ಅನುಮಾನ ಮನೆ ಹಾಳು ಮಾಡುತ್ತೆ. ಕಾರಣವಿಲ್ಲದೆ ಸಂಶಯ ಪಡುವುದು ಸಂಬಂಧ ಕೆಡಿಸುತ್ತೆ. ಪತಿಯ ನಡವಳಿಕೆ ಮೇಲೆ ಒಂದು ಕಣ್ಣಿಟ್ಟಿರಬೇಕು ನಿಜ, ಆದ್ರೆ ಇದು ಅತಿಯಾದ್ರೆ ದಾಂಪತ್ಯ ಮುರಿದು ಬೀಳುತ್ತದೆ. ಪತಿಯ ಮೊಬೈಲ್ ನೋಡುವ ಪತ್ನಿಯರು ಕೆಲವೊಂದು ವಿಷ್ಯ ನೆನಪಿಟ್ಟುಕೊಂಡಿರಬೇಕು.
ವೈವಾಹಿಕ ಜೀವನಕ್ಕೆ ಪ್ರೀತಿ (Love) ಅಗತ್ಯ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಈ ಸಂಬಂಧ (Relationship)ವನ್ನು ಗಟ್ಟಿಯಾಗಿ ಮತ್ತು ಯಶಸ್ವಿಗೊಳಿಸಲು ಪತಿ (Husband) ಮತ್ತು ಹೆಂಡತಿ (Wife)ಪರಸ್ಪರ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಪ್ರೇಮವಿವಾಹವೇ ಆಗಿರಲಿ ಅಥವಾ ಅರೇಂಜ್ಡ್ ಮ್ಯಾರೇಜ್ ಆಗಿರಲಿ, ಸಂಬಂಧದಲ್ಲಿ ನಂಬಿಕೆ ಕಳೆದುಕೊಂಡಾಗ ಅದು ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. ಆಳವಾದ ಪ್ರೀತಿ ಮಧ್ಯೆಯೂ ನಂಬಿಕೆ ಇಲ್ಲದೆ ಹೋದ್ರೆ ಬಹಳ ದಿನ ಒಟ್ಟಿಗೆ ಜೀವನ ನಡೆಸಲು ಸಾಧ್ಯವಿಲ್ಲ.
ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಅಭದ್ರತೆಯನ್ನು ಅನುಭವಿಸಿದರೆ, ನಿಮ್ಮ ಸಂಗಾತಿಯ ಗೌಪ್ಯತೆಯನ್ನು ಉಲ್ಲಂಘಿಸಲು ನೀವು ಮುಂದಾಗ್ತೀರಿ. ಇದು ಎಂದಿಗೂ ನಿಮಗೆ ತಪ್ಪು ಎನ್ನಿಸುವುದಿಲ್ಲ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ವಿಷಯದಲ್ಲಿ ಸ್ವಲ್ಪ ಒರಟಾಗಿರುತ್ತಾರೆ ಎಂದ್ರೆ ತಪ್ಪಾಗಲಾರದು.ಬೇರೆಯವರ ಮಾತುಗಳನ್ನು ಮಹಿಳೆಯರು ಹೆಚ್ಚಾಗಿ ನಂಬುತ್ತಾರೆ. ಪತಿ ಮೇಲಿನ ನಂಬಿಕೆ ಕಡಿಮೆಯಾದ್ರೆ ಅವಳು ತನ್ನ ಗಂಡನ ಮೇಲ್ವಿಚಾರಣೆ ಮಾಡಲು ಪ್ರಾರಂಭಿಸುತ್ತಾಳೆ. ಪತಿಯ ಫೋನ್ ನಲ್ಲಿ ಏನಿದೆ ಎಂಬ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೊಂದಿರುತ್ತಾರೆ. ನಂಬಿಕೆ ಕಳೆದುಕೊಂಡಾಗ ಸಣ್ಣ ಸಣ್ಣ ವಿಷ್ಯಗಳನ್ನು ದೊಡ್ಡದಾಗಿ ನೋಡುತ್ತಾರೆ. ಪತಿಯ ಫೋನ್,ಸಾಮಾಜಿಕ ಜಾಲತಾಣ,ವಾಟ್ಸ್ ಅಪ್ ಗಳನ್ನು ತಿಳಿಯದೆ ಚೆಕ್ ಮಾಡಲು ಶುರು ಮಾಡ್ತಾರೆ.
ತಜ್ಞರು ಹೇಳೋದೇನು ? : ಅನುಮತಿಯಿಲ್ಲದೆ ಪಾಲುದಾರರ ಫೋನ್ ಪರಿಶೀಲಿಸುವುದು ಅವರ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಡ್ತಾರೆ. ಸಂಬಂಧದಲ್ಲಿ ನಂಬಿಕೆ ಕಳೆದುಕೊಂಡಿದ್ದು, ನಿಮ್ಮ ಪತಿಯನ್ನು ನೀವು ಮತ್ತೆ ನಂಬಬಹುದೇ ಎಂದು ನೋಡಲು ಫೋನ್ ಪರಿಶೀಲಿಸುವುದು ತಪ್ಪಲ್ಲ. ಏಕೆಂದರೆ ಮುರಿದು ಬೀಳುವ ಸಂಬಂಧಕ್ಕೆ ಜೀವ ತುಂಬುವುದು ಬಹಳ ಮುಖ್ಯ. ನಂಬಿಕೆ ಹಾಗೂ ವಿಶ್ವಾಸಕ್ಕಾಗಿ ನೀವು ಫೋನ್ ಪರಿಶೀಲನೆ ಮಾಡಬಾಹುದು. ಆದ್ರೆ ಈ ಸಮಯದಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಿ, ಯಾವುದೇ ಕಾರಣಕ್ಕೂ ಫೋನ್ ನೋಡುವುದು ಅಭ್ಯಾಸ ಮಾಡಿಕೊಳ್ಬೇಡಿ. ಒಂದು ವೇಳೆ ಇಬ್ಬರೂ ಮಧ್ಯೆ ಒಳ್ಳೆ ಸಂಬಂಧವಿದ್ದೂ ನೀವು ಫೋನ್ ಚೆಕ್ ಮಾಡ್ತಿದ್ದರೆ,ನಿಮ್ಮ ಈ ಅಭ್ಯಾಸ ಸಂಬಂಧ ಹಾಳು ಮಾಡಬಹುದು. ನೀವು ಅವರನ್ನು ನಂಬುವುದಿಲ್ಲ ಎಂದು ನಿಮ್ಮ ಪತಿಗೆ ಅನ್ನಿಸಿದ್ರೆ ನಿಮ್ಮಿಂದ ಅವರು ದೂರವಾಗಬಹುದು. ನಿಮ್ಮ ಮೇಲಿರುವ ಗೌರವ ಕಡಿಮೆಯಾಗಬಹುದು.
Relationship Tips: ಸಂಗಾತಿಯನ್ನು ಖುಷಿಪಡಿಸಲು ಸಿಂಪಲ್ ಟಿಪ್ಸ್
ಗಂಡನ ನಿಷ್ಠೆಯನ್ನು ಹೇಗೆ ಪರೀಕ್ಷಿಸಿ : ನಿಮ್ಮ ಗಂಡ, ಫೋನ್‌ಗೆ ಲಾಕ್ ಹಾಕಿಕೊಂಡಿಲ್ಲವೆಂದ್ರೆ ಆತನನ್ನು ಅನುಮಾನಿಸುವ ಅಗತ್ಯವಿಲ್ಲ. ಮೋಸ ಮಾಡಲು ಶುರು ಮಾಡುವ ವ್ಯಕ್ತಿಯ ವರ್ತನೆ ಬದಲಾಗಿರುತ್ತದೆ. ಫೋನ್ ಗೆ ಲಾಕ್ ಹಾಕುವ ಜೊತೆಗೆ ಫೋನ್ ಸ್ಪರ್ಶಿಸಲು ಬಿಡುವುದಿಲ್ಲ. ಹಾಗಂತ,ಲಾಕ್ ಹಾಕಿದ ಅಥವಾ ಫೋನ್ ನಲ್ಲಿರುವ ಸಂಗತಿ ತಿಳಿದುಕೊಳ್ಳಲು ನಿರಾಕರಿಸುವ ವ್ಯಕ್ತಿಗಳೆಲ್ಲ ಪತ್ನಿಗೆ ಮೋಸ ಮಾಡ್ತಾರೆ ಎಂದಲ್ಲ. ಪತ್ನಿಗೆ ಹೇಳಲು ಸಾಧ್ಯವಾಗದ ಸಂಗತಿಯನ್ನು ಸ್ನೇಹಿತರ ಜೊತೆ ಹಂಚಿಕೊಂಡಿರುತ್ತಾರೆ. ಸ್ನೇಹಿತರ ಮಧ್ಯೆ ಅನೇಕ ವಿಷ್ಯಗಳ ಚರ್ಚೆಯಾಗಿರುತ್ತದೆ. ಇದನ್ನು ಪತ್ನಿಗೆ ತಿಳಿಸುವ ಅಗತ್ಯವಿಲ್ಲವೆಂದು ಅವರು ಭಾವಿಸುತ್ತಾರೆ. ನಿಮ್ಮ ಸ್ನೇಹಿತರ ಜೊತೆ ನಡೆದ ಮಾತುಕತೆಯನ್ನು ನಿಮ್ಮ ಪತಿ ನೋಡಿದ್ರೆ ನಿಮಗೆ ಹೇಗಾಗುತ್ತದೆಯೋ ಅದೇ ರೀತಿ ನಿಮ್ಮ ಪತಿಗಾಗುತ್ತದೆ.
Love Life : ಪ್ರೀತಿ ವ್ಯಕ್ತಪಡಿಸಲು ನಾಚಿಕೆ ಅಡ್ಡಿಯಾಗ್ತಿದ್ದರೆ ಹೀಗೆ ಮಾಡಿ
ಅನುಮಾನಕ್ಕೆ ಕಾರಣ : ದಾಂಪತ್ಯದಲ್ಲಿ ಪ್ರೀತಿಗಿಂತ ಹೆಚ್ಚಿನ ನಂಬಿಕೆ ಇರಬೇಕು ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಯ ಫೋನ್ ಅನ್ನು ಪದೇ ಪದೇ ಪರಿಶೀಲಿಸಿದರೆ, ಬಯಸದೆಯೂ ಸಹ, ನಿಮ್ಮ ಸಂಬಂಧದಲ್ಲಿ ಅನುಮಾನಗಳು ಉದ್ಭವಿಸುತ್ತವೆ. ಏಕೆಂದರೆ ನಿಮ್ಮ ಈ ಅಭ್ಯಾಸದಿಂದಾಗಿ ನಿಮ್ಮ ಸಂಗಾತಿ ನಿಮ್ಮಿಂದ ಎಲ್ಲವನ್ನೂ ಮುಚ್ಚಿಡಲು ಪ್ರಾರಂಭಿಸುತ್ತಾರೆ. ಫೋನ್‌ನಿಂದ ಅನೇಕ ವಿಷ್ಯಗಳನ್ನು ಡಿಲೀಟ್ ಮಾಡ್ಬಹುದು. ಒಂದು ವೇಳೆ ಸಂಗಾತಿ ಫೋನ್ ನೋಡುವ ಆಸಕ್ತಿ ನಿಮಗಿದ್ದರೆ ಎಂದೂ ಕದ್ದುಮುಚ್ಚಿ ಈ ಕೆಲಸ ಮಾಡಬೇಡಿ. ಸಂಗಾತಿಯನ್ನು ಕೇಳಿ ಫೋನ್ ಪಡೆಯಿರಿ.