Sonal Raghuvanshi Case: ನಿಮ್ಮ ಸಂಗಾತಿ ಸೋನಮ್ ರಘುವಂಶಿಯಂತೆ ಮೋಸ ಮಾಡುತ್ತಿದ್ದಾರಾ? ಈ ರೀತಿಯ ತಪ್ಪುಗಳನ್ನು ಗುರುತಿಸಿ

Published : Jun 14, 2025, 08:40 PM IST
Sonam Raja Raghuvamshi

ಸಾರಾಂಶ

Relationship red flags Infidelity signs:ಸೋನಮ್ ರಘುವಂಶಿ, ತನ್ನ ಪ್ರೇಮಿಯೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದಳು. ಈ ಘಟನೆ ಸಂಬಂಧಗಳಲ್ಲಿ ವಂಚನೆಯ ಸೂಕ್ಷ್ಮ ಚಿಹ್ನೆಗಳನ್ನು ಗುರುತಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. 

Sonam Raghuvanshi murder case Relationship red flags: ಈ ಕಥೆ ಕೇವಲ ಅಪರಾಧದ ಬಗ್ಗೆಯಲ್ಲ, ಬದಲಿಗೆ ಪ್ರೀತಿಯ ಮುಖವಾಡದ ಹಿಂದಿನ ವಂಚನೆ ಮತ್ತು ನಂಬಿಕೆಯ ಕೊಲೆಯ ಕಥೆ. ಸೋನಮ್ ರಘುವಂಶಿಯ ಭಯಾನಕ ಕೃತ್ಯವು ಸಂಬಂಧಗಳಲ್ಲಿ ಗುಪ್ತವಾಗಿರುವ ಅಪಾಯಗಳ ಬಗ್ಗೆ ಎಚ್ಚರಿಸಿದೆ. 2025ರ ಮೇ 11ರಂದು ಆಡಂಬರದಿಂದ ವಿವಾಹವಾದ ಸೋನಮ್ ಮತ್ತು ರಾಜಾ ರಘುವಂಶಿ, ಕೇವಲ ಆರು ದಿನಗಳಲ್ಲಿ ಹನಿಮೂನ್‌ಗೆಂದು ಇಂದೋರ್‌ಗೆ ಹೊರಟರು. ಆದರೆ ಇದು ಕೇವಲ ನಾಟಕವಾಗಿತ್ತು, ಹನಿಮೂನ್‌ಗೆ ಹೋಗುವ ಹಿಂದಿನ ಉದ್ದೇಶವೇ ಬೇರೆಯಾಗಿತ್ತು. ಸೋನಮ್, ತನ್ನ ಪ್ರೇಮಿ ರಾಜ್ ಕುಶ್ವಾಹನೊಂದಿಗೆ ಸೇರಿ, ಗಂಡ ರಾಜಾ ರಘುವಂಶಿಯನ್ನು ಶಿಲ್ಲಾಂಗ್‌ನಲ್ಲಿ ಹತ್ಯೆ ಮಾಡಿಸಿದಳು. ಬಾಡಿಗೆ ಕೊಲೆಗಾರರಿಗೆ ಹಣದ ಆಮಿಷವೊಡ್ಡಿ, ಸಾಕ್ಷ್ಯ ನಾಶಕ್ಕಾಗಿ ಮೊಬೈಲ್ ನಾಶಗೊಳಿಸಿದಳು ಆದರೆ ಅವಳ ಸಂಚು ವಿಫಲವಾಯಿತು.

ಪೊಲೀಸರು ಸೋನಮ್ ಸೇರಿದಂತೆ ಎಲ್ಲ ಆರೋಪಿಗಳನ್ನು ಗಾಜಿಪುರದಲ್ಲಿ ಬಂಧಿಸಿದರು.

ಈ ಘಟನೆ ಸಂಬಂಧಗಳಲ್ಲಿ ವಂಚನೆಯ ಸೂಕ್ಷ್ಮ ಚಿಹ್ನೆಗಳನ್ನು ಗುರುತಿಸುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇಂದಿನ ಸಂಬಂಧಗಳಲ್ಲಿ ಪ್ರೀತಿಯ ಜೊತೆಗೆ ಅನುಮಾನ, ಸುಳ್ಳು, ಮತ್ತು ವಂಚನೆಯೂ ಸೇರಿಕೊಂಡಿವೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಎಂದು ಗುರುತಿಸಲು ಕೆಲವು ವರ್ತನೆಗಳು ಗಮನಿಸಬಹುದು.

ಆದರೆ ಪ್ರಶ್ನೆಯೆಂದರೆ ನಿಮ್ಮ ಸಂಗಾತಿ ನಿಜವಾಗಿಯೂ ನಿಮಗೆ ಮೋಸ ಮಾಡುತ್ತಿದ್ದಾರೆಯೇ ಅಥವಾ ಅದು ನಿಮ್ಮ ತಪ್ಪು ಕಲ್ಪನೆಯೇ ಎಂದು ಹೇಗೆ ಗುರುತಿಸುವುದು?

ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಅತಿಯಾದ ಗೌಪ್ಯತೆ

ನಿಮ್ಮ ಸಂಗಾತಿ ಈ ಹಿಂದೆ ಫೋನ್ ಅನ್ನು ಮುಕ್ತವಾಗಿ ಬಳಸಿದ್ದರೆ, ಆದರೆ ಈಗ ಇದ್ದಕ್ಕಿದ್ದಂತೆ ಪಾಸ್‌ವರ್ಡ್ ಬಳಸಲು ಪ್ರಾರಂಭಿಸಿದ್ದರೆ, ಯಾವಾಗಲೂ ಫೋನ್ ಅನ್ನು ತಲೆಕೆಳಗಾಗಿ ಇಡುತ್ತಿದ್ದರೆ ಅಥವಾ ಅದರ ಡಿಸ್ಪಲೇ ಕಾಣದಂತೆ ಇರಿಸಿದ್ದರೆ, ಅದು ದೊಡ್ಡ ಸಂಕೇತವಾಗಿರಬಹುದು.

ಟೈಂ ಇಲ್ಲ ಎಂಬ ನೆಪಗಳ ಸರಣಿ:

ಮೊದಲು ಯಾವಾಗಲೂ ನಿಮ್ಮ ಜೊತೆ ಇರಬೇಕೆಂದು ಬಯಸುತ್ತಿದ್ದ ವ್ಯಕ್ತಿ, ಈಗ ಪ್ರತಿದಿನ "ನನಗೆ ಮೀಟಿಂಗ್ ಇದೆ, ನನಗೆ ಸ್ನೇಹಿತರೊಂದಿಗೆ ಕೆಲಸಗಳಿವೆ ಎಂದು ನೆಪ ಹೇಳುತ್ತಿದ್ದಾನೆ?ಳೆಯೇ? ಈ ಬದಲಾವಣೆಯು ಸಾಮಾನ್ಯವಲ್ಲ, ಅದು ಏನನ್ನಾದರೂ ಮರೆಮಾಡುವ ಪ್ರಯತ್ನವೂ ಆಗಿರಬಹುದು.

ಭಾವನಾತ್ಮಕ ಅಂತರ ಮತ್ತು ಸಂವಹನದ ಕೊರತೆ

ನಿಮ್ಮ ಸಂಗಾತಿ ಇನ್ನು ಮುಂದೆ ನಿಮ್ಮ ಸುಖ-ದುಃಖಗಳಲ್ಲಿ ಆಸಕ್ತಿ ಹೊಂದಿಲ್ಲದಿದ್ದರೆ, ಸಣ್ಣ ವಿಷಯಗಳಿಗೂ ಕಿರಿಕಿರಿ ಅನುಭವಿಸುತ್ತಿದ್ದರೆ ಅಥವಾ ನಿಮ್ಮಿಬ್ಬರ ನಡುವಿನ ಸಂವಹನವು ಮೊದಲಿನಂತಿಲ್ಲದಿದ್ದರೆ, ಈ ಸಂಬಂಧವು ಅಪಾಯದ ಗಂಟೆ ಬಾರಿಸುತ್ತಿದೆ ಎಂದರ್ಥ.

ಇದಕ್ಕಿದ್ದಂತೆ ನೋಟ, ಲೈಫ್ ಸ್ಟೈಲ್ ಬದಲಾಗುವುದು:

ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ತನ್ನ ನೋಟ, ಸುಗಂಧ ದ್ರವ್ಯ ಮತ್ತು ಬಟ್ಟೆಗಳ ಬಗ್ಗೆ ಅತಿಯಾದ ಆಸಕ್ತಿ ಬೆಳೆಸಿಕೊಂಡಿದ್ದಾರೆಯೇ ಹಾಗಾದರೆ ಅವರು ಬೇರೆಯವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವ ಸಾಧ್ಯತೆಯಿದೆ.

ಸುಳ್ಳು ಮತ್ತು ಗೊಂದಲಮಯ ವಿಷಯಗಳು

ಸಣ್ಣ ವಿಷಯಗಳ ಬಗ್ಗೆ ಸುಳ್ಳು ಹೇಳುವುದು, ಒಂದು ಘಟನೆಯ ಆವೃತ್ತಿಗಳನ್ನು ಪದೇ ಪದೇ ಬದಲಾಯಿಸುವುದು ಅಥವಾ 'ನೀವು ಎಲ್ಲಿದ್ದಿರಿ?' ಎಂಬ ಪ್ರಶ್ನೆಗಳಿಗೆ ಕೋಪಗೊಳ್ಳುವುದು ವಂಚನೆಯ ಸ್ಪಷ್ಟ ಲಕ್ಷಣಗಳಾಗಿವೆ.

ಇಂಥ ವರ್ತನೆಗಳು ಕಾಣಿಸಿಕೊಂಡರೆ ಏನು ಮಾಡಬೇಕು?

  • ನಿಮ್ಮ ಕಳವಳಗಳನ್ನು ಶಾಂತವಾಗಿ ವ್ಯಕ್ತಪಡಿಸಿ
  • ಪುರಾವೆಗಳನ್ನು ನಂಬಿ, ಅನುಮಾನವನ್ನಲ್ಲ
  • ಸಂಬಂಧವು ಏಕಪಕ್ಷೀಯವೆಂದು ಭಾವಿಸಲು ಪ್ರಾರಂಭಿಸಿದರೆ, ನಿಮ್ಮನ್ನು ನೀವು ನೋಯಿಸಿಕೊಳ್ಳಬೇಡಿ.
  • ಅಗತ್ಯವಿದ್ದರೆ ವೃತ್ತಿಪರ ಸಮಾಲೋಚನೆ ಪಡೆಯಿರಿ

ಪ್ರತಿಯೊಂದು ಸಂಬಂಧವೂ ಪರಿಪೂರ್ಣವಲ್ಲ, ಆದರೆ ಸೋನಂ ರಘುವಂಶಿಯಂತಹ ಘಟನೆಗಳು ನಮಗೆ ಏನನ್ನಾದರೂ ಕಲಿಸಬಹುದಾದರೆ, ಅದು ಇಷ್ಟೇ, ಸಂಬಂಧಗಳನ್ನು ಕುರುಡಾಗಿ ನಂಬಬೇಡಿ ಮತ್ತು ಸಮಯಕ್ಕೆ ತಕ್ಕಂತೆ ಸತ್ಯವನ್ನು ಗುರುತಿಸಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!