ಇನ್ನೊಬ್ಬರ ಜೊತೆ ಸಂಬಂಧ ಬೆಳೆಸಿದ್ರೆ ಅದು ದಾಂಪತ್ಯ ದ್ರೋಹವಾಗುತ್ತದೆ. ಸಂಗಾತಿಗೆ ಮಾಡಿದ ಮಹಾನ್ ಮೋಸ ಇದು. ಇದ್ರಿಂದ ಸಂಸಾರವೇ ಮುರಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಸಂಗಾತಿಯನ್ನು ಮೋಸ ಮಾಡುವವರು ಇದು ಉದ್ದೇಶ ಪೂರ್ವಕವಾಗಿ ನಡೆದಿದ್ದಲ್ಲ, ಆಕಸ್ಮಿಕ ಎನ್ನುತ್ತಾರೆ. ಆದ್ರೆ ಇದು ಸುಳ್ಳು. ಮೋಸ ಮಾಡುವುದು ಎಲ್ಲ ವ್ಯಕ್ತಿಗಳ ಸ್ವಂತ ಆಯ್ಕೆಯಾಗಿರುತ್ತದೆ. ಸಂಗಾತಿಗೆ ಮೋಸ ಮಾಡುವ ವ್ಯಕ್ತಿ ಕ್ಷಮೆಗೆ ಅರ್ಹನಾಗಿರೋದಿಲ್ಲ.
ಈಗಿನ ದಿನಗಳಲ್ಲಿ ಸಂಗಾತಿಗೆ ಮೋಸ (Cheating) ಮಾಡೋದನ್ನು ತಪ್ಪೆಂದು ಅನೇಕರು ಒಪ್ಪಿಕೊಳ್ಳುವುದಿಲ್ಲ. ತಮ್ಮ ಜೀವನ (Life) ದಲ್ಲಿ ಮತ್ತಷ್ಟು ಸಂತೋಷ ತುಂಬಲು, ಜೀವನವನ್ನು ಆನಂದಿಸಲು ಈ ಮಾರ್ಗ ಅನುಸರಿಸಿದ್ದಾಗಿ ಹೇಳ್ತಾರೆ. ತಮ್ಮ ಜವಾಬ್ದಾರಿ, ಸಮಸ್ಯೆಯಿಂದ ಮುಕ್ತರಾಗಿ ಸ್ವಚ್ಛಂದವಾಗಿ ಹಾರಾಡಲು ಬಯಸುವ ಜನರು ಅಕ್ರಮ ಸಂಬಂಧ ಹೊಂದುತ್ತಾರೆ. ಸಂಗಾತಿಗೆ ಮೋಸ ಮಾಡಿ, ಅಕ್ರಮ ಸಂಬಂಧ ಬೆಳೆಸಿದ ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸೇಫ್ ಸೆಕ್ಸ್‌ಗಲ್ಲ, ಅಮಲೇರಿಸಿಕೊಳ್ಳೋಕೆ ಕಾಂಡೋಮ್!
ಸಂಗಾತಿಗೆ ಮೋಸ ಮಾಡಲು ಇದೆಲ್ಲ ಕಾರಣ ;
ಪತಿ (Husband) ಯಿಂದ ಸಿಗ್ತಿರಲಿಲ್ಲ ಸುಖ : ನನ್ನ ಪತಿಗೆ ರೋಮ್ಯಾನ್ಸ್ ಮಾಡೋಕೆ ಸ್ವಲ್ಪವೂ ಬರೋರಿಲ್ಲ. ಮದುವೆ ನಂತ್ರ ಪ್ರತಿಯೊಬ್ಬ ಮಹಿಳೆ ಏನು ಬಯಸ್ತಾಳೆ ಅದು ನನ್ನ ಪತಿಯಿಂದ ನನಗೆ ಸಿಗಲಿಲ್ಲ. ನನಗೆ ಆತನ ಜೊತೆ ಒಂದೇ ಹಾಸಿಗೆಯಲ್ಲಿ ಮಲಗಲು ಮನಸ್ಸಿಲ್ಲ. ನನ್ನ ಪತಿ ಸೆಕ್ಸ್ ವಿಷ್ಯದಲ್ಲಿ ಆಕರ್ಷಕವಾಗಿಲ್ಲ. ಹಾಗಂತ ಆತ ಕೆಟ್ಟವನಲ್ಲ. ವ್ಯಕ್ತಿ ಬಹಳ ಸ್ವೀಟ್ ಹಾಗೂ ಮುಗ್ದ. ಆತನ ಜೊತೆ ಮಲಗಲು ನನಗೆ ಇಷ್ಟವಿಲ್ಲ ಎಂಬ ಸಂಗತಿ ಕೂಡ ಅವನಿಗೆ ಇನ್ನೂ ಅರ್ಥವಾಗಿಲ್ಲ. ನಾನು ಪರಪುರುಷರ ಜೊತೆ ಸಂಬಂಧ ಬೆಳೆಸ್ತೇನೆ. ಅದು ಪತಿಗೆ ತಿಳಿಯದಂತೆ ನೋಡಿಕೊಳ್ತೇನೆ. ಯಾಕೆಂದ್ರೆ ಪತಿಯನ್ನು ಕಳೆದುಕೊಳ್ಳಲು ನನಗೆ ಮನಸ್ಸಿಲ್ಲ.
ನನಗೆ ಪುರುಷನಾಗಿರೋ ಖುಷಿಯಿದೆ : ಯಾವುದೇ ಮಹಿಳೆ ನನ್ನ ನೋಡಿ ನಕ್ಕರೂ ನನಗೆ ಅದೇನೋ ಸಂತೋಷ. ಆಕೆಯನ್ನು ಒಲಿಸಿಕೊಳ್ಳಲು ನಾನು ಇನ್ನಿಲ್ಲದ ಪ್ರಯತ್ನ ನಡೆಸ್ತೇನೆ. ಬೇರೆ ಮಹಿಳೆಯರ ಜೊತೆ ಸಂಬಂಧ ಬೆಳೆಸಿದಾಗ ನನಗೆ ನಾನು ಪುರುಷ ಎಂಬ ಖುಷಿ ದುಪ್ಪಟ್ಟಾಗುತ್ತದೆ. ನನ್ನ ಈ ಅಕ್ರಮ ಸಂಬಂಧಕ್ಕೆ ನನ್ನ ಪತ್ನಿ ಕೂಡ ಒಂದು ರೀತಿಯಲ್ಲಿ ಕಾರಣ. ನನ್ನ ಪತ್ನಿಗೆ ರೋಮ್ಯಾನ್ಸ್ ಮಾಡೋಕೆ ಬರೋದಿಲ್ಲ. ಆಕೆ ಜೊತೆ ಮಲಗಲು ನನಗೆ ಇಷ್ಟವಾಗೋದಿಲ್ಲ. ಆದ್ರೆ ಮನೆ ಹೊರಗಿನ ವಿಷ್ಯ ಆಕೆಗೆ ತಿಳಿದಿಲ್ಲ. ಆಕೆಯನ್ನು ನಾನು ಖುಷಿಯಾಗಿಟ್ಟಿದ್ದೇನೆ ಅಂದ್ಮೇಲೆ ನನ್ನ ಖುಷಿಯನ್ನು ನಾನು ಹುಡುಕಿಕೊಳ್ಳೋದ್ರಲ್ಲಿ ತಪ್ಪಿಲ್ಲ .
Break Up ಆದ ಕೂಡಲೇ ಮತ್ತೊಂದು ಲವ್ವಾ? ಬೇಡ, ಸ್ವಲ್ಪ ಸ್ಪೇಸ್ ಇರಲಿ!
ಪತ್ನಿಗೆ ಮೋಸ ಮಾಡಿದ್ರೆ ಖುಷಿ ಸಿಗುತ್ತೆ : ನನ್ನ ಪತ್ನಿಯನ್ನು ನಾನು ಒಪ್ಪಲು ಸಾಧ್ಯವಿಲ್ಲ. ನನ್ನ ಒಪ್ಪಿಗೆ ಇಲ್ಲದೆ ಮದುವೆ ನಡೆದಿದೆ. ಮನಸ್ಸಿಲ್ಲದ ಸಂಸಾರದಲ್ಲಿರಲು ನನಗೆ ಇಷ್ಟವಲ್ಲ. ಹಾಗಾಗಿಯೇ ನಾನು ಮೋಸ ಮಾಡ್ತಿದ್ದೇನೆ. ನನಗೆ ಇದ್ರಿಂದ ಸಂತೋಷ ಸಿಗ್ತಿದೆ.
ನನ್ನ ಸಂತೋಷ ಬೇರೆಡೆ ಸಿಕ್ಕಿದೆ : ನನ್ನ ಮದುವೆ ನೀರಸವಾಗಿರುವ ಕಾರಣ ನಾನು ಹೊರಗಿನ ಸುಖವನ್ನು ಹುಡುಕಿಕೊಂಡಿದ್ದೇನೆ. ಪತಿಗೆ ಮೋಸ ಮಾಡಿದ್ರೆ ನನಗೆ ಆನಂದ ಸಿಗುತ್ತದೆ. ಸದಾ ಕೆಲಸದಲ್ಲಿ ಬ್ಯುಸಿಯಾಗಿರುವ ಪತಿ, ಮನೆಗೆ ಬಂದ್ರೂ ಸರಿಯಾಗಿ ಮಾತನಾಡೋದಿಲ್ಲ. ನಮ್ಮಿಬ್ಬರ ನಡುವೆ ರೋಮ್ಯಾನ್ಸ್ ಸತ್ತು ಹೋಗಿದೆ. ನನ್ನ ಸಂತೋಷಕ್ಕಾಗಿ ನಾನು ಬೇರೆ ಪುರುಷರ ಜೊತೆ ಸಂಬಂಧ ಬೆಳೆಸುತ್ತೇನೆ. ಆಗಾಗ ಹೊರಗೆ ಹೋಗೋದು ನನಗೆ ಖುಷಿ ನೀಡಿದೆ. ವಾಪಸ್ ಮನೆಗೆ ಬಂದಾಗ ಯಾವುದೇ ಟೆನ್ಷನ್ ಇಲ್ಲದೆ ಮನೆ ಕೆಲಸ ನಿಭಾಯಿಸುತ್ತೇನೆ.