ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಮಧ್ಯ ವಯಸ್ಸಿನಲ್ಲಿರುವ ಗಂಡ ಹೆಂಡತಿ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡಿರ್ತಾರೆ. ಆದರೆ ಮಿಡಲ್ ಏಜ್ ಸೆಕ್ಸ್ ಬಗ್ಗೆ ಸಖತ್ ಹ್ಯೂಮರಸ್ ಆಗಿ ಹೇಳೋ ಹಿಂದಿ ಶಾರ್ಟ್ ಮೂವಿಯಿಂದು ಮತ್ತೆ ವೈರಲ್ ಆಗ್ತಿದೆ. ಆ ಮೂವಿ ಯಾವುದು?
ಸೋನಂ ನಾಯರ್ ನಿರ್ದೇಶನದಲ್ಲಿ ಜಾಕಿ ಶ್ರಾಫ್ ಮತ್ತು ನೀನಾ ಗುಪ್ತ ನಟನೆಯ ಶಾರ್ಟ್ ಮೂವಿಯೊಂದು ಆರು ವರ್ಷಗಳ ನಂತರ ಸದ್ದು ಮಾಡ್ತಿದೆ. ಈ ಸಿನಿಮಾದಲ್ಲಿ ಮಧ್ಯ ವಯಸ್ಸಿನ ಸೆಕ್ಸ್ ಬಗ್ಗೆ ಹೈಲೈಟ್ ಮಾಡಲಾಗಿದೆ. ಈ ಸಿನಿಮಾದ ಹೆಸರು ಖುಜ್ಲೀ. ನಾರ್ಮಲ್ ಸಿನಿಮಾಕ್ಕಿಂತ ಕೊಂಚ ಭಿನ್ನ ಸಬ್ಜೆಕ್ಟ್‌ನ ಸಿನಿಮಾಗಳು ಬಂದಾಗ ಅವುಗಳನ್ನು ಬ್ಯಾನ್ ಮಾಡಬೇಕು ಅಂತೆಲ್ಲ ಗಲಾಟೆ ಆಗೋದು, ಒಂದಿಷ್ಟು ಜನ ಆ ಸಿನಿಮಾದ ಪರ, ಇನ್ನೊಂದಿಷ್ಟು ಜನ ವಿರೋಧವಾಗಿ ಗುದ್ದಾಡೋದು ಎಲ್ಲ ಕಾಮನ್. ಈ ಸಿನಿಮಾ ಬಂದ ಟೈಮಿನ ಆಸುಪಾಸಲ್ಲಿ 'ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ' ಸಿನಿಮಾ ಬ್ಯಾನ್ ಭೀತಿ ಎದುರಿಸಿತ್ತು. ಇದೀಗ 'ಕೇರಳ ಸ್ಟೋರಿ' ಅನ್ನೋ ಸಿನಿಮಾ ವಿವಾದದಲ್ಲಿದೆ. ಇಂಥಾ ಟೈಮಲ್ಲಿ ಯಾವ ಜಡ್ಜ್ ಮೆಂಟ್‌ಗೂ ಸಿಗದ ಹಾಗೆ ಈ ಬಗೆಯ ಸಿನಿಮಾಗಳು ಇದ್ದಕ್ಕಿದ್ದ ಹಾಗೆ ವೈರಲ್ ಆಗಿಬಿಡುತ್ತವೆ. ಹೊಸ ಬಗೆಯ ಕಂಟೆಂಟ್, ಅದನ್ನು ಹೊಸ ಬಗೆಯಲ್ಲಿ ನಿರೂಪಿಸುವ ಮಾದರಿ ಇದಕ್ಕೆ ಒಂದು ಕಾರಣ ಆದರೆ ಈ ಕಟೆಂಟ್ ಅನೇಕರಿಗೆ ಕನೆಕ್ಟ್ ಆಗೋದು ಮತ್ತೊಂದು ರೀಸನ್. ಬಹಳ ಸೂಕ್ಷ್ಮವಾಗಿ ಕಾಮನ್ ಸಬ್ಜೆಕ್ಟ್ ಅನ್ನೇ ಅನ್‌ಕಾಮನ್ ಮಾದರಿಯಲ್ಲಿ ಹೇಳೋ ರೀತಿಗೆ ಜನ ಮರುಳಾಗಿ ಬಿಡ್ತಾರೆ. ಪರಿಣಾಮ ರಿಲೀಸ್ ಆಗಿ ಆರು ವರ್ಷಗಳಾದ ಮೇಲೂ ಇಂಥಾ ಸಿನಿಮಾಗಳು ವೀಕ್ಷಣೆ ಗಳಿಸುತ್ತಲೇ ಇರುತ್ತವೆ.
ಹಾಗೆ ನೋಡಿದರೆ ಈ 'ಖುಜ್ಲಿ' ಸಿನಿಮಾದ ಬಹುಮುಖ್ಯ ಆಕರ್ಷಣೆ ಅಂದರೆ ಅದು ನಗೆ ಉಕ್ಕಿಸೋ ರೀತಿ. ಆ ನಗೆಯಲ್ಲೇ ತಾನು ಹೇಳಬೇಕಾದ್ದನ್ನ ಮನದಟ್ಟು ಮಾಡೋ ಜಾಣ್ಮೆ. ಇದರಲ್ಲಿ ಮಧ್ಯ ವಯಸ್ಕ ದಂಪತಿ ರೂಪ್‌ಮತಿ ಮತ್ತು ಗಿರಿಧರಿಲಾಲ್. ಅವರಿಗೆ ವಯಸ್ಸಿಗೆ ಬಂದ ತಮ್ಮ ಮಗನ ಕೋಣೆಯಲ್ಲಿ ಪಿಂಕ್ ಹ್ಯಾಂಡ್‌ಕಫ್ ಅಂದರೆ ಬೇಡಿ ಸಿಗುತ್ತದೆ. ಸೆಕ್ಸ್‌ನಲ್ಲಿ ಇದನ್ನು ವಿಶೇಷವಾಗಿ ಬಳಸ್ತಾರೆ. ಇದನ್ನು ನೋಡಿಕೊಂಡು ಬಂದ ಈ ಗಂಡ ಹೆಂಡತಿ ಸೆಕ್ಸ್ ಬಗ್ಗೆ ಏನೇನೋ ಮಾತಾಡಲು ಶುರು ಮಾಡ್ತಾರೆ. ಅವರ ಭಾವ, ಭಂಗಿಗಳಲ್ಲಿ ಬದಲಾವಣೆ ಕಾಣುತ್ತೆ. ಇಪ್ಪತ್ತೈದು ವರ್ಷಗಳ ತಮ್ಮ ದಾಂಪತ್ಯದಲ್ಲಿ ಸೆಕ್ಸ್ ಲೈಫ್ ಹೇಗಿತ್ತು ಅನ್ನೋದನ್ನು ಕೋಡ್‌ವರ್ಡ್ ಬಳಸಿ ಮಾತಾಡೋದು ಅವರಿಬ್ಬರಿಗೆ ಅಸಹಜ ಅನಿಸದಿದ್ದರೂ ಉಳಿದವರಿಗೆ ಹುಬ್ಬೇರೋ ಹಾಗೆ ಮಾಡುತ್ತೆ. ಇಪ್ಪತ್ತೈದು ವರ್ಷಗಳ ದಾಂಪತ್ಯದ ನಂತರವೂ ಅವರು ಆಕರ್ಷಣೆ ಕಳೆದುಕೊಳ್ಳದೇ ಇರೋದು ಸಿನಿಮಾವಾಗಿ ಹೆಚ್ಚಿನವರಿಗೆ ಕನೆಕ್ಟ್ ಆಗುತ್ತೆ.
Divya Datta: ರೆಡ್ಲೈಟ್ ಏರಿಯಾದಲ್ಲಿ ಸಿಕ್ಕಿಬಿದ್ದ ನಟಿ ಬಿಚ್ಚಿಟ್ಟ ಭಯಾನಕ ಅನುಭವ
ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ ಸೆಕ್ಸ್ ಅನ್ನು ಮೂಲೆಗುಂಪು ಮಾಡೋದೇ ಹೆಚ್ಚು. ಸೆಕ್ಸ್ (Sex) ಬಗ್ಗೆ ಪ್ರಯೋಗ ಮಾಡೋದು ಬಿಡಿ, ಆ ಬಗ್ಗೆ ಮಾತಾಡೋದನ್ನೂ ಅಪರಾಧ ಅನ್ನೋ ಹಾಗೆ ವ್ಯವಹರಿಸಲಾಗುತ್ತೆ. ಅದರಲ್ಲೂ ಮಧ್ಯ ವಯಸ್ಸು ಬಂತು, ಮಕ್ಕಳು ದೊಡ್ಡೋರಾದ ಮೇಲೆ ಎಷ್ಟೋ ಕಡೆ ಗಂಡ ಹೆಂಡತಿ ದೂರ ದೂರ ಮಲಗೋದೂ ಇದೆ. ಮಕ್ಕಳು ದೊಡ್ಡೋರಾಗೋ ತನಕವೂ ಜೊತೆಗೇ ಮಲಗಿಸಿಕೊಳ್ಳೋ ಇವರ ಸೆಕ್ಸ್‌ಲೈಫ್ (Sex life)ನಲ್ಲಿ ಎನ್‌ಜಾಯ್‌ಮೆಂಟ್ ಅನ್ನೋದಕ್ಕೆ ಅವಕಾಶ(Chance) ಇರೋದು ಕಡಿಮೆ. ಗಂಡ ಹೆಂಡತಿ ತಮ್ಮಿಬ್ಬರಿಗಾಗಿ ಸಮಯ ಮಾಡಿಕೊಳ್ಳೋದೂ ಕಡಿಮೆ.
ಹೀಗೆಲ್ಲ ಇರೋ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಇದೊಂದು ಸಂಚಲನ ಮೂಡಿಸುವ ಸಿನಿಮಾ(Movie). ಹೀಗೆ ಎಲ್ಲರಿಗೂ ಕನೆಕ್ಟ್ ಆಗೋ ಸಬ್ಜೆಕ್ಟ್ ಆಗಿರೋ ಕಾರಣ ಜೊತೆಗೆ ನಗುವಿನ ಮೂಲಕ ಎಲ್ಲರಿಗೂ ಮೆಸೇಜ್ ತಿಳಿಸೋದು ಈ ಸಿನಿಮಾದ ಹೆಚ್ಚುಗಾರಿಕೆ. ಜೊತೆಗೆ ಮಧ್ಯವಯಸ್ಕರು ತಮ್ಮೊಳಗಿನ ಸೆಕ್ಸ್ ಬಯಕೆಯನ್ನು ಹೊರ ಹಾಕುವಂಥಾ ಬಟ್ಟೆ ಹಾಕೋದು, ಅದನ್ನು ಉಳಿದವರು ಆಡಿಕೊಂಡು ನಗೋದು ಇತ್ಯಾದಿಗಳೂ ಸಮಾಜದಲ್ಲಿ(Society) ಆಗುತ್ತಿರುತ್ತವೆ. ಈ ಬಗ್ಗೆಯೂ ಈ ಸಿನಿಮಾ ಬೆಳಕು ಚೆಲ್ಲುತ್ತದೆ.
ಇನ್ನೂ ಮದ್ವೆಯಾಗದ ಸಲ್ಮಾನ್ ಸಹೋದರರಿಗೆ ಹಿಂಗ್ ಅಡ್ವೈಸ್ ಮಾಡಿದ್ರಂತೆ !