ಉಜ್ವಲ ಭವಿಷ್ಯ ಬಯಸುವವರು 20ರ ಹರೆಯದಲ್ಲಿ ಮಾಡ್ಬೇಡಿ ಈ Mistakes

By Suvarna NewsFirst Published Sep 26, 2022, 3:55 PM IST
Highlights

ಅನೇಕ ತಪ್ಪುಗಳಿಗೆ ಪಶ್ಚಾತ್ತಾಪ ಪ್ರಾಯಶ್ಚಿತ. ಆದ್ರೆ ಕೆಲ ತಪ್ಪುಗಳು ಪಶ್ಚಾತ್ತಾಪಪಟ್ಟರೂ ಸರಿ ಹೋಗಲಾರವು. ಕಳೆದ ಸಮಯ ಮತ್ತೆ ಬರದು. ಹಾಗಾಗಿ ಆ ಕ್ಷಣ ಏನು ಮಾಡ್ತಿದ್ದೇವೆ, ಏನು ಮಾಡ್ಬೇಕು ಎಂಬುದನ್ನು ಅರಿತು ಮಾಡೋದು ಮುಖ್ಯ.  
 

20ರ ಹರೆಯ ಸುಂದರ ಸಮಯ. ಡಿಗ್ರಿ ಮುಗಿಯುವ ಸಮಯವಿದು. ಆಗಲೇ ಅನೇಕ ಸ್ನೇಹಿತರನ್ನು ಈ ವಯಸ್ಸಿನ ಯುವಕರು ಹೊಂದಿರ್ತಾರೆ. ಈ ಸಮಯದಲ್ಲಿ ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮನಸ್ಸು ಪಕ್ವವಾಗಿರುವುದಿಲ್ಲ. ಆದ್ರೆ ಪಾಲಕರ ಸಹಾಯ ಪಡೆಯುವ ಮನಸ್ಸು ಇವರಿಗಿರೋದಿಲ್ಲ. ನಾವು ದೊಡ್ಡವರಾಗಿದ್ದೇವೆ, ನಮ್ಮ ಜೀವನದ ದಾರಿಯನ್ನು ನಾವು ನಿರ್ಧರಿಸುತ್ತೇವೆ ಎಂಬ ಭ್ರಮೆಯಲ್ಲಿ ಇರುತ್ತಾರೆ. ಪಾಲಕರು ಹಾಗೂ ಮಕ್ಕಳ ಮಧ್ಯೆ ಈ ಸಂದರ್ಭದಲ್ಲಿಯೇ ಅನೇಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ನಕಾರಾತ್ಮಕ ಅಥವಾ ಸಕಾರಾತ್ಮಕ ಪ್ರಭಾವವನ್ನು ಮಾತ್ರ ಬೀರುವುದಿಲ್ಲ. ಅದು ಅವರ ಭವಿಷ್ಯದ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ. ತಪ್ಪಾದ್ಮೇಲೆ ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿಲ್ಲ. ಈ ತಪ್ಪಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. 20ನೇ ವಯಸ್ಸಿನಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

20ರ ಹರೆಯಲ್ಲಿರಲಿ ಈ ವಿಷ್ಯದ ಬಗ್ಗೆ ಎಚ್ಚರ :
ಉಳಿತಾಯ (Saving) ದ ಬಗ್ಗೆ ನಿರ್ಲಕ್ಷ್ಯ :
20ನೇ ವಯಸ್ಸಿನಲ್ಲಿರುವ ಜನರು ಭವಿಷ್ಯ (Future) ದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದಿಲ್ಲ. ಅವರು ಉಳಿತಾಯದ ಬಗ್ಗೆ ಯೋಚಿಸುವುದಿಲ್ಲ. 20ನೇ ವಯಸ್ಸಿನಲ್ಲಿ ಮಾಡುವ ದೊಡ್ಡ ತಪ್ಪು (Wrong) ಗಳಲ್ಲಿ ಇದೂ ಒಂದು. ನಿಮ್ಮ ಬಳಿ ದೊಡ್ಡ ಮಟ್ಟದಲ್ಲಿ ಅಪ್ಪ ಮಾಡಿ ಹಣ ಇರಬಹುದು. ಆದ್ರೆ ಯಾವುದೇ ಕಾರಣಕ್ಕೂ ದುಂದುವೆಚ್ಚ ಮಾಡಬಾರದು. ಈಗಿನಿಂದಲೇ ಹಣವನ್ನು ಉಳಿಸಲು ಕಲಿತ್ರೆ ಮುಂದೆ ಜೀವನ ಚೆನ್ನಾಗಿರುತ್ತದೆ. 20ನೇ ವಯಸ್ಸಿನಲ್ಲಿಯೇ ಕೆಲಸ ಹಿಡಿಯುವವರಿದ್ದಾರೆ. ಅವರು ಬಂದ ಸಂಬಳದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಲು ಶುರು ಮಾಡ್ಬೇಕು. ಪಾಕೆಟ್ ಮನಿ ಪಡೆಯುವವರು ಕೂಡ ಸ್ವಲ್ಪ ಹಣವನ್ನು ಹೂಡಿಕೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೋ, ವಿಡಿಯೋ : ಇದು ಸಾಮಾಜಿಕ ಜಾಲತಾಣದ ದುನಿಯಾ. ಇಲ್ಲಿ ಜನರು ಕುಳಿತ್ರು, ನಿಂತ್ರೂ ವಿಡಿಯೋ ಮಾಡಿ, ಫೋಟೋ ಹೊಡೆದು ಸಾಮಾಜಿಕ ಜಾಲತಾಣಕ್ಕೆ ಹಾಕ್ತಾರೆ. 20ರ ಆಸುಪಾಸಿನ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡ್ತಾರೆ. ಪಾರ್ಟಿಗೆ ಹೋಗೋದು,ಟ್ರಿಪ್ ಗೆ ಹೋಗೋದು, ರೆಸ್ಟೋರೆಂಟ್ ಗೆ ಹೋಗೋದು ಹೀಗೆ ಎಲ್ಲೆ ಹೋದ್ರೂ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಅಪ್ಲೋಡ್ ಆಗಿರುತ್ತದೆ. ಇದು ನಿಮ್ಮ ಸ್ನೇಹಿತರ ಮಧ್ಯೆ ನಿಮ್ಮನ್ನು ಹಿರೋ ಮಾಡ್ಬಹುದು. ಆದ್ರೆ ಅತಿಯಾದ ಸಾಮಾಜಿಕ ಜಾಲತಾಣ ಬಳಕೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ ಎಂಬುದನ್ನು ಅರಿತಿರಿ.

ಅಬ್ಬಬ್ಬಾ..ಮೂವರು ಸಹೋದರಿಯರಿಗೆ ಒಬ್ಬನೇ ಗಂಡ !

ಈ ವಯಸ್ಸಿನಲ್ಲಿ ವ್ಯಾಯಾಮ (Exercise) ಮರಿಬೇಡಿ : ಬಹುತೇಕರು ಈ ವಯಸ್ಸಿನಲ್ಲಿ ವ್ಯಾಯಾಮ, ಯೋಗ ಮಾಡುವುದಿಲ್ಲ. ನಾವು ಫಿಟ್ ಆಗಿದ್ದೇವೆ ಎಂಬುದು ಅವರ ಭಾವನೆಯಾಗಿರುತ್ತದೆ. ಆದರೆ ಇದು ತಪ್ಪು. ನಿಮ್ಮ ಈ ನಿರ್ಲಕ್ಷ್ಯ ವಯಸ್ಸಾದಂತೆ ಅನೇಕ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ 20ನೇ ವಯಸ್ಸಿನಿಂದ್ಲೇ ವ್ಯಾಯಾಮ ಮಾಡುವುದು ಒಳ್ಳೆಯದು.

ಒಂಟಿಯಾಗಿದ್ರೂ ಸಿಗುತ್ತೆ ಆನಂದ : 20ನೇ ವಯಸ್ಸಿನ ಆಸುಪಾಸಿನಲ್ಲಿ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ (Boy Friend) ಹೊಂದಲು ಜನರು ಬಯಸ್ತಾರೆ. ಸಂಗಾತಿಯಿದ್ರೆ ಅದ್ರ ಆನಂದವೇ ಬೇರೆ ಎಂದುಕೊಳ್ತಾರೆ. ಸಂಗಾತಿ (Companion) ಸಿಕ್ಕಿದ ಮೇಲೆ ಅವರನ್ನು ಬಿಟ್ಟು ಬೇರೆ ಪ್ರಪಂಚದ ಅರಿವು ಅವರಿಗಿರೋದಿಲ್ಲ. ನಾನು ಒಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ ಎಂದುಕೊಳ್ತಾರೆ. ಆದ್ರೆ ಇದು ತಪ್ಪು ಕಲ್ಪನೆ. ಒಂಟಿಯಾಗಿದ್ರೂ ನೀವು ಆನಂದಪಡೆಯಬಹುದು. ಜಂಟಿಯಾಗಿರುವ ಗುಂಗಿನಲ್ಲಿ ಒಂಟಿಯಾಗಿರುವ ಆನಂದವನ್ನು ನೀವು ಕಳೆದುಕೊಳ್ತೀರಿ.

Parenting Tips : ಮನೆಯಲ್ಲಿ ಮಕ್ಕಳಷ್ಟೆ ಇದ್ರೆ ಪಾಲಕರು ಏನ್ಮಾಡ್ಬೇಕು ಗೊತ್ತಾ?

ರಜೆ ಕೇಳೋ ಧೈರ್ಯ ಮಾಡಿ  : 20ನೇ ವಯಸ್ಸಿನಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳುವ ಮಂದಿ ಕಚೇರಿಯಲ್ಲಿ ರಜೆ (Leave) ಕೇಳಲು ಸ್ವಲ್ಪ ಹಿಂದೆ ಮುಂದೆ ನೋಡ್ತಾರೆ. ನೀವು ಸರಿಯಾಗಿ ಕೆಲಸ ಮಾಡ್ತಿದ್ದೀರಿ ಎಂದಾದ್ರೆ ರಜೆ ಪಡೆಯಲು ನೀವು ಅರ್ಹರು ಎಂಬುದು ನಿಮಗೆ ಗೊತ್ತಿರಲಿ. ಮಾನಸಿಕ ಶಾಂತಿಗೆ ರಜೆ ಅವಶ್ಯಕತೆಯಿರುತ್ತದೆ ಎಂಬುದು ನಿಮಗೆ ನೆನಪಿರಲಿ. 

click me!