ಮಕ್ಕಳನ್ನು ಬೆಳೆಸೋದು ಸುಲಭವಲ್ಲ. ಎಲ್ಲ ಮಕ್ಕಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ನಿಮ್ಮ ಮಗು ಸಮಾಜದಲ್ಲಿ ಉತ್ತಮ ಪ್ರಜೆ ಆಗ್ಬೇಕೆಂದ್ರೆ ಪಾಲಕರಾಗಿ ನಿಮ್ಮ ಜವಾಬ್ದಾರಿ ಹೆಚ್ಚಿರುತ್ತದೆ. ನಿಮಗಿಂತ ಶಿಕ್ಷಕರ ಬಳಿ ಮಕ್ಕಳ ಬಗ್ಗೆ ನಿಖರ ಮಾಹಿತಿ ಇರುತ್ತೆ.
ಇದು ಸ್ಪರ್ಧಾ ಯುಗ. ಇಲ್ಲಿ ಮಕ್ಕಳನ್ನು ಪಾಲಕರು ಸ್ಪರ್ಧೆಗಿಡುತ್ತಿದ್ದಾರೆ. 100ಕ್ಕೆ 99 ಅಂಕ ಬಂದ್ರೆ ಒಂದು ಮಾರ್ಕ್ಸ್ ಎಲ್ಲಿ ಹೋಯ್ತು ಎಂದು ಪಾಲಕರು ಪ್ರಶ್ನೆ ಮಾಡ್ತಾರೆಯೇ ವಿನಃ 99 ಅಂಕ ಗಳಿಸಿದ ಮಗುವಿಗೆ ಪ್ರಶಂಸೆ ನೀಡೋದಿಲ್ಲ. ಒಂದೇ ಮಗು ಎಲ್ಲ ಕ್ಷೇತ್ರದಲ್ಲಿ ಇರಬೇಕು ಎನ್ನುವ ಆಸೆ ಪಾಲಕರದ್ದು. ಬೇರೆ ಮಕ್ಕಳು, ತಮ್ಮ ಮಕ್ಕಳಿಗಿಂತ ಒಂದಂಕ ಹೆಚ್ಚು ತೆಗೆದುಕೊಂಡ್ರೂ ಮಕ್ಕಳನ್ನು ಬೈಯ್ಯುವ ಪಾಲಕರು, ಶಿಕ್ಷಕರ ಜೊತೆ ಮೀಟಿಂಗ್ ನಲ್ಲಿ ಪಾಲ್ಗೊಂಡಾಗ ಕೂಡ ನೋಡೋದು ಮಾರ್ಕ್ಸನ್ನು ಮಾತ್ರ.
ಈಗ ಎಲ್ಲ ಶಾಲೆ (School) ಗಳಲ್ಲಿ ಟೀಚರ್ – ಪೆರೆಂಟ್ (Parent) ಮೀಟಿಂಗ್ ನಡೆಯುತ್ತೆ. ಶಿಕ್ಷಕರ ಜೊತೆ ನೇರವಾಗಿ ಮಾತನಾಡುವ ಅವಕಾಶ ಪಾಲಕರಿಗೆ ಸಿಗ್ತಿದೆ. ಈ ಸಂದರ್ಭದಲ್ಲಿ ಬರೀ ಪರೀಕ್ಷೆ, ಮಾರ್ಕ್ಸ್ ಬಗ್ಗೆ ಕೇಳಿ, ತಿಳಿದುಕೊಂಡರೆ ಸಾಲದು. ನಿಮ್ಮ ಮಕ್ಕಳು ಇನ್ನಷ್ಟು ಬೆಳವಣಿಗೆ ಕಾಣ್ಬೇಕು ಎಂದಾದ್ರೆ ನೀವು ಶಿಕ್ಷಕರ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕು. ಒಂದಿಷ್ಟು ಪ್ರಶ್ನೆಗಳನ್ನು ಯಾವುದೇ ಮುಜುಗರವಿಲ್ಲದೆ ಕೇಳಿ ಅದಕ್ಕೆ ಉತ್ತರ ಪಡೆಯಬೇಕು. ನಾವಿಂದು ಪಾಲಕರು – ಶಿಕ್ಷಕ (Teacher)ರ ಸಭೆಯಲ್ಲಿ ನೀವು ಯಾವೆಲ್ಲ ಪ್ರಶ್ನೆ ಕೇಳ್ಬುಹು ಎಂಬ ಬಗ್ಗೆ ಹೇಳ್ತೇವೆ.
undefined
ರಣವೀರ್ಗೂ ಮೊದ್ಲು ಆಲಿಯಾಗೆ ಹೀಗೆಲ್ಲಾ ಕ್ರಷ್ ಇತ್ತಾ? ಕನ್ಯತ್ವ ಕಳಕೊಂಡ ವಿಷ್ಯ ಬಿಸಿಬಿಸಿ ಚರ್ಚೆ!
• ಮೊದಲನೇಯದಾಗಿ ಶಿಕ್ಷಕರ ಜೊತೆ ಮಾತುಕತೆಗೆ ಹೋಗುವ ಮುನ್ನ ನಿಮ್ಮ ಮಕ್ಕಳ ಜೊತೆ ಮಾತನಾಡಲು ಮರೆಯಬೇಡಿ. ಮಕ್ಕಳಿಗೆ ಶಾಲೆಯಲ್ಲಿ ಯಾವ ಸಮಸ್ಯೆಯಾಗ್ತಿದೆ, ಅವರ ತೊಂದರೆ ಏನು, ಅವರ ಪರವಾಗಿ ಶಿಕ್ಷಕರಿಗೆ ಹೇಳುವುದು ಏನಾದ್ರೂ ಇದ್ಯಾ ಎಂಬುದನ್ನು ಪ್ರಶ್ನೆ ಮಾಡಿ ತಿಳಿದುಕೊಳ್ಳಿ.
• ಶಿಕ್ಷಕರನ್ನು ಭೇಟಿಯಾದ ಸಮಯದಲ್ಲಿ ನಿಮ್ಮ ಮಗು ಶಾಲೆಗೆ ಹೊಂದಿಕೊಂಡಿದೆಯಾ ಎಂಬುದನ್ನು ತಿಳಿಯಿರಿ. ಅವರು ಶಾಲೆಯಲ್ಲಿ ಸಂತೋಷವಾಗಿದ್ದಾರೆಯೇ, ಶಾಲೆ ಅವಧಿಯಲ್ಲಿ ಆರಾಮವಾಗಿರ್ತಾರಾ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
ಮಹಿಳೆಯರಲ್ಲಿ ಕಾಮಾಸಕ್ತಿ ಕಡಿಮೆಯಾಗೋಕೆ ಕಾರಣ ಒಂದಾ , ಎರಡಾ?
• ಮಕ್ಕಳ ಸಾಮರ್ಥ್ಯವೇನು ಹಾಗೆ ದೌರ್ಬಲ್ಯವೇನು ಎಂಬುದನ್ನು ನೀವು ಶಿಕ್ಷಕರಿಂದ ತಿಳಿಯಬೇಕು.
• ತರಗತಿಯಲ್ಲಿ ಎಲ್ಲ ಮಕ್ಕಳಂತೆ ನಿಮ್ಮ ಮಗು ಇದೆಯೇ? ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಳ್ಳುತ್ತಿದೆಯೇ ಎಂಬುದನ್ನು ತಿಳಿಯಿರಿ.
• ಮಕ್ಕಳ ನೆಚ್ಚಿನ ವಿಷ್ಯ ಯಾವುದು, ಯಾವುದರಲ್ಲಿ ಅವರು ನಿರಾಸಕ್ತಿ ಹೊಂದಿದ್ದಾರೆ ಎಂಬುದನ್ನು ಅರಿಯಿರಿ.
• ಮಕ್ಕಳು ದೈಹಿಕ ಚಟುವಟಿಕೆಯಲ್ಲಿ (Physical Activity) ಹೇಗೆ ಪಾಲ್ಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಡೆಯುವುದು ಮುಖ್ಯ.
• ಮಕ್ಕಳ ಯಾವುದಾದ್ರೂ ವರ್ತನೆ ಶಾಲೆಯ, ತರಗತಿಯ ವಾತಾವರಣವನ್ನು ಕೆಡಿಸುತ್ತಿದೆಯೇ ಎಂಬುದರ ಮಾಹಿತಿ ಪಡೆಯಿರಿ.
• ಅಗತ್ಯವಿದ್ರೆ ಬೇರೆ ವಿಷಯದ ಶಿಕ್ಷಕರನ್ನು ಭೇಟಿಯಾಗಿ ಮಾತನಾಡಿ.
• ಶಿಕ್ಷಕರು ಕಲಿಸುವ ವಿಧಾನಗಳ ಬಗ್ಗೆ ನೀವು ತಿಳಿದುಕೊಳ್ಳಿ. ಮನೆಯಲ್ಲಿ ನೀವು ಅದನ್ನೇ ಪಾಲಿಸಬಹುದು.
• ವಿರಾಮದ ಸಮಯದಲ್ಲಿ ಮಗು ಏನು ಮಾಡುತ್ತದೆ ಎಂಬ ಬಗ್ಗೆಯೂ ನೀವು ತಿಳಿದಿರಬೇಕು. ಆಹಾರವನ್ನು ಹಂಚಿ ತಿನ್ನುತ್ತಿದೆಯೇ, ಎಲ್ಲವನ್ನು ಖಾಲಿ ಮಾಡ್ತಿದೆಯೇ, ನೀರು ಕುಡಿತಿದ್ಯಾ, ಮೂತ್ರ ವಿಸರ್ಜನೆ ಸೇರಿದಂತೆ ಎಲ್ಲ ಕೆಲಸವನ್ನು ಸರಿಯಾಗಿ ಮಾಡ್ತಿದೆಯಾ ಎಂಬ ಬಗ್ಗೆ ತಿಳಿಯಿರಿ. ಶಾಲೆಯಲ್ಲಿ ಇದಕ್ಕೆ ಎಷ್ಟು ಅವಕಾಶ ಸಿಗುತ್ತದೆ ಎಂಬುದರ ಮಾಹಿತಿ ಕೂಡ ಪಡೆಯಿರಿ.
• ಮಗುವಿನ ವರ್ತನೆ ಶಾಲೆಯಲ್ಲಿ ಹೇಗಿರುತ್ತೆ, ಯಾವ ಕಾರಣಕ್ಕೆ ಕೋಪ ಬರ್ತಿದೆ, ವಸ್ತುಗಳನ್ನು ಎಸೆಯುವುದು, ಇತರೇ ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ವರ್ತನೆ ತೋರಿಸ್ತಿದ್ಯಾ ಅಥವಾ ಸುಮ್ಮನೆ ಯಾರ ತಂಟೆಗೂ ಹೋಗದೆ ಹಾಗೆ ಕುಳಿತಿರುತ್ತಾ ಎಂಬುದನ್ನು ಶಿಕ್ಷಕರಿಂದ ತಿಳಿಯಿರಿ.
• ಮಗು ಎಷ್ಟು ಸಮಯ ಏಕಾಗ್ರತೆಯಿಂದ ಕೇಳಬಲ್ಲದು ಎಂಬುದನ್ನು ಕೂಡ ಪಾಲಕರು ತಿಳಿಯಬೇಕಾಗುತ್ತದೆ.