
ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್, ವಿಡಿಯೋಶೂಟ್ಗಳ ಭರಾಟೆ ಜೋರಾಗಿಯೇ ಇದೆ. ಇದಕ್ಕೆ ಬಹುಮುಖ್ಯ ಕಾರಣ ಸಿನಿಮಾ, ಕಿರುತೆರೆ ನಟ-ನಟಿಯರು. ಮದುವೆಗೆ ಮುನ್ನ, ಮದುವೆಯಾದ ಮೇಲೆ ಅಷ್ಟೇ ಏಕೆ ಡಿವೋರ್ಸ್ ಆದ ಮೇಲೂ ವಿಡಿಯೋಶೂಟ್ ಮಾಡಿಸಿಕೊಳ್ಳುತ್ತಿರುವ ಟ್ರೆಂಡ್ ಕೂಡ ಶುರುವಾಗಿದೆ! ಮದುವೆ ಎನ್ನುವುದು ಕೇವಲ ಎರಡು ಕುಟುಂಬಗಳು ಹಾಗೂ ಮನಸ್ಸುಗಳ ಮಿಲನ ಎನ್ನುವ ಮಾತಿನ ಜೊತೆಜೊತೆಗೇ, ತಮಗೆ, ಎಷ್ಟು ಖರ್ಚು ಮಾಡುವ ತಾಕತ್ತಿದೆ ಎಂದು ಜನರಿಗೆ ತೋರಿಸುವ, ಸೋಷಿಯಲ್ ಮೀಡಿಯಾಗಳಲ್ಲಿ ಅದನ್ನು ಬಿತ್ತರಿಸುತ್ತಲೇ ತಾವೂ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲ ಎನ್ನಿಸಿಕೊಳ್ಳುವುದು ಈಗಿನವರಿಗೆ ತುಂಬಾ ಖುಷಿ ಕೊಡುವ ವಿಷಯ ಆಗಿದ್ದರಿಂದಲೇ ಇಂಥ ಫೋಟೋಶೂಟ್‌ಗಳು ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ.
7 ಅಥವಾ 9ನೇ ತಿಂಗಳಿಗೆ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡುವ ಪದ್ಧತಿ ತಲೆತಲಾಂತರಗಳಿಂದ ನಡೆದು ಬಂದಿದೆ. ಆದರೆ ಈಗ ಗರ್ಭಧಾರಣೆ ಎನ್ನುವುದು ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್, ವಿಡಿಯೋಶೂಟ್ ಮಾಡಿಸಿಕೊಳ್ಳುವವರೆಗೆ ಬಂದು ನಿಂತಿದೆ. ಚಿತ್ರತಾರೆಯರಂತೂ ಪೈಪೋಟಿಗೆ ಬಿದ್ದವರಂತೆ, ಬಿಕಿನಿ ತೊಟ್ಟು ಹೊಟ್ಟೆ ತೋರಿಸುತ್ತಾ ಪ್ರೆಗ್ನೆನ್ಸಿ ವಿಡಿಯೋಶೂಟ್ ಮಾಡಿಸಿಕೊಳ್ಳುತ್ತಾರೆ. ಅವರಿಂದ ಪ್ರೇರೇಪಿತರಾಗಿರುವ ಸಾಮಾನ್ಯ ಮಹಿಳೆಯರು ಬಿಕಿನಿ ತೊಡುವ ಮಟ್ಟಿಗೆ ಇಂದು ಬರದಿದ್ದರೂ ಪ್ರೆಗ್ನೆನ್ಸಿ ವಿಡಿಯೋ ಶೂಟ್ ಟ್ರೆಂಡ್ ಮಾಡಿಕೊಂಡಿದ್ದಾರೆ. ತಮಗೆ ಇಷ್ಟವಿಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಬೇರೆಯವರಿಗೆ ತೋರಿಸುವುದಕ್ಕಾಗಿಯಾದರೂ ಇಂಥ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂಥದ್ದೇ ಪೋಸ್ಟ್ ಹುಚ್ಚಿಗೆ ಬಿದ್ದ ಪತಿಮಹಾಶಯನೊಬ್ಬ ತಾನೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ!
ಪುಟ್ಟಕ್ಕನ ಮಗಳು ಸ್ನೇಹಾ ಹಾಟ್ ಫೋಟೋಶೂಟ್: ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್ ಅನ್ನೋದಾ ಫ್ಯಾನ್ಸ್?
ಹೊಟ್ಟೆಗೆ ಡಿಸೈನ್ ಮಾಡಿಕೊಂಡು, ಹೂವನ್ನು ಇಟ್ಟುಕೊಂಡು, ಮಹಿಳೆಯರಂತೆ ಬಟ್ಟೆ ಸುತ್ತಿಕೊಂಡು ಈ ಪುಣ್ಯಾತ್ಮ ಮಹಾಶಯ ಫೋಟೋಶೂಟ್ ಮಾಡಿಸಿಕೊಂಡಿದ್ದಾನೆ. ದೈವದತ್ತವಾಗಿ ಬಂದಿರುವ ಹೊಟ್ಟೆಯನ್ನೇ ಆತ ಗರ್ಭಿಣಿ ಎನ್ನುವಂತೆ ಪ್ರತಿಬಿಂಬಿಸಿದ್ದಾನೆ. ಈತ ಯಾರು, ಎಲ್ಲಿಯವ ಎನ್ನುವ ಮಾಹಿತಿ ಇಲ್ಲ. ಆದರೆ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸದ್ಯ ಬಿ ಹ್ಯಾಪ್ಪಿ ಎನ್ನುವ ಫೇಸ್ಬುಕ್ ಪೇಜ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಈತ ತನ್ನ ಹೆಂಡತಿಯ ಪ್ರೆಗ್ನೆನ್ಸಿ ಫೋಟೋಶೂಟ್ಗೆ ಎಂದು ದುಡ್ಡುಕೊಟ್ಟುಬಿಟ್ಟಿದ್ದ. ಆದರೆ ಆತನ ಪತ್ನಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರಾಕರಿಸಿದಳು. ಆದ್ದರಿಂದ ಗಂಡನೇ ಹೀಗೆ ಮಾಡಿಸಿಕೊಂಡಿದ್ದಾನೆ, ಇಲ್ಲದಿದ್ದರೆ ಫೋಟೋಗ್ರಾಫರ್ಗೆ ಕೊಟ್ಟಿರುವ ದುಡ್ಡು ವೇಸ್ಟ್ ಆಗಿಬಿಡುತ್ತದೆ ಎನ್ನುವ ಕಾರಣಕ್ಕೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಇದು ನಿಜವೋ ಅಥವಾ ಕಲ್ಪನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಫೋಟೋಶೂಟ್ಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದು, ಸಹಸ್ರಾರು ಮಂದಿ ಶೇರ್ ಕೂಡ ಮಾಡಿದ್ದಾರೆ. ಫೋಟೋಶೂಟ್ಗೆ ನೆಟ್ಟಿಗರು ಭಲೆ ಭಲೆ ಎನ್ನುತ್ತಿದ್ದಾರೆ. ತಮಗೂ ಹೀಗೆಯೇ ಮಾಡಿಸಿಕೊಳ್ಳುವ ಇಚ್ಛೆ ಶುರುವಾಗಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.
ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್ ಕಲಿ ಸುಸ್ತೋ ಸುಸ್ತು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.