ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೆಳತಿಗೆ ಬಾಯ್‌ಫ್ರೆಂಡ್ ವಿಮಾನ ನಿಲ್ದಾಣದಲ್ಲಿ ಸರ್ಪ್ರೈಸ್ ನೀಡಿದ್ದಾನೆ. ಈ ಸಮುಧುರ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಚಂಡೀಘಡ(ಜು.25) ಹುಟ್ಟುಹಬ್ಬ ಯಾವತ್ತಿಗೂ ಸ್ಪೆಷಲ್. ಅದರಲ್ಲೂ ರಿಲೇಶನ್‌ಶಿಪ್‌ನಲ್ಲಿದ್ದರೆ ಹುಟ್ಟುಹಬ್ಬದ ಸವಿ ಡಬಲ್. ಆದರೆ ಮದುವೆಯಾದ ಬಳಿಕ ಹುಟ್ಟು ಹಬ್ಬ ಮರೆತು ರಂಪಾಟ ನಡೆದ ಹಲವು ಘಟನೆಗಳು ವರದಿಯಾಗಿದೆ. ಇಲ್ಲೊಬ್ಬ ಯುವಕ, ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ತನ್ನ ಗೆಳತಿಗೆ ವಿಮಾನ ನಿಲ್ದಾಣದಲ್ಲಿ ಅಚ್ಚರಿ ನೀಡಿದ್ದಾನೆ. ಜೊತೆಯಾಗಿ ಹುಟ್ಟು ಹಬ್ಬ ಆಚರಿಸಲು ಆಗಮಿಸಿದ ಗೆಳತಿಯನ್ನು ವಿಮಾನ ನಿಲ್ದಾಣದಲ್ಲಿ ಭರ್ಜರಿ ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತ ಕೋರಿದ್ದಾನೆ. ಇಷ್ಟೇ ಅಲ್ಲ ಗೆಳತಿಯ ಫೋಟೋ ಪ್ಲಕಾರ್ಡ್ ಹಿಡಿದು ಶುಭಾಶಯ ಕೋರಿದ್ದಾನೆ. ಗೆಳೆಯನ ಅಚ್ಚರಿ ಸ್ವಾಗತ ಹಾಗೂ ಶುಭಾಶಯಕ್ಕೆ ಗೆಳತಿ ಕರಗಿ ನೀರಾಗಿದ್ದಾಳೆ.
ಧೃತಿ ಮೆಹ್ರಾ ಅನ್ನೋ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಗೆಳೆಯ ಪಂಜಾಬ್‌ನಲ್ಲಿದ್ದರೆ, ಗೆಳತಿ ವಿದೇಶದಲ್ಲಿದ್ದ ಬೀಡಿ ಬಿಟ್ಟಿದ್ದಾಳೆ. ದೂರ ದೂರವಿದ್ದರೂ ಫೋನ್ ಮೂಲಕ ಪ್ರತಿ ದಿನ ಸಂಪರ್ಕದಲ್ಲಿದ್ದಾರೆ. ಇದರ ನಡುವೆ ಗೆಳತಿಯ ಹುಟ್ಟು ಹಬ್ಬ ಆಚರಿಸಿದೆ. ಇತ್ತ ಗೆಳೆಯನ, ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕು ಅನ್ನೋದು ಯುವತಿಯ ಹಂಬಲ. ಇತ್ತ ಗೆಳೆಯನ ಕನಸೂ ಕೂಡ ಇದೆ ಆಗಿತ್ತು.
undefined
ಮಳೆ ಪರಿಹಾರ ಅರ್ಜಿ ನಡುವೆ ಗೆಳತಿ ಭೇಟಿಗೆ ಅವಕಾಶ ಕೋರಿದ ಮನವಿ ನೋಡಿ ದಂಗಾದ ಜಿಲ್ಲಾಧಿಕಾರಿ!
ಹೀಗಾಗಿ ಹುಟ್ಟು ಹಬ್ಬ ದಿನ ಯುವತಿ ಪಂಜಾಬ್‌ಗೆ ಮರಳಲು ನಿರ್ಧರಿಸಿದ್ದಾಳೆ. ಚಂಡೀಘಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವತಿ, ಎಕ್ಸಿಟ್ ಮೂಲಕ ಹೊರಗಡೆ ಬರುತ್ತಿದ್ದಂತೆ ಗೆಳೆಯ ಅಚ್ಚರಿ ನೀಡಿದ್ದಾರೆ. ಒಂದಷ್ಟು ಪಂಚಾಬಿ ಡೋಲು ಪರಿಣಿತರನ್ನು ಕರೆಯಿಸಿದ್ದಾನೆ. ಬ್ಯಾಂಡ್ ಬಜಾಯಿಸಿದ್ದಾನೆ. ಪಂಜಾಬಿ ನೃತ್ಯದೊಂದಿಗೆ ಗೆಳತಿಯನ್ನು ಸ್ವಾಗತಿಸಿದ್ದಾನೆ.
ಕೈಯಲ್ಲಿ ಗೆಳತಿ ಫೋಟೋ ಅಂಟಿಸಿದ ಪ್ಲಕಾರ್ಡ್, ಜೊತೆಗೆ ಹುಟ್ಟು ಹಬ್ಬದ ಶುಭಕೋರಿದ ಸಂದೇಶ ಹಿಡಿದು ನಿಂತಿದ್ದಾನೆ. ಗೆಳತಿ ಆಗಮಿಸುತ್ತಿದ್ದಂತೆ ಬ್ಯಾಂಡ್ ಸದ್ದು ಜೋರಾಗಿದೆ. ಕುಣಿದು ಕುಪ್ಪಳಿಸುತ್ತಾ ಆಕೆಯನ್ನು ಸ್ವಾಗತಿಸಿದ್ದಾನೆ. ಇತ್ತ ಗೆಳೆಯನ ಸ್ವಾಗತಕ್ಕೆ ಗೆಳತಿ ಮರುಳಾಗಿದ್ದಾಳೆ. ಗೆಳೆಯನ ಜೊತೆ ಒಂದೆರೆಡು ಹೆಜ್ಜೆ ಹಾಕಿದ ಗೆಳತಿ ಆಲಿಂಗಿಸಿಕೊಂಡು ಪ್ರೀತಿ ಹಂಚಿದ್ದಾಳೆ. ಇತ್ತ ವಿಮಾನ ನಿಲ್ದಾಣದ ಇತರ ಸಿಬ್ಬಂದಿಗಳು ಇವರ ಪ್ರೀತಿಯ ಸುಮುಧುರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕ್ಯೂಟ್ ವಿಡಿಯೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪ್ರೀತಿಯಲ್ಲಿ ಎಲ್ಲವೂ ಸುಮಧುರ ಎಂದು ಪ್ರತಿಕ್ರಿಯೆಸಿದ್ದಾರೆ. ಇತ್ತ ಕೆಲವರು ಇದು ನಾಟಕ ಎಂದು ಟೀಕಿಸಿದ್ದಾರೆ. ಆದರೆ ಕ್ಯೂಟ್ ವಿಡಿಯೋ ಎಲ್ಲೆಡೆ ಹರಿದಾಡಿದೆ.
ಮದ್ವೆ ಜವಾಬ್ದಾರಿ ಮುಗಿತು ಅಂತ ನಿಟ್ಟುಸಿರು ಬಿಟ್ಟಿದ್ದ ಪೋಷಕರಿಗೆ ಶಾಕ್ ಕೊಟ್ಟ ಮಗಳು!