#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ

By Suvarna NewsFirst Published Oct 16, 2020, 5:23 PM IST
Highlights

ನನ್ನ ಹೆಂಡತಿಗೆ ಆ ಹೊತ್ತಿಗೆ ವಿಪರೀತ ಮೂಡ್ ಬಂದು ಬಿಡುತ್ತೆ. ನಾನು ಸಹಕರಿಸದಿದ್ದರೆ ಅವಳು ಡಿಪ್ರೆಸ್ ಆಗಿ ಬಿಡುತ್ತಾಳೆ. ನನ್ನ ಮೇಲೇ ನನಗೆ ಗಿಲ್ಟ್ ಬರೋ ಹಾಗೆ ಮಾಡ್ತಾಳೆ. ಆ ಟೈಮ್‌ನಲ್ಲಿ ಸೆಕ್ಸ್ ಮಾಡೋದ್ರಿಂದ ನಿಜಕ್ಕೂ ಹಾನಿ ಇದೆಯಾ?

ಪ್ರಶ್ನೆ: ನಾನು 30 ವರ್ಷದ ಗಂಡಸು. ನಮ್ಮದು ಸಂಪ್ರದಾಯಸ್ಥ ಫ್ಯಾಮಿಲಿ. ಜೊತೆಗೆ ಮನೆಯಲ್ಲಿ ನನ್ನ ಅಪ್ಪ ಅಮ್ಮನೂ ಇದ್ದಾರೆ. ನನಗೆ ಮದುವೆ ಆಗಿ ಒಂದು ವರ್ಷ ಆಯ್ತು. ನಮ್ಮನೆಯಲ್ಲಿ ಹೆಂಗಸರು ಮುಟ್ಟಾದಾಗ ಹೊರಗೆ ಕೂರುತ್ತಾರೆ. ಆದರೆ ನನ್ನ ಹೆಂಡತಿ ಅದನ್ನೆಲ್ಲ ಪಾಲಿಸೋದಿಲ್ಲ. ಈ ಕಾರಣಕ್ಕೆ ನನ್ನ ಅಮ್ಮನಿಗೂ ಅವಳಿಗೂ ಆಗಾಗ ಜಗಳ ಆಗುತ್ತಿರುತ್ತೆ. ಈ ವೇಳೆ ನನಗೆ ಯಾರ ಪರ ವಹಿಸೋದು ಅಂತ ಗೊತ್ತಾಗಲ್ಲ. ಒಮ್ಮೆ ಅವಳು ಈ ಕಾಲದ ಹುಡುಗಿ, ನೀವು ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು ಅಂತ ಅಮ್ಮನ ಬಳಿ ಹೇಳಿದ್ದೇ ಎಂದೂ ಕೂಗಾಡದ ಅಮ್ಮ ಊರಿಗೇ ಕೇಳಿಸುವಂತೆ ಕೂಗಾಡಿದರು. ಸ್ವಲ್ಪ ದಿನಗಳ ಬಳಿಕ ಸುಮ್ಮನಾದ್ರು. ಆದರೆ ನಾವು ಮದುವೆ ಆದಾಗಿನಿಂದ ಒಂದು ಸಮಸ್ಯೆ ವಿಪರೀತ ಗೊಂದಲ ಹುಟ್ಟು ಹಾಕಿದೆ. ಪೀರಿಯೆಡ್ಸ್ ಟೈಮ್‌ನಲ್ಲಿ ಗಂಡ ಹೆಂಡತಿ ಸೇರಬಾರದು ಅಂತ ಅಮ್ಮ ಪದೇ ಪದೇ ಹೇಳ್ತಾ ಇರುತ್ತಾರೆ. ಇದರಿಂದ ಬಹಳ ಹಾನಿಯಿದೆ ಅಂತಾರೆ. ಆದರೆ ನನ್ನ ಹೆಂಡತಿಗೆ ಆ ಹೊತ್ತಿಗೆ ವಿಪರೀತ ಮೂಡ್ ಬಂದು ಬಿಡುತ್ತೆ. ನಾನು ಸಹಕರಿಸದಿದ್ದರೆ ಅವಳು ಡಿಪ್ರೆಸ್ ಆಗಿ ಬಿಡುತ್ತಾಳೆ. ನನ್ನ ಮೇಲೇ ನನಗೆ ಗಿಲ್ಟ್ ಬರೋ ಹಾಗೆ ಮಾಡ್ತಾಳೆ. ಆ ಟೈಮ್‌ನಲ್ಲಿ ಸೆಕ್ಸ್ ಮಾಡೋದ್ರಿಂದ ನಿಜಕ್ಕೂ ಹಾನಿ ಇದೆಯಾ? ಪೀರಿಯೆಡ್ಸ್ ಟೈಮ್‌ನಲ್ಲಿ ಹೆಂಗಸರು ಸುಸ್ತಾಗಿರುತ್ತಾರೆ. ಅವರಿಗೆ ಕೆಲಸ ಮಾಡುವಷ್ಟೂ ಚೈತನ್ಯ ಇರಲ್ಲ ಅಂತ ಕೇಳಿದ್ದೀನಿ. ಆದರೆ ಇವಳಿಗ್ಯಾಕೆ ಹೀಗಾಗುತ್ತಿದೆ. ಅವಳಿಗೆ ಏನಾದ್ರೂ ಹಾರ್ಮೋನ್ ಸಮಸ್ಯೆ ಇರಬಹುದಾ? ದಯಮಾಡಿ ತಿಳಿಸಿ. 

ಸಡಿಲಗೊಂಡ ಯೋನಿ, ಸೆಕ್ಸ್‌ನಲ್ಲಿ ಖುಷಿಯಿಲ್ಲ ಅಂತಾನೆ ಗಂಡು! 

ಉತ್ತರ: ನಿಮ್ಮ ಈ ಒಂದು ಪ್ರಶ್ನೆಯಲ್ಲಿ ಮೂರು ಪ್ರಶ್ನೆಗಳಿವೆ. ಮೊದಲನೆಯದು ಈ ಟೈಮ್‌ನಲ್ಲಿ ಸೆಕ್ಸ್ ಮಾಡಿದರೆ ಗಂಡನಿಗೆ ಏನಾದ್ರೂ ಹಾನಿಯಿದೆಯಾ ಅಂತ, ಎರಡನೆಯದು ಈ ಟೈಮ್‌ನಲ್ಲಿ ಸೆಕ್ಸ್ ಮಾಡಬಹುದಾ ಅಂತ. ಮೂರನೆಯ ಪ್ರಶ್ನೆ ಈ ಟೈಮ್‌ನಲ್ಲಿ ಆಕೆಗೆ ಲೈಂಗಿಕ ಬಯಕೆ ಯಾಕೆ ಹೆಚ್ಚುತ್ತೆ, ಇದು ಸಮಸ್ಯೆಯಾ ಅನ್ನೋದು. ಮೊದಲ ಪ್ರಶ್ನೆಗೆ ಬರೋಣ. ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡೋದರಿಂದ ಹಾನಿ ಏನಿಲ್ಲ. ಆದರೆ ಕೆಲವು ಲೈಂಗಿಕ ಸೋಂಕುಗಳು ಸ್ರಾವದ ಮೂಲಕ ಹರಡುವ ಸಾಧ್ಯತೆ ಇದೆ. ಆದರೆ ಗಂಡ ಹೆಂಡತಿ ನಡುವಿನ ಸೇಫ್ ಸೆಕ್ಸ್ ನಲ್ಲಿ ಸಾಮಾನ್ಯವಾಗಿ ಇಂಥಾ ಗುಹ್ಯ ರೋಗಗಳು ಕಡಿಮೆ. ಹಾಗಾಗಿ ಸೆಕ್ಸ್ ಮಾಡೋದ್ರಿಂದ ಹಾನಿಯಿಲ್ಲ. ಬದಲಿಗೆ ನಿಮ್ಮ ಪತ್ನಿಗೆ ಇದರಿಂದ ಪ್ರಯೋಜನಗಳಿವೆ. ಈ ಸಂದರ್ಭದ ಹೊಟ್ಟೆ ನೋವು ಉಪಶಮನವಾಗುತ್ತೆ, ಪೀರಿಯೆಡ್ಸ್ ಟೈಮ್‌ನಲ್ಲಿ ಹೆಣ್ಮಕ್ಕಳ ಮೂಡ್ ಸ್ವಿಂಗ್ ಆಗುತ್ತಿರುತ್ತೆ. ಅವರು ಬಹಳ ಎಮೋಶನಲ್ ಆಗಿರುತ್ತಾರೆ. ಈ ಸಂದರ್ಭದ ಸೆಕ್ಸ್ ಅವರಿಗೊಂದು ಸೆಕ್ಯುರಿಟಿ ಫೀಲ್ ಕೊಡುತ್ತೆ. ಅವರ ಲೈಂಗಿಕ ಬಯಕೆಗಳು ಹೆಚ್ಚಲೂ ಇದು ಪೂರಕ ಅಂತ ಕೆಲವು ತಜ್ಞರು ಹೇಳುತ್ತಾರೆ. ಹೀಗಾಗಿ ಈ ಟೈಮ್ ನಲ್ಲಿ ಸೆಕ್ಸ್ ಮಾಡಿದ್ರೆ ನಿಮಗಂತೂ ಸಮಸ್ಯೆ ಆಗಲಿಕ್ಕಿಲ್ಲ. ಆಕೆಗೆ ಈ ಸಂದರ್ಭ ಮೂಡ್ ಬರೋದು ಅಸಹಜ ಅಲ್ಲ. ಜಗತ್ತಿನ ಹೆಚ್ಚಿನೆಲ್ಲ ಹೆಣ್ಮಕ್ಕಳಿಗೆ ಆಗೋದೇ ನಿಮ್ಮ ಪತ್ನಿಗೂ ಆಗುತ್ತಿದೆಯಷ್ಟೇ. ಇನ್ನೊಂದು ಅಂದರೆ ಈ ಸಂದರ್ಭ ಸೆಕ್ಸ್ ಮಾಡಿದರೆ ಗರ್ಭ ಧರಿಸೋ ಸಾಧ್ಯತೆ ಇರಲ್ಲ ಅನ್ನೋ ನಂಬಿಕೆ ಇದೆ. ಆದರೆ ಕೆಲವೊಮ್ಮೆ ಪೀರಿಯೆಡ್ಸ್ ವೇಳೆ ಸೆಕ್ಸ್ ಮಾಡಿದರೂ ಗರ್ಭ ಧರಿಸಬಹುದು. 

ಪ್ರಶ್ನೆ: ನನಗೆ 23 ವರ್ಷ ವಯಸ್ಸು. ಪೀರಿಯೆಡ್ಸ್ ವೇಳೆ ಹೊಟ್ಟೆ ನೋವಿನ ಜೊತೆಗೆ ಎದೆನೋವೂ ಬರುತ್ತೆ. ಕೈ ಕಾಲು, ಹೊಟ್ಟೆ ನೋವು ನಾರ್ಮಲ್ ಅಂತ ಕೇಳಿದ್ದೀನಿ. ಆದರೆ ಈ ಎದೆನೋವು ಯಾಕೆ ಬರುತ್ತೆ. ಈ ವೇಳೆ ನನಗೆ ಸೆಕ್ಸ್ ಮೇಲೆ ಆಸಕ್ತಿ ಹೆಚ್ಚಿರುತ್ತೆ. ಆದರೆ ನಾನು ಅವಿವಾಹಿತೆ. ಕಷ್ಟಪಟ್ಟು ಕಂಟ್ರೋಲ್ ಮಾಡುತ್ತೇನೆ. ಈ ಟೈಮ್‌ನಲ್ಲಿ ಹಸ್ತಮೈಥುನ ಮಾಡೋದರಿಂದ ಸಮಸ್ಯೆ ಆಗುತ್ತಾ?

#Feelfree: ಸ್ತನಗಳ ಶೇಪ್ ಕಾಪಾಡಿಕೊಳ್ಳುವುದು ಹೇಗೆ? 

ಉತ್ತರ: ಪೀರಿಯೆಡ್ಸ್ ಟೈಮ್‌ನಲ್ಲಿ ಎದೆಯಲ್ಲಿ ನವೆ, ನೋವು ಕಾಮನ್. ಹಾರ್ಮೋನುಗಳ ಬದಲಾವಣೆಯಿಂದ ಹೀಗಾಗುತ್ತೆ. ಇದಕ್ಕೆ ಭಯಪಡಬೇಕಿಲ್ಲ. ಮೇಲೆ ವಿವರಿಸಿದಂತೆ ಈ ಸಂದರ್ಭದಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಹೆಚ್ಚಿರೋದೂ ಸಹಜವೇ. ಹಸ್ತಮೈಥುನ ಮಾಡೋದರಿಂದ ಹಾನಿಯಿಲ್ಲ. ಆದರೆ ಅದಕ್ಕೂ ಮೊದಲು ಕೈ ಉಗುರುಗಳನ್ನು ಕತ್ತರಿಸಿಕೊಳ್ಳಿ. ಒರಟಾಗಿ ಮೈಥುನ ಮಾಡಿಕೊಳ್ಳೋದು ಒಳ್ಳೆಯದಲ್ಲ. 

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ! 

click me!