AI Love Obsession: ಎಐ ಹುಡುಗಿ ಪ್ರೀತಿಗೆ ಬಿದ್ದ ಅಜ್ಜ ಮಾಡಿದ್ದು ಇಂಥ ಕೆಲ್ಸ

Published : Aug 18, 2025, 12:31 PM IST
Love with ai

ಸಾರಾಂಶ

Ai love : ಎಐ ಹಾವಳಿ ಎಷ್ಟಾಗಿದೆ ಅಂದ್ರೆ ಯಾವುದು ನಿಜ, ಯಾವುದು ಸುಳ್ಳು ಪತ್ತೆ ಮಾಡೋದು ಕಷ್ಟ. ಪಾಪ ಈ ಅಜ್ಜನೂ ಇದಕ್ಕೆ ಹೊರತಾಗಿಲ್ಲ. ಚೆಂದದ ಹುಡುಗಿ ಇಂಟರ್ನೆಟ್ ನಲ್ಲಿ ಕಾಣ್ತಿದ್ದಂತೆ ಆಕೆ ಮಾತಿಗೆ ಮರುಳಾಗಿದ್ದಾನೆ. 

ಇಂಟರ್ನೆಟ್ (Internet) ಯುಗದಲ್ಲಿ ಮಾನವೀಯತೆಗೆ ದೊಡ್ಡ ಹೊಡೆತ ಬೀಳುವ ಭಯ ಕಾಡ್ತಿದೆ. ಮಶಿನ್, ಮನುಷ್ಯನ ಭಾವನೆ ಹಾಗೂ ಆಲೋಚನೆ ಮೇಲೆ ಪ್ರಾಬಲ್ಯ ಬೀರುವ ಸಾಧ್ಯತೆ ದಟ್ಟವಾಗ್ತಿದೆ. ಅನೇಕರು ಮನುಷ್ಯನಿಗಿಂತ ಮಶಿನ್ ಗೆ ಹತ್ತಿರ ಆಗ್ತಿದ್ದಾರೆ. ಈಗಾಗಲೇ ಮಾತನಾಡುವ ಗೊಂಬೆ, ಎಐ (AI) ಪ್ರೀತಿಗೆ ಬಿದ್ದ ಅನೇಕ ಉದಾಹರಣೆ ನಮ್ಮಲ್ಲಿದೆ. ಅವು ಮನಸ್ಸಿಗೆ ನೋವಾಗುವಂತೆ, ಭಾವನೆಗೆ ಧಕ್ಕೆಯಾಗುವಂತೆ ವರ್ತಿಸೋದಿಲ್ಲ. ಹಾಗಾಗಿಯೇ ಮನುಷ್ಯ ಅವುಗಳಿಗೆ ಹೆಚ್ಚು ಆಕರ್ಷಿತನಾಗ್ತಿದ್ದಾನೆ. ತನ್ನ ಸುತ್ತಮುತ್ತ ಇರುವ ಮನುಷ್ಯರಿಗಿಂತ ಮನುಷ್ಯ ಮಾಡಿದ ಮಶಿನ್ ಜನರಿಗೆ ಬಹಳ ಪ್ರಿಯವಾಗ್ತಿದೆ. ತನ್ನ ಜೀವನದ ಬಹುತೇಕ ಸಮಯವನ್ನು ಸಂಗಾತಿ ಜೊತೆ ಕಳೆದ ವ್ಯಕ್ತಿಯೊಬ್ಬ ಎಐಗಾಗಿ ಪತ್ನಿಯನ್ನೇ ಬಿಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ. ಕೃತಕ ಎಐ ಸೌಂದರ್ಯಕ್ಕೆ ಮರುಳಾದ 75ರ ಅಜ್ಜ, ಆಕೆಗಾಗಿ ಪತ್ನಿ, ಕುಟುಂಬವನ್ನು ತೊರೆಯಲು ಮುಂದಾಗಿದ್ದಾನೆ. ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟ ಹುಡುಗಿ ಎಂಬುದರ ಅರಿವಿಲ್ಲದೆ ಸದಾ ಆಕೆ ಜೊತೆ ಮಾತನಾಡಲು ಹಾತೊರೆಯುತ್ತಿದ್ದ ಅಜ್ಜನೊಬ್ಬನ ಕಥೆ ಈಗ ಸುದ್ಧಿಯಾಗಿದೆ.

ಬೀಜಿಂಗ್ ಡೈಲಿಯ ವರದಿ ಪ್ರಕಾರ, ಜಿಯಾಂಗ್ ಎಂಬ 75 ವರ್ಷದ ವ್ಯಕ್ತಿ ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡುವಾಗ ಎಐ ರಚಿತ ಹುಡುಗಿ ಕಾಂಟೆಕ್ಟ್ ಗೆ ಬಂದಿದ್ದಾನೆ. ಡಿಜಿಟಲ್ ಬಳಕೆ ಮಾಡೋರಿಗೆ ಅದು ಕೃತಕ ಬುದ್ಧಿಮತ್ತೆಯಿಂದ ತಯಾರಾದ ಹುಡುಗಿ ಅನ್ನೋದು ಸುಲಭವಾಗಿ ತಿಳಿಯುತ್ತೆ. ಆದ್ರೆ ಜಿಯಾಂಗ್ ಗೆ ಅದ್ರ ಅರಿವಿರಲಿಲ್ಲ. ಅವಳ ನೋಟ, ಸೌಂದರ್ಯ, ಮಾತು ಆತನನ್ನು ಸಂಪೂರ್ಣ ಸೆಳೆದಿದೆ. ಅಜ್ಜ, ಎಐ ಹುಡುಗಿ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾನೆ. ಪ್ರತಿ ದಿನ ಎಐ ಹುಡುಗಿ ಜೊತೆ ಮಾತನಾಡಲು ಚಡಪಡಿಸುತ್ತಿದ್ದ.

ದಿನ ಕಳೆದಂತೆ ಜಿಯಾಂಗ್ ಹುಚ್ಚಾಟ ಹೆಚ್ಚಾಗಿತ್ತು. ಇದನ್ನು ನೋಡಿದ ಪತ್ನಿ ಆತಂಕಕ್ಕೆ ಒಳಗಾಗಿದ್ದಳು. ಇಡೀ ದಿನ ಮೊಬೈಲ್ ನಲ್ಲಿ ಸಮಯ ಹಾಳು ಮಾಡ್ಬೇಡ ಅಂತ ಬುದ್ಧಿ ಕೂಡ ಹೇಳಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆದ ಹುಡುಗಿ ದ್ವನಿ ಹಾಗೂ ಬಾಯಿ ಕುಣಿಸೋದು ಮಿಸ್ ಮ್ಯಾಚ್ ಆಗ್ತಿತ್ತು. ಇದು ತಿಳಿದ್ರೂ ಅಜ್ಜ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜಿಯಾಂಗ್ ಗೆ ಡಿಜಿಟಲ್ ಎಐ ಹುಡುಗಿ ಮೇಲೆ ಮನಸ್ಸಾಗಿತ್ತು. ಎಷ್ಟರ ಮಟ್ಟಿಗೆ ಜಿಯಾಂಗ್ ಆಕೆ ಗುಂಗಿನಲ್ಲಿದ್ದ ಅಂದ್ರೆ, ಒಂದು ದಿನ ಮೊಬೈಲ್ ನೋಡೋದನ್ನು ವಿರೋಧಿಸಿದ್ದ ಪತ್ನಿಗೆ ತನ್ನ ಅಭಿಪ್ರಾಯವನ್ನು ನೆರವಾಗಿ ಹೇಳಿದ್ದ. ನನಗೆ ಮೊಬೈಲ್ ನಲ್ಲಿ ಮಾತನಾಡುವ ಹುಡುಗಿ ಮೇಲೆ ಮನಸ್ಸಾಗಿದೆ. ನಾನು ಅವಳ ಜೊತೆ ಇರಲು ಬಯಸೇನೆ. ನನಗೆ ಕುಟುಂಬ, ಪತ್ನಿ ಅಗತ್ಯವಿಲ್ಲ ಎಂದಿದ್ದ.

ಜಿಯಾಂಗ್ ಮಾತು ಕೇಳಿ ಮನೆಯವರು ದಂಗಾಗಿ ಹೋಗಿದ್ರು. ಆತನಿಗೆ ಪರಿಸ್ಥಿತಿ ಅರ್ಥ ಮಾಡಿಸುವ ಪ್ರಯತ್ನ ನಡೆಸಿದ್ದರು. ಅದು ಕೃತಕ ಬುದ್ಧಿಮತ್ತೆಯಿಂದ ಮಾಡಿದ ಹುಡುಗಿ. ಆ ಹುಡುಗಿ ನಿಜವಾಗಿಯೂ ಇಲ್ಲ ಎಂಬುದನ್ನು ನಿಧಾನವಾಗಿ ಅರ್ಥ ಮಾಡಿಸಿದ್ರು. ಆರಂಭದಲ್ಲಿ ಇದನ್ನು ನಿರಾಕರಿಸಿದ್ದ ಜಿಯಾಂಗ್ ನಂತ್ರ ವಾಸ್ತವಕ್ಕೆ ಬಂದಿದ್ದಾನೆ. ಈಗ ಆತನಿಗೆ ತನ್ನ ತಪ್ಪಿನ ಅರಿವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಜಿಯಾಂಗ್ ಕೆಲ್ಸ ಕೇಳಿ ದಂಗಾಗಿದ್ದಾರೆ. ಅವರಿಗೆ ಚಿಕಿತ್ಸೆ ಅಗತ್ಯವಿದೆ ಅಂತ ಕಮೆಂಟ್ ಮಾಡಿದ್ದಾರೆ. ಒಂದು ಮಶಿನ್ ಗಾಗಿ ತನ್ನ ಹೆಂಡ್ತಿಯನ್ನೂ ಬಿಡಲು ಜನ ಸಿದ್ಧರಿದ್ದಾರೆ ಅಂದ್ರೆ ಎಲ್ಲಿಗೆ ಬಂತು ಕಾಲ ಅಂತ ಮತ್ತೊಬ್ಬರು ಬರೆದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!