
ನವದೆಹಲಿ (ನ.10) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯ ಆತ್ಮಕತೆ ಬಿಲಾಂಗಿಂಗ್, ಎ ಜರ್ನಿ ಆಫ್ ಲವ್ ಪುಸ್ತಕದಲ್ಲಿ ಸೋನಿಯಾ ಗಾಂಧಿ ತಮ್ಮ ಮೊದಲ ಮಗುವಿನ ಕಹಿ ಘಟನೆಯನ್ನು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಹುಟ್ಟುವ ಮೊದಲು ಸೋನಿಯಾ ಗಾಂಧಿ ದಿ.ರಾಜೀವ್ ಗಾಂಧಿ ದಂಪತಿಯ ಮೊದಲ ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ. ಈ ನೋವಿನ ಘಟನೆಯನ್ನು ಆತ್ಮಕತೆಯಲ್ಲಿ ಬಿಚ್ಚಿಟ್ಟಿದ್ದಾರೆ.
ರಾಜೀವ್ ಗಾಂಧಿ ಮದುವೆಯಾದ ಸೋನಿಯಾ ಗಾಂಧಿ ತಮ್ಮ ಸಂಸಾರಿಕ ಜೀವನದಲ್ಲಿ ಎದುರಿಸಿದ ಆರಂಭಿಕ ಆಘಾತ , ನೋವು, ಕಣ್ಣೀರ ಕುರಿತು ಹೇಳಿಕೊಂಡಿದ್ದಾರೆ. 1969ರಲ್ಲಿ ಜನಿಸಿದ ಮೊದಲ ಗಂಡು ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು. ಮಗು ಕಳೆದುಕೊಂಡ ನೋವು, ಆಘಾತ ತನಗೂ ಹಾಗೂ ಕುಟುಂಬದ ಮೇಲೆ ತೀವ್ರ ಪರಿಣಾಮ ಪರಿಣಾಮ ಬೀರಿತ್ತು ಎಂದು ಸೋನಿಯಾ ಗಾಂಧಿ ಘಟನೆ ನೆನಪಿಸಿಕೊಂಡಿದ್ದಾರೆ.
1969ರ ಜನವರಿ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ನಿಗದಿತ ಅವಧಿಗೂ 2 ತಿಂಗಳ ಮುಂಚೆ ಮಗುವಿನ ಜನನವಾಗಿತ್ತು. ಅವಧಿಪೂರ್ವ ಹೆರಿಗೆಯಾಗಿದ್ದ ಕಾರಣ ಮಗು ಆರೋಗ್ಯ ಸಮಸ್ಯೆ ಎದುರಿಸಿತ್ತು. ಮಗು ಬದುಕುಳಿಸುವ ಸಾಧ್ಯತೆ ಕುರಿತು ವೈದ್ಯರು ಯಾವುದೇ ಖಚಿತತೆ ನೀಡಿರಲಿಲ್ಲ. ರಾಜೀವ್ ಕೂಡ ನನ್ನ ಜೊತೆಗಿದ್ದರು. ಮಗು ಹುಟ್ಟಿದ ಬೆನ್ನಲ್ಲೇ ಇನ್‌ಕ್ಯುಬೇಟರ್‌ನಲ್ಲಿ ಇಡಲಾಗಿತ್ತು. ವೈದ್ಯರು ನಮಗೆ ಮಗುವನ್ನು ತೋರಿಸಿದ್ದರು. ಉದ್ದನೆ ಬೆರಳು, ಕೂದಲು, ಮುದ್ದಾದ ಗಂಡು ಮಗು ನೋಡಿದ ತಣಕ್ಷವೇ ಅಕ್ಕರೆ, ಪ್ರೀತಿ, ತಾಯ್ತತನದ ವಿಶೇಷ ಅನುಭವ ಉಮ್ಮಳಿಸಿತ್ತು. ಮೊದಲ ನೋಟದಲ್ಲೇ ಮಗುವನ್ನು ನಾವು ಪ್ರೀತಿಸಿದ್ದೆವು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಮಗು ಹುಟ್ಟಿದ ಬಳಿಕ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಹುಟ್ಟಿದ ಮರುದಿನ ಮುಂಜಾನೆ 6.30ರ ಸುಮಾರಿಗೆ ಮಗು ಮೃತಪಟ್ಟಿದೆ. ಮಗು ಇನ್ನಿಲ್ಲ ಎಂದಾಗ ಆಘಾತವಾಗಿತ್ತು, ರಾಜೀವ್ ಕೂಡ ನೋವಿನಲ್ಲಿ ಕುಸಿದು ಹೋಗಿದ್ದರು. ಕುಟುಂಬಕ್ಕೆ ಆದ ಆಘಾತ ತೀವ್ರವಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಪ್ರವಾಸ ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು. ಇಂದಿರಾ ಗಾಂಧಿ ಧಾವಿಸಿ ಬಂದು ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ಈ ನೋವು ತೀವ್ರವಾಗಿತ್ತು ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕತೆಯಲ್ಲಿ ಘಟನೆ ವಿವರಿಸಿದ್ದಾರೆ.
ಮಗುವಿನ ಅಂತ್ಯಸಂಸ್ಕಾರವನ್ನು ಹಿಂದೂ ಸಾಂಪ್ರದಾಯಿಕ ಪದ್ಧತಿಯಂತೆ ನಡೆಸಲು ಸೋನಿಯಾ ಗಾಂಧಿ ಒಪ್ಪಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಗುವಿನ ದೇಹವನ್ನು ನದಿಯಲ್ಲಿ ವಿಸರ್ಜಿಸುವ ಪದ್ಧತಿ ಬೇಡ ಎಂದಿದ್ದರು. ತನ್ನ ಮಗು ಮೃತದೇಹ ನದಿಯಲ್ಲಿ ತೇಲಲು ಬಿಡುವುದಿಲ್ಲ ಎಂದಿದ್ದರು. ಬಳಿ ಬೌಗನ್ ವಿಲ್ಲಾ ಮನೆಯ ತೋಟದದಲ್ಲಿ ಮಗುವಿ ದೇಹ ದಫನ ಮಾಡಲಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.