
LGBTQIA+ ಎಂಬುದನ್ನು ಸಾಮಾನ್ಯವಾಗಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಹೇಳುವ ಮಾತು. ಆದರೆ ಇವುಗಳ ಬಗ್ಗೆ ಸವಿವರ ಬಹುತೇಕ ಮಂದಿಗೆ ತಿಳಿದಿರುವುದಿಲ್ಲ. ಕೆಲವರು ಈ ಬಗ್ಗೆ ತಿಳಿದುಕೊಳ್ಳುವ ಹಂಬಲವಿದ್ದರೂ ಅದರ ಬಗ್ಗೆ ಮಾತನಾಡಲು ಹಿಂಜರಿಯುವುದು ಉಂಟು. ಯಾರಿಗೆ ಏನು ಬರೆಯಬೇಕು, ಅವರು ಯಾರು, ಇವರು ಯಾರು, ಇವರ ನಡುವೆ ವ್ಯತ್ಯಾಸವೇನು ಎಂದು ತಿಳಿಯುವುದಿಲ್ಲ. ಇವರೆಲ್ಲರನ್ನೂ ಸೇರಿಸಿ LGBTQIA ಸಮುದಾಯ ಎಂದು ಕರೆಯಲಾಗುತ್ತದೆ. ಹಾಗಿದ್ದರೆ ಇಲ್ಲಿ ಬರುವ L, G, B, T, Q, I ಮತ್ತ A ಗೆ ಇರುವ ವ್ಯತ್ಯಾಸವೇನು ಎನ್ನುವ ಬಗ್ಗೆ ಇದೀಗ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ ಇದೇ ಸಮುದಾಯಕ್ಕೆ ಸೇರಿರುವ ಸುಶಾಂತ್ ದಿವ್ಗಿಕರ್. ರಾಣಿ ಕೋ-ಹೆ-ನೂರ್ ಎಂದೂ ಕರೆಯಲ್ಪಡುವ ಸುಶಾಂತ್ ದಿವ್ಗಿಕರ್ ಒಬ್ಬ ಮಾಡೆಲ್, ನಟ, ಗಾಯಕ, ಅಂಕಣಕಾರ, ಪ್ರೇರಕ ಭಾಷಣಕಾರ, ಡ್ರ್ಯಾಗ್ ಕ್ವೀನ್ ಸ್ಪರ್ಧೆಯ ನಿರ್ದೇಶಕ ಮತ್ತು ವಿಡಿಯೋ ಜಾಕಿ. 'ಮಿಸ್ಟರ್ ಗೇ ಇಂಡಿಯಾ 2014' ಕಿರೀಟವನ್ನು ಪಡೆದಿದ್ದ ಇವರು, ಅವರು ಮಿಸ್ಟರ್ ಗೇ ವರ್ಲ್ಡ್ 2014 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ತಮ್ಮ ಸಮುದಾಯದ ಬಗ್ಗೆ ರಿವೀಲ್ ಮಾಡಿದ್ದಾರೆ.
LGBTQIA+ ಎನ್ನುವುದು ಸಮುದಾಯದೊಳಗಿನ ವಿವಿಧ ಲೈಂ*ಗಿಕ ದೃಷ್ಟಿಕೋನಗಳು ಮತ್ತು ಲಿಂಗ ಗುರುತುಗಳಿಗೆ ಸಂಕ್ಷಿಪ್ತ ರೂಪವಾಗಿದೆ, ಇದರಲ್ಲಿ ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್‌ಜೆಂಡರ್, ಕ್ವೀರ್ ಅಥವಾ ಕ್ವೆಷನಿಂಗ್, ಇಂಟರ್‌ಸೆ*ಕ್ಸ್ ಮತ್ತು ಅಸೆ*ಕ್ಸುವಲ್, ಜೊತೆಗೆ "ಪ್ಲಸ್" ಚಿಹ್ನೆಗೂ ಒಂದು ಅರ್ಥವನ್ನು ಕೊಡಲಾಗಿದೆ (Lesbian, Gay, Bise*xual, Transgender, Queer, Inters*ex, and Asexual).
ಇದನ್ನೂ ಓದಿ: ಸಿನಿಮಾಕ್ಕಾಗಿ ಕ್ಯಾಮೆರಾ ಎದುರೇ 45 ನಿಮಿಷ ಲೈವ್ ಹೆರಿಗೆ ಮಾಡಿಸಿಕೊಂಡ ನಟಿ! ಈಕೆ ಬೆಚ್ಚಿಬೀಳೋ ಸ್ಟೋರಿ ಕೇಳಿ
ಇದರ ಅರ್ಥವನ್ನು ಸುಶಾಂತ್ ದಿವ್ಗಿಕರ್ ಹೀಗೆ ವಿವರಿಸಿದ್ದಾರೆ.
ಅಕ್ಷರಗಳ ವಿಭಜನೆ:
L: ಎಸ್ಬಿಯನ್: ಇತರ ಮಹಿಳೆಯರತ್ತ ಆಕರ್ಷಿತಳಾದ ಮಹಿಳೆ. ಇದರ ಅರ್ಥ ಹುಟ್ಟುತ್ತಲೇ ಮಹಿಳೆಯಾದವಳು ಮತ್ತೊಂದು ಮಹಿಳೆಯತ್ತ ಆಕರ್ಷಿತವಾಗುವುದು. ಇವರಿಗೆ Lesbian ಎಂದು ಕರೆಯಲಾಗುತ್ತದೆ.
G: ಗೇ: ಇತರ ಪುರುಷನತ್ತ ಆಕರ್ಷಿತನಾಗುವ ಪುರುಷ. ಇದರ ಅರ್ಥ ಹುಟ್ಟುತ್ತಲೇ ಪುರುಷನಾದವ ಮತ್ತೊಂದು ಪುರುಷನತ್ತ ಆಕರ್ಷಿತವಾಗುವುದು. ಇವರಿಗೆ Gay ಎಂದು ಕರೆಯಲಾಗುತ್ತದೆ
B: ಬೈಸೆಕ್ಸುವಲ್: ಒಂದು ವ್ಯಕ್ತಿಗೆ ಹೆಣ್ಣು ಮತ್ತು ಗಂಡು ಇಬ್ಬರ ಮೇಲೂ ಆಕರ್ಷಣೆಯಾಗುವುದು. ಇವರಿಗೆ Bise*xual ಎಂದು ಕರೆಯಲಾಗುತ್ತದೆ.
T: ಟ್ರಾನ್ಸ್‌ಜೆಂಡರ್: ಆತ್ಮ ಮಹಿಳೆಯದ್ದಾಗಿರುತ್ತದೆ, ಆದರೆ ಹುಟ್ಟು ಪುರುಷನದ್ದಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಆಪರೇಷನ್ ಮಾಡುವ ಮೂಲಕ ಮಹಿಳೆಯಾಗಿ ಜೀವಿಸಲು ಸಾಧ್ಯವಿದೆ. ಅವರಿಗೆ Transgender ಎಂದು ಕರೆಯಲಾಗುತ್ತದೆ.
Q- ಕ್ವೀರ್ ಇದರ ಅರ್ಥ ಎಲ್ಲರೂ ಒಂದೇ ಎನ್ನುವುದು. ಭಾಷೆ, ರಾಜ್ಯ ಬೇರೆ ಬೇರೆಯಾದರೂ ಒಂದೇ ಸೂರಿನ ಅಡಿ ಎಲ್ಲರೂ ಬರುತ್ತೇವೆ ಎನ್ನುವ ಅರ್ಥ ಅದನ್ನು Queer ಎನ್ನಲಾಗುತ್ತದೆ.
I: ಇಂಟರ್‌ಸೆ*ಕ್ಸ್: ಇದರ ಅರ್ಥ ಹುಟ್ಟುತ್ತಲೇ ಪುರುಷನೂ ಅಲ್ಲ, ಮಹಿಳೆಯೂ ಅಲ್ಲವಾಗಿರುತ್ತದೆ. ಪುರುಷನಾಗಿ ಹುಟ್ಟಿದ್ದರೆ ಅವರಲ್ಲಿ ಮಹಿಳೆಯರ ಹಾರ್ಮೋನ್ ಹೆಚ್ಚಾಗಿರುತ್ತದೆ. ಅಂಥವರನ್ನು Inters*ex ಜನರು ಎನ್ನಲಾಗುತ್ತದೆ.
A: ಎಸೆ*ಕ್ಸುವಲ್: ದೈಹಿಕ ಸಂಬಂಧದಲ್ಲಿ ಕಡಿಮೆ ಆಸಕ್ತಿ ಇರುತ್ತದೆ ಅಥವಾ ಅದರಲ್ಲಿ ಅವರಿಗೆ ಆಸೆಯೇ ಇರುವುದಿಲ್ಲ. ಅಂಥ ವ್ಯಕ್ತಿಗಳನ್ನು Ase*xual ಎಂದು ಕರೆಯಲಾಗುತ್ತದೆ.
+: (ಪ್ಲಸ್) ಬಗ್ಗೆ ತಮಾಷೆಯಾಗಿ ಮಾತನಾಡಿರುವ ಸುಶಾಂತ್ ದಿವ್ಗಿಕರ್ ಅವರು, ಇಷ್ಟೊಂದು ವಿಭಿನ್ನತೆ ನೋಡಿ ನಾವೂ ಸುಸ್ತಾಗಿ ಹೋಗಿದ್ದೇವೆ. ಅದಕ್ಕಾಗಿ ನೀವು ಯಾರನ್ನು ಏನೇ ಹೇಳಿದರೂ ಪರವಾಗಿಲ್ಲ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕೇ ಪ್ಲಸ್ ಎಂದು ಬಿಟ್ಟುಬಿಟ್ಟಿದ್ದೇವೆ. ನೀವು ಎಷ್ಟೇ ಸೇರಿಸಿಕೊಳ್ಳಬಹುದು ಎಂದು ಇದರ ಅರ್ಥ ಎಂದಿದ್ದಾರೆ. The Ranveer show podcastಗೆ ನೀಡಿರುವ ಸಂದರ್ಶನ ಇಲ್ಲಿದೆ:
ಇದನ್ನೂ ಓದಿ: ನನ್ನ ಈ ಸುಂದರ ಅಂಗವನ್ನು ದಾನ ಮಾಡುತ್ತಿದ್ದೇನೆ ಎಂದ Rakhi Sawant: ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.