ಹೆಂಡ್ತಿ ನೋಡೋಕೆ ತುಂಬಾ ಸುಂದರವಾಗಿದ್ರೆ ಗಂಡನಿಗೆ ಡೌಟ್ ಜಾಸ್ತೀನಾ?

By Suvarna News  |  First Published Aug 11, 2023, 3:53 PM IST

ತುಂಬಾ ಬೆಳ್ಳಗಿರುವ ಹುಡುಗಿಗೆ ಕಪ್ಪನೆಯ ಹುಡುಗ, ಉದ್ದವಿರುವ ಹುಡುಗನಿಗೆ ತುಂಬಾ ಕುಳ್ಳನೆಯ ಹುಡುಗಿ ಹೀಗೆ ಗಂಡ-ಹೆಂಡತಿಯ ಮಧ್ಯೆ ತುಂಬಾ ರೂಪ-ಗುಣ ಎಲ್ಲದರಲ್ಲೂ ತುಂಬಾ ವ್ಯತ್ಯಾಸವಿರುತ್ತೆ. ಹೀಗಾಗಿಯೇ ಹೆಂಡ್ತಿ ನೋಡೋಕೆ ಚೆನ್ನಾಗಿದ್ರೆ ಗಂಡನಿಗೆ ಡೌಟ್ ಜಾಸ್ತಿ ಅಂತಾರೆ. ಅದು ನಿಜಾನ?
 


ದಾಂಪತ್ಯ ಅಂದ್ರೆ ಗಂಡ-ಹೆಂಡತಿ ಇಬ್ಬರು ಅನ್ಯೋನ್ಯವಾಗಿರುವುದು. ಅಲ್ಲಿ ಯಾವುದೇ ಸ್ವಾರ್ಥ, ಸುಳ್ಳು, ನಂಬಿಕೆ ದ್ರೋಹ, ಮೋಸಕ್ಕೆ ಅವಕಾಶವಿಲ್ಲ. ಆದ್ರೆ ಇತ್ತೀಚಿನ ದಾಂಪತ್ಯ ಜೀವನದಲ್ಲಿ ಇದೆಲ್ಲವೂ ಇದೆ. ಸಾಲದ್ದಕ್ಕೆ ಅನೈತಿಕ ಸಂಬಂಧವೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಮದುವೆಯಾಗುವ ಹುಡುಗ ಅಥವಾ ಹುಡುಗಿ ಹೀಗೆಯೇ ಇರಬೇಕು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ರೂಪ, ಗುಣ, ಸ್ವಭಾವದ ಬಗ್ಗೆ ನಿರ್ಧಿಷ್ಟ ಅಭಿಪ್ರಾಯವಿರುತ್ತದೆ. ಆದರೆ ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅಂತಾರಲ್ಲ. ಹೀಗಾಗಿ ಜೋಡಿಗಳು ಸಹ ತುಂಬಾ ವ್ಯತ್ಯಸ್ಥವಾಗಿರುವುದನ್ನು ನಾವು ನೋಡಿರಬಹುದು. ತಾಳ-ಮೇಳವಿಲ್ಲದ ಜೋಡಿ ಅಂತಾರಲ್ಲ ಹಾಗೆ. ಇಬ್ಬರನ್ನೂ ಎಷ್ಟೇ ಬಾರಿ ತಿರುಗಿಸಿ ಮುರುಗಿಸಿ ನೋಡಿದರೂ ಯಾವುದೇ ರೀತಿ ಹೊಂದಾಣಿಕೆಯಾಗುವುದಿಲ್ಲ.

ತುಂಬಾ ಬೆಳ್ಳಗಿರುವ ಹುಡುಗಿಗೆ ಕಪ್ಪನೆಯ ಹುಡುಗ, ಉದ್ದವಿರುವ ಹುಡುಗನಿಗೆ ತುಂಬಾ ಕುಳ್ಳನೆಯ ಹುಡುಗಿ ಹೀಗೆ ಗಂಡ-ಹೆಂಡತಿಯ (Husband-wife) ಮಧ್ಯೆ ತುಂಬಾ ರೂಪ-ಗುಣ ಎಲ್ಲದರಲ್ಲೂ ತುಂಬಾ ವ್ಯತ್ಯಾಸವಿರುತ್ತೆ. ಹೀಗಾಗಿಯೇ ಕೆಲವೊಂದು ಜೋಡಿಗಳನ್ನು ನೋಡಿದಾಗ ಇವ್ರು ನಿಜವಾಗ್ಲೂ ಗಂಡ-ಹೆಂಡ್ತೀನಾ ಅನ್ನೋ ಅನುಮಾನ (Doubt) ಮೂಡುವುದು ಸಹಜ. 

Tap to resize

Latest Videos

ಯಪ್ಪಾ..! ಇವಳೆಂಥವಳು.. ಸಾಯೋವಾಗ್ಲೂ ಗಂಡನ ಮೇಲಿನ ಸೇಡು ತೀರಿಸಿಕೊಳ್ಳೋದಾ?

ಅನೈತಿಕ ಸಂಬಂಧ ಹೊಂದಿರುವ ಶಂಕೆ, ಸುಂದರಿ ಪತ್ನಿಯನ್ನೇ ಕೊಂದ ಗಂಡ
ಮಂಡ್ಯದಲ್ಲಿ ಇವತ್ತು ನಡೆದ ಘಟನೆಯೂ ಇದೇ ರೀತಿಯ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲುವಿನಲ್ಲಿ ವ್ಯಕ್ತಿಯೊಬ್ಬ ಹೆಂಡ್ತಿ (Wife)ಯನ್ನು ರೀಲ್ಸ್ ಮಾಡ್ತಿದ್ದಳು ಅನ್ನೋ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಸುಂದರವಾಗಿದ್ದ ಪತ್ನಿ ರೀಲ್ಸ್ ಮಾಡ್ತಿದ್ಲು. ಮಾತ್ರವಲ್ಲ, ತನ್ನ ಸ್ನೇಹಿತ (Friends)ರೊಂದಿಗೆ ಚಾಟಿಂಗ್‌ ಮಾಡುವ ಅಭ್ಯಾಸ ಕೂಡ ಇರಿಸಿಕೊಂಡಿದ್ದಳು. ಪತ್ನಿಯ ಅತಿಯಾದ ಮೊಬೈಲ್‌ ಗೀಳು ಹಾಗೂ ಆಕೆಯ ರೀಲ್ಸ್‌ನ ಅಭ್ಯಾಸವನ್ನು ನೋಡಿ ಗಂಡನಿಗೆ ಅನುಮಾನ ಶುರುವಾಗಿತ್ತು. ಪರಪುರುಷನೊಂದಿಗೆ ಅನೈತಿಕ ಸಂಬಂಧ (Extra marital affair) ಹೊಂದಿರುವ ಶಂಕೆ ವ್ಯಕ್ತಪಡಿಸಿದ ಆತ, ಪ್ರೀತಿಸಿ ಮದುವೆಯಾಗಿದ್ದ ಮಡದಿಯನ್ನೇ ಕೊಂದಿದ್ದಾನೆ.26 ವರ್ಷದ ಪೂಜಾ, ಗಂಡನಿಂದಲೇ ಕೊಲೆ (Murder)ಯಾಗಿರುವ ಮಹಿಳೆ. 33 ವರ್ಷದ ಶ್ರೀನಾಥ್‌ ಪತ್ನಿಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಂದಿದ್ದಾನೆ.

9 ವರ್ಷದ ಹಿಂದೆ ಪೂಜಾ ಹಾಗೂ ಶ್ರೀನಾಥ್‌ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಕೆಲ ವರ್ಷಗಳ ಕಾಲ ಬಹಳ ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿಗೆ ಹೆಣ್ಣು ಮಗು ಕೂಡ ಇದೆ. ಆದರೆ, ಪೂಜಾಗೆ ಮೊದಲಿನಿಂದಲೂ ಟಿಕ್‌ ಟಾಕ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುವ ಅಭ್ಯಾಸ ಇರಿಸಿಕೊಂಡಿದ್ದಳು. ರೀಲ್ಸ್‌ ಮಾಡುವ ಜೊತೆಗೆ ಅತಿಯಾಗಿ ಫೋನ್‌ ಕೂಡ ಬಳಕೆ ಮಾಡುತ್ತಿದ್ದರು. ಈ ವಿಚಾರವಾಗಿಯೇ ಗಂಡ ಹೆಂಡತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಪರಪುರುಷನೊಂದಿಗೆ ಈಕೆ ಸಂಬಂಧ ಇದ್ದಿರಬಹುದು ಎಂದು ಶ್ರೀನಾಥ್‌ಗೆ ಶಂಕೆ ಬಂದಿತ್ತು. ಈ ಕುರಿತಾಗಿಯೇ ಆಕೆಯ ಜತೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ.

Mandya: 'ಜೋಕೆ ನಾನು ಬಳ್ಳಿಯ ಮಿಂಚು..' ಎಂದು ರೀಲ್ಸ್‌ ಮಾಡ್ತಿದ್ದ ಪತ್ನಿಯ ಕೊಂದು ನದಿಗೆಸದ ಪತಿ!

ಹೆಂಡ್ತಿ ನೋಡೋಕೆ ಚೆನ್ನಾಗಿದ್ರೆ ಗಂಡನಿಗೆ ಡೌಟ್ ಜಾಸ್ತೀನಾ?
ಹೆಂಡ್ತಿ ನೋಡೋಕೆ ಸುಂದರವಾಗಿದ್ದರೆ ಸಹಜವಾಗಿಯೇ ಗಂಡಂದಿರು ಆಕೆಯ ಬಗ್ಗೆ ಹೆಚ್ಚು ಅನುಮಾನ ಪಡುತ್ತಾರೆ ಅನ್ನುತ್ತೆ ಸೈಕಾಲಜಿ. ಇಂಥಾ ಸುಂದರಿಯಾದ ಹೆಂಡತಿಯಿರುವ ಗಂಡಂದಿರು ಪತ್ನಿಯ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರಂತೆ. ಆಕೆ ಮಾರ್ಕೆಟ್‌, ಪಾರ್ಲರ್‌, ಆಫೀಸ್, ರಿಲೇಟಿವ್ಸ್‌ ಮನೆ ಹೀಗೆ ಎಲ್ಲಿ ಹೋದರೂ ಪ್ರಶ್ನೆಯನ್ನು ಕೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರಂತೆ. ಮಾತ್ರವಲ್ಲ ಆಕೆ ಮೊಬೈಲ್ ಬಳಸುವುದು, ಸೋಷಿಯಲ್ ಮೀಡಿಯಾ ಬಳಸುವುದು ಸಹ ಅವರಲ್ಲಿ ಅನುಮಾನ ಹುಟ್ಟು ಹಾಕುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿಯೇ ಸುಂದರವಾದ ಹೆಂಡತಿಯಿರುವವರು ತಮ್ಮ ಹೆಂಡತಿಗೆ ಅನೈತಿಕ ಸಂಬಂಧ ಇದೆ ಅಂದುಕೊಳ್ಳುತ್ತದೆ. ಇದು ಕೆಲವೊಮ್ಮೆ ಕೊಲೆಯಲ್ಲಿ ಕೊನೆಯಾಗುತ್ತದೆ.

click me!