
ಸೆಲೆಬ್ರಿಟಿಗಳ ಲೈಫೇ ಹಾಗೆ. ಸೀರಿಯಲ್, ಸಿನಿಮಾಗಳಲ್ಲಿ ಎಷ್ಟೋ ಸಲ ಮದುವೆಯಾಗುತ್ತೆ, ಹನಿಮೂನ್ ಆಗತ್ತೆ, ಏನೇನೋ ಆಗಿಬಿಡುತ್ತವೆ. ಆದ್ದರಿಂದ ಬಣ್ಣದ ಲೋಕದಲ್ಲಿಯೇ ತೇಲುತ್ತಿರುವ ಅವರಿಗೆ ರಿಯಲ್ ಲೈಫ್ ಕೂಡ ಬಣ್ಣದ ಲೈಫ್ ಎನ್ನಿಸುವುದು ಉಂಟು. ಅದೇ ರೀತಿಯ ಫನ್ನಿ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಎರಡು ಮದುವೆಗಳು ಒಟ್ಟಿಗೇ ಆಗುತ್ತಿದ್ದ ಸಂದರ್ಭದಲ್ಲಿ, ನಟಿಯೊಬ್ಬರು. ತನ್ನ ಗಂಡನಿಗೆ ಊಟ ಮಾಡುವಾಗ ತಿನ್ನಿಸುವ ಬದಲು, ಪಕ್ಕದಲ್ಲಿಯೇ ಇರುವ ಸಹನಟನಿಗೆ ತಿನ್ನಿಸಿದ್ದಾರೆ. ಆ ಬಳಿಕ ತಪ್ಪಿನ ಅರಿವಾಗಿ ಜೋರಾಗಿ ನಕ್ಕಿದ್ದಾರೆ. ಆದರೆ ರಿಯಲ್ ಗಂಡ ಮಾತ್ರ ಸಪ್ಪೆ ಮೋರೆ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವೈರಲ್ ವಿಡಿಯೋದಲ್ಲಿ ಮರಾಠಿ ಸೀರಿಯಲ್ ನಟರಾದ ಅರ್ಪಿತಾ ಮತ್ತು ಸಮೀರ್ ಅವರ ಮದುವೆಯ ಕಾರ್ಯ ನಡೆಯುತ್ತಿದೆ. ಅರ್ಪಿತಾ ಅವರು ವಿರಾಜ್ ಎನ್ನುವವರಿಗೆ ಮತ್ತು ಸಮೀರ್ ಅವರು ರಾಜಸಿ ಎನ್ನುವವರಿಗೆ ಮದುವೆಯಾಗುತ್ತಿದ್ದಾರೆ. ಮದುವೆಯ ಬಳಿಕ ಊಟ ಮಾಡುವಾಗ ಅರ್ಪಿತಾ ಅವರ ಒಂದು ಕಡೆ ರಿಯಲ್ ಪತಿ ವಿರಾಜ್ ಮತ್ತು ಇನ್ನೊಂದು ಕಡೆ ಸಮೀರ್ ಅವರು ಕುಳಿತಿದ್ದಾರೆ.
ಅರ್ಪಿತಾ ಅವರು ಊಟ ಮಾಡಿಸುವಾಗ ಗಂಡನನ್ನು ಬಿಟ್ಟು ಸಮೀರ್ ಅವರಿಗೆ ತುತ್ತು ತಿನ್ನಿಸಲು ಹೋಗಿದ್ದಾರೆ. ವಿಚಿತ್ರ ಎಂದರೆ ಸಮೀರ್ ಕೂಡ ಅರ್ಪಿತಾ ಅವರಿಗೆ ತಿನ್ನಿಸಲು ಮುಂದಾಗಿದ್ದಾರೆ. ಆ ಬಳಿಕ ನಟಿ ಅರ್ಪಿತಾ ತಾನು ಮಾಡ್ತಿರೋದು ತಪ್ಪು ಎಂದು ತಿಳಿದಿದೆ. ಆರಂಭದಲ್ಲಿ ಶಾಕ್ ಆದಂತೆ ಆಗಿದ್ದು, ಕೊನೆಗೆ ಜೋರಾಗಿ ನಕ್ಕಿದ್ದಾರೆ. ಸಮೀರ್ ಕೂಡ ನಕ್ಕು ತಮ್ಮ ರಿಯಲ್ ಪತ್ನಿಯ ಮುಖ ನೋಡಿದ್ದಾರೆ.
ಅರ್ಪಿತಾ ಅವರು ಗಂಡನಿಗೆ ಸಾರಿ, ಸಾರಿ ಎಂದಾಗ ಗಂಡನ ಮುಖ ಮಾತ್ರ ಕೋಪಗೊಂಡಂತಿತ್ತು. ಇದರ ವಿಡಿಯೋ ವೈರಲ್ ಆಗುತ್ತಲೇ, ಇದು ರೀಲ್ಸ್ಗಾಗಿ ಮಾಡಿರುವ ವಿಡಿಯೋ ಎಂದು ಹಲವರು ಹೇಳುತ್ತಿದ್ದಾರೆ. ಇದು ಗೊತ್ತಿದ್ದೇ ಮಾಡಲಾಗಿದೆ, ಹೇಳಿ ಕೇಳಿ ಇಬ್ಬರೂ ನಟರು. ನಟನೆ ಮಾಡುವುದು ಚೆನ್ನಾಗಿ ಗೊತ್ತು ಎಂದಿದ್ದರೆ, ಮತ್ತೆ ಕೆಲವರು ಗಂಡನ ಮುಖ ನೋಡಿದ್ರೆ ಇದು ನಟನೆ ಎನ್ನಿಸುತ್ತಿಲ್ಲ. ರೀಲ್ ಮದುವೆ ಸಾಕಷ್ಟು ಆಗಿರೋ ಕಾರಣ, ನಟಿಗೆ ಕನ್ಫ್ಯೂಸ್ ಆಗಿರಬೇಕು ಎನ್ನುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.