
ಡೆಸ್ಟಿನೇಷನ್ ವೆಡ್ಡಿಂಗ್ ಹಲವರ ಕನಸು. ದೂರದ ಸ್ಥಳಗಳಲ್ಲಿ ಸ್ವರ್ಗದಂತೆ ಮೂಡಿಸಿರುವ ವಾತಾವರಣದಲ್ಲಿ ವಿವಾಹವಾಗಬೇಕು ಎನ್ನುವುದು ಯುವಜನರ ಆಸೆ. ಇತ್ತೀಚಿನ ವರ್ಷಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಕಾನ್ಸೆಪ್ಟ್ ದೇಶದಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಚಿತ್ರಣಗಳನ್ನು ಮೆಮೋರೇಬಲ್ ಎನ್ನುವಂತೆ ಶೇರ್ ಮಾಡುವ ಪರಿಪಾಠ ಹೆಚ್ಚಾದಾಗಿನಿಂದಲೂ ಈ ಟ್ರೆಂಡ್ ಹೆಚ್ಚಾಗಿದೆ. ಹೀಗಾಗಿ, ಸ್ಥಳೀಯ ಸಾಂಪ್ರದಾಯಿಕ ಸ್ಥಳಕ್ಕಿಂತಲೂ ಅದ್ದೂರಿಯಾಗಿ, ಆಡಂಬರದಲ್ಲಿ ಸಿಂಗಾರಗೊಂಡ ಪ್ರದೇಶ, ಪ್ರಕೃತಿಯ ಮಡಿಲು ಅಥವಾ ವಿದೇಶಗಳ ಸುಂದರ ಪ್ರದೇಶಗಳಲ್ಲಿ ವೆಡ್ಡಿಂಗ್ ಮಾಡಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವಂತಹ ಹಲವು ಮದುವೆಗಳು ಹೊರವಲಯದ ರೆಸಾರ್ಟ್ ಗಳಿಗೆ ಶಿಫ್ಟ್ ಆದಂತೆ ದುಡ್ಡಿರುವವರು ತಮ್ಮ ಕುಟುಂಬದ ಮದುವೆಗಳನ್ನು ವಿದೇಶಗಳಲ್ಲಿ ಹಮ್ಮಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಎಲ್ಲರಿಗೂ ಇದು ಸಾಧ್ಯವಾಗುವ ಮಾತಲ್ಲ. ಏಕೆಂದರೆ, ಸಾಮಾನ್ಯ ವಿವಾಹಕ್ಕಿಂತ ಇದಕ್ಕೆ ದುಪ್ಪಟ್ಟು ಹಣ ಬೇಕಾಗುತ್ತದೆ. ಆದರೆ, ಸಾಮಾನ್ಯ ಜನರಿಗೂ ಇರುವ ಈ ಆಸೆಯನ್ನು ಪೂರೈಸಲು ಮುಂಬೈ ಮೂಲದ ಕಂಪನಿಯೊಂದು ವಿಶಿಷ್ಟ ಯೋಜನೆಗೆ ಚಾಲನೆ ನೀಡಿದೆ.
ದುಬಾರಿ ಸೀರೆಗಳು, ಮೈಸೂರು ಸಿಲ್ಕ್ ಸೀರೆಗಳು, ಆಭರಣಗಳು ಅಷ್ಟೇ ಏಕೆ? ಹೊಸ ವರ್ಷದ ಊಟಕ್ಕಾಗಿ ಹಣ (Money) ಸಂಗ್ರಹಿಸಲು ಚೀಟಿ ಕಟ್ಟುವ ಸಂಪ್ರದಾಯವಿದೆ. ಪ್ರತಿ ತಿಂಗಳು (Monthly) ಇಂತಿಷ್ಟು ಹಣವೆಂದು ಒಂದೆಡೆ ಸೇರಿಸುವುದು ಇದರ ಉದ್ದೇಶ. ಆದರೆ, ಬಹಳಷ್ಟು ಜನ ಹಣ ಕೈಯಲ್ಲೇ ಇದ್ದರೆ ಖಾಲಿಯಾಗಿ ಹೋಗುತ್ತದೆಂದು ಚೀಟಿಯಲ್ಲಿ ಹಣ ಹೂಡಿಕೆ (Investment) ಮಾಡುತ್ತಾರೆ. ಇದು ಸಹ ಅಂಥದ್ದೇ ಚಿಂತನೆಯ ಪ್ರತಿರೂಪ. ವಿದೇಶಗಳಲ್ಲಿ (Foreign) ಮದುವೆಯಾಗಲು ಬಯಸುವವರಿಗೆ ಸಿಪ್ (SIP) ಯೋಜನೆಯನ್ನು (Plan) ಈ ಕಂಪನಿ ಜಾರಿಗೆ ತಂದಿದೆ. ಸಿಪ್ ಎಂದರೆ, ಸಿಸ್ಟಮ್ಯಾಟಿಕ್ (Systematic) ಇನ್ ವೆಸ್ಟ್ಮೆಂಟ್ ಪ್ಲಾನ್ ಎಂದರ್ಥ. ಅಂದರೆ, ವ್ಯವಸ್ಥಿತ ಹೂಡಿಕೆ ಯೋಜನೆ ಎನ್ನಬಹುದು.
ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ಜಗತ್ತಿನ ಶ್ರೀಮಂತ ವ್ಯಕ್ತಿಯ ಸರಳತೆಗೆ ನೆಟಿಜನ್ಸ್ ಫಿದಾ
ಸಿಪ್ ನಲ್ಲಿ ಹಣ ಹಾಕೋದು ಈಸಿ
ಮ್ಯೂಚುವಲ್ ಫಂಡ್ (Mutual Fund) ನಲ್ಲಿ ಹೂಡಿಕೆ ಮಾಡುವುದನ್ನು ಸಿಪ್ ಎನ್ನಲಾಗುತ್ತದೆ. ಇದೊಂದು ವ್ಯವಸ್ಥಿತವಾದ ಹೂಡಿಕೆ, ಇದು ಶೇರು (Share) ಮಾರುಕಟ್ಟೆಯಂತಲ್ಲ, ಗ್ರಾಹಕರ ಹಣಕ್ಕೆ ಭದ್ರತೆ ಹೆಚ್ಚು. ದೀರ್ಘಕಾಲದ (Long Term) ಸಿಪ್ ಹೂಡಿಕೆ ಅತ್ಯಂತ ಜನಪ್ರಿಯವಾಗಿದ್ದು, ಕೆಳಮಧ್ಯಮ ವರ್ಗದವರು ಹೆಚ್ಚಾಗಿ ಹೂಡಿಕೆ ಮಾಡುತ್ತಾರೆ. ಇಂತಹ ಸಿಪ್ ಯೋಜನೆಯನ್ನು ಡೆಸ್ಟಿನೇಷನ್ (Destination) ವಿವಾಹಕ್ಕಾಗಿ ರೂಪಿಸಲಾಗಿದ್ದು, ಇದರ ಜಾಹೀರಾತು ಸೋಷಿಯಲ್ ಮೀಡಿಯಾ ಎಕ್ಸ್ ಖಾತೆ ಹಾಗೂ ಬಳಿಕ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಆಗಿದೆ.
“ಡೆಸ್ಟಿನೇಷನ್ ವಿವಾಹಕ್ಕೆ ಸಿಪ್ ಯೋಜನೆʼ ಎನ್ನುವ ಹೆಸರಿನಲ್ಲಿ ಜಾಹೀರಾತು ನೀಡಲಾಗಿದ್ದು, ತಿಂಗಳಿಗೆ 11 ಸಾವಿರ ರೂಪಾಯಿಯಿಂದ ಆರಂಭವಾಗಿ, 43,500 ರೂಪಾಯಿವರೆಗೆ ಹೂಡಿಕೆ ಮಾಡುವ ಅವಕಾಶವಿದೆ.
ಡಾಲರ್ ಔಟ್, ದೇಶೀಯ ಕರೆನ್ಸಿಯಲ್ಲಿ ವ್ಯವಹರಿಸಲು ಭಾರತ-ಇಂಡೋನೇಷ್ಯಾ ಒಪ್ಪಂದ!
ವೈರಲ್ ಆದ ಪೋಸ್ಟ್
ಶೇರ್ ಆದ ಕೆಲವೇ ಸಮಯದಲ್ಲಿ ಈ ಪೋಸ್ಟ್ ಭರ್ಜರಿ ವೈರಲ್ (Viral) ಆಗಿದ್ದು, ಸಾವಿರಾರು ಜನ ಲೈಕ್ (Likes) ಮಾಡಿದ್ದಾರೆ.
ಹಲವರು ಸಿಪ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ (Information) ಕೇಳಿದ್ದಾರೆ. ಎಷ್ಟು ಇನ್ ಸ್ಟಾಲ್ ಮೆಂಟ್ ಗಳಲ್ಲಿ ಹಣ ತುಂಬಬೇಕು ಎಂದು ಕೇಳಿದ್ದಾರೆ. “ಇನ್ನು ಮದುವೆಗೂ ಮೊದಲೇ ಮುಹೂರ್ತ ಮತ್ತು ಮಾರುಕಟ್ಟೆ ಎರಡನ್ನೂ ಟ್ರ್ಯಾಕ್ ಮಾಡಿಕೊಳ್ಳಬೇಕುʼ ಎಂದು ತಮಾಷೆ ಮಾಡಿದ್ದಾರೆ. “ನಾವು ವಯಸ್ಕರಿಗೆ ಹಣ ಕೂಡಿಡುವುದೇ ಕಷ್ಟವಾಗಿದೆ. ಈಗ ವೆಡ್ಡಿಂಗ್ ಪ್ರಕ್ರಿಯೆ ಕೂಡ ಸಿಕ್ಕಾಪಟ್ಟೆ ದುಬಾರಿಯಾಗಿವೆ. ವಿವಾಹಕ್ಕಾಗಿ ಹೇಗೆ ಹಣ ಸೇವ್ (Save) ಮಾಡಬೇಕು?ʼ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಹಣಕಾಸು ಮಾರುಕಟ್ಟೆಗೆ ಹೊಸದೊಂದು ರೀತಿಯ ಯೋಜನೆ ಆರಂಭಿಸಿದಂತಾಗಿದೆ. ಆದರೆ, ಸಂಸ್ಥೆಯ ಅಧಿಕೃತತೆ ಹಾಗೂ ಸಿಪ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.