ಈ ಕೆಲವು ಹುಡುಗರಿಗ್ಯಾಕೆ ಅಮ್ಮನ ವಯಸ್ಸಿನ ಹೆಂಗಸರು ಇಷ್ಟವಾಗೋದು?

By Suvarna News  |  First Published Aug 12, 2023, 3:38 PM IST

ತಮ್ಮ ವಯಸ್ಸಿನ ಹುಡುಗಿಯರಿಗಿಂತ ಸೀನಿಯರ್ಸ್ ಮೇಲೆ ಹುಡುಗ್ರ ಕಣ್ಣಿರುತ್ತೆ. ತಮಗಿಂತ ಹಿರಿಯ ಹುಡುಗಿಯರು, ಮಹಿಳೆಯರ ಮೇಲೆ ಹುಡುಗ್ರ ಪ್ರೀತಿ ಚಿಗುರುತ್ತೆ. ನೋಡೋಕೆ ಇದು ವಿಚಿತ್ರವೆನ್ನಿಸಿದ್ರೂ ಅದಕ್ಕೆ ಕಾರಣವಿದೆ ಎನ್ನುತ್ತೆ ಸಮೀಕ್ಷೆ. 
 

Reason Behind Youngsters Attraction to Women of Their Mothers Age Revealed roo

ಹದಿನಾರು ವರ್ಷದ ಹುಡುಗನೊಬ್ಬ 41 ವರ್ಷದ ಮಹಿಳೆಯನ್ನು ಮದುವೆಯಾದ ಸುದ್ದಿ ಕೆಲ ದಿನಗಳ ಹಿಂದೆ ಚರ್ಚೆಗೆ ಕಾರಣವಾಗಿತ್ತು. ಹದಿಹರೆಯದ ಹುಡುಗನ ಈ ವರ್ತನೆ ಪ್ರೀತಿಯಲ್ಲ ಆಕರ್ಷಣೆ ಅಂತಾನೇ ಇಟ್ಕೊಳ್ಳೋಣ. ಬರೀ 16 ವರ್ಷದ ಹುಡುಗ ಮಾತ್ರವಲ್ಲ 25ರ ಯುವಕ ಕೂಡ ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಆಂಟಿಗೆ ಆಕರ್ಷಿತನಾಗ್ತಾನೆ. ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಿನ ಮಹಿಳೆಯರನ್ನು ಮದುವೆಯಾದ ಅನೇಕರು ನಮ್ಮಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್, ಪ್ರಿಯಾಂಕಾ ಪತಿ ನಿಕ್ ಸೇರಿದಂತೆ ಅನೇಕರನ್ನು ನೀವು ಈ ಪಟ್ಟಿಯಲ್ಲಿ ಕಾಣ್ಬಹುದು.

ಪ್ರೀತಿ (Love) ಗೆ ಜಾತಿ, ದೇಶ, ಭಾಷೆಯ ಗಡಿ ಹೇಗಿಲ್ಲವೋ ಅದೇ ರೀತಿ ವಯಸ್ಸಿನ ಗಡಿರೇಖೆ ಇಲ್ಲ. ಚಿಕ್ಕ ವಯಸ್ಸಿನ ಯುವಕರು ತಮಗಿಂತ ಹೆಚ್ಚು ವಯಸ್ಸಾ (Age) ಗಿರುವ ಮಹಿಳೆಯನ್ನು ಹೆಚ್ಚು ಇಷ್ಟಪಡ್ತಾರೆ. ಇದನ್ನು ಬರೀ ನಾವು ಹೇಳ್ತಾ ಇಲ್ಲ. ಇದ್ರ ಬಗ್ಗೆ ಅನೇಕ ಸಮೀಕ್ಷೆಗಳು ನಡೆದಿವೆ. ಅದ್ರಲ್ಲಿ ಪುರುಷರು ಹಿರಿಯ ವಯಸ್ಸಿನ ಮಹಿಳೆಯರಿಗೆ ಆಕರ್ಷಿತವಾಗಲು ಕಾರಣವೇನು ಎಂಬುದನ್ನು ಹೇಳಲಾಗಿದೆ. ಪುರುಷರ ಈ ಪ್ಯಾಂಟಸಿಯಿಂದಲೇ ಅನೇಕ ಡೇಟಿಂಗ್ ವೆಬ್ಸೈಟ್ ಗಳು ನಡೆಯುತ್ತಿವೆ. 

Tap to resize

Latest Videos

ಪ್ರಬುದ್ಧ, ಸ್ವಲ್ಪ ಜಾಸ್ತಿ ವಯಸ್ಸಿನ ವ್ಯಕ್ತಿ ಸಿಕ್ಕಿದ್ರೆ ಲವ್ ಲೈಫ್ ಚೆನ್ನಾಗಿರುತ್ತೆ!

ಪುರುಷರು ವಯಸ್ಸಾದ ಮಹಿಳೆಯರನ್ನು ಏಕೆ ಇಷ್ಟಪಡುತ್ತಾರೆ? :  ಟುಡೆ ಡಾಟ್ ಕಾಮ್ ಕೆಲ ದಿನಗಳ ಹಿಂದೆ ಈ ಬಗ್ಗೆ ಸಮೀಕ್ಷೆ (Survey)  ನಡೆಸಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪುರುಷರನ್ನು, ವಯಸ್ಸಾದ ಮಹಿಳೆಯರನ್ನು ಏಕೆ ಇಷ್ಟಪಡುತ್ತೀರಿ ಎಂದು ಕೇಳಲಾಯಿತು. ಆರ್ಥಿಕ ಸ್ಥಿರತೆ, ಸಂಬಂಧಗಳ ಸರಿಯಾದ ತಿಳುವಳಿಕೆ, ಆತ್ಮವಿಶ್ವಾಸದ ಮಟ್ಟ, ಲೈಂಗಿಕ ತೃಪ್ತಿ ಇತ್ಯಾದಿ ಕಾರಣಗಳನ್ನು ಆಗ ಪುರುಷರು ಹೇಳಿದ್ರು. 

ಗ್ಲೋರಿಯಾ ಕೋವನ್ (1984) ಅವರ ಸಂಶೋಧನೆಯು ಸಹ ಅದೇ ಸತ್ಯವನ್ನು ಒಪ್ಪಿಕೊಂಡಿತ್ತು.  ಪುರುಷರು ವಯಸ್ಸಾದ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಿತ್ತು. ಆದರೆ ಈ ಸಂಬಂಧಗಳು ಹೆಚ್ಚು ಕಾಲ ಬಾಳಿಕೆ ಬರೋದಿಲ್ಲವೆಂದು ಸಂಶೋಧನೆಯಲ್ಲಿ ಹೇಳಲಾಗಿತ್ತು. 

ಸ್ನೇಹಿತೆಯ ಮಗ, 16 ವರ್ಷದ ಬಾಲಕನನ್ನು ಮದ್ವೆಯಾದ 41 ವರ್ಷದ ಆಂಟಿ!

ಜರ್ನಲ್ ಆಫ್ ಸೆಕ್ಸ್ ರಿಸರ್ಚ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಪುರುಷರು ಮಾತ್ರವಲ್ಲ ಅನೇಕ ಮಹಿಳೆಯರು ಸಹ ತಮ್ಮ ವಯಸ್ಸಿಗೆ ವಿರುದ್ಧವಾದ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ. ಇಲ್ಲಿ ಮಹಿಳೆಯರು ತಮ್ಮ ವಯಸ್ಸಿಗಿಂತ ಹಿರಿಯರ ಬದಲು ಚಿಕ್ಕ ಹುಡುಗರನ್ನು ಸಂಗಾತಿಯಾಗಿ ಪಡೆಯಲು ಇಷ್ಟಪಡುತ್ತಾರೆ. 

ಆಕರ್ಷಣೆಗೆ ಇದು ಕಾರಣ :  
• ಮೊದಲನೆಯದಾಗಿ, ಭೌತಿಕ ರಚನೆಯಲ್ಲಿನ ಬದಲಾವಣೆ ಮುಖ್ಯವಾಗುತ್ತದೆ ಎಂದು ತಜ್ಞರು ಹೇಳ್ತಾರೆ. ಪರಿಪೂರ್ಣ ದೇಹವನ್ನು ಹೊಂದಿರುವ ಮಹಿಳೆ, ಪುರುಷರನ್ನು ಆಕರ್ಷಿಸುತ್ತಾಳೆ. ಚಿಕ್ಕ ವಯಸ್ಸಿಗಿಂತ ವಯಸ್ಸಿನ ನಂತರ ಮಹಿಳೆ ದೇಹದಲ್ಲಿ ನೀವು ಪರಿಪೂರ್ಣತೆ ಕಾಣಬಹುದು. 
• ಚಿಕ್ಕ ವಯಸ್ಸಿನ ಯುವತಿಯರಿಗಿಂತ ವಯಸ್ಸಾದ ಮಹಿಳೆಯರು ಪ್ರಬುದ್ಧರಾಗಿರ್ತಾರೆ. ಇದು ಕೂಡ ಪುರುಷರಿಗೆ ಇಷ್ಟವಾಗುತ್ತದೆ.
• ವಯಸ್ಸಾದ ಮಹಿಳೆಯರು ಪ್ರತಿ ಸಣ್ಣ ವಿಷಯದಲ್ಲೂ ಜಗಳವಾಡುತ್ತಾರೆ. ಆದ್ರೆ ಇವರು ಸಮಸ್ಯೆಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳುತ್ತಾರೆ. ಮಹಿಳೆಯರು ಸಂಬಂಧದಲ್ಲಿ ಬಾಲಿಶತೆಯನ್ನು ತೋರಿಸುವುದಿಲ್ಲ. ಸಂಗಾತಿಗೆ ಸಮಯ ನೀಡುವುದಲ್ಲದೆ  ವೈಯಕ್ತಿಕ ಜಾಗವನ್ನು ಗೌರವಿಸುತ್ತಾರೆ.
• ಕೆಲ ಪ್ರಬುದ್ಧ ಮಹಿಳೆಯರು ಹಣದ ವಿಷಯದಲ್ಲಿ ಸಹ ಬಲಶಾಲಿಯಾಗಿರುತ್ತಾರೆ. ಉನ್ನತ ಹುದ್ದೆಯಲ್ಲಿರುವ, ಜವಾಬ್ದಾರಿ ನಿಭಾಯಿಸುವ ಮಹಿಳೆಯರು ಪುರುಷರಿಗೆ ಹೆಚ್ಚು ಇಷ್ಟವಾಗುತ್ತಾರೆ.
• ಜೀವನ ಅನುಭವದ ನಂತ್ರ ಮಹಿಳೆಯರು ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ಚಿಕ್ಕ ವಯಸ್ಸಿನ ಪುರುಷರನ್ನು ಮಹಿಳೆ ತಿದ್ದುತ್ತಾಳೆ. ಇದ್ರಿಂದ ಪುರುಷರು ಹೊಸದನ್ನು ಕಲಿಯಲು ಸಹಾಯವಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಲು ಹಿರಿ ವಯಸ್ಸಿನ ಮಹಿಳೆ ದಾರಿ ದೀಪವಾಗ್ತಾಳೆ. 
 

vuukle one pixel image
click me!
vuukle one pixel image vuukle one pixel image