Rishi Sunak And Akshata Murty: ಮಿಲಿಯನ್ ಡಾಲರ್ ಲವ್ ಸ್ಟೋರಿ, ಶುರುವಾಗಿದ್ದೆಲ್ಲಿ ?

By Suvarna NewsFirst Published Oct 27, 2022, 4:00 PM IST
Highlights

ರಿಷಿ ಸುನಕ್ ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಅದರಲ್ಲೂ ಸುನಕ್ ಕರ್ನಾಟಕದ ಅಳಿಯ ಎಂದಾಕ್ಷಣ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಲವ್ ಸ್ಟೋರಿ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಿದ್ರೆ ಅವ್ರ ಲವ್‌ ಸ್ಟೋರಿ ಶುರುವಾಗಿದ್ದೆಲ್ಲಿ ?

ಭಾರತೀಯ ಮೂಲಕ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ಫೋಸಿಸ್ ಕಂಪನಿಯ ಕಟ್ಟಾಳುಗಳಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಇದೇ ತಿಂಗಳ 28ರಂದು ಅಧಿಕಾರ ವಹಿಸುತ್ತಿದ್ದಾರೆ. ರಿಷಿ ಸನಕ್ ಭಾರತೀಯ ಅನ್ನುವದ್ದಕ್ಕಿಂತ ಕರ್ನಾಟಕದ ಅಳಿಯ ಎಂದು ಕರೆಯುವ ಸಂತೋಷವೇ ಬೇರೆ. ಹೌದು, ಇನ್ಫೊಸೀಸ್​ ನಾರಾಯಣ ಮೂರ್ತಿ (Narayana Murthy), ಸುಧಾ ಮೂರ್ತಿ (Sudha Murthy) ಯವರ ಪುತ್ರಿ ಅಕ್ಷತಾ ಮೂರ್ತಿ (Akshata Murthy) ಯವರ ಪತಿ ಈ ರಿಷಿ ಸುನಕ್​.

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾದ ನಂತರ ಅವರ ಪ್ರೇಮ್ ಕಹಾನಿ ಹೆಚ್ಚು ಸುದ್ದಿಯಲ್ಲಿದೆ. ರಿಷಿ ಸುನಕ್- ಅಕ್ಷತಾ ಮೂರ್ತಿ ಮೊದಲ ಭೇಟಿಯಾಗಿದ್ದು ಯಾವಾಗ, ಇಬ್ಬರ ಪ್ರೀತಿಗೆ ಪೋಷಕರು ಒಪ್ಪಿಕೊಂಡಿದ್ದರಾ? ಈ ರೀತಿಯ  ಹಲವು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡಿವೆ. ರಿಷಿ ಸನಕ್​ ಬ್ರಿಟನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ, ಕರ್ನಾಟಕದಲ್ಲಿ ಜನರು ಇವರ ಬಗ್ಗೆ ಹೆಚ್ಚಾಗಿ ಹುಡುಕಲು ಶುರು ಮಾಡಿಕೊಂಡಿದ್ದಾರೆ. ಆ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲಿದೆ. 

UK Prime Minister: ಬ್ರಿಟನ್‌ನಲ್ಲಿ ಇನ್ಮುಂದೆ ಕರ್ನಾಟಕದ ಅಳಿಯನ ದರ್ಬಾರ್‌..!

ರಿಷಿ ಸುನಕ್​-ಅಕ್ಷತಾ ಮೂರ್ತಿ ಮೊದಲು ಭೇಟಿಯಾಗಿದ್ದೆಲ್ಲಿ ?
ಇನ್ಫೋಸಿಸ್ ಸಹ ಸಂಸ್ಥಾಪಕಿ ಮತ್ತು ಮಾಜಿ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅವರ ಮೊದಲ ಪುತ್ರಿ ಅಕ್ಷತಾ ಮೂರ್ತಿ. ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ಇಬ್ಬರೂ ಮೊದಲ ಬಾರಿಗೆ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿ (Meet)ಯಾದರು. ಆ ಭೇಟಿ ನಂತರದ ದಿನಗಳಲ್ಲಿ ಸ್ನೇಹಕ್ಕೆ (Friendship) ತಿರುಗಿತ್ತು. ಆ ಸ್ನೇಹ ಕ್ರಮೇಣ ಪ್ರೀತಿಗೆ (Love) ತಿರುಗಿತ್ತು. ಇಬ್ಬರು ಅದೇ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದರು. ಅಕ್ಷತಾ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಸಾಕಷ್ಟು ಶ್ರೀಮಂತಿಕೆಯಿದ್ದರೆ ವಿದ್ಯಾರ್ಥಿವೇತನದ ಮೇಲೆ ಸ್ಟ್ಯಾನ್ ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದರು. ಈ ವೇಳೆ ರಿಷಿ ಸನಕ್​ ಮೇಲೆ ಇವರಿಗೆ ಪ್ರೇಮಾಂಕುರವಾಗಿತ್ತು. ನೋಡಿದ ಮೊದಲ ನೋಟದಲ್ಲೇ ಅವರೇ ನನಗೆ ಸರಿಯಾದ ಜೀವನ ಸಂಗಾತಿ (Life partner) ಎಂದು ಅಕ್ಷತಾ ಮೂರ್ತಿ ಅಂದುಕೊಂಡಿದ್ದರಂತೆ. ಆದರೆ ಇಬ್ಬರೂ ಪರಸ್ಪರ ಒಪ್ಪಿಕೊಳ್ಳಲು ಕೆಲ ಕಾಲ ಸಮಯ ತೆಗೆದುಕೊಂಡಿದ್ದರಂತೆ.

ಅಕ್ಷತಾ ಮೂರ್ತಿ ಬಾಲ್ಯ ಮತ್ತು ಶಿಕ್ಷಣ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಲೇಖಕಿ, ಲೋಕೋಪಕಾರಿ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾಮೂರ್ತಿಯವರ ಮಗಳು. ಅಕ್ಷತಾ ಎರಡು ವರ್ಷದವಳಿದ್ದಾಗ, ಮೂರ್ತಿ ಕುಟುಂಬ ಕರ್ನಾಟಕದ ಹುಬ್ಬಳ್ಳಿಯಿಂದ ಮುಂಬೈಗೆ ಸ್ಥಳಾಂತರಗೊಂಡಿತು. ಸುಧಾ ಮೂರ್ತಿ ತನ್ನ ಮಕ್ಕಳನ್ನು ಅದ್ದೂರಿ ವಾತಾವರಣದಲ್ಲಿ ಬೆಳೆಯಲು ಬಿಟ್ಟಿರಲ್ಲಿಲ್ಲ. ವರದಿಗಳ ಪ್ರಕಾರ ಬಾಲ್ಯದಲ್ಲಿ ಅವರ ಮನೆಯಲ್ಲಿ ದೂರದರ್ಶನ ಇರಲಿಲ್ಲ. ಅಷ್ಟೇ ಅಲ್ಲ, ಸುಧಾ ತನ್ನ ಮಕ್ಕಳು ಐಷಾರಾಮಿ ಕಾರುಗಳ ಬದಲಿಗೆ ಆಟೋ ರಿಕ್ಷಾದಲ್ಲಿ ಶಾಲೆಗೆ ಹೋಗುವಂತೆ ನೋಡಿಕೊಂಡಿದ್ದರು.

2009ರಲ್ಲಿ ಮದುವೆಯಾಗಿದ್ದ ಸುನಕ್​-ಅಕ್ಷತಾ ಜೋಡಿ
ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ಇಬ್ಬರೂ ಪರಸ್ಪರ ತಮ್ಮ ಪ್ರೀತಿಯ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿದ್ದರು. ಇಬ್ಬರ ಮನೆಯಲ್ಲೂ ಒಪ್ಪಿಕೊಂಡ ನಂತರ ದಂಪತಿಗಳು ಆಗಸ್ಟ್ 2009ರಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮದುವೆಯಾದರು. ಬ್ರಾಹ್ಮಣ ಸಂಪ್ರದಾಯದಂತೆ ನಡೆದ ಮದುವೆ (Marriage)ಯಲ್ಲಿ  ಸಂಬಂಧಿಕರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ನಗರದ ಹೊರವಲಯದಲ್ಲಿರುವ ತನ್ನ ವಿಶಾಲವಾದ ಹಸಿಯೆಂಡಾ ಶೈಲಿಯ ಬಂಗಲೆಯಲ್ಲಿ ಆಪ್ತ ಸ್ನೇಹಿತೆ ಮತ್ತು ಪ್ರಸ್ತುತ ಇನ್ಫೋಸಿಸ್ ಮಂಡಳಿಯ ಸದಸ್ಯೆ ಕಿರಣ್ ಮಜುಂದಾರ್-ಶಾ ಅವರು ಆಯೋಜಿಸಿದ್ದ ಮೆಹಂದಿ ಸಮಾರಂಭದೊಂದಿಗೆ ಆಚರಣೆಗಳು ಪ್ರಾರಂಭವಾಗಿತ್ತು. ಸಮಾರಂಭದಲ್ಲಿ ಬಿಲಿಯನೇರ್​ಗಳು, ಸಿಇಒಗಳು, ಕ್ರಿಕೆಟಿಗರು, ಮುಂಬೈನ ಹೆಸರಾಂತ ಗಣ್ಯರು, ಮಾಧ್ಯಮ ಉದ್ಯಮಿಗಳು, ಕೇಂದ್ರ ಮತ್ತು ಸ್ಥಳೀಯ ಮಂತ್ರಿಗಳು ಭಾಗಿಯಾಗಿದ್ದರು. 

ರಿಷಿ ಸುನಕ್‌ಗೆ ರವಾ ಇಡ್ಲಿ ಸಿಕ್ಕಾಪಟ್ಟೆ ಇಷ್ಟವಂತೆ, ಸಿಂಪಲ್ ರೆಸಿಪಿ ಇಲ್ಲಿದೆ

ಕರುನಾಡ ಕುವರಿಯ ವರಿಸಿದ ರಿಷಿ
ಸುನಾಕ್ ಪೋಷಕರು ಮೂಲತಃ ಪಂಜಾಬ್ ಮೂಲದ ಔಷಧ ವ್ಯಾಪಾರಿಗಳು. 1960ರಲ್ಲಿ ಪೂರ್ವ ಆಫ್ರಿಕಾಗೆ ವಲಸೆ ಹೋದ ಇವರ ಕುಟುಂಬ, ಅಲ್ಲಿಂದ ಬ್ರಿಟನ್‌ಗೆ ವಲಸೆ ಹೋಗಿದ್ದರು. 1980ರಲ್ಲಿ ಇಂಗ್ಲೆಂಡ್‌ನ ಸೌತ್ ಹ್ಯಾಂಪ್ಟನ್‌ನಲ್ಲಿ ಜನಿಸಿದ ರುಷಿ, 2009ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಮ ಮೂರ್ತಿ ಮಗಳು ಅಕ್ಷತಾ ಅವರನ್ನು ವರಿಸಿದ್ದಾರೆ. ಅಕ್ಷತಾ-ರಿಷಿ ದಂಪತಿಗೆ ಅನುಷ್ಕಾ ಮತ್ತು ಕೃಷ್ಣಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ.

click me!