
ಇಂದಿನ ವೇಗದ ಜೀವನದಲ್ಲಿ, ಕೆಲಸದ ಒತ್ತಡ, ಡೆಡ್‌ಲೈನ್‌ಗಳು ಮತ್ತು ಗುರಿಗಳ ನಡುವೆ ನಾವು ನಮ್ಮ ಸಂಬಂಧಕ್ಕೆ ಸಮಯ ನೀಡುವುದನ್ನು ಮರೆಯುತ್ತೇವೆ. ಆದರೆ, ನಿಮ್ಮ ಕೆಲಸ ಎಷ್ಟೇ ಮುಖ್ಯವಾದರೂ, ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಸಮಯ ಅಷ್ಟೇ ಮುಖ್ಯ. ಇದು ನಿಮ್ಮ ಸಂಬಂಧಕ್ಕೆ ಶಕ್ತಿ, ಸಂತೋಷ ತರುತ್ತದೆ.
ಸಂಶೋಧನೆಗಳು ತಿಳಿಸುವಂತೆ, ಸಂತೋಷದ ಸಂಬಂಧದ ಆಧಾರವೇ ಕುಟುಂಬದ ಕಡೆ ಗಮನ ಮತ್ತು ಸಮಯ ಕೊಡುವುದು. ಒಟ್ಟಿಗೆ ಕಳೆಯುವ ಕ್ಷಣಗಳು ಸಂಬಂಧವನ್ನು ಬಲಗೊಳಿಸುತ್ತವೆ, ಭಾವನಾತ್ಮಕ ಅಂತರವನ್ನು ತಡೆಯುತ್ತವೆ, ಮತ್ತು ಪರಸ್ಪರ ವಿಶ್ವಾಸವನ್ನು ಹೆಚ್ಚಿಸುತ್ತವೆ. ಸಮಯದ ಕೊರತೆಯಿಂದ ಸಂಬಂಧಗಳು ಮುರಿದುಬೀಳುವ ಸಾಧ್ಯತೆಯೂ ಹೆಚ್ಚು. ಜಗಳಗಳು ಹೆಚ್ಚಾಗಬಹುದು. ಈ ಕಾರಣದಿಂದಾಗಿ ದೂರವೂ ಆಗಬಹುದು.
ಕುಟುಂಬಕ್ಕೆ ಸಮಯ ಕೊಡುವುದು ಹೇಗೆ?
ಕುಟುಂಬಕ್ಕೆ ಸಮಯ ಕೊಡಲು ಮೊದಲಿಗೆ ನೀವು ಫೋನ್‌ನಿಂದ ದೂರವಿರುವುದು, ಪರಸ್ಪರ ಮಾತನಾಡುವುದು, ಒಟ್ಟಿಗೆ ಊಟ ಮಾಡುವುದು, ವಾಕಿಂಗ್ ಹೋಗುವುದು, ಹಳೆಯ ನೆನಪುಗಳನ್ನು ಮೆಲಕು ಹಾಕುವುದು, ಅಥವಾ ಒಟ್ಟಿಗೆ ಹೊಸ ಅನುಭವಗಳನ್ನು ಸೃಷ್ಟಿಸುವುದು. ಇದು ದೊಡ್ಡ ಯೋಜನೆಗಳ ಬಗ್ಗೆ ಅಲ್ಲ, ಆದರೆ ಚಿಕ್ಕ, ಆತ್ಮೀಯ ಕ್ಷಣಗಳು ಸಾಕು. ಪ್ರೀತಿಯ ಸಂಗಾತಿಯೊಂದಿಗೆ ಸಮಯ ಕಳೆಯಿರಿ.
ತಜ್ಞರ ಪ್ರಕಾರ, ದೀರ್ಘವಾದ ಸಮಯದ ಅಗತ್ಯವಿಲ್ಲ. ವಾರಕ್ಕೆ 2-3 ಬಾರಿ 20-30 ನಿಮಿಷಗಳ ಕಾಲ ನಿಮ್ಮ ಸಂಗಾತಿಗೆ ಪೂರ್ಣ ಗಮನ ನೀಡಿದರೆ ಸಾಕು.
ಒಟ್ಟಾರೆ.ನಿಮ್ಮ ಸಂಗಾತಿ ನನಗಾಗಿ ಸಮಯವಿಲ್ಲ ಎಂದು ಹೇಳಿದರೆ, ಇದನ್ನು ಗಂಭೀರವಾಗಿ ಪರಿಗಣಿಸಿ. ಸಂಬಂಧವನ್ನು ಗಾಢವಾಗಿಡಲು, ಸಣ್ಣ ಕ್ಷಣಗಳಿಗೆ ಆದ್ಯತೆ ನೀಡಿ. ಒಟ್ಟಿಗೆ ಕಳೆಯುವ ಗುಣಮಟ್ಟದ ಸಮಯವು ನಿಮ್ಮ ಸಂಬಂಧಕ್ಕೆ ಶಕ್ತಿಯ ಮೂಲವಾಗಿದೆ. ಇಂದೇ ಆರಂಭಿಸಿ – ಒಂದು ಸಣ್ಣ ಸಂದೇಶ, ಒಂದು ಅಪ್ಪುಗೆ, ಅಥವಾ ಒಂದು ಸಂಜೆಯ ನಡಿಗೆಯಿಂದ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.