ಸ್ಯಾಲರಿ ಹೈಕ್‌, ಪ್ರಮೋಶನ್ ಬೇಕು ಅಂತ ಹೆಂಡ್ತೀನ ಬಾಸ್ ಜೊತೆ ಮಲಗಲು ಹೇಳಿದ ಗಂಡ!

By Suvarna News  |  First Published Mar 7, 2023, 3:08 PM IST

ಸ್ಯಾಲರಿ ಹೈಕ್, ಪ್ರಮೋಷನ್ ಬೇಕು ಅಂತ ಯಾರಿಗೆ ತಾನೇ ಆಸೆಯಿರಲ್ಲ ಹೇಳಿ. ಅದಕ್ಕಾಗಿ ಬಾಸ್ ಜೊತೆ ಚೆನ್ನಾಗಿ ಮಸ್ಕಾ ಹೊಡೀತಾರೆ. ಆದ್ರೆ ಇಲ್ಲೊಬ್ಬ ತಾನು ಹಾಗೆ ಮಾಡಿದ್ದು ಮಾತ್ರವಲ್ದೆ, ಹೆಂಡ್ತಿಯನ್ನೂ ಬಾಸ್ ಜೊತೆ ಮಲಗು ಅಂದಿದ್ದಾನೆ. ಯಪ್ಪಾ ಇದೇನ್ ವಿಚಿತ್ರ ಅನ್ಬೇಡಿ..ಫುಲ್ ಸ್ಟೋರಿ ಓದಿ ನೋಡಿ..


ಮಹಾರಾಷ್ಟ್ರ: ಔದ್ಯೋಗಿಕ ಜೀವನದಲ್ಲಿ ಬೆಳೆಯೋದು ಅಷ್ಟು ಸುಲಭವಲ್ಲ. ಎಷ್ಟೇ ಟ್ಯಾಲೆಂಟ್ ಇದ್ರೂ ಬಾಸ್ ಮನವೊಲಿಸಲು ಸಾಧ್ಯವಾಗದಿದ್ದರೆ ಕೆಲವೊಮ್ಮೆ ಯಾವುದೇ ಅವಕಾಶಗಳು ಸಿಗದೆ ಹಿಂದೆಯೇ ಉಳಿದುಬಿಡಬೇಕಾಗುತ್ತದೆ. ಪ್ರಮೋಶನ್‌, ಸ್ಯಾಲರಿ ಹೈಕ್ ಯಾವುದೂ ಸಿಗುವುದಿಲ್ಲ. ಕೆಲಸದ ಒತ್ತಡದ ಮಧ್ಯೆ ಇಂಥಾ ಸೌಲಭ್ಯಗಳೂ ಸಿಗದಿದ್ದಾಗ ಜಾಬ್‌ ಬಗ್ಗೆಯೇ ಬೇಸರ ಬಂದು ಬಿಡುತ್ತದೆ. ಹೀಗಾಗಿಯೇ ಬಹುತೇಕರು ಬಾಸ್ ಜೊತೆಗೆ ಚೆನ್ನಾಗಿರುತ್ತಾರೆ. ಬೇಗ ಪ್ರಮೋಶನ್ ಸಿಗಲಿ, ಹೈಕ್ ಚೆನ್ನಾಗಿ ಸಿಗಲಿ ಎಂದು ಚೆನ್ನಾಗಿ ಮಾತನಾಡಿಸುತ್ತಾರೆ. ಅಷ್ಟೇ ಆದರೆ ಪರ್ವಾಗಿರಲ್ಲಿಲ್ಲ. ಆದ್ರೆ ಇಲ್ಲೊಬ್ಬ ಮಾತ್ರ ಸ್ಯಾಲರಿ ಹೈಕ್‌, ಪ್ರಮೋಶನ್ ಬೇಕು ಅಂತ ಹೆಂಡ್ತೀನ ಬಾಸ್ ಜೊತೆ ಮಲಗಲು ಹೇಳಿದ್ದಾನೆ. ಪುಣೆಯಲ್ಲಿ ಇಂಥಾ ವಿಚಿತ್ರ ಘಟನೆ ನಡೆದಿದೆ. 

ಮಧ್ಯಪ್ರದೇಶದ ಇಂದೋರ್‌ನ ಮಹಿಳೆ (Woman)ಯೊಬ್ಬರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅಮಿತ್ ಛಾಬ್ರಾ ಎಂಬುವವರನ್ನ ವಿವಾಹವಾಗಿದ್ದರು. ಮದುವೆಯಾದ (Marriage) ನಂತರ ಸ್ವಲ್ಪ ದಿನ ಈ ದಂಪತಿ (Couple) ಚೆನ್ನಾಗಿ ಸಂಸಾರ ನಡೆಸಿದ್ದಾರೆ. ಆದರೆ ಅಮಿತ್ ನಿಧಾನವಾಗಿ ಕೆಟ್ಟ ಚಟಗಳಿಗೆ ದಾಸನಾಗಿದ್ದಾನೆ. ಬಾಸ್​ ಆಸೆ ಪೂರೈಸುವಂತೆ ಪತ್ನಿಗೇ (Wife) ಒತ್ತಾಯಿಸಿದ್ದಾನೆ.

Tap to resize

Latest Videos

ಮಗನ ಹೆಂಡ್ತಿ ಮೇಲೇನೆ ಲವ್ವಾಗೋಯ್ತು..ಸೊಸೆ ಜೊತೆ ಓಡಿ ಹೋದ ಮಾವ..!

ಪ್ರಮೋಶನ್‌ಗಾಗಿ ಹೆಂಡ್ತೀನ ಬಾಸ್ ಜೊತೆ ಮಲಗು ಎಂದ ಭೂಪ
ಅಮಿತ್​ ತನ್ನ ಬಾಸ್​ ಬಳಿ ಸಂಬಳ ಸಾಕಾಗುತ್ತಿಲ್ಲ, ಹೀಗಾಗಿ ಸ್ಯಾಲರಿ ಹೈಕ್ ಮಾಡಿ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮೇಲಾಧಿಕಾರಿ, ನಿನ್ನ ಹೆಂಡತಿಯನ್ನು ನನ್ನ ಜೊತೆ ಮಲಗಲು ಕಳುಹಿಸು, ಬಡ್ತಿ (Promotion) ಜೊತೆಗೆ ಹಲವು ಸೌಲಭ್ಯ ಸಿಗುತ್ತದೆ ಎಂದು ಹೇಳಿದ್ದಾರೆ. ಬಾಸ್‌ನ ವಿಲಕ್ಷಣವಾದ ಬೇಡಿಕೆಯಿಂದ ಅಮಿತ್‌ಗೆ ಸಿಟ್ಟು ಬರಬೇಕಿತ್ತು. ಆದರೆ ಅಮಿತ್‌ ಬಾಸ್‌ಗೆ ಏನನ್ನೂ ಹೇಳದರೆ, ಬದಲಿಗೆ ತನ್ನ ಹೆಂಡತಿಯನ್ನೇ ಬಾಸ್ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ. ಒಂದು ರಾತ್ರಿ ಬಾಸ್ ಜೊತೆ ಕಳೆದರೆ ಬಡ್ತಿ ಜೊತೆಗೆ ಮತ್ತಿತರ ಸೌಲಭ್ಯ ಸಿಗುತ್ತದೆ ಎಂದು ಅಮಿತ್ ಪತ್ನಿಗೆ ಬಲವಂತ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಬೇಗನೇ ಪ್ರಮೋಷನ್ ಹಾಗೂ ಸ್ಯಾಲರಿ ಹೈಕ್ ಆಗಲಿ ಅಂತ ವ್ಯಕ್ತಿ ಈ ರೀತಿ ಮಾಡಲು ಮುಂದಾಗಿದ್ದಾನೆ. ಪತ್ನಿಯನ್ನೇ ಬಾಸ್ ಜೊತೆ ಮಲಗೋಕೆ ಹೇಳಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿರೋ ಈ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಪುಣೆಯ ಅಮಿತ್ ಛಾಬ್ರಾ ಎಂಬ ವ್ಯಕ್ತಿಯನ್ನು ಮಹಿಳೆ ಮದುವೆ ಆಗಿದ್ದಳು. ಮದುವೆಯ ನಂತರ ಅಮಿತ್ ಛಾಬ್ರಾ ಕೆಟ್ಟ ಸಹವಾಸಗಳಿಗೆ ಸಿಲುಕಿ ಪತ್ನಿಯನ್ನು ಅನೈತಿಕ ಹಾಗೂ ಕಾನೂನುಬಾಹಿರ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ. ಅಷ್ಟೇ ಅಲ್ಲದೇ ಅಮಿತ್ ಸಹೋದರನು ಕೂಡಾ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಜೊತೆಗೆ ಆಕೆಯ ಮಾವ ಕೂಡ 12 ವರ್ಷದ ಮಗಳ ಎದುರೇ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ವಿರೋಧಿಸಿದಾಗ ಆಕೆಗೆ ಥಳಿಸುತ್ತಿದ್ದ ಎಂದು ತಿಳಿದುಬಂದಿದೆ. 

ಶಾಪಿಂಗ್ ಮಾಡಲು ಹಣ ಕೊಡದ್ದಕ್ಕೆ ಸಿಟ್ಟು, ಪ್ರಿಯಕರನನ್ನು ಕರೆಸಿ ಗಂಡನಿಗೆ ಹೊಡೆಸಿದ ಹೆಂಡ್ತಿ!

ಘಟನೆಯ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ
ಹೀಗಾಗಿ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆ ವೇಳೆ ಆಕೆಯ ಪತಿ ಇನ್ನು ಮುಂದೆ ಕಿರುಕುಳ ನೀಡುವುದಿಲ್ಲ ಎಂದು ಲಿಖಿತವಾಗಿ ತಿಳಿಸಿದ್ದ. ಆದರೆ ಕೆಲ ದಿನಗಳ ನಂತರ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ತಿಳಿದುಬಂದಿದೆ. ಮಹಿಳೆ ಈ ವಿಷಯವನ್ನ ತನ್ನ ಪೋಷಕರಿಗೂ ತಿಳಿಸಿದ್ದಾಳೆ. ನ್ಯಾಯಕ್ಕಾಗಿ ಇಂದೋರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಮಹಿಳಾ ಕಲ್ಯಾಣ ಅಧಿಕಾರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ತನಿಖೆಯಲ್ಲಿ ಮಹಿಳೆಗೆ ಕಿರುಕುಳ ನೀಡಿರುವುದು ಸತ್ಯ ಎಂಬುದು ಸಾಬೀತಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಮಹಿಳೆಯ ಪತಿ, ಮೈದುನ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

click me!