ಒಂದೊಂದು ದೇಶದಲ್ಲಿ ಒಂದೊಂದು ಪದ್ಧತಿ ಇದೆ. ನಾವು ಪಾರ್ಟಿ ಮಾಡಿ, ತಿನ್ನೋಕೆ ಒಂದಿಷ್ಟು ಕೊಟ್ಟು ಕಳಸ್ತೇವೆ. ಆದ್ರೆ ಆ ದೇಶದಲ್ಲಿ ಪಾರ್ಟಿಗೆ ಬರುವ ಜನ ಕೈನಲ್ಲಿ ಟಿಫನ್ ಬಾಕ್ಸ್ ಹಿಡಿದು ಬರಬೇಕು. ಇಲ್ಲ ಅಂದ್ರೆ ಖಾಲಿ ಹೊಟ್ಟೆಯಲ್ಲಿ ಮನೆಗೆ ಹೋಗ್ಬೇಕು.
ಭಾರತ ದೇಶದಲ್ಲಿ ಅತಿಥಿ ದೇವೋ ಭವ ಎಂದು ಭಾವಿಸುತ್ತಾರೆ. ಅಂದರೆ ಮನೆಗೆ ಬಂದ ಅತಿಥಿಗಳನ್ನು ದೇವರಂತೆ ನೋಡುವ ಸಂಸ್ಕಾರ ಭಾರತೀಯರದ್ದು. ಮನೆಗೆ ಅತಿಥಿಗಳು ಬಂದರೆಂದರೆ ಹಲವು ಬಗೆಯ ಸಿಹಿ ತಿಂಡಿಗಳು, ಅಡುಗೆಗಳು ಸಿದ್ಧವಾಗುತ್ತವೆ. ಹಾಗೆಯೇ ಅವರಿಗೆ ಯಾವುದರಲ್ಲೂ ಕೊರತೆಯಾಗದಂತೆ ಅವರನ್ನು ಸತ್ಕರಿಸಲಾಗುತ್ತದೆ.
ಭಾರತ (India), ಭಾರತೀಯರಂತೆ ಎಲ್ಲ ದೇಶ ಇರಬೇಕು ಎಂದೇನಿಲ್ಲ. ಭಾರತಕ್ಕೆ ವಿರುದ್ಧವಾದ ಸಂಸ್ಕೃತಿ (Culture) ಸ್ವಿಡನ್ ನಲ್ಲಿದೆ. ಇಲ್ಲಿ ಮನೆಗೆ ಬಂದ ಅತಿಥಿಗಳಿಗೆ ತಿಂಡಿ ತಿನ್ನುತ್ತೀರಾ, ಊಟ ಮಾಡುತ್ತೀರಾ ಎಂದು ಕೇಳುವ ರೂಢಿಯೇ ಇಲ್ಲ. ಸ್ವಿಡನ್ (Sweden) ನಲ್ಲಿರುವ ಯಾರ ಮನೆಗಾದರೂ ನೀವು ಹೋದರೆ ಅಲ್ಲಿ ನಿಮ್ಮನ್ನು ಯಾರೂ ಊಟ, ತಿಂಡಿಗೆ ಕರೆಯೋದಿಲ್ಲ. ನಾವು ಯಾರ ಮನೆಗಾದರೂ ಹೋದಾಗ ಅವರು ನಮ್ಮನ್ನು ಸತ್ಕರಿಸದೇ, ಏನು ಬೇಕು ಎಂದು ಕೇಳದೇ ಇದ್ದರೆ ಅವರನ್ನು ನಾವು ಸಂಸ್ಕಾರ ಇಲ್ಲದ ಜನ ಎಂದು ಆಡಿಕೊಳ್ಳುತ್ತೇವೆ. ಆದರೆ ಸ್ವಿಡನ್ ಜನರಿಗೆ ಇದು ಸಾಮಾನ್ಯ ವಿಷಯವಾಗಿದೆ.
undefined
ವೈಸ್ ವೆಬ್ ಸೈಟ್ ರಿಪೋರ್ಟ್ ಅನುಸಾರ ಸ್ವಿಡನ್ ನಲ್ಲಿ ಮನೆಗೆ ಬಂದವರಿಗೆ ಏನನ್ನಾದರೂ ತಿನ್ನಲು ಕೊಡುವ ಅಭ್ಯಾಸವಿಲ್ಲ. ಅವರು ಏನು ಬೇಕು ಎಂದು ಕೇಳುವುದೂ ಇಲ್ಲ. ಸ್ವತಃ ಅತಿಥಿಗಳೇ ನಮಗೆ ಏನಾದರೂ ತಿನ್ನಲು ಕೊಡಿ ಎಂದರೆ ಮಾತ್ರ ಅವರು ಕೊಡುತ್ತಾರೆ. ಯಾವುದೇ ಪಾರ್ಟಿಗೆ ಹೋದ್ರೂ ಪಾರ್ಟಿ ಮಾಡುವವರು ಆಹಾರ ನೀಡೋದಿಲ್ಲ. ನೀವೇ ಆಹಾರ ಕಟ್ಟಿಕೊಂಡು ಹೋಗ್ಬೇಕು.
ತೆಂಗಿನ ಚಿಪ್ಪಿನಲ್ಲಿ ಟೀ, 2 ರೂ.ಗೆ ಮಸಾಲೆ ದೋಸೆ; 2023ರಲ್ಲಿ ಆಹಾರದ ಬಗ್ಗೆ ಸುದ್ದಿಯಾದ ವಿಚಾರಗಳಿವು
ಕಳೆದ ವರ್ಷ ಟ್ವಿಟರ್ ಬಳಕೆದಾರರೊಬ್ಬರು ರೆಡಿಟ್ ಜಾಲತಾಣದಲ್ಲಿನ ಪೋಸ್ಟ್ ಒಂದರ ಸ್ಕ್ರೀನ್ ಶಾಟ್ ಹಾಕಿದ್ದರು. ಅದರಲ್ಲಿ ಯಾರೋ ಒಬ್ಬರು ಸ್ವಿಡನ್ ದೇಶದ ಅತಿಥಿ ಸತ್ಕಾರದ ಕುರಿತು ಹೇಳಿದ್ದರು. ಆ ನಂತರ ಅದು ಬಹಳ ಚರ್ಚೆಗೆ ಗ್ರಾಸವಾಗಿ ಆ ಟ್ವೀಟ್ ಹೆಚ್ಚು ವೈರಲ್ ಆಯಿತು.
ಚರ್ಚೆಗೆ ಗ್ರಾಸವಾದ ಟ್ವಿಟರ್ ಪೋಸ್ಟ್ : ಮನೆಗೆ ಯಾರೇ ಬರಲಿ ಅವರಿಗೆ ಏನು ಕುಡಿಯುತ್ತೀರಿ ಎಂದು ನಾವು ಸಹಜವಾಗಿ ಕೇಳುತ್ತೇವೆ. ಆದರೆ ಸ್ವಿಡನ್ ನಲ್ಲಿ ಇಂತಹ ಯಾವುದೇ ರೂಢಿಯಿಲ್ಲ. ಹಾಗಾಗಿಯೇ ಅವರು ತಮ್ಮ ರೀತಿ ರಿವಾಜನ್ನು ಟ್ವಿಟರ್ ನಲ್ಲಿ ಸಮರ್ಥಿಸಿಕೊಂಡರು. ಅಲ್ಲಿನ ಕೆಲವು ಜನರು ನಮ್ಮ ಮನೆಗೆ ಬೇರೆಯವರ ಮಕ್ಕಳು ಆಟವಾಡಲು ಬಂದರೆ ನಾವು ಅವರಿಗೆ ಏಕೆ ತಿಂಡಿಯನ್ನು ಕೊಡಬೇಕು ಎಂದು ಪ್ರಶ್ನಿಸಿದರು. ಸ್ವಿಡನ್ ಜನರ ಈ ತರಹದ ಟ್ಟೀಟ್ ಗೆ ಅನೇಕ ಭಾರತೀಯರು ಈ ರೀತಿಯ ಸಂಸ್ಕಾರ ಒಳ್ಳೆಯದಲ್ಲ. ಭಾರತದಲ್ಲಿ ಹೀಗಾಗುವುದಿಲ್ಲ ಇಲ್ಲಿ ಮನೆಗೆ ಬಂದ ಅತಿಥಿಗಳನ್ನು ಹಸಿದ ಹೊಟ್ಟೆಯಲ್ಲಿ ಹಾಗೇ ಕಳುಹಿಸುವುದಿಲ್ಲ ಎಂದು ಹೇಳಿದ್ದರು.
ಬೆಂಗಳೂರು: ಬಡತನಕ್ಕೆ ಡೋಂಟ್ ಕೇರ್.. ಇಡ್ಲಿ- ದೋಸೆಯಿಂದ್ಲೇ ಶ್ರೀಮಂತನಾದ ವ್ಯಕ್ತಿ!
ಸ್ವಿಡನ್ ಜನರು ಏಕೆ ಹೀಗೆ ಮಾಡುತ್ತಾರೆ? : ಸ್ವಿಡನ್ ನಲ್ಲಿ ಅತಿಥಿಗಳಿಗೆ ಊಟ, ತಿಂಡಿಯನ್ನು ಕೊಡದೇ ಇರುವ ಸಂಪ್ರದಾಯ ಏಕೆ ಬಂತು ಎನ್ನುವ ಪ್ರಶ್ನೆ ಉದ್ಭವವಾಗುವುದು ಸಹಜ. ಈ ಸಂಪ್ರದಾಯ ಕೇವಲ ಸ್ವಿಡನ್ ನಲ್ಲಿ ಮಾತ್ರವಲ್ಲ ಉಳಿದ ನಾರ್ಡಿಕ್ ದೇಶದಲ್ಲಿಯೂ ಇದೆ. ಉತ್ತರ ಯುರೋಪ್ ಮತ್ತು ಉತ್ತರ ಅಟ್ಲಾಂಟಿಕ್ ನಲ್ಲಿರುವ ದೇಶಗಳಾದ ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ ಮುಂತಾದ ದೇಶಗಳಲ್ಲಿ ಕೂಡ ಅತಿಥಿಗಳನ್ನು ಸತ್ಕರಿಸಲಾಗುವುದಿಲ್ಲ. ನಾರ್ಡಿಕ್ ಪದ್ಧತಿಯ ಪ್ರಕಾರ ಅತಿಥಿಗಳ ಸೇವೆ ಮಾಡುವುದು ಸತ್ಕರಿಸುವುದು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ನಾವು ಯಾರಿಗಾದರೂ ಊಟ ನೀಡುತ್ತೇವೆ ಎಂದರೆ ಅವರು ತೀರ ಬಡವರು, ಗತಿ ಇಲ್ಲದವರು ಎಂದರ್ಥವಾಗಿತ್ತು. ಹಾಗಾಗಿ ಯಾರಿಗಾದರೂ ಊಟ ಹಾಕುವುದೆಂದರೆ ಅದು ನಾವು ಅವರಿಗೆ ಮಾಡುವ ಅವಮಾನ ಎಂಬ ಭಾವನೆ ಸ್ವಿಡನ್ ಜನರಿಗಿದೆ. ಹಾಗಾಗಿ ಅಲ್ಲಿನ ಜನರು ಇಂದಿಗೂ ಆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇನ್ನೊಬ್ಬರಿಗೆ ಊಟ ನೀಡಿ ಅವರು ನಮಗಿಂತ ಬಡವರು ಎಂದು ತೋರಿಸುವುದು ಅವರಿಗೆ ಮುಜುಗರದ ಸಂಗತಿಯಾಗಿದೆ.