Asianet Suvarna News Asianet Suvarna News

ಬೆಂಗಳೂರು: ಬಡತನಕ್ಕೆ ಡೋಂಟ್ ಕೇರ್.. ಇಡ್ಲಿ- ದೋಸೆಯಿಂದ್ಲೇ ಶ್ರೀಮಂತನಾದ ವ್ಯಕ್ತಿ!

ಬ್ಯುಸಿನೆಸ್ ಶುರು ಮಾಡಿದ ತಕ್ಷಣ ಯಶಸ್ಸು ಸಾಧ್ಯವಿಲ್ಲ. ಕೆಲಸದ ಮೇಲೆ ಶ್ರದ್ಧೆ ತೋರಿಸಿದ್ರೆ, ಹಠ ಬಿಡದೆ ಕೆಲಸ ಮಾಡಿದ್ರೆ ಯಶಸ್ಸು ಇದ್ದೇ ಇದೆ. ಇದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆ. ಅನೇಕ ಯುವ ಉದ್ಯಮಿಗಳಿಗೆ ಸ್ಪೂರ್ತಿ ಕೂಡ ಹೌದು. 
 

Success Story Meet Pc Musthafa Id Fresh Food in Bengaluru roo
Author
First Published Dec 12, 2023, 5:21 PM IST

ಛಲವೊಂದಿದ್ದರೆ ವ್ಯಕ್ತಿ ಯಾವ ಕೆಲಸವನ್ನಾದ್ರೂ ಮಾಡ್ಬಹುದು. ಇದಕ್ಕೆ ಅನೇಕ ಉದಾಹರಣೆ ನಮ್ಮಲ್ಲಿದೆ. ಅತಿ ಬಡತನದಿಂದ ಬಂದು, ಕೆಲಸದಲ್ಲಿ ತೃಪ್ತಿ ಸಿಗದೆ ವ್ಯಾಪಾರಕ್ಕೆ ಇಳಿದು ಸಾಧನೆ ಮಾಡಿದ ಜನರಲ್ಲಿ ಇವರು ಒಬ್ಬರು. ಬಡ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿಗೆ ಒಳ್ಳೆ ಶಾಲೆಯಲ್ಲಿ ಓದಲು ಹಣವಿರಲಿಲ್ಲ. ಕಷ್ಟಪಟ್ಟು ಓದು ಮುಗಿಸಿ, ಕೆಲಸ ಶುರು ಮಾಡಿದ್ರೂ ಅದ್ರಲ್ಲಿ ನೆಮ್ಮದಿ ಇರಲಿಲ್ಲ. ನಂತ್ರ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಿ ಸ್ವಂತ ಉದ್ಯಮ ಶುರು ಮಾಡಿದ ವ್ಯಕ್ತಿ ಈಗ 2000 ಕೋಟಿ ರೂಪಾಯಿ ಮೌಲ್ಯದ ಕಂಪನಿ ನಡೆಸುತ್ತಿದ್ದಾರೆ. ಅವರು ನಡೆದು ಬಂದ ದಾರಿ ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ.

ಮನೆಯಲ್ಲಿ ದೋಸೆ (dosa) ಗೆ ಹಿಟ್ಟಿಲ್ಲ, ಅಕ್ಕಿ ನೆನೆ ಹಾಕೋಕೆ ನೆನಪಿರಲಿಲ್ಲ, ಇಡ್ಲಿ ಹಿಟ್ಟನ್ನು ರುಬ್ಬಿಕೊಳ್ಳಲು ಪುರಸೊತ್ತಿಲ್ಲ ಎನ್ನುವ ಜನರಿಗೆ ಆಸರೆಯಾಗಿದ್ದು ಐಡಿ ಫ್ರೆಶ್. ಬಹುತೇಕ ಎಲ್ಲರಿಗೂ iD Fresh ದೋಸೆ ಮಿಕ್ಸ್, ಇಡ್ಲಿ ಮಿಕ್ಸ್ ಬಗ್ಗೆ ಪರಿಚಯವಿದೆ. ನಗರ ಪ್ರದೇಶದಲ್ಲಿ ಅನೇಕ ಮನೆಗೆ ಪ್ರತಿ ದಿನ ಈ iD Fresh ದೋಸೆ ಹಿಟ್ಟು ಹೋಗುತ್ತೆ. ಅದ್ರ ಮಾಲಿಕರೇ ಪಿಸಿ ಮುಸ್ತಫಾ. ಅವರ ಕಂಪನಿ ಹೆಸರು iD Fresh Food -India- Pvt Ltd.

ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಶ್‌ ಕಪಲ್ ದೀಪಿಕಾ ರಣ್‌ವೀರ್ ಬಳಿ ಇರುವ ದುಬಾರಿ ಆಸ್ತಿಗಳಿವು

ಹಿಂದೆ ಇನ್ಸ್ಟೆಡ್ ಮಿಕ್ಸ್ ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ. ಆ ಸಮಯದಲ್ಲೇ ಮಾರುಕಟ್ಟೆ (Market) ಗೆ ಐಡಿ ಲಗ್ಗೆ ಇಟ್ಟಿತ್ತು. ದೋಸೆ – ಇಡ್ಲಿ ಹಿಟ್ಟಿನ ಕಂಪನಿ ಶುರು ಮಾಡುವ ಮೊದಲು ಪಿಸಿ ಮುಸ್ತಫಾ ದುಬೈನ ಸಿಟಿಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕೆಲಸದಲ್ಲಿ ಯಾವುದೇ ಕೊರತೆ ಇರಲಿಲ್ಲ. ಆದ್ರೆ ಸ್ವಂತ ಕಂಪನಿ ಹೊಂದುವ ಅವರ ಬಯಕೆ ಇದರಿಂದ ಈಡೇರಲು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಆ ಕೆಲಸ ತೊರೆದು ಭಾರತಕ್ಕೆ ವಾಪಸ್ ಆದ್ರು. ಬೆಂಗಳೂರಿಗೆ ಬಂದ ಅವರು ಐಐಎಂನಲ್ಲಿ ಕೋರ್ಸ್ ಮುಗಿಸಿದ್ರು. ನಂತ್ರ ತಮ್ಮ ಸಹೋದರಸಂಬಂಧಿಗಳ ಜೊತೆ ಚರ್ಚಿಸಿ ಅವರು ದೋಸೆ ಬ್ಯಾಟರ್ ತಯಾರಿಸುವ ಉದ್ಯೋಗಕ್ಕೆ ಕೈ ಹಾಕಿದ್ರು. ಮಿಕ್ಸರ್, ಗ್ರೈಂಡರ್ ಮತ್ತು ಸೆಕೆಂಡ್ ಹ್ಯಾಂಡ್ ಸ್ಕೂಟರ್ ಹಿಡಿದು ತಮ್ಮ ಕೆಲಸ ಶುರು ಮಾಡಿದ್ದರು. 2005 ರಲ್ಲಿ ಇಡ್ಲಿ ದೋಸೆ ಐಡಿ ಫ್ರೆಶ್ ಫುಡ್ಸ್ ಕೇವಲ 50,000 ರೂಪಾಯಿಯಲ್ಲಿ ಶುರುವಾಗಿತ್ತು. ಆರಂಭದಲ್ಲಿ ಕೆಲಸ ಮಂದಗತಿಯಲ್ಲಿ ಸಾಗಿತ್ತು. ಆದ್ರೀಗ ಕಂಪನಿ ಪ್ರಸಿದ್ಧಿ ಪಡೆದಿದೆ.  

ಹೊಸ ಸಾಹಸಕ್ಕೆ ಕೈ ಹಾಕಿದ ಸಮಂತಾ ರುತ್‌ ಪ್ರಭು: ಹೊಸ ಪ್ರೊಡಕ್ಷನ್ ಹೌಸ್ ಆರಂಭ!

ಬೆಂಗಳೂರಿನಲ್ಲಿ 50 ಚದರ ಅಡಿ ಜಾಗದಲ್ಲಿ ಬ್ಯಾಟರ್ ಸಿದ್ಧವಾಯ್ತು. ದಿನಕ್ಕೆ ನೂರು ಪ್ಯಾಕೆಟ್ ಮಾರಾಟವಾಗುವ ನಿರೀಕ್ಷೆಯನ್ನು ಮುಸ್ತಫಾ ಹೊಂದಿದ್ದರು. ಆದ್ರೆ ಅದು ಅಷ್ಟು ಸುಲಭವಾಗಿರಲಿಲ್ಲ. ಸತತ ಒಂಭತ್ತು ತಿಂಗಳ ನಂತ್ರ ದಿನಕ್ಕೆ ನೂರು ಪ್ಯಾಕೆಟ್ ಮಾರಾಟವಾಗಲು ಶುರುವಾಯ್ತು. 

ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದ್ದ ಮುಸ್ತಫಾಗೆ ಯಾರ ಸಹಾಯ ಸಿಗಲಿಲ್ಲ. ಯಾರೂ ಈ ಪ್ಲಾನ್ ಗೆ ಹಣ ಹೂಡಲು ಮುಂದೆ ಬರಲಿಲ್ಲ. ಆಗ ಕೇರಳದಲ್ಲಿದ್ದ ತಮ್ಮ ಜಮೀನು ಮಾರಾಟ ಮಾಡಿದ್ರು ಮುಸ್ತಫಾ. ಅದರ ಹಣದಿಂದ 550 ಚದರ ಅಡಿ ಜಾಗದಲ್ಲಿ ಉತ್ಪಾದನೆ ಆರಂಭಿಸಿದ ಅವರು ಪ್ರತಿದಿನ 100 ಇಡ್ಲಿ ಹಿಟ್ಟಿನ ಪ್ಯಾಕೆಟ್‌ಗಳನ್ನು ಮಾರಾಟ ಮಾಡಿದ್ರು. ಜನರಿಂದ ನಿಧಾನವಾಗಿ ಸ್ಪಂದನೆ ಸಿಕ್ತಾ ಹೋಯ್ತು. ಈಗ ಕಂಪನಿ ನಿತ್ಯ 2000 ಕೆಜಿ ಬ್ಯಾಟರ್ ತಯಾರಿಸುತ್ತಿದೆ.  ಅತಿ ಶೀಘ್ರದಲ್ಲೇ ಕಂಪನಿ ಆದಾಯ 1 ಕೋಟಿ ರೂಪಾಯಿ ತಲುಪಿತು.

2023 ರಲ್ಲಿ ಐಡಿ ಫ್ರೆಶ್ ಫುಡ್ಸ್ 500 ಕೋಟಿ ರೂಪಾಯಿ ವಹಿವಾಟು ಪೂರ್ಣಗೊಳಿಸಿದೆ. ಅಜೀಂ ಪ್ರೇಮ್‌ಜಿ ಇದರ ಗ್ರಾಹಕರಾಗಿದ್ದಲ್ಲದೆ 2017 ರಲ್ಲಿ ಪ್ರೇಮ್‌ಜಿ 170 ಕೋಟಿ ರೂಪಾಯಿ ಈ ಕಂಪನಿ ಮೇಲೆ ಹೂಡಿಕೆ ಮಾಡಿದ್ದಾರೆ. ಈಗ ಕಂಪನಿ ಆರು ಮೆಗಾ ಕಾರ್ಖಾನೆ ಹೊಂದಿದೆ. 

Follow Us:
Download App:
  • android
  • ios