ದೇಹದಲ್ಲಿ ಕೊಬ್ಬು ಹೆಚ್ಚಾಯಿತು, ಕೊಲೆಸ್ಟರಾಲ್ ಬರ್ತಾ ಇದೆ ಎಂಬ ಆತಂಕದಿಂದ ಜಿಮ್‌ಗೆ ಧಾವಿಸುವ ಪುರುಷರೇ, ಮಹಿಳೆಯರೇ- ಒಂದು ರಹಸ್ಯ ಹೇಳ್ತೀವಿ ಕೇಳಿ. ಜಿಮ್‌ಗಿಂತ ಸಮೃದ್ಧ ಸೆಕ್ಸ್ ನಿಮ್ಮ ಮೈತೂಕವನ್ನು ಕಳೆದುಕೊಳ್ಳುವುದಕ್ಕೆ ತುಂಬಾ ಒಳ್ಳೇ ಆಪ್ಷನ್.
ಈಗಿನ ಲೈಫ್‌ಸ್ಟೈಲ್ ನೋಡಿದರೆ ಮಧ್ಯ ವಯಸ್ಸಿನ ಬಳಿಕ ಬೊಜ್ಜು ಇಲ್ಲದವರನ್ನು ಹುಡುಕೋದು ಕಷ್ಟ. ಕಡಿಮೆ ಕೊಬ್ಬು, ಜಾಸ್ತಿ ಕೊಬ್ಬು ಅಂತ ವಿಭಾಗಿಸಬಹುದೇನೋ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಇಲ್ಲದವರನ್ನು ಹುಡುಕೋದು ಕಷ್ಟ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಒಂದು ಖುಷಿಯ ಸಂಗತಿ ರಿವೀಲ್ ಆಗಿದೆ. ದೇಹದಲ್ಲಿ ಕೊಬ್ಬು ಹೆಚ್ಚಾಯಿತು, ಕೊಲೆಸ್ಟರಾಲ್ ಬರ್ತಾ ಇದೆ ಎಂಬ ಆತಂಕದಿಂದ ಜಿಮ್‌ಗೆ ಧಾವಿಸುವ ಪುರುಷರೇ, ಮಹಿಳೆಯರೇ- ಒಂದು ರಹಸ್ಯ ಹೇಳ್ತೀವಿ ಕೇಳಿ. ಜಿಮ್‌ಗಿಂತ ಸಮೃದ್ಧ ಸೆಕ್ಸ್ ನಿಮ್ಮ ಮೈತೂಕವನ್ನು ಕಳೆದುಕೊಳ್ಳುವುದಕ್ಕೆ ತುಂಬಾ ಒಳ್ಳೇ ಆಪ್ಷನ್. ಹೌದು, ಪ್ರತಿದಿನದ ಅಥವಾ ದಿನ ಬಿಟ್ಟು ದಿನದ ಸೆಕ್ಸ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹದ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ಸಂತೋಷವನ್ನೂ ನೀಡುತ್ತದೆ. ಆದ್ದರಿಂದ, ನೀವು ಜಿಮ್ ಬಫ್ ಆಗಿರಲಿ ಅಥವಾ ಇಲ್ಲದಿರಲಿ, ಆರೋಗ್ಯಕರ ತೂಕ ಪಡೆಯಲು ನಿಮ್ಮ ದಿನಚರಿಯಲ್ಲಿ ಸರಿಯಾದ ಲೈಂಗಿಕತೆಯನ್ನು ಯೋಜಿಸಿಕೊಳ್ಳಿ.
ಲೈಂಗಿಕ ಸಮಯದಲ್ಲಿ ನೀವು ಸುಡುವ ಕ್ಯಾಲೊರಿಗಳ ಲೆಕ್ಕ ಇಲ್ಲಿದೆ: ಪುರುಷರು ಕನಿಷ್ಠ ಸುಮಾರು 13 ಕ್ಯಾಲೊರಿ ಮತ್ತು ಮಹಿಳೆಯರು 12 ಕ್ಯಾಲೊರಿ ಬರ್ನ್ ಮಾಡ್ತಾರೆ. ಇನ್ನು ಗರಿಷ್ಠ ಪುರುಷರು 306 ಕ್ಯಾಲೊರಿ ಮತ್ತು ಮಹಿಳೆಯರು 164ವರೆಗೂ ಬರ್ನ್ ಮಾಡಬಹುದು.
ಲೈಂಗಿಕ ಮುಖಾಮುಖಿ ಎಷ್ಟು ಸಮಯದವರೆಗೆ ನಡೆದರೆ, ಹೇಗೆ ಕ್ಯಾಲೊರಿ ಸುಡುತ್ತದೆ ಎಂಬ ಲೆಕ್ಕ ಹೀಗಿದೆ- ಮುನ್ನಲಿವು, ಸಂಭೋಗ ಮತ್ತು ಪರಾಕಾಷ್ಠೆಯ ಸರಾಸರಿ ಅವಧಿಯು 24.7 ನಿಮಿಷ. ದಂಪತಿಗಳು ಲೈಂಗಿಕವಾಗಿ ಕಳೆದ ಸಾಮಾನ್ಯ ಸಮಯ 12.5ರಿಂದ 36.9 ನಿಮಿಷಗಳವರೆಗೆ ಇರುತ್ತದೆ. ಕ್ಯಾಲೋರಿ ಬರ್ನ್ ಆಗುವುದು ಹೆಚ್ಚು ಶಕ್ತಿಯುತ ಲೈಂಗಿಕತೆಯಿಂದಲೋ ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದಲೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಒಂದಂತೂ ಸತ್ಯ, ದೇಹ ಸಾಕಷ್ಟು ದಣಿಯುತ್ತದೆ. ಸಂಭೋಗದ ಸಮಯದಲ್ಲಿ ಕ್ಯಾಲೋರಿ ನಷ್ಟಗೊಳಿಸಲು ನೀವು ಬಯಸಿದರೆ, ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಅಥವಾ ಹೆಚ್ಚು ಕಾಲ ನಡೆಸಬಹುದು.
ಸಾಮೂಹಿಕ ವಿವಾಹದ ವೇಳೆ ಅವಾಂತರ: ವಧುಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿದ ಅಧಿಕಾರಿಗಳು
ಲೈಂಗಿಕತೆಯನ್ನು ತಜ್ಞರು ಸಾಮಾನ್ಯ ಜಿಮ್ ವ್ಯಾಯಾಮದೊಂದಿಗೆ ಹೋಲಿಸಿದ್ದಾರೆ. ಟ್ರೆಡ್‌ಮಿಲ್‌ನಲ್ಲಿ 30 ನಿಮಿಷಗಳ ಮಧ್ಯಮ ತೀವ್ರತೆಯಲ್ಲಿ ಪುರುಷರು 149- 390 ಕ್ಯಾಲೊರಿ ಸುಟ್ಟರೆ, ಮಹಿಳೆಯರು 120- 381ರ ನಡುವೆ ಸುಡುತ್ತಾರೆ. ಎರಡು ಚಟುವಟಿಕೆಗಳನ್ನೂ ಹೋಲಿಸಿದರೆ, ಪುರುಷರು ಮತ್ತು ಮಹಿಳೆಯರು ಟ್ರೆಡ್‌ಮಿಲ್‌ನಲ್ಲಿ ಓಡುವುದಕ್ಕಿಂತ ಸೆಕ್ಸೇ ಹೆಚ್ಚು ಆಹ್ಲಾದಕರ ಎಂದರಂತೆ. ಅಂದರೆ ಜಿಮ್‌ಗಿಂತ ಹೆಚ್ಚು ಆನಂದವನ್ನು ಸೆಕ್ಸ್‌ನಿಂದ ಪಡೆಯುತ್ತೇವೆ.
"ಪ್ರೀತಿಯ ಹಾರ್ಮೋನ್" ಎನಿಸಿಕೊಂಡ ಆಕ್ಸಿಟೋಸಿನ್ ನಮ್ಮ ಮೆದುಳಿನಲ್ಲಿರುವ ಹೈಪೋಥಾಲಮಸ್‌ನಲ್ಲಿ ಮತ್ತು ನಮ್ಮ ಜಠರಗರುಳಿನ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತದೆ. ಇದು ಲೈಂಗಿಕತೆ(Sex interest), ಸಹಾನುಭೂತಿ, ಸಂಬಂಧನಿರ್ಮಾಣ, ಹೆರಿಗೆ ಮತ್ತು ಸ್ತನ್ಯಪಾನದಲ್ಲಿ(Breast feeding) ಪ್ರಮುಖ. ನಾವು ಸಂಭೋಗಿಸುವಾಗ, ಪರಾಕಾಷ್ಠೆ ಅನುಭವಿಸಿದಾಗ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ಆಕ್ಸಿಟೋಸಿನ್ ಪಡೆದ ನಂತರ ಪುರುಷರು ಕಡಿಮೆ ಕ್ಯಾಲೊರಿ(Calory) ಆಹಾರ ಸೇವಿಸುತ್ತಾರೆ. ಆಕ್ಸಿಟೋಸಿನ್ ಪ್ರವಾಹದ ನಂತರದ ಆಹಾರ ಸೇವನೆ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ. ಹೀಗಾಗಿ ಸೆಕ್ಸ್, ನಿಮ್ಮ ಫುಡ್ ಇನ್‌ಟೇಕ್ ಅನ್ನು ಕಡಿಮೆ ಮಾಡಿ ದೇಹತೂಕ ಕಡಿಮೆಯಾಗಲು ಸಹಾಯ ಮಾಡುತ್ತದಂತೆ.
ಇದನ್ನೆಲ್ಲ ನೋಡಿದಾಗ, ಅರ್ಧ ಗಂಟೆ ಟ್ರೆಡ್‌ಮಿಲ್‌ನಲ್ಲಿ ಓಡುವುದೂ ಒಂದೇ, ಅಷ್ಟೇ ಹೊತ್ತು ಸೆಕ್ಸ್‌ನಲ್ಲಿ(Sex) ತೊಡಗುವುದೂ ಒಂದೇ ಅನಿಸುತ್ತಿಲ್ಲವೇ? ಜಿಮ್‌ನಲ್ಲಿ ಸಿಗದ ಆನಂದ ಸೆಕ್ಸ್‌ನಿಂದ ಸಿಗುತ್ತದೆ; ಮಾತ್ರವಲ್ಲ, ನಿಮ್ಮ ಸಂಗಾತಿಯ ಜತೆಗಿನ ಬಾಂಧವ್ಯ ಇನ್ನಷ್ಟು ಮಧುರವಾಗುತ್ತದೆ. ಇದು ಆಡೆಡ್ ಬೋನಸ್!
ಮೂಡ್ ಬಂದಾಗೆಲ್ಲಾ ಅಲ್ಲ..ಯಾವಾಗೆಲ್ಲ ಲೈಂಗಿಕ ಕ್ರಿಯೆ ನಡೆಸಬಾರದು ತಿಳ್ಕೊಳ್ಳಿಳ್ಳಿ