#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ?

By Suvarna News  |  First Published Jan 29, 2021, 1:06 PM IST

ಹಲವು ಮಂದಿ ಸುಖೀ ದಾಂಪತ್ಯ ನಡೆಸುತ್ತಿದ್ದರೂ ಒಳಗೊಳಗೇ ತಮ್ಮದೇ ಲಿಂಗದ ಇತರರ ದೇಹದೊಂದಿಗೆ ಸುಖಿಸಲು ಇಷ್ಟಪಡುತ್ತಿರುತ್ತಾರೆ. ಇದೇ ಬೈ ಸೆಕ್ಷುಯಾಲಿಟಿ ಅಥವಾ ಉಭಯಲಿಂಗ ಕಾಮ. 


ಪ್ರಶ್ನೆ: ನನ್ನ ವಯಸ್ಸು ಹತ್ತೊಂಬತ್ತು. ನನಗೊಬ್ಬಳು ಗೆಳತಿ ಇದ್ದಾಳೆ. ಇಬ್ಬರಿಗೂ ಏಕಾಂತವೂ ಸಾಕಷ್ಟು ಸಿಗುತ್ತದೆ. ಆ ಹೊತ್ತಿನಲ್ಲಿ ಅವಳ ಸ್ಪರ್ಶದಿಂದ ನನ್ನಲ್ಲಿ ಲೈಂಗಿಕ ಆಸೆ ಆಕಾಂಕ್ಷೆಗಳು ಮೊಳೆಯುತ್ತವೆ. ಆದರೆ ಇದುವರೆಗೂ ಒಂದು ಹಂತವನ್ನು ಮೀರಿ ಹೋಗಿಲ್ಲ. ನನ್ನ ಸಮಸ್ಯೆ ಅದಲ್ಲ. ಕೆಲವೊಮ್ಮೆ ನನಗೆ, ನನ್ನದೇ ಪ್ರಾಯದ, ಸುಂದರವಾಗಿರುವ ಹುಡುಗರನ್ನು ನೋಡಿದಾಗಲೂ ಲೈಂಗಿಕ ಉದ್ರೇಕ ಆಗುತ್ತದೆ. ಹೇಗೆ ನನ್ನ ಗೆಳತಿಯ ದೇಹ ನೋಡಿದಾಗ ಆಗುತ್ತದೋ ಅಂಥದೇ ಕಾಮನೆಗಳು ಇವರನ್ನು ನೋಡಿದಾಗಲೂ ಆಗುತ್ತದೆ. ನನ್ನ ಕ್ಲಾಸ್‌ಮೇಟ್‌ಗಳಲ್ಲಿ ಹಲವರ ತೋಳು, ತೊಡೆಗಳನ್ನು ನೋಡುವಾಗ ತಡೆಯಲಾಗದಷ್ಟು ಉದ್ರೇಕ ಉಂಟಾಗುತ್ತದೆ. ಕೆಲವೊಮ್ಮೆ ನಾನು ಅವರನ್ನು ದಿಟ್ಟಿಸಿ ನೋಡುವಾಗ, 'ಯಾಕೋ ತಿಂದು ಹಾಕುವಂತೆ ನೋಡುತ್ತೀ?' ಎಂದು ಅವರು ಎಚ್ಚರಿಸಿದ್ದೂ ಉಂಟು. ಹಾಗಂತ ಹುಡುಗಿಯರ ಕಡೆಗಿನ ಆಸಕ್ತಿ ಕಡಿಮೆ ಅಂತಲ್ಲ. ಅದೂ ಇದೆ. ನಾನು ಉಭಯಲಿಂಗಕಾಮಿಯೇ (ಬೈ ಸೆಕ್ಷುಯಲ್)? ಇದು ತಪ್ಪೇ? ನನಗೆ ಹುಡುಗರ ಕಡೆಗೂ ಆಕರ್ಷಣೆ ಇದೆ ಅಂತ ಗೊತ್ತಾದರೆ ನನ್ನ ಗೆಳತಿ ನನ್ನನ್ನು ಬಿಡಬಹುದು ಅಲ್ಲವೇ? ಅಂಥ ಬಾಯ್‌ಫ್ರೆಂಡ್ ಅಥವಾ ಗಂಡನನ್ನು ಯಾವ ಹುಡುಗಿಯಾದರೂ ಇಷ್ಟಪಡುತ್ತಾರಾ? ಆದರೆ ನನ್ನ ಪ್ರಾಯದ ಹುಡುಗರಲ್ಲಿ ನನಗೆ ಯಾವ ವಿಶೇಷ ಗೆಳೆಯರೂ, ಲೈಂಗಿಕ ಸುಖಕ್ಕೆ ಸ್ಪಂದಿಸಬಹುದಾದ ಗೆಳೆಯರೂ ಇಲ್ಲ. ನಾನು ಈ ಸಂಕಷ್ಟವನ್ನು ಹೇಗೆ ನಿವಾರಿಸಿಕೊಳ್ಳಬಹುದು? ಈ ಬಗ್ಗೆ ನನ್ನ ಗೆಳತಿಯ ಜೊತೆಗೆ ಚರ್ಚಿಸಬಹುದೇ?

#Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ? ...

ಉತ್ತರ: ನಿಮ್ಮ ಸಂಕಷ್ಟ ಅರ್ಥವಾಗುತ್ತದೆ. ಆದರೆ ಇದಕ್ಕೆ ಸುಲಭವಾದ ಪರಿಹಾರ ಇಲ್ಲ. ನೀವು ಉಭಯಲಿಂಗ ಕಾಮಿ ಆಗಿರುವ ಸಾಧ್ಯತೆ ಇದೆ. ಇಂಥವರು ಪುರುಷರ ಜೊತೆ ಹೇಗೋ ಹಾಗೆ ಮಹಿಳೆಯರ ಜೊತೆಗೂ ಲೈಂಗಿಕ ಕ್ರಿಯೆ ನಡೆಸಬಲ್ಲರು ಹಾಗೂ ಸಂತೃಪ್ತಿ ಪಡೆಯಬಲ್ಲರು. ಇದು ಒಂದು ರೀತಿಯಿಂದ ಅವರ ಶಕ್ತಿಯೇ ಎನ್ನಬಹುದು. ಆದರೆ ಸಂಬಂಧಗಳ ವಿಷಯಕ್ಕೆ ಬಂದಾಗ ಇದೊಂದು ಸಮಸ್ಯೆ ಆಗಿಬಿಡುವ ಸಾಧ್ಯತೆ ಉಂಟು. ಯಾವು ಹೆಣ್ಣು ಕೂಡ ತನ್ನ ಗೆಳೆಯ ಅಥವಾ ಗಂಡ, ಇನ್ನೊಂದು ಹೆಣ್ಣಿನ ಜೊತೆಗೆ ದೈಹಿಕ ಸಂಬಂಧ ಹೊಂದಿರುವುದನ್ನು ಇಷ್ಟಪಡುವುದಿಲ್ಲ ಅಲ್ಲವೇ? ಹಾಗೆಯೇ, ಇನ್ನೊಂದು ಗಂಡಿನ ಜೊತೆಗೆ ಸಂಬಂಧ ಹೊಂದಿರುವುದನ್ನೂ ಇಷ್ಟಪಡುವ ಸಾಧ್ಯತೆ ಇಲ್ಲ. 

Latest Videos

undefined


ಈ ವಿಚಾರವನ್ನು ನಿಮ್ಮ ಗೆಳತಿಯ ಜೊತೆ ಈಗಲೇ ಚರ್ಚಿಸಬೇಡಿ. ಇದರಿಂದ ಸಮಸ್ಯೆ ಉಂಟಾಗಬಹುದು. ನಿಮ್ಮ ಗೆಳತಿ ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಹೋಗಬಹುದು. ಈಗ ನೀವು ಮಾಡಬೇಕಾದ್ದು ಎಂದರೆ ಲೈಂಗಿಕ ತಜ್ಞರ ಭೇಟಿ. ನಿಮ್ಮ ಲೈಂಗಿಕ ಒಲವನ್ನು ಪೂರ್ತಿಯಾಗಿ ಹೇಳಿಕೊಂಡು ಅವರ ತಜ್ಞ ಸಲಹೆ ಪಡೆಯಿರಿ. ಇಂಥ ಪ್ರಕರಣಗಳನ್ನು ಬಗೆಹರಿಸಿರವ ಅವರ ಪರಿಣತಿ ನಿಮಗೆ ನೆರವಾಗಬಹುದು. ಹಾಗೇ ಕೌನ್ಸಿಲರ್‌ಗಳ ಮೊರೆ ಹೋಗಬಹುದು. ಅವರು ನಿಮ್ಮಿಬ್ಬರನ್ನೂ ಕೂರಿಸಿಕೊಂಡು ಸರಿಯಾಗಿ ಕೌನ್ಸಿಲಿಂಗ್ ಮಾಡಿದರೆ ಇದು ಬಗೆಹರಿದೀತು. ಏನಿದ್ದರೂ ಎರಡೂ ದೋಣಿಯಲ್ಲಿ ಒಮ್ಮೆಗೇ ಕಾಲಿಡುವುದು ಮಾತ್ರ ಸೂಕ್ತವಲ್ಲ. ಒಂದು ಸಲಕ್ಕೆ ಒಂದು ದೋಣಿಯಲ್ಲಿ ಮಾತ್ರವೇ ಪ್ರಯಾಣಿಸಿ.

#Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ? ...

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತಾರು. ಗಂಡನ ವಯಸ್ಸು ಇಪ್ಪತ್ತೆಂಟು. ಇತ್ತೀಚೆಗೆ ಮದುವೆಯಾಯಿತು. ಇಬ್ಬರಿಗೂ ಲೈಂಗಿಕ ಅನುಭವ ಇಲ್ಲ. ಮೊದಲ ರಾತ್ರಿಯ ಸಂಭೋಗದ ವೇಳೆ ನನಗೆ ಗುಪ್ತಾಂಗದಲ್ಲಿ ತಡೆಯಲಾಗದ ಉರಿ ಉಂಟಾಯಿತು. ಇದು ಯಾಕೆ? ಎರಡನೇ ಬಾರಿ ಸೆಕ್ಸ್ ಅನುಭವ ಹೊಂದಲು ಭಯ ಆಗುತ್ತಿದೆ. 

ಉತ್ತರ: ಸೆಕ್ಸ್ ಅನುಭವಕ್ಕಾಗಿ ಅವಸರಿಸಬೇಡಿ. ಸಂಭೋಗಕ್ಕೆ ಸಾಕಷ್ಟು ಮುನ್ನಲಿವಿನ ಪೂರ್ವ ಸಿದ್ಧತೆ ಅಗತ್ಯ. ಇದನ್ನು ನಿಮ್ಮ ಪತಿದೇವರಿಗೂ ತಿಳಿಹೇಳಿ. ಯೋನಿ ಒದ್ದೆಯಾಗದೆ, ಶಿಶ್ನದ ತುದಿಯಲ್ಲಿ ತೇವವಿಲ್ಲದೆ ಸಂಭೋಗಕ್ಕೆ ತೊಡಗಿದರೆ ಉರಿ, ತೋವು ತಪ್ಪಿದ್ದಲ್ಲ. ಲೈಂಗಿಕ ವಿಜ್ಞಾನ ಪುಸ್ತಕಗಳನ್ನು ಓದಿ, ಹೆಚ್ಚಿನ ತಿಳಿವಳಿಕೆ ಪಡೆದುಕೊಳ್ಳಿ. 


 

click me!