ಮೊದಲ ಪುತ್ರ IAS ಅಧಿಕಾರಿ, ಮತ್ತೊಬ್ಬ ಉದ್ಯಮಿ; ಅನಾಥಾಶ್ರಮದಲ್ಲಿ ಶ್ರೀಮಂತ ತಂದೆ!

By Suvarna NewsFirst Published May 28, 2023, 7:34 PM IST
Highlights

ಮಕ್ಕಳನ್ನು ಸಾಕಿ ಸಲಹಿ, ವಿದ್ಯಾಭ್ಯಾಸ ನೀಡಿದ ಹಲವು ಪೋಷಕರು ತಮ್ಮ ಬದುಕಿನ ಕೊನೆಯ ಕ್ಷಣಗಳನ್ನು ಅನಾಥಾಶ್ರಮದಲ್ಲಿ ಕಳೆದ ಹಲವು ಊದಾಹರಣೆಗಳಿವೆ. ಇದೀಗ ಒರ್ವ ಮಗ ಐಎಎಸ್ ಅಧಿಕಾರಿ, ಮತ್ತೊಬ್ಬ ಉದ್ಯಮಿ. ಆದರೆ ತಂದೆ ಅನಾಥಾಶ್ರಮದಲ್ಲಿ ಸೇರಿಕೊಂಡ ನೋವಿನ ಘಟನೆ ನಡೆದಿದೆ.

ಸಿಕಂದ್ರ(ಮೇ.28): ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಸಾಕಿ ಸಲಹಿ, ಕೆಲಸ ಗಿಟ್ಟಿಸಿಕೊಳ್ಳುವವರೆಗೆ ಪೋಷಕರ ನೆರವಿನಲ್ಲಿದ್ದು, ಬಳಿಕ ಪೋಷಕರನ್ನೇ ದೂರ ಮಾಡಿದ ಹಲವು ಘಟನೆಗಳಿವೆ. ಹೀಗೆ ತನ್ನ ಇಬ್ಬರು ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ್ದ. ಮೊದಲ ಪುತ್ರ ಐಎಎಸ್ ಅಧಿಕಾರಿಯಾದರೆ, ಮತ್ತೊಬ್ಬ ಉದ್ಯಮಿಯಾಗಿದ್ದಾನೆ. ತಾನೂ ಕಷ್ಟಪಟ್ಟು ದುಡಿದ ಇಬ್ಬರು ಮಕ್ಕಳಿಗೆ ಬಂಗಲೆ, ನಿವೇಶನ ಮಾಡಿಕೊಟ್ಟಿದ್ದಾರೆ. ಇಬ್ಬರು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಬಳಿಕ ಮಕ್ಕಳು ತಂದೆಗೆ ನಾಯಿಗೆ ಕೊಡುವ ಗೌರವನ್ನು ನೀಡಿಲ್ಲ. ಹೀಗಾಗಿ ಗೌರವ ನೀಡದ ಮನೆಯಲ್ಲಿ, ಗೌರವ ನೀಡದ ಮಕ್ಕಳ ಜೊತೆ ಬಾಳವುದಕ್ಕಿಂತ ಅನಾಥಾಶ್ರಮದಲ್ಲಿ ಬಾಳುವುದೇ ಮೇಲೆ ಎಂದು ತಂದೆ ನೇರವಾಗಿ ಅನಾಥಾಶ್ರಮ ಸೇರಿಕೊಂಡ ಘಟನೆ ಆಗ್ರಾದ ಸಿಕಂದ್ರದಲ್ಲಿ ನಡೆದಿದೆ.

78 ವರ್ಷದ ತಂದೆ ತನ್ನ ದುಡಿಮೆಯಲ್ಲಿ ಮಾಡಿದ ಆಸ್ತಿ ಅಂತಸ್ತು ಎಲ್ಲವನ್ನೂ ಬಿಟ್ಟು ಇದೀಗ ಸಿಕಂದ್ರ ಬಳಿ ಇರುವ ರಾಮ್ ಲಾಲ್ ಅನಾಥಾಶ್ರಮ ಸೇರಿಕೊಂಡಿದ್ದಾರೆ. ತನ್ನ ಮಾತು ನಡತೆ, ಹಾಕಿರುವ ಬಟ್ಟೆ, ಶೂ ಎಲ್ಲವನ್ನೂ ನೋಡಿದ ಅನಾಥಾಶ್ರಮ ಸಿಬ್ಬಂದಿ, ಇವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನಡೆದ ಘಟನೆಯನ್ನು ಹೇಳಿ ಕಣ್ಣೀರು ಹಾಕಿದ್ದಾರೆ.

Latest Videos

18ರ ಯುವತಿಯನ್ನು ಮದುವೆಯಾದ ಅಜ್ಜ, ಬೊಚ್ಚು ಬಾಯಿ ಬಿಟ್ಟು ಹೇಗ್‌ ನಗ್ತಾರೆ ನೋಡಿ

ಇಬ್ಬರೂ ಮಕ್ಕಳು ಹಾಗೂ ಅವರ ಕುಟುಂಬ ನನಗೆ ಗೌರವ ನೀಡುತ್ತಿಲ್ಲ. ನಾನು ಅಲ್ಲಿರುವುದೇ ಅವರಿಗೆ ಶಾಪವಾಗಿ ಕಾಣುತ್ತಿದೆ. ನಾನು ಎಲ್ಲಾದರೂ ಹೋಗಿ ಮರಳಿ ಮನೆಗೆ ಬಂದರೆ ತಕ್ಷಣ ಮಕ್ಕಳು ಮನೆಯಿಂದ ಹೊರಗೆ ಹೋಗುತ್ತಾರೆ. ನನ್ನಲ್ಲಿ ಮಾತನಾಡುವುದಿಲ್ಲ. ನನಗೆ ಯಾವದೇ ರೀತಿಯ ಗೌರವ ಕೊಡುವುದಿಲ್ಲ. ಚುಚ್ಚು ಮಾತಿನಿಂದ ಮಾನಸಿಕವಾಗಿ ನನ್ನನ್ನು ದೂಷಿಸುತ್ತಾರೆ. ಕಿರಿಯ ಪುತ್ರ ಮನೆ ಬಿಟ್ಟು ಬೇರೆ ಮನೆ ಮಾಡಿಕೊಂಡಿದ್ದಾನೆ. ನನ್ನ ಬಳಿ ಎಲ್ಲವೂ ಇದೆ ಆದರೆ ನನಗೆ ಗೌರವವೇ ಇಲ್ಲ. ನಾನು ಹೊರೆಯಾಗಿರುವಂತೆ ವರ್ತಿಸುತ್ತಾರೆ. ಹೀಗಾಗಿ ನಾನು ಅನಾಥಾಶ್ರಮ ಸೇರಿಕೊಂಡಿದ್ದೇನೆ ಎಂದು 78 ವರ್ಷದ ತಂದೆ ಹೇಳಿದ್ದಾರೆ.

ಬ್ಯಾಂಕ್ ಖಾತೆಯಲ್ಲಿನ ಇಟ್ಟಿದ್ದ ದುಡ್ಡಿನಲ್ಲಿ ಒಂದಿಷ್ಟು ಮೊತ್ತವನ್ನು ಅನಾಥಾಶ್ರಮಕ್ಕೆ ನೀಡಿದ್ದಾರೆ. ಇಬ್ಬರು ಮಕ್ಕಳಿಗೆ ಅನಾಥಾಶ್ರಮಕ್ಕೆ ಹೋಗುತ್ತಿರುವ ವಿಚಾರ ಹೇಳಿಲ್ಲ. ಆದರೆ ಇದುವರೆಗೆ ಮಕ್ಕಳು ತಂದೆ ಎಲ್ಲಿದ್ದಾರೆ ಅನ್ನೋ ಹುಡುಕುವ ಪ್ರಯತ್ನ ಮಾಡಿಲ್ಲ. ನಾನು ಕಷ್ಟಪಟ್ಟು ದುಡಿದು ಎಲ್ಲವನ್ನೂ ಸಂಪಾದಿಸಿದೆ. ಆದರಮೆ ಮಕ್ಕಳಿಂದ ಗೌರವ ಸಂಪಾದಿಸಲು ಸಾಧ್ಯವಾಗಿಲ್ಲ. ಅವರಿಗೆ ಎಲ್ಲವನ್ನೂ ಮಾಡಿದ್ದೇನೆ. ಆದರೆ ವಿಶ್ರಾಂತಿ ಜೀವನದಲ್ಲಿ ನನಗೆ ಏನೂ ಸಿಗಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

ಅನಾಥಾಶ್ರಮದಲ್ಲಿರುವ ಹಲವು ಹಿರಿಯ ಜೀವಗಳನ್ನು ನೋಡಿ ಅವರ ಮಾತುಗಳನ್ನು ಕೇಳಿ ಮತ್ತಷ್ಟು ನೋವಾಗಿದೆ. ಎಲ್ಲರೂ ದುಃಖಿಗಳೇ. ಜೀವನದಲ್ಲಿ ಹಲವು ಸವಾಲು ಎದುರಿಸಿದ್ದೇನೆ. ಆದರೆ ಇಳಿ ವಯಸ್ಸಿನಲ್ಲಿ ಎದುರಿಸುತ್ತಿರುವ ಸವಾಲು ಗೆಲ್ಲುವ ವಿಶ್ವಾಸವಿಲ್ಲ ಎಂದಿದ್ದಾರೆ. 

click me!