ವಾರಕ್ಕೆ ಒಂದು ರಾತ್ರಿ ನನ್ನ ಜೊತೆ ಮಲುಗು..ಸಾಲ ಮನ್ನಾ, ಫೈನಾನ್ಷಿಯರ್‌ ಡರ್ಟಿ ಡೀಲ್

Published : Mar 26, 2026, 03:06 PM IST
Sexual Harassment

ಸಾರಾಂಶ

Police arrest financer for Misconduct with women after loan offer ವಾರಕ್ಕೆ ಒಂದು ರಾತ್ರಿ ನನ್ನ ಜೊತೆ ಮಲುಗು… ಸಾಲ ಮನ್ನಾ!”– ಫೈನಾನ್ಷಿಯರ್‌ನ ಶಾಕಿಂಗ್ ಆಫರ್, ಮಹಿಳೆಗೆ ನರಕ ಜೀವನ

ಆರ್ಥಿಕ ಸಂಕಷ್ಟದಲ್ಲಿದ್ದ ಮಹಿಳೆಯೊಬ್ಬಳು ₹35,000 ಸಾಲಕ್ಕಾಗಿ ಫೈನಾನ್ಷಿಯರ್‌ನ್ನು ಸಂಪರ್ಕಿಸಿದ್ದಳು. ಆದರೆ ಈ ಸಹಾಯವೇ ನಂತರ ಆಕೆಗೆ ಭಯಾನಕ ಅನುಭವವಾಗಿ ಮಾರ್ಪಟ್ಟಿದೆ. ಸಾಲ ನೀಡಿದ ಬಳಿಕ ಆರೋಪಿ ಆಕೆಯ ಮುಂದೆ ಅಸಭ್ಯ ಮತ್ತು ಶಾಕಿಂಗ್ ಷರತ್ತು ಇಟ್ಟಿದ್ದಾನೆ.

ಜನವರಿ 5ರಂದು ಸಂಜೆ ಮಹಿಳೆ ಫೈನಾನ್ಷಿಯರ್ ಕಚೇರಿಗೆ ತೆರಳಿ ₹35,000 ಸಾಲ ಪಡೆದಿದ್ದಳು. ಅದಕ್ಕಾಗಿ ಖಾಲಿ ಚೆಕ್ ಮತ್ತು ಪ್ರಾಮಿಸರಿ ನೋಟ್‌ಗೆ ಸಹಿ ಕೂಡ ಮಾಡಿಸಿದ್ದನು. ಮಾರ್ಚ್ ತಿಂಗಳಿಂದ ಪ್ರತಿ ತಿಂಗಳು ₹10,000ರಂತೆ ಹಣ ಮರಳಿ ನೀಡುವುದಾಗಿ ಒಪ್ಪಂದವಾಗಿತ್ತು.

ಆದರೆ ಮಾರ್ಚ್ 7ರಂದು ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. ಫೈನಾನ್ಷಿಯರ್ ಆಕೆಯನ್ನು ಕಚೇರಿಗೆ ಕರೆಸಿ, “ಸಾಲವನ್ನು ಹಿಂದಿರುಗಿಸುವ ಅಗತ್ಯವಿಲ್ಲ… ಆದರೆ ಪ್ರತೀ ವಾರ ಒಂದು ರಾತ್ರಿ ನನ್ನ ಜೊತೆ ಕಳೆಯಬೇಕು” ಎಂದು ಅಸಭ್ಯ ಪ್ರಸ್ತಾಪ ಮಾಡಿದ್ದಾನೆ. ಇದಲ್ಲದೆ, ಪ್ರತೀ ವಾರ ಒಂದು ರಾತ್ರಿ ಬದಲಾಗಿ ವರ್ಷಕ್ಕೆ ₹5–6 ಲಕ್ಷ ಕೊಡುತ್ತೇನೆ ಎಂದು ಹೇಳಿ ಆಕೆಯನ್ನು ಒತ್ತಡಕ್ಕೆ ಒಳಪಡಿಸಿದ್ದಾನೆ.

ಮಹಿಳೆ ಈ ಪ್ರಸ್ತಾಪವನ್ನು ಸ್ಪಷ್ಟವಾಗಿ ತಿರಸ್ಕರಿಸಿದರೂ, ಆರೋಪಿ ತನ್ನ ಕಿರುಕುಳವನ್ನು ನಿಲ್ಲಿಸಲಿಲ್ಲ. ಫೋನ್ ಕಾಲ್‌ಗಳು, ಬೆದರಿಕೆಗಳು, ಒತ್ತಡಗಳು ಮುಂದುವರಿದವು. ಈ ಹಿಂಸೆಯಿಂದ ಮಹಿಳೆ ಮಾನಸಿಕವಾಗಿ ಸಂಪೂರ್ಣ ಕುಗ್ಗಿಬಿಟ್ಟಳು. ಆಕೆಯ ಉದ್ಯೋಗಕ್ಕೂ ಪರಿಣಾಮ ಬೀರಿದ್ದು, ಕಿರುಕುಳದಿಂದ ಕಂಪನಿಯ ಮಾಲೀಕರು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಒತ್ತಡದಲ್ಲಿದ್ದ ಮಹಿಳೆ ಕೊನೆಗೆ ತನ್ನ ಚಿನ್ನವನ್ನು ಮಾರಾಟ ಮಾಡಿ ₹35,000 ಹಣವನ್ನು ಗೂಗಲ್ ಟ್ರಾನ್ಸ್‌ಫರ್ ಮೂಲಕ ಮರಳಿ ನೀಡಿದ್ದಾಳೆ. ಆದರೂ ಆರೋಪಿ ತನ್ನ ಪ್ರಭಾವವನ್ನು ಬಳಸಿಕೊಂಡು ಕಿರುಕುಳ ಮುಂದುವರಿಸಿದ್ದಾನೆ. ಸಾಲದ ದಾಖಲೆಗಳನ್ನು ಸುಟ್ಟುಹಾಕುವ ನಾಟಕವನ್ನೂ ಅವನು ಮಾಡಿದ್ದಾನೆ ಎನ್ನಲಾಗಿದೆ.

ಈ ಘಟನೆ ಬಗ್ಗೆ ದೂರು ದಾಖಲಾದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸೇರಿದಂತೆ ಪ್ರಮುಖ ಪುರಾವೆಗಳು ಸಿಕ್ಕಿವೆ. ಮಹಿಳೆಗೆ ಮಾನಸಿಕ ಹಿಂಸೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ತನ್ನ ಆರ್ಥಿಕ ಪ್ರಭಾವ ಮತ್ತು ಸಂಪರ್ಕಗಳನ್ನು ಬಳಸಿಕೊಂಡು ಮಹಿಳೆಯನ್ನು ತೀವ್ರ ಒತ್ತಡಕ್ಕೆ ಒಳಪಡಿಸಿದ್ದಾನೆ. ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಕೋರಲಾಗುತ್ತದೆ.

ಈ ನಡುವೆ, ತೀವ್ರ ಮಾನಸಿಕ ಹಿಂಸೆ ಎದುರಿಸಿದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವಾರು ದಿನಗಳಿಂದ ಊಟ ಮಾಡದೇ ದುರ್ಬಲ ಸ್ಥಿತಿಯಲ್ಲಿ ಇದ್ದಾಳೆ. ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Boss ಮ್ಯೂಟಂಟ್​ ರಘುಗೆ ಹಾರ್ಟ್​ ಕೊಟ್ಟ Ashwini Gowda! ಅಲ್ಲಿ ಹಾವು-ಮುಂಗುಸಿ, ಇಲ್ಲಿ ನೋಡಿ ಮಜಾ
ನನ್ನ ಯಾಕೆ ಬಿಟ್ಟೋದೆ: ಮಲತಾಯಿಯ ಕಿರುಕುಳದ ಬಳಿಕ ತಾಯಿ ಸಮಾಧಿ ಬಳಿ ಗೋಳಾಡಿದ ಪುಟ್ಟ ಬಾಲಕಿ