ಈ ಮುದ್ದಾದ ಜೋಡಿ ಲವ್ ಸ್ಟೋರಿಗೆ ನೆಟಿಜನ್ಸ್ ಫಿದಾ, ಯಾರೂ ಕಣ್ಣೂ ಬೀಳಬಾರದಪ್ಪ!

By Suvarna News  |  First Published Jan 6, 2024, 4:42 PM IST

ಪ್ರೀತಿಸುವ ಮನಸ್ಸು ಶುದ್ಧವಾಗಿರಬೇಕು. ಆಸ್ತಿ, ಅಂತಸ್ತು, ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡದೆ ಮನಸ್ಸು ಮನಸ್ಸು ಕಲೆತಾಗ ಮಾತ್ರ ಸಂಬಂಧ ದೀರ್ಘಕಾಲ ಬಾಳಿಕೆ ಬರೋದು. ಪ್ರೀತಿಗೊಂದು ಅರ್ಥ ಸಿಗೋದು. 
 


ಪ್ರೀತಿಸುವ ವ್ಯಕ್ತಿ ಯಾರಾಗಿರಬೇಕು ಎಂಬುದು ನಿಮಗೆ ತಿಳಿದಿರಬೇಕು. ಒಬ್ಬ ಪರಿಪೂರ್ಣ ವ್ಯಕ್ತಿಯ ಪ್ರೀತಿಯಲ್ಲಿ ನೀವು ಬೀಳುವ ಬದಲು ನಿಮ್ಮನ್ನು ಪರಿಪೂರ್ಣಗೊಳಿಸುವ ವ್ಯಕ್ತಿ ಜೊತೆ ಸಂಬಂಧ ಬೆಳೆಸೋದು ಅತ್ಯುತ್ತಮ. ಇದು ಪ್ರೀತಿಗೊಂದು ಅರ್ಥ ನೀಡುತ್ತದೆ. ಇದನ್ನು ಅನೇಕರು ಚೆನ್ನಾಗಿ ಅರಿತಿದ್ದಾರೆ. ವ್ಯಕ್ತಿಯ ಬಾಹ್ಯ ಸೌಂದರ್ಯ, ಕುಂದುಕೊರತೆಗಳನ್ನು ನೋಡದೆ ಅವರ ಮನಸ್ಸು, ವ್ಯಕ್ತಿತ್ವಕ್ಕೆ ಮನಸೋತು ಅವರನ್ನು ಪ್ರೀತಿಸುತ್ತಾರೆ, ಮದುವೆಯಾಗುವ ನಿರ್ಧಾರಕ್ಕೆ ಬರ್ತಾರೆ. ಒಬ್ಬ ಕಾಲಿಲ್ಲದ ಅಥವಾ ಕಣ್ಣಿಲ್ಲದ ವ್ಯಕ್ತಿಯನ್ನು ಇನ್ನೊಬ್ಬ ಎಲ್ಲ ಅಂಗವಿರುವ ಪರಿಪೂರ್ಣ ವ್ಯಕ್ತಿ ಪ್ರೀತಿಸಿದಾಗ ಸಮಾಜ ನಾನಾ ಮಾತುಗಳನ್ನು ಆಡುತ್ತದೆ. ನಿನಗ್ಯಾಕೆ ಇದೆಲ್ಲ ಎಂದು ಪ್ರಶ್ನೆ ಮಾಡುತ್ತದೆ. ನಿನ್ನ ಸೌಂದರ್ಯಕ್ಕೆ ತಕ್ಕಂತೆ ಒಳ್ಳೆಯ ಸಂಗಾತಿ ಸಿಗ್ತಾರೆ ಎಂದು ಅವರ ಮನಸ್ಸು ಬದಲಿಸುವ ಪ್ರಯತ್ನ ನಡೆಸ್ತಾರೆ. ಎಲ್ಲಿ ನಿಜವಾದ ಪ್ರೀತಿ ಇರುತ್ತೋ ಅಲ್ಲಿ ಈ ಮಾತಿಗೆ ಬೆಲೆ ಇರೋದಿಲ್ಲ. ಪ್ರೀತಿಗೆ, ಪ್ರೀತಿಸಿದವರಿಗೆ ಮಹತ್ವ ನೀಡುವ ಜನರು, ಸಂಗಾತಿ ವಿಕಲಾಂಗ ಎಂಬುದು ಗೊತ್ತಿದ್ದೂ ಮುಂದಿನ ಹೆಜ್ಜೆ ಇಡ್ತಾರೆ. ಇದಕ್ಕೆ ಈ ಜೋಡಿ ಸಾಕ್ಷ್ಯ. ಅವರಿಬ್ಬರ ಪ್ರೀತಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದರಿರಲಿ ಎಂದು ನೆಟ್ಟಿಗರು ಹರಿಸಿದ್ದಾರೆ. 

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram)  ನಲ್ಲಿ ಹಜೀಬ್ ಮತ್ತು ನೂರ್ ಜಲೀಲಾ ಪ್ರೇಮ ಕಥೆಯನ್ನು (Love Story) ಹಂಚಿಕೊಳ್ಳಲಾಗಿದೆ. ಜನರು ಅವರ ಕಥೆ ಕೇಳಿ ಕಣ್ಣೀರಾಗಿದ್ದಾರೆ. ಹಜೀಬ್ (Hazeeb) ಪ್ರೀತಿಗೆ ಮೆಚ್ಚಿದ್ದಾರೆ.

Tap to resize

Latest Videos

ವಾಸ್ತವವಾಗಿ ನೂರ್ ಜಲೀಲಾ (Noor Jalila) ವಿಕಲಾಂಗೆ. ಆಕೆಗೆ ಎರಡೂ ಕಾಲಿಲ್ಲ. ಕೈ ಕೂಡ ಸರಿಯಾಗಿಲ್ಲ. ಮನೆಯಲ್ಲಿ ಅನೇಕ ದಾಂಪತ್ಯ ಮುರಿದುಬಿದ್ದಿದ್ದನ್ನು ನೋಡಿದ್ದ ನೂರ್ ಜಲೀಲಾ ಮದುವೆಯಾಗದಿರುವ ನಿರ್ಧಾರಕ್ಕೆ ಬಂದಿದ್ದಳು. ಆದ್ರೆ ಪ್ರೀತಿ ಆಕೆಯನ್ನು ಬದಲಿಸಿತು. ಆಕೆ ಅಂದುಕೊಂಡದ್ದು ನಡೆಯಲಿಲ್ಲ. 2021ರಲ್ಲಿ ನೂರ್ ಜಲೀಲಾ, ಹಜೀಬ್ ನನ್ನು ಭೇಟಿ ಮಾಡಿದ್ದಳು. ಅವರಿಬ್ಬರು ಉತ್ತಮ ಸ್ನೇಹಿತರಾದ್ರು. ಹಜೀಬ್, ನೂರ್ ಜಲೀಲಾ ಕಷ್ಟದಲ್ಲಿದ್ದಾಗ, ನೋವಿನಲ್ಲಿದ್ದಾಗ ಆಕೆಗೆ ಪ್ಯಾನಿಕ್ ಅಟ್ಯಾಕ್ (Panic Attack) ಆದಾಗ ಆಕೆ ಜೊತೆಯಲ್ಲಿದ್ದ. ಧೈರ್ಯ, ಪ್ರೀತಿ ನೀಡಿದ್ದ. ಸ್ನೇಹ (Friendship) ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಚಿಗುರಿತ್ತು. ಇಬ್ಬರು ಡೇಟಿಂಗ್ (Dating) ಶುರು ಮಾಡಿದ್ದರು.

ಪವನ್​ ಕಲ್ಯಾಣ್​ಗೆ ಇದೇ ವರ್ಷ 3ನೇ ಬಾರಿ ಡಿವೋರ್ಸ್​ ಎಂದ ಜ್ಯೋತಿಷಿ ರಾಜಕೀಯ ಭವಿಷ್ಯದಲ್ಲಿ ಹೇಳಿದ್ದೇನು?

ಹಜೀಬ್ ಕಾಳಜಿ ನೂರ್ ಜಲೀಲಾಗಳನ್ನು ಮತ್ತಷ್ಟು ಹತ್ತಿರಕ್ಕೆ ತಂದಿತ್ತು. ಆದ್ರೆ ವಿಷ್ಯ ಮನೆಗೆ ಗೊತ್ತಾಗ್ತಿದ್ದಂತೆ ಪಾಲಕರು ಪ್ರಶ್ನೆ ಮಾಡಿದ್ದರು. ನೂರ್ ಜಲೀಲಾಗೆ ಕೈ ಹಾಗೂ ಕಾಲಿಲ್ಲ. ನಿಜವಾಗ್ಲೂ ನೀನು ಆಕೆಯನ್ನು ಪ್ರೀತಿ ಮಾಡ್ತಿಯಾ ಎಂದು ಕೇಳಿದ್ದರು. ಇದ್ರಿಂದ ನೊಂದ ನೂರ್ ಜಲೀಲಾ, ಇನ್ನೊಬ್ಬ ಹುಡುಗಿ ಹುಡುಕಿಕೊಳ್ಳುವಂತೆ ಹಜೀಬ್ ಗೆ ಮನವಿ ಮಾಡಿದ್ದಳು. ಈ ಪ್ರೀತಿಯಿಂದ ಹೊರಬರುವ ನಿರ್ಧಾರಕ್ಕೆ ಬರುವವಳಿದ್ದಳು. ಆದ್ರೆ ಹಜೀಬ್ ಆಕೆ ಕೈ ಬಿಡಲಿಲ್ಲ. 

ನಾನು ಮದುವೆಯಾದ್ರೆ ನೂರ್ ಜಲೀಲಾಳನ್ನು ಮಾತ್ರ. ಆಕೆಯಿಂದ್ಲೇ ನನ್ನ ಜೀವನ ಪೂರ್ಣಗೊಳ್ಳೋದು ಎಂದಿದ್ದ. ಮಗನ ಮನಸ್ಸು ಪಾಲಕರಿಗೆ ಅರ್ಥವಾಗಿತ್ತು. ಇಬ್ಬರ ಪ್ರೀತಿಯನ್ನು ಅರ್ಥಮಾಡಿಕೊಂಡ ಹಜೀಬ್ ಪಾಲಕರು, ಮದುವೆಗೆ ಒಪ್ಪಿಗೆ ನೀಡಿದ್ದರು.

ಮದ್ವೆ ಯಾಕೆ ಎನ್ನುತ್ತಲೇ ಮಗುವಿನ ಅಪ್ಪನ ಸೀಕ್ರೇಟ್​ ರಿವೀಲ್​ ಮಾಡಿದ ನಟಿ ಇಲಿಯಾನಾ!

ಡೇಟಿಂಗ್ ಮಾಡಿದ ಹನ್ನೊಂದು ತಿಂಗಳ ನಂತ್ರ ನೂರ್ ಜಲೀಲಾ ಮತ್ತು ಹಜೀಬ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಅದಾದ ನಾಲ್ಕು ತಿಂಗಳ ನಂತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ಪರಿಪೂರ್ಣ ವ್ಯಕ್ತಿಯನ್ನು ಮದುವೆ ಆಗುವ ಬದಲು ನಮ್ಮನ್ನು ಪರಿಪೂರ್ಣಗೊಳಿಸುವ ವ್ಯಕ್ತಿಯನ್ನು ಮದುವೆ ಆಗ್ಬೇಕು ಎಂಬ ಸತ್ಯ ಗೊತ್ತಾಗಿದೆ ಎನ್ನುತ್ತಾಳೆ ನೂರ್ ಜಲೀಲಾ. ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆದ ಇಬ್ಬರ ಕಥೆಗೆ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ.  
 

click me!