ಸೊಸೆ ಹಾಗೂ ಅತ್ತೆ ಸಂಬಂಧ ತಾಯಿ – ಮಗಳ ಸಂಬಂಧದಂತೆ ಇರಬೇಕು ಎನ್ನುತ್ತಾರೆ. ಹೊಸ ಮನೆಗೆ ಹೊಂದಿಕೊಳ್ಳಲು ಕೆಲ ವಧು ಪ್ರಯತ್ನ ಕೂಡ ನಡೆಸ್ತಾಳೆ. ಆದ್ರೆ ಅತ್ತೆಯ ಕೆಲ ವರ್ತನೆಯಿಂದ ಇದು ಸಾಧ್ಯವಾಗೋದಿಲ್ಲ.
ಮದುವೆ ಇಬ್ಬರ ಮಧ್ಯೆ ಅಲ್ಲ ಎರಡು ಕುಟುಂಬದ ಮಧ್ಯೆ ಆಗುವಂತಹದ್ದು. ಮದುವೆಯಾದ್ಮೇಲೆ ತಂದೆ- ತಾಯಿಯನ್ನು ಬಿಟ್ಟು ಬರುವ ಮಹಿಳೆ, ಹೊಸ ಮನೆ, ಹೊಸ ಸಂಬಂಧ, ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಮದುವೆಯಾದ ಆರಂಭದಲ್ಲಿ ಆದರ್ಶ ಸೊಸೆಯಾಗ್ಬೇಕೆಂಬ ಬಯಕೆ ಮಹಿಳೆಗಿರುತ್ತದೆ. ಅದೇ ರೀತಿ ಆದರ್ಶ ಅತ್ತೆಯಾಗ್ಬೇಕೆಂಬ ಆಸೆಯನ್ನು ಅತ್ತೆ ಕೂಡ ಹೊಂದಿರುತ್ತಾಳೆ. ಆದ್ರೆ ದಿನ ಕಳೆದಂತೆ ಇದು ಕಷ್ಟವಾಗುತ್ತದೆ. ಬಹುತೇಕ ಮನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳೋದು ಅತ್ತೆ – ಸೊಸೆ ಮಧ್ಯೆಯೇ. ಅತ್ತೆ – ಸೊಸೆ ಮಧ್ಯೆ ಗಲಾಟೆ ಶುರುವಾಗಲು, ಆದರ್ಶ ಸೊಸೆ ಎಂಬ ಪಟ್ಟ ವಧುವಿಗೆ ಸಿಗದೆ ಇರಲು ಅತಿ ಮುಖ್ಯ ಕಾರಣ ಅತ್ತೆ ಅಂದ್ರೆ ತಪ್ಪಾಗಲಾರದು. ಅತ್ತೆಯ ಅಭದ್ರತೆ ಮತ್ತು ಅಹಂಕಾರದಿಂದ ಆಕೆ ಮಾಡುವ ತಪ್ಪು, ಇಬ್ಬರ ಮಧ್ಯೆ ಗಲಾಟೆ ಹೆಚ್ಚಾಗಲು ಕಾರಣವಾಗುತ್ತದೆ. ಬಹುತೇಕರ ಮನೆಯಲ್ಲಿ ಅತ್ತೆ – ಸೊಸೆ ಗಲಾಟೆಗೆ ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.
ಹೊಟ್ಟೆ (Stomach) ಉರಿಸಿಕೊಳ್ಳುವ ಅತ್ತೆ : ಹೆತ್ತು ಹೊತ್ತ ತಾಯಿಗೆ ಮಗನ ಮೇಲೆ ವಿಶೇಷ ಪ್ರೀತಿ (Love), ಮಮತೆಯಿರುತ್ತದೆ. ಸದಾ ಮಗನ ಆರೋಗ್ಯ, ಆಹಾರ, ಆತನ ಆಗುಹೋಗುಗಳನ್ನು ಕೇಳ್ತಾ ಇರುವ ತಾಯಿಗೆ ಸೊಸೆ (Daughter in law) ಬರುತ್ತಿದ್ದಂತೆ ಕೈ ಖಾಲಿಯಾದ ಅನುಭವವಾಗುತ್ತದೆ. ಮಗ, ಪತ್ನಿ ಹಿಂದೆ ಮುಂದೆ ಸುತ್ತೋದನ್ನು ನೋಡಲು ಆಕೆಗೆ ಸಾಧ್ಯವಾಗೋದಿಲ್ಲ. ಇದು ಎಲ್ಲರ ಜೀವನದಲ್ಲೂ ಆಗುವಂತಹದ್ದು ಎನ್ನುವ ವಾಸ್ತವ ಆಕೆಗೆ ತಿಳಿದಿದ್ದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗೋದಿಲ್ಲ. ಸೊಸೆ ಮಗನನ್ನು ತನ್ನಿಂದ ಕಿತ್ತುಕೊಳ್ಳುತ್ತಾಳೆ ಎಂಬ ಭಯ ಬಹುತೇಕ ಮಹಿಳೆಯರಿಗೆ ಕಾಡುತ್ತದೆ. ಮಗ ಸೊಸೆ ಒಟ್ಟಿಗೆ ಹೆಚ್ಚು ಸಂತೋಷವಾಗಿರುವುದನ್ನು ನೋಡಿದಾಗ ಆಕೆ ಭಯ ದುಪ್ಪಟ್ಟಾಗುತ್ತದೆ. ಅಭದ್ರತೆಯ ಕಾರಣದಿಂದಾಗಿ ಮಗ (Son) – ಸೊಸೆಯನ್ನು ದೂರ ಮಾಡುವ ಪ್ರಯತ್ನ ಶುರು ಮಾಡ್ತಾಳೆ. ಇಬ್ಬರ ಮಧ್ಯೆ ಸಣ್ಣ ಸಣ್ಣ ಜಗಳಕ್ಕೆ ತಾಯಿಯೇ ಕಾರಣವಾಗ್ತಾಳೆ. ಇದು ಸೊಸೆಗೆ ಸಹಿಸಲು ಸಾಧ್ಯವಾಗೋದಿಲ್ಲ. ಅತ್ತೆ, ತನ್ನ ಪ್ರಣಯದ ವಿಲನ್ ಎಂದು ಸೊಸೆ ಭಾವಿಸ್ತಾಳೆ. ಅತ್ತೆಗೆ ಗೌರವ, ಪ್ರೀತಿ ನೀಡೋದಿಲ್ಲ. ದಿನಕಳೆದಂತೆ ಇಬ್ಬರ ಮಧ್ಯೆ ಅಂತರ ಹೆಚ್ಚಾಗುತ್ತದೆ.
undefined
Trending : ಕೂದಲು ಹಿಡಿದು ಕಿತ್ತಾಡ್ತಿದ್ದ ಅವಳಿ ಮಕ್ಕಳಿಗೆ ತಾಯಿ ಮಾಡಿದ್ದೇನು?
ತವರಿನ ಸಂಪರ್ಕಕ್ಕೆ ಕಡಿವಾಣ : ಕೆಲ ಅತ್ತೆಯಂದಿರು ಸೊಸೆಯ ಪ್ರತಿ ಹೆಜ್ಜೆಯನ್ನು ನಿಯಂತ್ರಿಸಲು ಮುಂದಾಗ್ತಾರೆ. ಆಕೆ ಪದೇ ಪದೇ ತವರಿಕೆ ಕರೆ ಮಾಡುವಂತಿಲ್ಲ, ಮಾತನಾಡುವಂತಿಲ್ಲ ಎಂಬ ನಿಯಮ ಹಾಕ್ತಾರೆ. ಇದು ಸೊಸೆಯ ಮನಸ್ಸು ಮುರಿಯಲು ಕಾರಣವಾಗುತ್ತದೆ. ಹೀಗಾದಾಗ, ಸೊಸೆ ಎಂದಿಗೂ ತನ್ನ ಅತ್ತೆಯನ್ನು ಅಮ್ಮನ ಸ್ಥಾನದಲ್ಲಿ ನೋಡಲು ಬಯಸೋದಿಲ್ಲ.
ಸೊಸೆಯನ್ನು ನೆಂಟರಂತೆ ನೋಡುವ ಅತ್ತೆ : ಸೊಸೆ ಮನೆಗೆ ಬಂದ್ಮೇಲೂ ತನ್ನದೇ ಆಡಳಿತ ನಡೆಯಬೇಕೆಂದು ಅತ್ತೆಯಂದಿರುವ ಬಯಸ್ತಾರೆ. ಸೊಸೆ, ಮನೆಗಾಗಿ ಒಂದು ವಸ್ತು ತಂದ್ರೂ ಅದನ್ನು ಸರಿಯಾಗಿ ಒಪ್ಪಿಕೊಳ್ಳೋದಿಲ್ಲ. ಆಕೆ ಮಾಡಿದ ಅಡುಗೆಯಿಂದ ಹಿಡಿದು, ಪ್ರೀತಿಯಿಂದ ಅತ್ತೆಗಾಗಿ ತಂದ ಬಟ್ಟೆಯನ್ನು ಕೂಡ ಖುಷಿಯಿಂದ ಸ್ವೀಕರಿಸೋದಿಲ್ಲ. ಸೊಸೆಯನ್ನು ನೆಂಟರಂತೆ ನೋಡ್ತಾಳೆ. ಆಕೆಗೆ ಮನೆಯಲ್ಲಿ ಸ್ವಾತಂತ್ರ್ಯ ನೀಡೋದಿಲ್ಲ. ಮನೆಯ ಯಾವುದೇ ಸಮಸ್ಯೆಯನ್ನು ಸೊಸೆ ಜೊತೆ ಹಂಚಿಕೊಳ್ಳದೆ ಆಕೆಯನ್ನು ದೂರದವರಂತೆ ನೋಡಲಾಗುತ್ತದೆ. ಇದು ಸೊಸೆ ಮೇಲೆ ಪರಿಣಾಮ ಬೀರುತ್ತದೆ. ಅತ್ತೆ ನನ್ನನ್ನು ಮನೆಯವಳಂತೆ ನೋಡ್ತಿಲ್ಲ ಎಂಬ ನೋವು ಸೊಸೆಯನ್ನು ಕಾಡುತ್ತದೆ. ತನ್ನ ಮನೆ ಎಂಬ ಪ್ರೀತಿ ಬೆಳೆಸಿಕೊಳ್ಳಲು ಅತ್ತೆಯ ವರ್ತನೆ ಅಡ್ಡಿಯಾಗುತ್ತದೆ.
Viral Photo : ಇಂಟರ್ನೆಟ್ ಗಮನ ಸೆಳೆದ ಅಪ್ಪ – ಮಾವನ ನಿದ್ರೆ ಫೋಟೋ
ಅಮ್ಮ – ಅಪ್ಪ ಕೂಡ ಕಾರಣ : ಅಪ್ಪ – ಅಮ್ಮನನ್ನು ಪ್ರತಿಯೊಬ್ಬರೂ ಪ್ರೀತಿಸ್ತಾರೆ, ಗೌರವಿಸ್ತಾರೆ. ಸೊಸೆಗೆ ಕೆಲಸ ಬಂದಿಲ್ಲ ಎಂದಾಗ ಆಕೆ ಅಪ್ಪ – ಅಮ್ಮನನ್ನು ನಿಂದಿಸಬಾರದು. ಅತ್ತೆಯಾದವಳು ಬೀಗರ ಸುದ್ದಿಗೆ ಬಂದಾಗ ಸೊಸೆ ಕೋಪಗೊಳ್ತಾರೆ.