ಸಲಿಂಗಿ ಜೋಡಿಗಳ ವಿವಾಹದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಹುದಿನಗಳಿಂದ ನಿರಂತರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಲಿಸುವ ಬೈಕ್ ಮೇಲೆ ಕುಳಿತು ಬಾಲಕಿಯರಿಬ್ಬರು ಲಿಪ್ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಚೆನ್ನೈ: ಸಲಿಂಗಿ ಜೋಡಿಗಳ ವಿವಾಹದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಹುದಿನಗಳಿಂದ ನಿರಂತರ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಲಿಸುವ ಬೈಕ್ ಮೇಲೆ ಕುಳಿತು ಬಾಲಕಿಯರಿಬ್ಬರು ಲಿಪ್ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಚಲಿಸುತ್ತಿರುವ ಬೈಕಿನಲ್ಲಿ ಎದುರು ಬದುರು ಕುಳಿತ ಇಬ್ಬರು ಬಾಲಕಿಯರು ಪರಸ್ಪರ ತಬ್ಬಿಕೊಂಡು, ಮುತ್ತು ಕೊಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕಿನ ಸೀಟಿನ ಮೇಲೆ ಒಬ್ಬರು ಹಾಗೂ ಟ್ಯಾಂಕಿನ ಮೇಲೆ ಒಬ್ಬರು ಕುಳಿತಿದ್ದು, ಬೈಕು ಚಲಿಸುತ್ತಿರುವಂತೆಯೇ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ. ಈ ವಿಡಿಯೋಗೆ ಸಂಬಂಧಿಸಿದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಮೊದಲು ಇಂತಹ ಪ್ರಕರಣಗಳು ದಾಖಲಾಗಿದ್ದರೂ ಸಹ, ಇಬ್ಬರು ಬಾಲಕಿಯರೇ ಈ ರೀತಿ ನಡೆದುಕೊಂಡಿರುವುದು ಇದೇ ಮೊದಲು.
ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ
ಈ ವಿಡಿಯೋ ತಮಿಳುನಾಡಿನದ್ದು ಎನ್ನಲಾಗುತ್ತಿದ್ದು, ಈ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಒಂದೇ ಲಿಂಗದ ಜೋಡಿಯ ಪ್ರೀತಿಯ ಸಾರ್ವಜನಿಕ ಪ್ರದರ್ಶನ (public display of affection of a same-sex couple) ಎನ್ನಲಾಗುತ್ತಿದೆ. ತಮಿಳುನಾಡು ನೋಂದಣಿಯ ಸ್ಲೆಂಡರ್ ಬೈಕ್ ಮೇಲೆ ಮುಖಾಮುಖಿಯಾಗಿ ಕುಳಿತು ಹುಡುಗಿಯರಿಬ್ಬರು ಕಿಸ್ ಮಾಡುತ್ತಿದ್ದು, ಈ ವೇಳೆ ಬೈಕ್ ಚಲಿಸುತ್ತಿದೆ. Instagram ಖಾತೆಯ ಸ್ಟಾರ್ಸ್ ಆಫ್ ಜಾರ್ಖಂಡ್ (@stars_of_jharkhand) ಮೂಲಕ ಹಂಚಿಕೊಳ್ಳಲಾಗಿದೆ.
ಪ್ರಸ್ತುತ ಡಿಲೀಟ್ ಆಗಿರುವ ವಿಡಿಯೋದಲ್ಲಿ ಹೆಲ್ಮೆಟ್ ಧರಿಸದ ಈ ಹುಡುಗಿಯರು ಬೈಕ್ ಮೇಲೆ ಕುಳಿತು ಪರಸ್ಪರ ಕೈಗೆ ಹೊಡೆದುಕೊಂಡು ಹೈಫೈ ಮಾಡಿ ನಂತರ ಪರಸ್ಪರ ತಬ್ಬಿಕೊಂಡು ಕಿಸ್ ಮಾಡ್ತಿದ್ದಾರೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯಾರಾದರೂ ಈ ವಿಡಿಯೋವನ್ನು ಜಾರ್ಖಂಡ್ ಪೊಲೀಸರಿಗೆ ಟ್ಯಾಗ್ ಮಾಡಿ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಇವರಿಗೂ ದಂಡದ ಚಲನ್ ಕಳುಹಿಸಿ ಹುಡುಗರಿಗಾದರೆ ಈಗಾಗಲೇ ಚಲನ್ ಮನೆ ತಲುಪಿರುತ್ತಿತ್ತು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಈ ವಿಡಿಯೋವನ್ನು ಈಗ ಭಾರತದಲ್ಲಿ ಸಲಿಂಗಿಗಳ ಸಾರ್ವಜನಿಕ ಪ್ರೀತಿಯ ಪ್ರದರ್ಶನದ ಮೊದಲ ವಿಡಿಯೋ ಎಂದು ಹೈಲೈಟ್ ಮಾಡಲಾಗುತ್ತಿದೆ.
ಗರ್ಭಿಣಿ, ಸಲಿಂಗಿಗಳಿಗೆ ನೇಣುಶಿಕ್ಷೆ, ಅಂಗವಿಕಲರಿಗೆ ವಿಷ, ಕಿಮ್ ಜಾಂಗ್‌ಗೆ ಕ್ರೌರ್ಯಕ್ಕಿಲ್ಲ ಕೊನೆ!
ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೋಮ್ಯಾನ್ಸ್: ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಚಲಿಸುವ ಬೈಕ್ ಮೇಲೆ ಪ್ರೇಮಿಗಳು ರೋಮ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಆಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ಹುಡುಗಿಯನ್ನು ತನಗೆ ಎದುರಾಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡ ಬೈಕ್ ಸವಾರ ವಾಹನ ಸಂದಣಿ ಇರುವ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವಾಗಲೇ ಮುದ್ದಾಡುತ್ತಿದ್ದಾನೆ. ಇದನ್ನು ಆ ರಸ್ತೆಯಲ್ಲೇ ಬೈಕ್ ಹಿಂದೆ ಸಾಗುತ್ತಿದ್ದ ಇತರ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ನಂತರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಆಗಿದ್ದು, ಪ್ರೇಮಿಗಳ ಅಸಭ್ಯ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಂತ ಈ ಪ್ರಕರಣ ಹೊಸದೇನಲ್ಲ. ಈ ಹಿಂದೆ ಉತ್ತರಪ್ರದೇಶದ ಲಕ್ನೋ ಹಾಗೂ ನೆರೆಯ ರಾಜ್ಯ ತೆಲಂಗಾಣದಲ್ಲೂ ಇಂತಹ ಚಲಿಸುವ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್ ಪ್ರಕರಣಗಳು ನಡೆದಿದ್ದವು.