
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋವೊಂದು ದಾಂಪತ್ಯದಲ್ಲಿನ ಗೌಪ್ಯತೆ, ನಂಬಿಕೆ ಮತ್ತು ಪಾರದರ್ಶಕತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಅನೈತಿಕ ಸಂಬಂಧಗಳು, ಗಂಡಹ-ಹೆಂಡತಿ ನಡುವೆ ನಂಬಿಕೆಯ ಸಮಸ್ಯೆಗಳು ಹೆಚ್ಚಿರುವ ನಡುವೆ ಈ ವಿಡಿಯೋ ಚರ್ಚೆಗೆ ಕಾರಣವಾಗಿದೆ. ಈ ಕ್ಲಿಪ್‌ನಲ್ಲಿ ಗಂಡನೊಬ್ಬ ಅನುಮಾನದಿಂದ ತನ್ನ ಹೆಂಡತಿಯ ಫೋನ್ ಪರಿಶೀಲನೆ ಮಾಡಿದ್ದಾನೆ. ಇದು ಭಾವನಾತ್ಮಕ ಘರ್ಷಣೆಗೆ ಕಾರಣವಾಗಿದೆ. ವಿಡಿಯೋ ಪ್ರಕಾರ ಗಂಡ ತನ್ನ ಫೋನ್ ಚೆಕ್ ಮಾಡಿದ್ದರಿಂದ ಸಿಟ್ಟಾಗಿದ್ದ ಪತ್ನಿ, ತನ್ನ ವೈಯಕ್ತಿಕ ವಿಚಾರದಲ್ಲಿ ಬಂದಿದ್ದಕ್ಕಾಗಿ ಗಂಡನ ಮೇಲೆ ವಾಗ್ದಾಳಿ ನಡೆಸಿದ್ದಲ್ಲದೆ, ಆತನ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಪತ್ನಿಯ ರಣಚಂಡಿಯ ಅವತಾರ ಕಂಡು ಗಂಡ ಕಣ್ಣೀರು ಹಾಕುತ್ತಿದ್ದ ಎನ್ನಲಾಗಿದೆ.
ಈ ಘಟನೆ ಆನ್‌ಲೈನ್‌ನಲ್ಲಿ ನೆಟ್ಟಿಗರ ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ. ಅನೇಕ ನೆಟ್ಟಿಗರು ಪತ್ನಿಯ ಪರವಾಗಿ ದೃಢವಾಗಿ ನಿಂತಿದ್ದಾರೆ. ಮದುವೆ ಅನ್ನೋ ವಿಚಾರದಲ್ಲಿ ನಿಮ್ಮ ಜೊತೆಗಾರರ ಗೌಪ್ಯತೆಗೆ ಗೌರವ ಕೊಡುವುದು ಕೂಡ ಮೂಲಭೂತ ಹಕ್ಕಾಗಿ ಉಳಿದಿದೆ ಎಂದಿದ್ದಾರೆ. "ಮದುವೆ ಅನ್ನೋದು ನಂಬಿಕೆ ಗೌರವದ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಒಪ್ಪಿಗೆಯಿಲ್ಲದೆ ನಿಮ್ಮ ಸಂಗಾತಿಯ ಫೋನ್ ಅನ್ನು ಪರಿಶೀಲಿಸುವುದು ಅಭದ್ರತೆಯನ್ನು ತೋರಿಸುತ್ತದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಮದುವೆಯು ಸ್ವಾಭಾವಿಕವಾಗಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ಬರಬೇಕು ಎಂದು ವಾದಿಸಿದರು. "ಇಬ್ಬರು ವ್ಯಕ್ತಿಗಳು ಗಂಡ ಹೆಂಡತಿಯಾಗಿ ಒಟ್ಟಿಗೆ ಬಂಧಿತರಾದಾಗ, ಯಾವುದೇ ರಹಸ್ಯಗಳು ಅವರ ನಡುವೆ ಇರಬಾರದು" ಎಂದು ಮತ್ತೊಬ್ಬರು ಬರೆದಿದ್ದಾರೆ.
ಈ ವೈರಲ್ ವಿಡಿಯೋ ಬಹಳ ಹಿಂದಿನಿಂದಲೂ ಇದ್ದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅದೇನೆಂದರೆ, ಸಂಬಂಧಗಳಲ್ಲಿ ಗೌಪ್ಯತೆ ಮತ್ತು ಪಾರದರ್ಶಕತೆಯ ನಡುವಿನ ಗೆರೆ ಎಲ್ಲಿದೆ ಎನ್ನುವುದು.
ರಿಲೇಷನ್‌ಷಿಪ್ ಎಕ್ಸ್‌ಪರ್ಟ್‌ಗಳು ಹೇಳುವ ಪ್ರಕಾರ, ಗಂಡ-ಹೆಂಡತಿ ನಡುವೆ ಮುಕ್ತತೆ ಅನ್ನೋದು ಅಗತ್ಯವಾದರು. ಇಬ್ಬರ ನಡುವಿನ ವೈಯಕ್ತಿಕ ಗಡಿಗಳನ್ನು ಗೌರವಿಸುವುದು ಅಷ್ಟೇ ಮುಖ್ಯ. ಒಳ್ಳೆಯ ಉದ್ದೇಶದಿಂದ ನೀವು ಮಾಡುವ ಗೌಪ್ಯತೆಯ ಉಲ್ಲಂಘನೆ ನಿಮ್ಮ ಮೇಲಿನ ನಂಬಿಕೆಯನ್ನು ಬಲಪಡಿಸುವ ಬದಲು ಅದನ್ನು ತೆಗೆದುಹಾಕಬಹುದು ಎಂದು ಎಚ್ಚರಿಸಿದ್ದಾರೆ.
ಆನ್‌ಲೈನ್‌ನಲ್ಲಿ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ, ಒಂದು ವಿಷಯವಂತೂ ಸ್ಪಷ್ಟವಾಗದೆ. ಈ ವೀಡಿಯೊ ಅನೇಕ ದಂಪತಿಗಳು ಎದುರಿಸುತ್ತಿರುವ ಸೂಕ್ಷ್ಮ ಸಮಸ್ಯೆಯನ್ನು ಸ್ಪರ್ಶಿಸಿದೆ, ಇದು ಕೇವಲ ವೈರಲ್ ಕ್ಷಣಕ್ಕಿಂತ ಹೆಚ್ಚಾಗಿ ನಿಜ ಜೀವನದ ಸಂಬಂಧದ ಸವಾಲುಗಳ ಕನ್ನಡಿಯಾಗಿದೆ.
ಈ ವಿಡಿಯೋದ ಸತ್ಯಾಸತ್ಯತೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಪರಿಶೀಲಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಚಾರದ ಬಗೆಗಿನ ಸುದ್ದಿಯಷ್ಟೇ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.