ನಾಯಿ ಕೆಫೆಗೆ 2 ಕೋಟಿ ದಾನ, ಹಣ ಸಿಗ್ತಿದ್ದಂತೆ ಬಾಗಿಲೇ ಮುಚ್ಚಿದ ಮಾಲೀಕ!

By Roopa Hegde  |  First Published May 27, 2024, 12:12 PM IST

ನಾಯಿ ಮೇಲೆ ಕೆಲ ಜನರಿಗೆ ಅತಿಯಾದ ಪ್ರೀತಿ ಇರುತ್ತೆ. ಅವರು ಅದಕ್ಕಾಗಿ ಏನು ಮಾಡಲೂ ಸಿದ್ಧ. ನಮ್ಮ ಸಾಕು ನಾಯಿಗೆ ವೆರೈಟಿ ಆಹಾರ ಸಿಗುತ್ತೆ ಎನ್ನುವ ಕಾರಣಕ್ಕೆ ಅವರು ಕೆಫೆಯೊಂದಕ್ಕೆ ಕೈಬಿಚ್ಚಿ ಹಣ ನೀಡಿದ್ರು. ಆದ್ರೆ ಅವರ ಕೆಲಸ ವ್ಯರ್ಥವಾಯ್ತು.
 


ಅತ್ಯಂತ ಪ್ರಾಮಾಣಿಕ ಪ್ರಾಣಿ ನಾಯಿ (Honest Pet). ಸಾಕುನಾಯಿಯನ್ನು ಜನರು ಪ್ರೀತಿಯಿಂದ ನೋಡಿಕೊಳ್ತಾರೆ. ಮನೆ ಸದಸ್ಯನಂತೆ ಅದನ್ನು ಸಾಕಿಸಲಹುತ್ತಾರೆ. ಮನೆಯಲ್ಲಿರುವ ನಾಯಿಗೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದಕ್ಕೆ ಪ್ರತ್ಯೇಕ ಮನೆ, ಹಾಸಿಗೆ, ಆಹಾರದ ವ್ಯವಸ್ಥೆ ಇರೋದಲ್ಲದೆ ಆಟವಾಡಲು ಕೂಡ ವ್ಯವಸ್ಥೆ ಮಾಡಲಾಗುತ್ತದೆ. ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ನಾಯಿ ಡೇ ಕೇರ್, ನಾಯಿಗಳಿಗೆ ವಿವಿಧ ಸ್ಪರ್ಧೆ (Canine Competation), ಪ್ರತ್ಯೇಕ ಪಾರ್ಕ್, ಕೆಫೆ ಕೂಡ ತೆರೆಯಲಾಗ್ತಿದೆ. ಅಮೆರಿಕಾದಲ್ಲಿ ಕೂಡ ನಾಯಿಯಾಗಿ ವಿಶೇಷ ಕೆಫೆ ತೆರೆಯಲಾಗಿತ್ತು. ಅಲ್ಲಿ ನಾಯಿಗೆ ವೆರೈಟಿ ಆಹಾರ, ವಿಶ್ರಾಂತಿಗೆ ಅವಕಾಶ ಮಾಡಿಕೊಡಲಾಗಿತ್ತು. ಜನರು ಅಲ್ಲಿ ತಮ್ಮ ಸಾಕುನಾಯಿ ಕರೆತಂದು ಎಂಜಾಯ್ ಮಾಡ್ತಿದ್ದರು. ಒಂದು ಸಮಯದಲ್ಲಿ ಈ ಕೆಫೆ ಮುಚ್ಚಲಾಗುತ್ತೆ ಎಂಬ ಸುದ್ದಿ ಬರ್ತಿದ್ದಂತೆ ಜನರು ಹಣ ಸಂಗ್ರಹಿಸಿ ಕೆಫೆ ಮಾಲೀಕನಿಗೆ ನೀಡಿದ್ದರು. ಬರೋಬ್ಬರಿ 2 ಕೋಟಿ ರೂಪಾಯಿ ಸಂಗ್ರಹವಾಗಿದ್ದೇನೋ ಹೌದು ಆದ್ರೆ ಕೆಫೆ ಮಾತ್ರ ಹಾಗೆ ಉಳಿಯಲಿಲ್ಲ. 

ಅಮೆರಿಕ (America) ದಲ್ಲಿ ನಾಯಿ ಕೆಫೆ (Café) ಗಳ ಸಂಖ್ಯೆ ಸಾಕಷ್ಟಿದೆ. ಪ್ರತಿ ನಗರದಲ್ಲೂ ಅನೇಕ ಕೆಫೆಗಳನ್ನು ನೀವು ನೋಡ್ಬಹುದು. ಈ ಕೆಫೆಗಳು ಸಾಕಷ್ಟು ವಿಶೇಷತೆಯನ್ನು ಹೊಂದಿರುತ್ತವೆ. ಬಾತುಕೋಳಿ, ಹಂದಿಮಾಂಸ ಮತ್ತು ಟರ್ಕಿಯಿಂದ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ನಾಯಿಗಳಿಗಾಗಿ ಕೆಫೆಯಲ್ಲಿ ತಯಾರಿಸಲಾಗುತ್ತದೆ. ಐಸ್ ಕ್ರೀಂ, ಸ್ಯಾಂಡ್ ವಿಚ್ ಕೂಡ ನಾಯಿಗಳಿಗೆ ನೀಡಲಾಗುತ್ತದೆ. ಚಿಪ್ಸ್ (Chips), ಪ್ಯಾನ್ ಕೇಕ್ (Pan Cake), ಮೊಟ್ಟೆ ಸೇರಿದಂತೆ ನಾಯಿಗಳ ಆರೋಗ್ಯ (Health ) ವೃದ್ಧಿಸುವ ಆಹಾರವನ್ನೂ ಕೆಫೆಯಲ್ಲಿ ಸರ್ವ್ ಮಾಡಲಾಗುತ್ತದೆ.

Tap to resize

Latest Videos

ಪ್ರಸಿದ್ಧ ರೆಸ್ಟೋರೆಂಟ್‌ ಹೊಂದಿರುವ ಭಾರತದ ಕ್ರಿಕೆಟಿಗರು, ಬೆಂಗಳೂರಿನಲ್ಲಿ ಯಾರಿಗೆಲ್ಲ ಹೊಟೇಲ್ ಇದೆ ಗೊತ್ತೇ?

ಎಲ್ಲ ಕೆಫೆಯಂತೆ ನ್ಯೂಯಾರ್ಕ್ ನಲ್ಲಿ ಬೋರಿಸ್ ಮತ್ತು ಹಾರ್ಟನ್‌ ಕೆನೈನ್ ಕೆಫೆಯನ್ನು ತೆರೆಯಲಾಗಿತ್ತು. ಈ ಕೆಫೆಯಲ್ಲಿ ನಾಯಿಗಳು ಕುಳಿತುಕೊಳ್ಳಲು ವಿಶೇಷ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ನಾಯಿಗಳಿಗೆ ಅಗತ್ಯವಿರುವ ಆಹಾರ ಬಡಿಸಲು ಕೆಲಸದವರನ್ನು ನೇಮಿಸಲಾಗಿತ್ತು. ಪ್ರತಿ ದಿನ ಅನೇಕ ಜನರು ತಮ್ಮ ಸಾಕು ನಾಯಿ ಜೊತೆ ಈ ಕೆಫೆಗೆ ಬರ್ತಿದ್ದರು. ಅಲ್ಲಿ ನಾಯಿಗಳ ಪಾರ್ಟಿ ಕೂಡ ನಡೆಯುತ್ತಿತ್ತು. ಆದ್ರೆ ಈಗ ಈ ಕೆಫೆಗೆ ಬೀಗ ಹಾಕಲಾಗಿದೆ. ಇಲ್ಲಿ ಕೆಫೆಗೆ ಬೀಗ ಹಾಕಿದ್ದು ದೊಡ್ಡ ವಿಷ್ಯವಲ್ಲ. ಅದಕ್ಕಿಂತ ಮೊದಲು, ಕೆಫೆ ಮುಚ್ಚಬಾರದು ಅಂತ ಜನರು ಮಾಡಿದ ಕೆಲಸ ಅಚ್ಚರಿ ಹುಟ್ಟಿಸಿದೆ.   

ಕೆಲ ದಿನಗಳ ಹಿಂದೆ ಈ ಕೆಫೆ ಮಾಲೀಕ, ಕೆಫೆಯನ್ನು ಮುಚ್ಚೋದಾಗಿ ಹೇಳಿದ್ದ. ಈ ವಿಷ್ಯ ತಿಳಿದ ಪ್ರಾಣಿ ಪ್ರೇಮಿಗಳು ಬೇಸರಗೊಂಡಿದ್ದರು. ಹೇಗಾದ್ರೂ ಈ ಕೆಫೆ ಉಳಿಸಬೇಕು ಎನ್ನುವ ಉದ್ದೇಶದಿಂದ ಅವರು ಹಣ ಸಂಗ್ರಹಕ್ಕೆ ಮುಂದಾಗಿದ್ದರು. ನಾಯಿ ಪ್ರೇಮಿಗಳು ಕೆಫೆ ಉಳಿಸಲು 250,000 ಡಾಲರ್ ಅಂದ್ರೆ 2 ಕೋಟಿ ರೂಪಾಯಿ ಸಂಗ್ರಹಿಸಿ ಕೆಫೆ ಮಾಲೀಕನಿಗೆ ನೀಡಿದ್ದರು. ಕೆಫೆ ಮಾಲೀಕನಿಗೆ ಅಷ್ಟೊಂದು ಹಣ ಸಿಕ್ಕಿದ್ರೂ ಆತ ಮಾತ್ರ ಕೆಫೆ ಮುಂದುವರೆಸುವ ನಿರ್ಧಾರಕ್ಕೆ ಬರಲಿಲ್ಲ. ಒಂದು ದಿನದ ಹಿಂದೆ ಕೆಫೆ ಮಾಲೀಕ, ಕೆಫೆ ಮುಚ್ಚುವುದಾಗಿ ಹೇಳಿದ್ದಾನೆ. 

60ನೇ ವರ್ಷದಲ್ಲಿ ಶುರು ಮಾಡಿದ್ರು ಬಿಸ್ನೆಸ್; ಮಗನಾದ 2100 ಕೋಟಿ ಕಂಪನಿ ಒಡೆಯ

ಆತನ ಈ ನಿರ್ಧಾರ ಕೇಳ್ತಿದ್ದಂತೆ ಜನರು ಕೋಪಗೊಂಡಿದ್ದಾರೆ. ಎರಡು ಕೋಟಿ ರೂಪಾಯಿಯನ್ನು ದಾನಿಗಳಿಗೆ ಹಿಂತಿರುಗಿಸ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಫೆ ಮಾಲೀಕ ಉತ್ತರ ಕೂಡ ನೀಡಿದ್ದಾನೆ. ಈ ಹಣವನ್ನು ಜಿಎಮ್ ಮತ್ತು ಈವೆಂಟ್ ಮ್ಯಾನೇಜರ್ ನೇಮಕಕ್ಕೆ ಬಳಸಿಕೊಳ್ಳಲಾಗಿದೆ. ಕೆಫೆಯನ್ನು ದುರಸ್ತಿ ಮಾಡಲಾಗಿದ್ದು, 24 ಕಾರ್ಮಿಕರಿಗೆ ಹಣವನ್ನು ಹಂಚಲಾಗಿದೆ. ಈ ನಗರದಲ್ಲಿ ಕೆಫೆಗೆ ಪರ್ಯಾಪ್ತ ಗ್ರಾಹಕರಿಲ್ಲ. ಹಾಗಾಗಿ ಕೆಫೆ ಮುಚ್ಚಲಾಗ್ತಿದೆ. ಇದು ನಮಗೂ ಬೇಸರತರಿಸಿದೆ ಎಂದು ಕಂಪನಿ ಹೇಳಿದೆ. 

click me!