
ಈಗ ಎಲ್ಲೆಲ್ಲೂ ತಮಿಳುನಾಡಿನ ಚುನಾವಣೆಯ ಸುದ್ದಿ. ಅದಕ್ಕೆ ಕಾರಣ ನಟನಾಗಿದ್ದ ದಳಪತಿ ವಿಜಯ್ ಅವರು ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇವರ ಹೆಸರು ಬಂದಾಗಲೆಲ್ಲಾ ಇವರ ಜೊತೆ ನಟಿ ತ್ರಿಷಾ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಇದಾಗಲೇ ವಿಜಯ್ ಅವರ ವೋಟಿಂಗ್ ರಿಸಲ್ಟ್ ಬರುತ್ತಲೇ ತ್ರಿಷಾ ಅವರ ಮನೆಗೆ ಓಡೋಡಿ ಬಂದು ಸುದ್ದಿ ಮಾಡಿದ್ದರು. ಅಷ್ಟಕ್ಕೂ ಮೇ 4 ತ್ರಿಷಾ ಅವರ ಹುಟ್ಟುಹಬ್ಬದಂದೇ ದಳಪತಿ ಅವರಿಗೆ ವಿಜಯದ ಮಾಲೆ ಕೊರಳಿಗೆ ಬಿದ್ದಿತ್ತು. ಆದರೆ ಇವುಗಳ ನಡುವೆಯೇ ಇದೀಗ ವಿಜಯ್ ಅವರ ಪತ್ನಿ ಸಂಗೀತಾ ಎಲ್ಲಿ ಹೋದರು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅಷ್ಟಕ್ಕೂ ದಳಪತಿ ವಿಜಯ್ (Thalapathy Vijay divorce c ase) ಮತ್ತು ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ನಡುವಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಜಯ್ ಅವರ ವಿವಾಹೇತರ ಸಂಬಂಧಗಳು ಮತ್ತು ಗಂಭೀರ ವೈವಾಹಿಕ ಸಮಸ್ಯೆಗಳ ಆರೋಪ ಹೊರಿಸಿ ಸಂಗೀತಾ ಇತ್ತೀಚೆಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿ ಸದ್ದು ಮಾಡಿದ್ದಾರೆ. ಆದರೆ ಇದೀಗ ಅವರ ಈ ಕೇಸ್ಗೆ ಭಾರಿ ಟ್ವಿಸ್ಟ್ ಸಿಕ್ಕಿತ್ತು. ಫೆಬ್ರವರಿ 24 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ಅವರು ಕೇಸ್ ದಾಖಲಿಸಿದ್ದರು. ಕೋರ್ಟ್ ಆದೇಶದ ಪ್ರಕಾರ ಇವತ್ತು (ಏಪ್ರಿಲ್ 20) ವಿಚಾರಣೆ ವೇಳೆ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕಿತ್ತು. ರಾಜಕೀಯ ಚುನಾವಣೆ ಮತ್ತು ಭದ್ರತಾ ಕಾರಣಗಳಿಂದಾಗಿ ವಿಜಯ್ ಅವರು ಖುದ್ದಾಗಿ ಕೋರ್ಟ್‌ಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಕೇಸ್ ಕುತೂಹಲದ ತಿರುವು ಪಡೆದುಕೊಂಡಿದೆ.
ಅದೇನೆಂದರೆ, ಇಲ್ಲಿಯವರೆಗೆ ಇಬ್ಬರೂ ಪರಸ್ಪರ ಕಾದಾಟ ನಡೆಸಿದ್ದರು. ಆದರೆ ಇದೀಗ ವಿಜಯ್ ಮತ್ತು ಸಂಗೀತಾ ಇಬ್ಬರೂ ಸೇರಿ ಒಂದು ಹೊಸ ಜಂಟಿ ಅರ್ಜಿ (Joint Petition) ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯೊಂದಿಗೆ ನಾವು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಇಷ್ಟು ದಿನ ನಡೆಯುತ್ತಿದ್ದ ವಾದ-ಪ್ರತಿವಾದಗಳಿಗೆ ಫುಲ್ ಸ್ಟಾಪ್ ಇಟ್ಟಂತಾಗಿದ್ದು, ನ್ಯಾಯಾಧೀಶರು ಪ್ರಕರಣವನ್ನು ಜೂನ್ 15 ಕ್ಕೆ ಮುಂದೂಡಿದ್ದಾರೆ. ಇಂದು ಸಲ್ಲಿಸಿದ್ದ ಅರ್ಜಿಯಲ್ಲಿ, ಚುನಾವಣಾ ಕೆಲಸದ ಕಾರಣದಿಂದಾಗಿ ವಿಜಯ್ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಿಲ್ಲ ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ಈ ವಿಷಯವನ್ನು ಆಲಿಸಲು ಅವಕಾಶ ನೀಡಬೇಕೆಂದು ಕೋರಿದ್ದರು ವಿಜಯ್. ಆದರೆ ಅದನ್ನು ಸದ್ಯ ಕೋರ್ಟ್ ಒಪ್ಪದೇ ಇಬ್ಬರ ಮ್ಯೂಚುವಲ್ ಪಿಟಿಷನ್ ಕೇಸ್ ಅನ್ನು ಜೂನ್ 15 ಕ್ಕೆ ಮುಂದೂಡಿದ್ದು, ಅಂದು ಇಬ್ಬರ ಹಾಜರಿ ಅವಶ್ಯ ಎಂದಿದೆ ಕೋರ್ಟ್.
ಆದರೆ ಇದರ ನಡುವೆಯೇ ಇದೀಗ ಸಂಗೀತಾ ಎಲ್ಲಿ ಎನ್ನುವ ಸಂಶಯ ಕಾಡುತ್ತಿದೆ. ಅಷ್ಟಕ್ಕೂ ಸಂಗೀತಾ ಅವರು ಸುಮಾರು 500 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ. ಶ್ರೀಲಂಕಾದ ತಮಿಳು ಕುಟುಂಬಕ್ಕೆ ಸೇರಿದ ಇವರು ಲಂಡನ್‌ನಲ್ಲಿ ಬೆಳೆದವರು. ಸದ್ಯ ಇವರು ಲಂಡನ್‌ನಲ್ಲಿ ನೆಲೆಸಿದ್ದು, ವಿಚ್ಛೇದನ ಪ್ರಕ್ರಿಯೆಗಳ ನಡುವೆ ತಮ್ಮ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿಜಯ್ ಅವರು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದರೂ, ಸಂಗೀತಾ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಲಂಡನ್‌ನಲ್ಲಿಯೇ ಉಳಿದರು. ಇತ್ತೀಚೆಗೆ 25 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರ ರಾಜಕೀಯ ಯಶಸ್ಸಿನ ನಡುವೆಯೂ, ಸಂಗೀತಾ ಲಂಡನ್‌ನಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಮೊದಲ ರಿಯಾಕ್ಷನ್ ಹೇಗಿರಬಹುದು ಎಂದು ಜನರು ಕಾದು ಕಾದು ಸುಸ್ತಾಗಿದ್ದಾರೆ. ಆದರೆ ಮಿಸ್ಸಿಂಗ್ ಆಗಿರೋ ಸಂಗೀತಾ ಸದ್ಯ ಸದ್ದು ಮಾಡುತ್ತಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.