90s Kids ಬಾಲ್ಯವನ್ನು ಹ್ಯಾಪಿ ಹ್ಯಾಪಿ ಮಾಡಿದ ವಸ್ತುಗಳು! ಸವಿ ನೆನಪುಗಳು ಒಂದು ಝಲಕ್

Published : Jul 06, 2025, 12:41 PM IST
90s Kids

ಸಾರಾಂಶ

Childhood memorabilia from the 90s Kids 90ರ ದಶಕದ ಮಕ್ಕಳ ಬಾಲ್ಯ ತಂತ್ರಜ್ಞಾನದೊಂದಿಗೆ ಬೆಳೆದ ವಿಶಿಷ್ಟ ಅನುಭವ. ಆ ಕಾಲದ ಆಟಿಕೆಗಳು, ವಸ್ತುಗಳು ಇಂದಿನ ಮಕ್ಕಳಿಗೆ ಕುತೂಹಲ. 

90s Kids generation Beautiful Memories: ಇದು ಜೆನ್-ಝಡ್ ಜನರೇಷನ್. ಆದರೆ 90s ಕಿಡ್ಸ್ ನೋಡಿದ ಜಗತ್ತನ್ನು ಇಂದಿನ ಮಕ್ಕಳು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇಂದಿನ ಪೋಷಕರು ಅಳುತ್ತಿರುವ ಮಗುವಿನ ಕೈಗೊಂದು ಮೊಬೈಲ್ ನೀಡಿ ಸುಮ್ಮನಾಗಿಸುತ್ತಾರೆ. ಹಾಗಾಗಿ ಇಂದಿನ ಮಕ್ಕಳಿಗೆ ತಂತ್ರಜ್ಞಾನವಿಲ್ಲದ ಜಗತ್ತು ಹೇಗಿರುತ್ತೆ ಅನ್ನೋದು ಅನುಭವಕ್ಕೆ ಬಂದಿರಲ್ಲ. ಆದ್ರೆ 90s ಕಿಡ್ಸ್ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಬೆಳವಣಿಗೆಯಾದವರು. ಆದ್ದರಿಂದ 90ರ ದಶಕದಲ್ಲಿ ಹುಟ್ಟಿರುವ ಜನರನ್ನು ವಿಶೇಷ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅಂದಿನ ಆಟಗಳು, ಮಕ್ಕಳು ಬಳಸುತ್ತಿದ್ದ ವಸ್ತುಗಳು ಇತಿಹಾಸ ಪುಟ ಸೇರಿಕೊಂಡಿವೆ.

90ರ ದಶಕದಲ್ಲಿ ಜನಿಸಿದವರು ಬಹುತೇಕರು ಈ ಸಮಯದಲ್ಲಿ ಪೋಷಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಆದರೂ ತಮ್ಮ ಬಾಲ್ಯದಲ್ಲಿನ ಅಪರೂಪದ ವಸ್ತುಗಳನ್ನು ಕಂಡ್ರೆ ಭಾವುಕರಾಗುತ್ತಾರೆ. ಅಂದಿನ ವಸ್ತುಗಳು ದಿನನಿತ್ಯ ಜೀವನದ ಭಾಗವಾಗಿರುತ್ತಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ 90s ಕಿಡ್ಸ್‌ಗೆ ಸಂಬಂಧಿಸಿದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿರುತ್ತವೆ. ಈ ಲೇಖನದಲ್ಲಿ 90s ಕಿಡ್ಸ್ ಬಾಲ್ಯವನ್ನು ಹ್ಯಾಪಿ ಹ್ಯಾಪಿಯಾಗಿಸಿದ ವಸ್ತುಗಳನ್ನು ನೋಡೋಣ ಬನ್ನಿ.

ಬಾಲ್ಯವನ್ನು ಹ್ಯಾಪಿ ಹ್ಯಾಪಿಯಾಗಿಸಿದ ವಸ್ತುಗಳ ಪಟ್ಟಿ

1.ಟಿವಿ ಆಂಟೇನಾ: ಇಂದು ಎಲ್ಲರೂ ಮನೆಯಲ್ಲಿಯೂ ಸ್ಮಾರ್ಟ್‌ ಟಿವಿ ಕಾಣಬಹುದು. ಆದ್ರೆ 90ರ ದಶಕದಲ್ಲಿ ಊರಿನಲ್ಲಿ ಬೆರಳಣಿಕೆ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಟಿವಿ ಇರೋ ಮನೆಗಳ ಮೇಲೊಂದು ಆಂಟೇನಾ ಅಳವಡಿಕೆ ಮಾಡಲಾಗುತ್ತಿತ್ತು. ಕನೆಕ್ಷನ್ ಲಭ್ಯವಾಗದಿದ್ರೆ ಮನೆ ಮೇಲೊಬ್ಬರು ನಿಂತು ತಿರುಗಿಸುತ್ತಿದ್ದರು. ಕೆಳಗಿನಿಂದ ಒಬ್ಬರು ಚಾನೆಲ್ ಬರುತ್ತಿದೆಯಾ ಎಂದು ಚೆಕ್ ಮಾಡುತ್ತಿದ್ದರು.

2.ಟೇಪ್ ರೆಕಾರ್ಡ್: ಈ ಹಿಂದೆ ಹಾಡುಗಳನ್ನು ಕೇಳಲು ಟೇಪ್ ರೆಕಾರ್ಡ್ ಬಳಕೆ ಮಾಡಲಾಗುತ್ತಿತ್ತು. ಹೊರ ಬಂದ ರೀಲ್‌ನ್ನು ಪೆನ್ನು ಬಳಸಿ ಸರಿಪಡಿಸಲಾಗುತ್ತಿತ್ತು. ಕೆಲವು ಟೇಪ್‌ಗಳಲ್ಲಿ ನಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲಾಗುತ್ತಿತ್ತು.

3.ರೇಡಿಯೋ ಕಮ್ ಬ್ಯಾಟರಿ: ಟೇಪ್ ರೆಕಾರ್ಡ್ ಅಪ‌ಡೇಟ್ ವರ್ಷನ್ ಇದಾಗಿತ್ತು. ಕೆಂಪು ಬಣ್ಣದ ಈ ಮಷಿನ್ ರೇಡಿಯೋ, ಟೇಪ್ ರೆಕಾರ್ಡ್ ಮತ್ತು ಚಾರ್ಜಿಂಗ್ ಬ್ಯಾಟರಿಯಾಗಿ ಕೆಲಸ ಮಾಡುತ್ತಿತ್ತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಶಿಫ್ಟ್ ಮಾಡಬಹುದಿತ್ತು.

4.ಗೋಲಿಗಳು: ಇಂದಿನ ನಗರ ಪ್ರದೇಶದ ಮಕ್ಕಳಿಗೆ ಗೋಲಿ ಅಂದ್ರೆ ಏನು ಅಂತ ಗೊತ್ತಿಲ್ಲ. 90s ಕಿಡ್ಸ್ ಬಾಲ್ಯದಲ್ಲಿ ಗೋಲಿಗಳು ಮಹತ್ವದ ಪಾತ್ರ ಪ್ರಮುಖವಾಗಿದೆ. ಈ ಗೋಲಿಗಳನ್ನು ಬಳಸಿ ವಿವಿಧ ಆಟಗಳನ್ನು ಆಡಲಾಗುತ್ತಿತ್ತು.

5.ನೋಕಿಯಾ 1100, 1600 ಸೆಟ್ : 90s ಕಿಡ್ಸ್ ನೋಡಿದ ಮೊಬೈಲ್‌ಗಳಿವು. ಈ ಮೊಬೈಲ್‌ನಲ್ಲಿದ್ದ ಸ್ನೇಕ್ ಗೇಮ್ ಆಡಲು ಮಕ್ಕಳು ಗಲಾಟೆ ಮಾಡುತ್ತಿದ್ದರು. ನೆಟ್‌ವರ್ಕ್‌fಗಾಗಿ ಮನೆಯ ಎತ್ತರ ಪ್ರದೇಶದಲ್ಲಿ ಮೊಬೈಲ್‌ಗಳನ್ನು ಇರಿಸಲಾಗುತ್ತಿತ್ತು.

6.ಸೀಮೆಎಣ್ಣೆ ದೀಪ, ಕಂದೀಲು, ಗ್ಯಾಸ್ ಲೈಟ್: ವಿದ್ಯುತ್ ಕಡಿತಗೊಂಡಾಗ ಸೀಮೆಎಣ್ಣೆ ದೀಪವೇ ಆಧಾರವಾಗಿರುತ್ತಿತ್ತು. ಗಾಜಿನ ಬಾಟೆಲ್‌ನಲ್ಲಿ ಸೀಮೆಎಣ್ಣೆ ತುಂಬಿಸಿ, ಮುಚ್ಚಳಕ್ಕೊಂಡು ರಂಧ್ರ ಮಾಡಿ, ಕಾಟನ್ ಬಟ್ಟೆ ಬಳಸಿ ದೀಪ ಮಾಡಲಾಗುತ್ತಿತ್ತು. ಇನ್ನು ವಿಶೇಷ ವಿನ್ಯಾಸದ ಕಂದೀಲುಗಳಿರುತ್ತಿದ್ದವು. 90ರ ದಶಕದ ಸಿರಿವಂತರ ಮನೆಯಲ್ಲಿ ಗ್ಯಾಸ್‌ಲೈಟ್‌ಗಳು ಕಂಡು ಬರುತ್ತಿದ್ದವು.

7.ಕಬ್ಬಿಣದ ಇಸ್ತ್ರಿ ಪೆಟ್ಟಿಗೆ: 90ರ ದಶಕದಲ್ಲಿ ಬಟ್ಟೆಗಳನ್ನು ಇಸ್ತ್ರಿ ಮಾಡಿಸಲು ಅಂಗಡಿಗೆ ಹೋಗಬೇಕಿತ್ತು. ಈ ಅಂಗಡಿಯಲ್ಲಿರುತ್ತಿದ್ದ ಕಬ್ಬಿಣದ ಇಸ್ತ್ರಿ ಪೆಟ್ಟಿಗೆ 90ರ ದಶಕದ ಮಕ್ಕಳ ಬಾಲ್ಯದೊಂದಿಗೆ ಬೆಸೆದುಕೊಂಡಿದೆ.

8.ಪೋಸ್ಟ್ ಬಾಕ್ಸ್ ಮತ್ತು ಪತ್ರ ಬರೆಯೋದು: ಈ ಹಿಂದೆ ಪತ್ರ ಬರೆಯೋದು ಅಂದ್ರೆ ಗೌರವದ ಕೆಲಸವಾಗಿತ್ತು. ಪತ್ರ ಬರೆಯುವ ಮತ್ತು ಮಕ್ಕಳಿಗೆ ವಿಶೇಷ ಬಹುಮಾನ ಸಿಗುತ್ತಿತ್ತು. ಆದ್ರೆ ಇಂದು ಕುಶಲ ಕ್ಷೇಮ ವಿಚಾರಿಸಿ ಪತ್ರ ಬರೆಯೋದು ಸಂಪೂರ್ಣವಾಗಿ ಇತಿಹಾಸದ ಪುಟ ಸೇರಿದೆ.

9.ಗೇಮಿಂಗ್ ಆಟಿಕೆ: 90ರ ದಶಕದ ಆರಂಭದಲ್ಲಿ ಬಂದ ಈ ಗೇಮಿಂಗ್ ಆಟಿಕೆ ಸಂಚಲನವನ್ನು ಸೃಷ್ಟಿಸಿತ್ತು. ಚಿಕ್ಕ ಡಿಸ್‌ಪ್ಲೇಯ ಈ ಗೇಮಿಂಗ್ ಟಾಯ್ ಇಂದು ಮಾಯವಾಗಿವೆ.

10.ಕೋಲ್‌ಗೇಟ್ ಅಥವಾ ಮಂಕಿ ಟೀಥ್ ಪೌಡರ್: ಕೋಲ್‌ಗೇಟ್ ಮತ್ತು ಮಂಕಿ ಪೌಡರ್ ಬಳಕೆ ಭಾಗಶಃ ಕಡಿಮೆಯಾಗಿದೆ. ಈ ಪೌಡರ್ ಅಂಗೈಯಲ್ಲಿ ಹಾಕಿಕೊಂಡು ಬೆರಳುಗಳಿಂದ ಹಲ್ಲುಜ್ಜಲಾಗುತ್ತಿತ್ತು.

11. ಒಂದು, ಎರಡು ರೂಪಾಯಿ ನೋಟುಗಳು, 10 ಪೈಸೆ, 20 ಪೈಸೆ, 25 ಪೈಸೆ ಮತ್ತು 50 ಪೈಸೆ ನಾಣ್ಯಗಳು: ಇಂದು ಎಲ್ಲರೂ ಯಾವುದೇ ಅಂಗಡಿಗೆ ಹೋದ್ರೆ ಯುಪಿಐ ಬಳಸಿ ಪಾವತಿ ಮಾಡುತ್ತಾರೆ. ಈ ಹಿಂದೆ ಒಂದು, ಎರಡು ರೂಪಾಯಿ ನೋಟುಗಳು, 10 ಪೈಸೆ, 20 ಪೈಸೆ, 25 ಪೈಸೆ ಮತ್ತು 50 ಪೈಸೆ ನಾಣ್ಯಗಳು ಚಾಲ್ತಿಯಲ್ಲಿದ್ದವು.

12.ಸೈಕಲ್, ಬೈಕ್ ಟಯರ್‌ಗಳು, ಕಾಗದದ ದೋಣಿ, ಕಲ್ಲುಗಳ ಲಗೋರಿ, ಪ್ಲಾಸ್ಟಿಕ್‌ ಕವರ್ ಚೆಂಡು: ಇಂದಿನಂತೆ ಮಕ್ಕಳಿಗೆ 90s ಕಿಡ್ಸ್‌ಗೆ ಆಟಿಕೆಯಲ್ಲಿ ಹೆಚ್ಚು ಆಯ್ಕೆಗಳಿರಲಿಲ್ಲ. ಸೈಕಲ್/ಬೈಕ್ ಟಯರ್‌ಗಳನ್ನು ಆಟಿಕೆಯಾಗಿ ಬಳಕೆ ಮಾಡಲಾಗುತ್ತಿತ್ತು. ಮಳೆ ಬಂದ್ರೆ ಕಾಗದದ ದೋಣಿ ಬರುತ್ತಿತ್ತು. ಕಲ್ಲುಗಳನ್ನು ಕೆತ್ತಿ ಒಡೆದು ಲಗೋರಿ ಮಾಡಿಕೊಳ್ಳಲಾಗುತ್ತಿತ್ತು. ಪ್ಲಾಸ್ಟಿಕ್ ಕವರ್‌ಗಳನ್ನು ಒಂದರ ಮೇಲೊಂದು ಸುತ್ತಿಯೇ ಚೆಂಡು ಮಾಡಿಕೊಳ್ಳಲಾಗುತ್ತಿತ್ತು.

13. ಕುರುಕುಲು ತಿಂಡಿ, ಪಾಪಡ್, ಹುಣಸೆಹಣ್ಣಿನ ಸ್ಪೂನ್: 90-80ರ ದಶಕದಲ್ಲಿ ಸಿಗುತ್ತಿದ್ದ ತಿಂಡಿಗಳಿಂದು ಬದಲಾಗಿವೆ. ಐದು ಬೆರಳುಗಳಿಗೆ ಪಾಪಡ್ ಹಾಕಿಕೊಂಡು ಎಲ್ಲರಿಗೂ ತೋರಿಸುತ್ತಾ ತಿನ್ನುವ ಮಜಾ ಇಂದಿನ ಮಕ್ಕಳಿಗೆ ಖಂಡಿತ ಗೊತ್ತಾಗಲ್ಲ

14.ಟೆಲಿವಿಷನ್, ರೇಡಿಯೋ: ಒಂದು ಮನೆಯಲ್ಲಿ ಟಿವಿ ಇದ್ರೆ ಎಲ್ಲರೂ ಒಟ್ಟಾಗಿ ಕುಳಿತು ನೋಡುತ್ತಿದ್ದರು. ವಾರ್ತೆ ಸಮಯಕ್ಕೆ ಅಕ್ಕ-ಪಕ್ಕದ ಮನೆಯವರು ಬಂದು ಸೇರಿಕೊಳ್ಳುತ್ತಿದ್ದರು.

15.ಲ್ಯಾಂಡ್‌ಲೈನ್/ಕಾಯಿನ್ ಬಾಕ್ಸ್/ಎಸ್‌ಟಿಡಿ ಕಾಲ್: ಅಂದು ಒಂದು ಏರಿಯಾಗೆ ಒಂದೇ ಲ್ಯಾಂಡ್‌ಲೈನ್ ಇರೋದು. ಇಡೀ ಏರಿಯಾದಲ್ಲಿರುವ ಮನೆಗಳ ಕಾಲ್ ಒಂದೇ ಸಂಖ್ಯೆಗೆ ಬರುತ್ತಿದ್ದವು. ಎಸ್‌ಟಿಡಿ ಬೂತ್, ಕಾಯಿನ್ ಬಾಕ್ಸ್‌ಗಳು ಮರೆಯಾಗಿವೆ

ನಿಮ್ಮ ಬಾಲ್ಯವನ್ನು ಸುಂದರಗೊಳಿಸಿದ ವಸ್ತುಗಳು ಈ ಪಟ್ಟಿಯಲ್ಲಿ ಇರದಿದ್ರೆ ಕಮೆಂಟ್ ಮಾಡೋದನ್ನು ಮರೆಯಬೇಡಿ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!