ವಿಭಿನ್ನ ರೀತಿಯ ಮಟರ್ನಿಟಿ ಫೋಟೋಶೂಟ್​ನಲ್ಲಿ ಎಲ್ಲರ ಗಮನ ಸೆಳೆದ ನಟಿ ಸಮಂತಾ: ಫ್ಯಾನ್ಸ್​ ಶ್ಲಾಘನೆ

Published : Nov 09, 2026, 07:18 PM IST
Samantha Ruth Prabhu

ಸಾರಾಂಶ

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಈಗ ತುಂಬು ಗರ್ಭಿಣಿಯಾಗಿದ್ದು, ತಮ್ಮ ಒಂಬತ್ತನೇ ತಿಂಗಳಿನ ಫಿಟ್‌ನೆಸ್ ಜರ್ನಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡೀಸೆಂಟ್ ಆದ ಪ್ರೆಗ್ನೆನ್ಸಿ ಫೋಟೋಶೂಟ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬೈ: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಇದೀಗ ತಾಯ್ತನದ ಸಂಭ್ರಮವನ್ನು ಅನುಭವಿಸುತ್ತಿದ್ದಾರೆ. ಅವರೀಗ ತುಂಬು ಗರ್ಭಿಣಿ. ಪ್ರೆಗ್ನೆನ್ಸಿಯ ಒಂಬತ್ತನೇ ತಿಂಗಳಿಗೆ ಕಾಲಿಟ್ಟಿರುವ ನಟಿ, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಈ ವಿಡಿಯೋದಲ್ಲಿ ಪ್ರೆಗ್ನೆನ್ಸಿಯ ಆರಂಭದ ದಿನಗಳಿಂದ ಹಿಡಿದು ಕೊನೆಯ ತಿಂಗಳವರೆಗಿನ ತಮ್ಮ ಫಿಟ್‌ನೆಸ್ ಜರ್ನಿಯ ಝಲಕ್ ತೋರಿಸುತ್ತಲೇ ಇದ್ದಾರೆ. ಈ ಕ್ಷಣದವರೆಗೂ ಅವರ ವರ್ಕೌಟ್ ರುಟೀನ್ ಕಂಡು ಅಭಿಮಾನಿಗಳೂ ಶಾಕ್ ಆಗಿದ್ದಾರೆ.

ಸಭ್ಯತೆಯ ಎಲ್ಲೆ ಮೀರದ ಫೋಟೋಶೂಟ್​

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದರೆ, ಈಗ ಸೆಲೆಬ್ರಿಟಿಗಳು ಬಿಡಿ ಅವರನ್ನು ಅನುಸರಿಸಿ ಸಾಮಾನ್ಯ ಮಹಿಳೆಯರು ಕೂಡ ಹೊಟ್ಟೆ ಬಿಟ್ಟುಕೊಂಡು ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿಕೊಳ್ಳುವುದು ಇದೆ. ಹೊಟ್ಟೆ ಮೇಲೆ ಡಿಸೈನ್​ ಹಾಕಿಸಿಕೊಳ್ಳುವುದು, ಪ್ರೆಗ್ನೆನ್ಸಿ ಫೋಟೋಶೂಟ್​ ಹೆಸರಿನಲ್ಲಿ ಎಲ್ಲಾ ಅಂಗಾಂಗಗಳನ್ನು ತೋರಿಸುವುದು, ತಾಯ್ತನದ ಸಂಭ್ರಮವನ್ನು ಈ ರೀತಿ ಅಸಹ್ಯವಾಗಿ ತೋರಿಸುತ್ತಾರಾ ಎಂದು ನೆಟ್ಟಿಗರು ಗರಂ ಆಗುವಷ್ಟರ ಮಟ್ಟಿಗೆ ದೇಹ ಪ್ರದರ್ಶನ ಮಾಡಿ ಫೋಟೋಶೂಟ್​ ಮಾಡಿಸಿಕೊಳ್ಳುವುದು, ಅದನ್ನು ಶೇರ್​ ಮಾಡುವುದು ನಡೆದೇ ಇದೆ.

ಆದರೆ ಇದೀಗ ಸಮಂತಾ ಅವರು, ಇಂಥ ಫೋಟೋಶೂಟ್​ ವಿಷ್ಯಕ್ಕೆ ಹೋಗಿಲ್ಲ. ತಾಯ್ತನವನ್ನು ಹೇಗೆ ಅನುಭವಿಸಬೇಕು, ತಾಯ್ತನದ ಖುಷಿಯನ್ನು ಯಾವ ರೀತಿಯಲ್ಲಿ ಬೇರೆಯವರ ಜೊತೆ ಹಂಚಿಕೊಳ್ಳಬೇಕು ಎನ್ನುವುದಕ್ಕೆ ಸಮಂತಾ ಮಾದರಿಯಾಗಿದ್ದಾರೆ. ಸೋಫಾದ ಮೇಲೆ ತುಂಬು ಗರ್ಭಿಣಿಯಾಗಿರುವ ಹೊಟ್ಟೆಯನ್ನು ತೋರಿಸಿದರೂ ಎಲ್ಲಿಯೂ ಅಶ್ಲೀಲತೆ ಎನ್ನದೇ ಫೋಟೋ ಕ್ಲಿಕ್ಕಿಸಿಕೊಂಡು, ಇದನ್ನೇ ನನ್ನ ಪ್ರೆಗ್ನೆನ್ಸಿ ಫೋಟೋಶೂಟ್​ ಎಂದುಕೊಳ್ಳಿ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಇದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅದಕ್ಕೆ ಕಾರಣ, ನಟಿ ಪ್ರೆಗ್ನೆಂಟ್​ ಆಗಿರುವುದಕ್ಕಿಂತ ಹೆಚ್ಚಾಗಿ, ಫೋಟೋಶೂಟ್​ ಅನ್ನು ಡೀಸೆಂಟ್​ ಆಗಿ ಮಾಡಿಸಿಕೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ದಿಢೀರ್​ ಮದುವೆ

ಸಮಂತಾ ಮತ್ತು ಚಿತ್ರ ನಿರ್ದೇಶಕ ರಾಜ್ ನಿಡಿಮೋರು ದಿಢೀರ್ ಆಗಿ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದರು. ಇಬ್ಬರೂ ಡಿಸೆಂಬರ್ 2025ರಲ್ಲಿ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಇತ್ತೀಚೆಗೆ ಈಶಾ ಫೌಂಡೇಶನ್‌ನಲ್ಲಿ ಸಾಂಪ್ರದಾಯಿಕ ಸೀಮಂತಂ ಕಾರ್ಯಕ್ರಮವನ್ನೂ ಆಚರಿಸಿಕೊಂಡಿದ್ದಾರೆ. ಸಮಂತಾ ಈ ಹಿಂದೆಯೂ ತಮ್ಮ ಪ್ರೀನೇಟಲ್ ಫಿಟ್‌ನೆಸ್ ಮತ್ತು ಸ್ಟ್ರೆಂಥ್ ಟ್ರೈನಿಂಗ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರೆಗ್ನೆನ್ಸಿ ಸಮಯದಲ್ಲಿ ತಮ್ಮ ವ್ಯಾಯಾಮದ ವಿಧಾನ ಮೊದಲಿನಂತಿಲ್ಲ ಎಂದು ಅವರು ಹಿಂದಿನ ಪೋಸ್ಟ್‌ನಲ್ಲಿ ತಿಳಿಸಿದ್ದರು. ಈಗ ತಮ್ಮ ದೇಹದ ಅಗತ್ಯತೆಗಳು ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. 'ಈ ದಿನಗಳಲ್ಲಿ ನನ್ನ ಟ್ರೈನಿಂಗ್ ವಿಧಾನ ಸ್ವಲ್ಪ ವಿಭಿನ್ನವಾಗಿದೆ. ಈಗ ಹೆಚ್ಚು ಕಷ್ಟಪಡುವುದಕ್ಕಿಂತ ದೇಹದ ಮಾತನ್ನು ಆಲಿಸುವುದು ಮುಖ್ಯವಾಗಿದೆ' ಎಂದು ನಟಿ ಬರೆದುಕೊಂಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Premada Oorali ನಟಿ ರಮಿಕಾಗೆ ಗಂಡ ರೈತ ಆದ್ರೆ ಓಕೆನಾ? ಆ್ಯಂಕರ್​ ಅನುಶ್ರೀ ಪ್ರಶ್ನೆಗೆ 'ವಸಂತಾ' ಏನಂದ್ರು ಕೇಳಿ
'ಓ ಮೈ ಗಾಡ್!' ಎಂದು ಕಣ್ಣರಳಿಸಿದ ಶಿಕ್ಷಕಿ; ದೀಪಾವಳಿಗೆ ಶಾಲಾ ಶಿಕ್ಷಕಿಗೆ ಸರ್‌ಪ್ರೈಸ್ ನೀಡಿದ ಅಭಿಷೇಕ್ ಶರ್ಮಾ!