40ರ ಮಹಿಳೆ ಸಂಗಾತಿಯಿಂದ ಬಯಸೋದು ಏನ್ ಗೊತ್ತಾ?

By Suvarna News  |  First Published May 27, 2021, 2:06 PM IST

ಸಂಗಾತಿ ಕುರಿತ ಭಾವನೆಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ. 40ರ ವಯಸ್ಸಿನಲ್ಲಿರೋ ಮಹಿಳೆಗೆ ರೊಮ್ಯಾಂಟಿಕ್‌ಗಿಂತ ಪ್ರಾಮಾಣಿಕ ಹಾಗೂ ಬದ್ಧತೆಯುಳ್ಳ ಸಂಗಾತಿ ಹೆಚ್ಚು ಇಷ್ಟವಾಗುತ್ತಾನೆ. 


ಪ್ರೀತಿಗೆ ವಯಸ್ಸಿನ ಹಂಗಿಲ್ಲ.ಅದು ಮೀಸೆ ಮೂಡೋ ಹದಿಹರೆಯದಲ್ಲೂ ಹುಟ್ಟಬಹುದು,ಇಲ್ಲವೆ ಮೀಸೆ ಹಣ್ಣಾಗಿರೋ ವೃದ್ಧಾಪ್ಯದಲ್ಲೂ ಕಾಣಿಸಿಕೊಳ್ಳಬಹುದು.ಪ್ರೀತಿ ಯಾವ ವಯಸ್ಸಿನಲ್ಲಿ ಹುಟ್ಟಿದರೂ ಅದು ನೀಡೋ ಅನುಭೂತಿ ಮಾತ್ರ ಸುಂದರ.ಆದ್ರೆ ಪ್ರೀತಿಯಿಂದ ನಾವು ಬಯಸೋ ಸಂಗತಿಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ.18ನೇ ವಯಸ್ಸಿನ ಯುವಕ ಅಥವಾ ಯುವತಿಗೆ ಪ್ರೀತಿಯೆಂದ್ರೆ ರೊಮ್ಯಾಂಟಿಕ್‌, ಥ್ರಿಲ್ಲಿಂಗ್‌ ಅನುಭವವಾದ್ರೆ, 50ರ ನಡುವಯಸ್ಸಿನಲ್ಲಿರೋರು ಪ್ರಬುದ್ಧ ಹಾಗೂ ಸ್ಥಿರ ಪ್ರೀತಿ ಬಯಸುತ್ತಾರೆ.ವಯಸ್ಸಾದಂತೆ ಮನಸ್ಸು ಮಾಗುತ್ತದೆ,ಪರಿಣಾಮ ಅಪೇಕ್ಷೆ ಹಾಗೂ ಬಯಕೆಗಳು ಕೂಡ ಬದಲಾಗುತ್ತವೆ.ಅದ್ರಲ್ಲೂ ವಯಸ್ಸು 40 ದಾಟುತ್ತಿದ್ದಂತೆ ಪ್ರೀತಿ ಹಾಗೂ ಸಂಗಾತಿ  ಕುರಿತ ನಮ್ಮ ವ್ಯಾಖ್ಯಾನ, ಬಯಕೆಗಳಂತೂ ಹೆಚ್ಚು ಪ್ರಬುದ್ಧತೆಯಿಂದ ಕೂಡಿರುತ್ತವೆ. ಹಾಗಾದ್ರೆ 40ರ ಆಸುಪಾಸಿನಲ್ಲಿರೋ ಮಹಿಳೆ ತನ್ನ ಸಂಗಾತಿಯಿಂದ ಏನು ಬಯಸುತ್ತಾಳೆ? ಅವಳ ಪ್ರೀತಿಯ ವ್ಯಾಖ್ಯಾನ ಹೇಗಿರಬಹುದು?

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು? ಇಲ್ಲಿದೆ ನೋಡಿ ಮಾಹಿತಿ

Tap to resize

Latest Videos

undefined

ಪ್ರಾಮಾಣಿಕತೆ
ವಯಸ್ಸಿನ ಹಂಗಿಲ್ಲದೆ ಪ್ರತಿ ಮಹಿಳೆಯೂ ತನ್ನ ಸಂಗಾತಿಯಿಂದ ಈ ಗುಣವನ್ನು ಅಪೇಕ್ಷಿಸುತ್ತಾಳಾದ್ರೂ ಪ್ರೌಢ ವಯಸ್ಸಿನಲ್ಲಿರೋ ಮಹಿಳೆ ಇದಕ್ಕೆ ಸ್ವಲ್ಪ ಹೆಚ್ಚೇ ಮಹತ್ವ ನೀಡುತ್ತಾಳೆ. ಏಕೆಂದ್ರೆ ಇನ್ನೊಬ್ಬ ಸಂಗಾತಿಯನ್ನು ಹುಡುಕುವಷ್ಟು ಸಮಯ ಹಾಗೂ ವ್ಯವಧಾನ ಎರಡೂ ಆಕೆ ಬಳಿಯಿಲ್ಲ. ಇದೇ ಕಾರಣಕ್ಕೆ 40ರ ಆಸುಪಾಸಿನಲ್ಲಿರೋ ಮಹಿಳೆ ಸಂಗಾತಿಯಿಂದ ನಿರೀಕ್ಷಿಸೋ ಬಹುಮುಖ್ಯ ಗುಣ ನಿಯತ್ತು. ತನ್ನ ಭಾವನೆಗಳೊಂದಿಗೆ ಆಟವಾಡೋ ಸಂಗಾತಿಯನ್ನು ಆಕೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳೋದಿಲ್ಲ. ಈ ವಯಸ್ಸಿನಲ್ಲಿ ಆಕೆ ತನ್ನೊಂದಿಗೆ ಮಕ್ಕಳ ಭವಿಷ್ಯವನ್ನೂ ಯೋಚಿಸೋ ಕಾರಣ ಸಂಗಾತಿಯ ಮೋಸವನ್ನು ಸಹಿಸೋದೂ ಇಲ್ಲ, ಕ್ಷಮಿಸೋದೂ ಇಲ್ಲ.

ಹೋಲಿಕೆ ಇಷ್ಟವಾಗಲ್ಲ
ಯಾವ ಮಹಿಳೆಯೂ ಸಂಗಾತಿ ಇನ್ನೊಂದು ಮಹಿಳೆಯೊಂದಿಗೆ ತನ್ನನ್ನು ಹೋಲಿಸಿ ನೋಡೋದನ್ನು ಇಷ್ಟಪಡೋದಿಲ್ಲ. ಅದ್ರಲ್ಲೂ 40ರ ಮಹಿಳೆಗೆ ಸಂಗಾತಿ ತನಗಿಂತ ಚಿಕ್ಕ ವಯಸ್ಸಿನ ಇತರ ಮಹಿಳೆಯರ ಜೊತೆ ಹೋಲಿಕೆ ಮಾಡಿ ಮಾತನಾಡೋದನ್ನು ಸಹಿಸೋದು ಅಸಾಧ್ಯದ ಕೆಲ್ಸ. ತನ್ನ ರೂಪ, ಗುಣಗಳನ್ನು ಇದ್ದಂತೆಯೇ ಒಪ್ಪಿಕೊಂಡು ಪ್ರೀತಿಸೋ, ಗೌರವಿಸೋ ವ್ಯಕ್ತಿಯನ್ನು ಆಕೆ ಬಯಸುತ್ತಾಳೆ. ಹೀಗಾಗಿ 40ರ ಆಸುಪಾಸಿನಲ್ಲಿರೋ ಮಹಿಳೆಯನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡೋ ಪುರುಷರು ಆಕೆಯ ಪ್ರಬುದ್ಧತೆಗೆ ಬೆಲೆ ನೀಡಬೇಕೇ ವಿನಃ ಇತರ ಸಂಗತಿಗಳಿಗಲ್ಲ.

ಡೇಟಿಂಗ್‌ ಟಿಪ್ಸ್: ಮೊದಲ ಭೇಟಿ ಮಧುರವಾಗಿಸಲು ಹಿಂಗ್‌ ಮಾಡಿ

ಐ ಲವ್‌ ಯೂ ಅಂದ್ರೆ ಗಂಭೀರವಾಗಿ ಪರಿಗಣಿಸುತ್ತಾರೆ
ಪ್ರಬುದ್ಧ ಮಹಿಳೆಗೆ ಐ ಲವ್‌ ಯೂ ಅನ್ನೋದರ ಮಹತ್ವ ಗೊತ್ತಿರುತ್ತೆ. ಆಕೆ ಈ ಮೂರು ಪದಗಳನ್ನು ಎಂದಿಗೂ ಹಗುರವಾಗಿ ಪರಿಗಣಿಸೋದಿಲ್ಲ. ಒಂದು ವೇಳೆ 40ರ ಆಸುಪಾಸಿನಲ್ಲಿರೋ ಮಹಿಳೆ ನಿಮಗೆ ʼಐ ಲವ್‌ ಯೂʼ ಎಂದು ಹೇಳಿದ್ರೆ ಖಂಡಿತಾ ಅದನ್ನು ಗಂಭೀರವಾಗಿ ಪರಿಗಣಿಸಿ. ಏಕೆಂದ್ರೆ ಆಕೆಗೆ ನೀವು ವಿಶೇಷ ವ್ಯಕ್ತಿಯಾಗಿದ್ದು, ಮನಸ್ಸಿನಾಳದಿಂದ ಈ ಮಾತು ಹೇಳಿರುತ್ತಾಳೆ.  ಈ ಮಹಿಳೆ ನಿಮ್ಮನ್ನು ಪರಿಶುದ್ಧ ಮನಸ್ಸಿನಿಂದ ಪ್ರೀತಿಸುತ್ತಿದ್ದಾಳೆ ಎಂದೇ ಅರ್ಥ.

24*7 ರೊಮ್ಯಾನ್ಸ್‌ ಬೇಕಿಲ್ಲ
40ರ ಮಹಿಳೆಗೆ ದಿನದ 24 ಗಂಟೆಯೂ ರೊಮ್ಯಾನ್ಸ್‌ ಅಗತ್ಯವಿಲ್ಲ. ಆಕೆಗೆ ಬೇಕಿರೋದು ನಿಮ್ಮ ಗಮನ ಮತ್ತು ಸಮಯ ಮಾತ್ರ. ಗೌರವ, ಬೆಂಬಲ ಹಾಗೂ ಆದ್ಯತೆಯನ್ನು ಬಿಂಬಿಸೋ ವರ್ತನೆಗಳ ಮೂಲಕ ಆಕೆ ಸಂಬಂಧ ಬೆಸೆಯಲು ಇಷ್ಟಪಡುತ್ತಾಳೆ. ಹೂವುಗಳ ಬೊಕ್ಕೆ ನೀಡಿ ರೊಮ್ಯಾನ್ಸ್‌ ಮಾಡೋ ಪುರುಷನಿಗಿಂತ ತಲೆನೋಯುತ್ತಿರೋವಾಗ ಬಿಸಿ ಬಿಸಿ ಚಹಾ ತಂದು ಕೈಗಿಡೋ ವ್ಯಕ್ತಿ ಹೆಚ್ಚು ಇಷ್ಟವಾಗುತ್ತಾನೆ.

ನಾಟಕ ಇಷ್ಟವಾಗೊಲ್ಲ
ಹದಿಹರೆಯದ ವಯಸ್ಸಿನಲ್ಲಿ ಯುವತಿಯರಿಗೆ ಪ್ರೀತಿಯನ್ನು ಮಾತಿನ ಮೂಲಕ ವ್ಯಕ್ತಪಡಿಸೋ ಯುವಕ ಇಷ್ಟವಾಗುತ್ತಾನೆ. ಸಿನಿಮಾ, ನಾಟಕ ಸೇರಿದಂತೆ ಸಾರ್ವಜನಿಕ ರಂಗಗಳಲ್ಲಿ ಕೆಲಸ ಮಾಡೋರು ಇಷ್ಟವಾಗುತ್ತಾರೆ. ಆದ್ರೆ 40ರ ವಯಸ್ಸಿನಲ್ಲಿ ಜನಪ್ರಿಯ ವ್ಯಕ್ತಿಗಿಂತ ಸಂಬಂಧವನ್ನು ನಿಯತ್ತಾಗಿ ನಿಭಾಯಿಸೋ ವ್ಯಕ್ತಿ ಮಹಿಳೆಗೆ ಇಷ್ಟವಾಗುತ್ತಾನೆ. ಭಾವನೆಗಳೊಂದಿಗೆ ಆಟವಾಡೋ ಅಥವಾ ನಾಟಕೀಯವಾಗಿ ಪ್ರೀತಿ ಮಾಡೋ ವ್ಯಕ್ತಿಯನ್ನು40ರ ಮಹಿಳೆ ಎಂದಿಗೂ ಇಷ್ಟಪಡೋದಿಲ್ಲ.

ಮನೆಯೊಳಗೇ ಕಪಲ್ ಲೈಫ್ ಎಂಜಾಯ್ ಮಾಡೋದೇಗೆ ?

ಸ್ವಯಂ ಅರಿವು
ತನ್ನನ್ನು ತಾನು ಅರಿತಿರೋ ಪುರುಷ ಪ್ರಬುದ್ಧ ಮಹಿಳೆಯ ಆಯ್ಕೆಯಾಗಿರುತ್ತಾನೆ. ಮಹಿಳೆ ತನ್ನಂತೆ ಹಿಂದಿನ ಸಂಬಂಧದಿಂದ ಪಾಠ ಕಲಿತ, ಹಳೆಯ ಸಂಬಂಧದಲ್ಲಿ ಮಾಡಿದ ತಪ್ಪುಗಳನ್ನು ಪುನಾರವರ್ತಿಸಲು ಬಯಸದ ವ್ಯಕ್ತಿಯನ್ನು ಆಕೆ ಸಂಗಾತಿಯನ್ನಾಗಿ ಹೊಂದಲು ಬಯಸುತ್ತಾಳೆ. ವಯಸ್ಸಿಗೆ ತಕ್ಕಂತೆ ಸಂಬಂಧಗಳ ಕುರಿತ ಆಲೋಚನೆಗಳು, ನಿರೀಕ್ಷೆಗಳು ಕೂಡ ಬದಲಾಗುತ್ತವೆ. 40ರ ಆಸುಪಾಸಿನ ವಯಸ್ಸಿನಲ್ಲಿ ಸಂಗಾತಿಯ ಹುಡುಕಾಟದಲ್ಲಿರೋ ಪುರುಷರು ತಮ್ಮದೇ ವಯಸ್ಸಿನ ಮಹಿಳೆಯನ್ನು ಜೀವನಸಂಗಾತಿಯನ್ನಾಗಿಸಿಕೊಳ್ಳಲು ಬಯಸುತ್ತಿದ್ರೆ, ಈ ಮೇಲಿನ ಅಂಶಗಳನ್ನು ಗಮನದಲ್ಲಿರಿ ಸಿಕೊಂಡ್ರೆ ಕೆಲಸ ಸುಲಭವಾಗುತ್ತದೆ. 
 

click me!