
ಕಾಲ ಬದಲಾಗಿದೆ ಎನ್ನೋ ಮಾತು ಹಲವು ದಶಕಗಳಿಂದಲೂ ಕೇಳಿಬರುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಮಾಡುತ್ತಿರುವ ಅಪರಾಧ ಕೃತ್ಯಗಳನ್ನು ನೋಡಿದರೆ ಅದು ನಿಜ ಎಂದು ಹೇಳುತ್ತಿರುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಹೆಣ್ಣುಮಕ್ಕಳಷ್ಟೇ ಅಲ್ಲ, ಪುರುಷರೂ ಸೇಫ್ ಅಲ್ಲ ಎನ್ನಲಾಗುತ್ತಿದೆ. ಇದೀಗ ಅಂಥದ್ದೇ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮನ್ನು ಅಸಡ್ಡೆ ಮಾಡುತ್ತಿದ್ದಾರೆ,, ಅವರು ಪ್ರೀತಿಸುತ್ತಿಲ್ಲ ಎಂದು ತಿಳಿಯುತ್ತಲೇ ಕೆಲವು ಯುವಕರು ದಾರಿಯಲ್ಲಿ ಹೋಗುವಾಗಲೇ ಹಣೆಗೆ ಸಿಂದೂರ ಇಡುವ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಇಲ್ಲಿ ಉಲ್ಟಾ ಆಗಿದೆ. ಯುವಕನ ಮೇಲೆ ಕ್ರಷ್ ಆಗಿರೋ ಕಾರಣಕ್ಕೆ ಯುವತಿಯೊಬ್ಬಳು ಅವನಿಗೆ ಗೊತ್ತಿಲ್ಲದಂತೆಯೇ ಸಿಂದೂರ ಇಟ್ಟಿದ್ದಾಳೆ! ಇದನ್ನು ನೋಡಿ ಯುವಕ ಕಕ್ಕಾಬಿಕ್ಕಿಯಾಗಿದ್ದಾನೆ.
Instagram ನಲ್ಲಿ ಈ ವಿಶಿಷ್ಟ ಮತ್ತು ಆಘಾತಕಾರಿ ವೀಡಿಯೊ ವೈರಲ್ ಆಗಿದೆ. ಇದನ್ನು surya_fast_news ಎಂಬ ಖಾತೆ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ ಒಬ್ಬ ಮಹಿಳೆ ಮತ್ತು ಯುವಕ ಕಾಣಿಸಿಕೊಂಡಿದ್ದಾರೆ. ಆ ಮಹಿಳೆ ತನಗೆ ಆ ಯುವಕನ ಜೊತೆ ಕ್ರಷ್ ಆಗಿರುವ ಬಗ್ಗೆ ಮಾತನಾಡಿದ್ದಾಳೆ. ಅದು ಪಾರ್ಕ್ ಆಗಿದ್ದು, ತಾನು ಆ ಉದ್ಯಾನದ ಭದ್ರತಾ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಳೆ. ತಾನು ಯುವಕನಿಗೆ ಸಿಂದೂರ ಇಟ್ಟಿರುವ ಬಗ್ಗೆ ಮಾತನಾಡಿರೋ ಆಕೆ, "ಈ ಹುಡುಗ ಪ್ರತಿದಿನ ವೀಡಿಯೊಗಳನ್ನು ಚಿತ್ರೀಕರಿಸಲು ಉದ್ಯಾನವನಕ್ಕೆ ಬರುತ್ತಿದ್ದ. ಅವನು ಇಲ್ಲಿ ರೀಲ್ಸ್ ಮಾಡುತ್ತಿದ್ದ. . ಪ್ರತಿದಿನ ಅವನನ್ನು ನೋಡಿದ ನಂತರ ನಾನು ಅವನನ್ನು ಪ್ರೀತಿಸತೊಡಗಿದೆ. ಅವನ ಮೇಲೆ ಕ್ರಷ್ ಉಂಟಾಯಿತು. ಸಿಕ್ಕಾಪಟ್ಟೆ ಮನಸ್ಸು ಆಯಿತು. ಆದ್ದರಿಂದ ನಾನು ಅವನ ಹಣೆಗೆ ಸಿಂದೂರ ಇಟ್ಟಿದ್ದೇನೆ. ಈಗ ನಮ್ಮಿಬ್ಬರ ಮದುವೆಯಾಗಿದ್ದು, ನಾವು ಪತಿ ಪತ್ನಿ ಎಂದಿದ್ದಾಳೆ!
ಈ ವೈರಲ್ ವೀಡಿಯೊದಲ್ಲಿ ಯುವಕ ತನ್ನ ಸ್ನೇಹಿತರೊಂದಿಗೆ ನಿಂತು ವೀಡಿಯೊವನ್ನು ಚಿತ್ರೀಕರಿಸುತ್ತಿರುವುದನ್ನು ಕಾಣಬಹುದು. ಇಲ್ಲಿ ಆತ ಪ್ರತಿದಿನ ರೀಲ್ಸ್ ಮಾಡಲು ಬರುತ್ತಿದ್ದನಂತೆ. ಆ ದಿನವೂ ರೀಲ್ಸ್ ಮಾಡಲು ವಿಡಿಯೋ ಮಾಡುತ್ತಿರುವ ಸಂದರ್ಭದಲ್ಲಿ ಆ ಯುವತಿ ಹಿಂದಿನಿಂದ ಬಂದು ಹುಡುಗನ ತಲೆಯ ಮೇಲೆ ಸಿಂದೂರ ಹಾಕಿದ್ದಾಳೆ! ಈ ಇಡೀ ಘಟನೆ ಕೆಲವು ಸೆಕೆಂಡುಗಳದ್ದಾಗಿದೆ. ಅಚಾನಕ್ ಆಗಿ ಏನು ಆಯಿತು ಎಂದು ತಿಳಿಯದ ಯುವಕ ಕಕ್ಕಾಬಿಕ್ಕಿಯಾಗಿದ್ದಾನೆ!
ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪರಿಣಾಮ ಬೀರಿದೆ. ವೀಡಿಯೊದಲ್ಲಿ, ಉದ್ಯಾನವನದ ದೃಶ್ಯವು ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ರೀಲ್ ಅಥವಾ ಸೆಟಪ್ ಅಲ್ಲ ಆದರೆ ನಿಜವಾದ ಸ್ಥಳದಲ್ಲಿ ನಡೆದ ಘಟನೆ ಎಂದು ಸಾಬೀತುಪಡಿಸುತ್ತದೆ. ಈ ವೀಡಿಯೊ ವೈರಲ್ ಆದ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರತಿಕ್ರಿಯೆಗಳ ಪ್ರವಾಹ ಬಂದಿತು. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಒಬ್ಬ ಬಳಕೆದಾರರು, "ಈಗ ಪುರುಷ ಸಮಾಜವೂ ಭಯಭೀತರಾಗಲು ಪ್ರಾರಂಭಿಸಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಸಹೋದರ ಈಗ ಮದುವೆಯಾಗಿದ್ದಾನೆ, ನೀವು ಪ್ರತಿದಿನ ಸಿಂದೂರ ಹಚ್ಚಬೇಕಾಗುತ್ತದೆ" ಎಂದು ಯುವತಿಯ ಕಾಲೆಳೆದಿದ್ದಾನೆ. ಇದು ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.