ಬ್ರೇಕ್ ಅಪ್ ನೋವು ಪ್ರತಿಯೊಬ್ಬರನ್ನು ಕಾಡುತ್ತದೆ. ಆದ್ರೆ ಅದೇ ಶಾಶ್ವತವಲ್ಲ. ಅದ್ರಿಂದ ಹೊರಗೆ ಬರೋದನ್ನು ಪ್ರತಿಯೊಬ್ಬರೂ ಕಲಿಯಬೇಕು. ಆದ್ರೆ ಈ ಯುವತಿ, ಕಣ್ಣಿಗೆ ಕೈಹಾಕಿ ನೋವನ್ನು ಡಬಲ್ ಮಾಡ್ಕೊಂಡಿದ್ದಾಳೆ.
ಪ್ರೀತಿ ಕುರುಡು ಎನ್ನುವ ಮಾತಿದೆ. ಕೆಲವರು ಪ್ರೀತಿ ಕಳೆದುಕೊಂಡ್ಮೇಲೆ ಕುರುಡರಾಗ್ತಾರೆ. ಪ್ರೀತಿ ಸಿಕ್ಕಾಗ ಸಂತೋಷಪಡುವ ಜನರು ಪ್ರೀತಿ ಕಳೆದು ಹೋದಾಗ ಮುದುಡಿ ಹೋಗ್ತಾರೆ. ಆ ನೋವಿನಿಂದ ಹೊರಗೆ ಬರೋದು ಅವರಿಗೆ ಕಷ್ಟವಾಗುತ್ತದೆ. ಪ್ರೀತಿಸಿದವರು ಮೋಸ ಮಾಡಿದ್ರು, ದೂರವಾದ್ರು ಎಂದ ಸಮಯದಲ್ಲಿ ಅದನ್ನು ಧೈರ್ಯವಾಗಿ ಎದುರಿಸುವವರ ಸಂಖ್ಯೆ ಬಹಳ ಕಡಿಮೆ. ಅನೇಕರು ಆತ್ಮಹತ್ಯೆ ಮಾಡಿಕೊಂಡ್ರೆ ಮತ್ತೆ ಕೆಲವರು ದುಶ್ಚಟಕ್ಕೆ ದಾಸರಾಗಿ ತಮ್ಮ ಬದುಕು ಹಾಳು ಮಾಡಿಕೊಳ್ತಾರೆ. ದ್ವೇಷದ ಹೆಸರಿನಲ್ಲಿ ಇಬ್ಬರ ಜೀವನವನ್ನು ಹಾಳು ಮಾಡುವ ಜನರೂ ಸಾಕಷ್ಟು ಮಂದಿ. ಆದ್ರೆ ಈ ಹುಡುಗಿ ಬಂಗಾರದಂತ ತನ್ನ ಬಾಳನ್ನು ಕತ್ತಲು ಮಾಡಿಕೊಂಡಿದ್ದಾಳೆ. ಆಕೆ ಚಟವೇ ಆಕೆಗೆ ಮುಳುವಾಗಿದೆ.
ಈಗ ನಾವು ಹೇಳಲು ಹೊರಟಿರುವ ಹುಡುಗಿ, ಬ್ರೇಕ್ ಅಪ್ (Break up) ಆದ್ಮೇಲೆ ಸ್ವಲ್ಪ ಅತಿಯಾಗಿಯೇ ವರ್ತಿಸಿದ್ದಾಳೆ. ಕೆಟ್ಟ ಚಟಕ್ಕೆ ದಾಸಳಾಗಿದ್ದಲ್ಲದೆ ತನ್ನ ಕಣ್ಣನ್ನೇ ತಾನು ಕೀಳುವ ಪ್ರಯತ್ನ ಮಾಡಿ, ಕತ್ತಲಲ್ಲಿ ಜೀವನ ನಡೆಸ್ತಿದ್ದಾಳೆ.
undefined
ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!
ಪ್ರೀತಿ (Love) ಹೋದ್ಮೇಲೆ ಕಣ್ಣಿಗೆ ಕೈ ಹಾಕಿದ ಹುಡುಗಿ : ಹದಿಹರೆಯ (Teenager) ದಲ್ಲೇ ಪ್ರೀತಿಗೆ ಬೀಳುವ ಹುಡುಗ್ರಿಗೆ ಸಂತೋಷ ಹಾಗೂ ದುಃಖವನ್ನು ಒಂದೇ ಸಮನೆ ಸ್ವೀಕರಿಸುವ ಸಾಮರ್ಥ್ಯವಿರೋದಿಲ್ಲ. ಈ ಸಮಯದಲ್ಲಿ ದುಡುಕಿ ನಿರ್ಧಾರ ತೆಗೆದುಕೊಳ್ಳುವವರೇ ಹೆಚ್ಚು. ಕೇಲಿ ಮುತಾರ್ಟ್ ಕೂಡ ತನ್ನ 20ನೇ ವಯಸ್ಸಿನಲ್ಲೇ ಪ್ರೀತಿ ಮಾಡಿ, ಮೋಸ ಹೋಗಿ ಇಡೀ ಜೀವನವನ್ನೇ ಹಾಳು ಮಾಡಿಕೊಂಡಳು.
ಕೇಲಿ ಮುತಾರ್ಟ್, 20ನೇ ವಯಸ್ಸಿನಲ್ಲಿರುವಾಗ ಪ್ರೀತಿಯಲ್ಲಿ ಬಿದ್ದಿದ್ದಳು. ಆದ್ರೆ ಆಕೆ ಪ್ರೀತಿ ಬಹುಕಾಲ ನಿಲ್ಲಲಿಲ್ಲ. ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡ ನೋವು ಕೇಲಿ ಮುತಾರ್ಟ್ಳನ್ನು ಕಿತ್ತು ತಿನ್ನಲು ಶುರುವಾಗಿತ್ತು. ಮಾನಸಿಕ ರೋಗ ಆಕೆಯನ್ನು ಕಾಡಿತು. ಕೇಲಿ ಮೂತಾರ್ಟ್ ಗೆ, ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾಯಿತು. ಇದು ತೀವ್ರ ಖಿನ್ನತೆಯಾಗಿದ್ದು, ಇದರಲ್ಲಿ ವ್ಯಕ್ತಿಗಳು ಎರಡು ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ.
ಕೇಲಿ ಮುತಾರ್ಟ್ ಮಾನಸಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ಆಕೆ ಅದನ್ನು ಮರೆಯಲು ಡ್ರಗ್ಸ್ ಮೊರೆ ಹೋದಳು. ಮಾನಸಿಕ ಅನಾರೋಗ್ಯ, ಡ್ರಗ್ಸ್ ಆಕೆಯನ್ನು ಮತ್ತಷ್ಟು ಹದಗೆಡಿಸಿತ್ತು. ಒಂದು ದಿನ ಡ್ರಗ್ಸ್ ನಶೆಯಲ್ಲಿ ಕೇಲಿ ಮುತಾರ್ಟ್ ಮಾಡಿದ ಕೆಲಸ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ ಕೇಲಿ ಮುತಾರ್ಟ್ ಆ ದಿನ ಏನಾಯ್ತು ಎಂಬುದನ್ನು ಹೇಳಿದ್ದಾಳೆ. ಜಗತ್ತನ್ನು ಉಳಿಸುವ ಜವಾಬ್ದಾರಿ ನನ್ನ ಮೇಲಿದೆ. ನಾನು ಕಣ್ಣನ್ನು ತೆಗೆದ್ರೆ ಎಲ್ಲರೂ ಉಳಿಯುತ್ತಾರೆ ಎಂದು ಅಂದು ನನಗೆ ಅನಿಸಿತ್ತು. ಹಾಗಾಗಿ ಹೆಬ್ಬೆರಳು, ಬೆರಳನ್ನು ಹಾಕಿ ಕಣ್ಣನ್ನು ಕಿತ್ತಿದ್ದೆ ಎನ್ನುತ್ತಾಳೆ ಕೇಲಿ. ಡ್ರಗ್ಸ್ ನಶೆಯಲ್ಲಿದ್ದ ಕೇಲಿಗೆ ಆಗ ನೋವು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಕೇಲಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯ್ತು.
ಚಿಕಿತ್ಸೆ ನಂತ್ರ ಕೇಲಿ ಚೇತರಿಸಿಕೊಂಡಿದ್ದಾಳೆ. ಆದ್ರೆ ಡ್ರಗ್ಸ್ ನಶೆಯಲ್ಲಿ ಆಕೆ ಮಾಡಿದ ತಪ್ಪಿಗೆ ಈಗ್ಲೂ ಶಿಕ್ಷೆಯಾಗಿದೆ. ಆಕೆ ದೃಷ್ಟಿ ಮರಳಿ ಬಂದಿಲ್ಲ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ತಪ್ಪು ಮಾಡಿದ ಕೇಲಿ ಈಗ ಇಡೀ ತನ್ನ ಜೀವನವನ್ನು ಬೆಳಕಿಲ್ಲದೆ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೆಳತಿಗೆ ಸರ್ಪ್ರೈಸ್ ನೀಡಿದ ಬಾಯ್‌ಫ್ರೆಂಡ್: ಸುಮಧುರ ವಿಡಿಯೋ!
ಪ್ರೀತಿಯನ್ನು ಕಳೆದುಕೊಂಡ ನೋವು ಈಗಲೂ ಇದೆ ಎನ್ನುತ್ತಾಳೆ ಕೇಲಿ. ಪ್ರತಿ ದಿನ ನಾನು ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಕುಟುಂಬಸ್ಥರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದ್ರೂ ನನ್ನ ಜೀವನವನ್ನು ಸಾಮಾನ್ಯವಾಗಿರಿಸಲು ನನಗೆ ಸಾಧ್ಯವಾಗ್ತಿಲ್ಲ. ಪ್ರತಿದಿನ ಇದಕ್ಕಾಗಿ ಹೆಣಗಾಡುತ್ತಿದ್ದೇನೆ ಎಂದು ಕೇಲಿ ಹೇಳಿದ್ದಾಳೆ.