
ಮಕ್ಕಳ (Children)ನ್ನು ಎತ್ತರಕ್ಕೆ ಬೆಳೆಸಬೇಕೆಂಬ ಕನಸು ಪಾಲಕರದ್ದಾದ್ರೆ, ತಂದೆ – ತಾಯಿ ಹೆಮ್ಮೆ ಪಡುವಂತೆ ಜೀವನ ನಡೆಸಬೇಕು ಎಂಬುದು ಮಕ್ಕಳ ಆಸೆಯಾಗಿರುತ್ತದೆ. ತಂದೆ – ತಾಯಿ ಖುಷಿಗಾಗಿ, ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿರುವ ಮಕ್ಕಳಿದ್ದಾರೆ. ತಮ್ಮ ಭವಿಷ್ಯ ರೂಪಿಸಲು ಪಾಲಕರು ಮಾಡಿದ ತ್ಯಾಗವನ್ನು ಅನೇಕ ಮಕ್ಕಳು ಎಂದಿಗೂ ಮರೆಯುವುದಿಲ್ಲ. ಪಾಲಕರಿಗೆ ವಯಸ್ಸಾಗ್ತಿದ್ದಂತೆ ಅವರ ಮನಸ್ಸಿಗೆ ನೋವಾಗದಂತೆ, ಅವರ ಜೀವನ ಸುಖಕರವಾಗಿ ಸಾಗ್ಲಿ ಎನ್ನುವ ಕಾರಣಕ್ಕೆ ಮಕ್ಕಳು ವ್ಯವಸ್ಥೆ ಮಾಡ್ತಾರೆ. ಮಕ್ಕಳು ಮಾಡುವ ಸಣ್ಣಪುಟ್ಟ ಕೆಲಸದಲ್ಲೂ ಪಾಲಕರು ಖುಷಿ ಕಾಣ್ತಾರೆ. ಅದಕ್ಕೆ ಈಗ ದೆಹಲಿ (Delhi) ವ್ಯಕ್ತಿಯೊಬ್ಬ ಸಾಕ್ಷಿಯಾಗಿದ್ದಾನೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ (Bollywood actor Suniel Shetty), ತಮ್ಮ ತಂದೆ ಕೆಲಸ ಮಾಡಿದ್ದ ಎಲ್ಲ ಹೊಟೇಲ್ ಗಳನ್ನು ಅವರ ನೆನಪಿಗಾಗಿ ಖರೀದಿ ಮಾಡಿದ್ದಾರೆ. ಈ ವ್ಯಕ್ತಿ ಹೊಟೇಲ್ (hotel) ಖರೀದಿ ಮಾಡಿಲ್ಲ, ಅದ್ರ ಬದಲು ತನ್ನ ಪಾಲಕರಿಗೆ ಹೊಟೇಲ್ ನಲ್ಲಿ ಡಿನ್ನರ್ ವ್ಯವಸ್ಥೆ ಮಾಡಿದ್ದಾನೆ. ತಂದೆ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ ಫೈವ್ ಸ್ಟಾರ್ (five star) ಹೊಟೇಲ್ ಗೆ ಪಾಲಕರನ್ನು ಕರೆದೊಯ್ಡ ಮಗ, ಅಲ್ಲಿ ಭಾವನಾತ್ಮಕ ಉಡುಗೊರೆ ನೀಡಿದ್ದಾನೆ.
ಪುರುಷರು ಪತ್ನಿಯಿಂದ ನಿರೀಕ್ಷಿಸುವ ವಿಷಯಗಳು
ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಆರ್ಯನ್ ಮಿಶ್ರಾ ಈ ಖುಷಿ ವಿಷ್ಯವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಪ್ರಸಿದ್ಧ ಹೊಟೇಲ್ ಗಳಲ್ಲಿ ಐಟಿಸಿ ಕೂಡ ಒಂದು. ಫೈವ್ ಸ್ಟಾರ್ ಹೊಟೇಲ್ ನಲ್ಲಿ ಜನಸಾಮಾನ್ಯರು ಡಿನ್ನರ್ ಮಾಡೋದು ಕಷ್ಟ. ಈ ಹೊಟೇಲ್ ನಲ್ಲಿ ಆರ್ಯನ್ ಮಿಶ್ರಾ ತಂದೆ 1995ರಿಂದ 2000ರವರೆಗೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದರು. ಬಾಗಿಲ ಹೊರಗೆ ನಿಂತು ಬಂದವರಿಗೆ ಸ್ವಾಗತ ಕೋರುತ್ತಿದ್ದ ಆರ್ಯನ್ ಮಿಶ್ರಾ ತಂದೆಗೆ ಈ ಬಾರಿ ಸ್ವಾಗತ ಸಿಕ್ಕಿತ್ತು. ಮಗನ ಜೊತೆ ಅವರು ಹೊಟೇಲ್ ಗೆ ಬಂದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪತಿಯರಿಂದ ಬೇಸತ್ತ ಇಬ್ಬರು ಮಹಿಳೆಯರು ಮಾಡಿದ್ದಾರೆ ಶಾಕಿಂಗ್ ಕೆಲಸ!
ನನ್ನ ತಂದೆ 1995ರಿಂದ 2000ರವರೆಗೆ ದೆಹಲಿಯ ಐಟಿಸಿ ಹೊಟೇಲ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದರು. ಈಗ ಅದೇ ಹೊಟೇಲ್ ಗೆ ಡಿನ್ನರ್ ಗೆ ಅವರನ್ನು ಕರೆದುಕೊಂಡು ಬರುವ ಅವಕಾಶ ನನಗೆ ಸಿಕ್ಕಿದೆ ಎಂದು ಆರ್ಯನ್ ಮಿಶ್ರಾ ಶೀರ್ಷಿಕೆ ಹಾಕಿದ್ದಾರೆ. ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಈವರೆಗೆ ಎರಡು ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಇದನ್ನು ವೀಕ್ಷಣೆ ಮಾಡಲಾಗಿದೆ. ಎರಡು ಸಾವಿರಕ್ಕಿಂತ ಹೆಚ್ಚು ಕಮೆಂಟ್ ಬಂದಿದೆ. ಆರ್ಯನ್ ಮಿಶ್ರಾ ಕೆಲಸವನ್ನು ಜನರು ಶ್ಲಾಘಿಸಿದ್ದಾರೆ. ಇದು ನಮ್ಮ ಮನಸ್ಸು ಮುಟ್ಟಿದೆ. ಹೆತ್ತವರ ಕಠಿಣ ಪರಿಶ್ರಮ ಮತ್ತು ತ್ಯಾಗಗಳಿಗೆ ಜೀವನವು ಹೇಗೆ ಪ್ರತಿಫಲ ನೀಡುತ್ತದೆ ಎಂಬುದು ಅದ್ಭುತವಾಗಿದೆ. ನಿಜಕ್ಕೂ ಹೆಮ್ಮೆಯ ಕ್ಷಣ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮಗ ಮಾಡುವಂತಹ ಅತ್ಯಂತ ಒಳ್ಳೆಯ ಕೆಲಸ ಇದು ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. ಇದು ಭಾವುಕ ಕ್ಷಣ, ಈಗಿನ ಮಕ್ಕಳು ನಿಮ್ಮನ್ನು ನೋಡಿ ಕಲಿಯಬೇಕು, ಮಕ್ಕಳು ಪಾಲಕರಿಗೆ ಖುಷಿಯಾಗುವಂತಹ ಕೆಲಸ ಮಾಡಬೇಕು,ನಿಮ್ಮ ಸಾಧನೆಯನ್ನು ಸಂಭ್ರಮಿಸಲು ಹಾಗೂ ಪ್ರೀತಿಯನ್ನು ತೋರಿಸಲು ಇದು ಅತ್ಯುತ್ತಮ ಜಾಗ ಹೀಗೆ ಅನೇಕರು ಕಮೆಂಟ್ ಮಾಡುವ ಮೂಲಕ ಆರ್ಯನ್ ಮಿಶ್ರಾ ಕೆಲಸವನ್ನು ಮೆಚ್ಚಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.