
ಸೆಕ್ಸ್ (Sex) ಹೆಸರನ್ನು ಭಾರತ (India) ದಲ್ಲಿ ಸಾರ್ವಜನಿಕ (Public) ವಾಗಿ ಹೇಳೋದಿಲ್ಲ. ಅದ್ರ ಬಗ್ಗೆ ಮಾತನಾಡಿದ್ರೆ ಆತನಿಗೆ ನಾಚಿಕೆಯಿಲ್ಲ ಎನ್ನುತ್ತಾರೆ. ಆದ್ರೆ ಕದ್ದು - ಮುಚ್ಚಿ ಅಶ್ಲೀಲ ಚಿತ್ರ (Pornography) ಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಇದೇ ಕಾರಣಕ್ಕೆ ಈ ಉದ್ಯಮ (Industry) ಹೆಚ್ಚು ಅಭಿವೃದ್ಧಿ ಕಾಣ್ತಿದೆ ಅಂದ್ರೆ ತಪ್ಪಾಗಲಾರದು. ಅದೇನೇ ಇರಲಿ, ಸಾಮಾನ್ಯವಾಗಿ ಅಶ್ಲೀಲ ಚಿತ್ರಗಳನ್ನು ಜನರು ವೀಕ್ಷಣೆ ಮಾಡ್ತಾರೆ ಅನ್ನೋದು ನಮಗೆ ಗೊತ್ತಾದ್ರೆ ನಾವು ಮೂಗು ಮುರಿತೇವೆ. ಹಾಗೆ ಅವರಿಗೆ ಧರ್ಮ (Religion) ದ ಬಗ್ಗೆ, ದೇವರ (God) ಬಗ್ಗೆ ನಂಬಿಕೆ (Faith) ಯಿಲ್ಲ ಎಂದುಕೊಳ್ತೇವೆ. ಅಶ್ಲೀಲ ಚಿತ್ರ ವೀಕ್ಷಣೆ ಮಾಡುವ ಮೂಲಕ ದೇವರಿಗೆ ಅವಮಾನ ಮಾಡ್ತಿದ್ದಾರೆ, ಭಯ – ಭಕ್ತಿ ಇರುವ ಜನರು ಯಾವಾಗ್ಲೂ ಇಂಥ ಚಿತ್ರಗಳನ್ನು ನೋಡೋದಿಲ್ಲ ಎಂದು ನಾವು ಭಾವಿಸ್ತೇವೆ. ಸಾಮಾನ್ಯವಾಗಿ ಅಶ್ಲೀಲ ಚಿತ್ರಗಳ ಬಗ್ಗೆ ಮಾತನಾಡದೆ, ನೋಡದೆ ಇರುವ ವ್ಯಕ್ತಿ ದೇವರ ಮೇಲೆ ಅಪಾರ ನಂಬಿಕೆಯಿಟ್ಟಿದ್ದಾನೆ ಎಂದುಕೊಳ್ತೇವೆ. ಅಷ್ಟೇ ಅಲ್ಲ, ಪೋರ್ನ್ (Porn) ಸಿನಿಮಾ (Cinema)ಗಳನ್ನು ನೋಡುವ ವ್ಯಕ್ತಿ ಅಧರ್ಮದ ಕೃತ್ಯಗಳನ್ನು ಮಾಡುತ್ತಾರೆ ಎಂದು ಭಾವಿಸುವವರೂ ಇದ್ದಾರೆ. ಪೋರ್ನ್ ವೀಕ್ಷಣೆ ಮಾಡುವ ವ್ಯಕ್ತಿ ದೇವರ ಕಡೆ ತಿರುಗಿ ನೋಡುವುದಿಲ್ಲ ಎಂದುಕೊಳ್ತೇವೆ. ಆದ್ರೆ ದೇವರು ಹಾಗೂ ಪೋರ್ನ್ ಬಗ್ಗೆ ನಿಮಗಿರುವ ಆಲೋಚನೆಯನ್ನು ನೀವು ಬದಲಾಯಿಸ್ಲೇಬೇಕು. ಯಾಕೆಂದ್ರೆ ನೀವು ಅಂದುಕೊಂಡಿದ್ದಕ್ಕೆ ವಿರುದ್ಧವಾಗಿದೆ ಸಮೀಕ್ಷೆಯಿಂದ ಹೊರ ಬಂದ ವರದಿ.
ಇವರಲ್ಲೇ ಧಾರ್ಮಿಕತೆ ಹೆಚ್ಚು : ಯಸ್, ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪೋರ್ನ್ ವೀಕ್ಷಿಸುವ ಜನರಲ್ಲಿ ಧಾರ್ಮಿಕ ನಂಬಿಕೆ ಹೆಚ್ಚು. ವಾರಕ್ಕೊಮ್ಮೆ ಮಾತ್ರ ಪೋರ್ನ್ ನೋಡುವವರಿಗಿಂತ ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪೋರ್ನ್ ವೀಕ್ಷಣೆ ಮಾಡುವ ಜನರು ಹೆಚ್ಚು ಧಾರ್ಮಿಕರು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಶ್ಲೀಲ ಚಿತ್ರಗಳನ್ನು ನೋಡಿದ್ರೆ ಪಾಪ, ಧರ್ಮದ ವಿರುದ್ಧದ ಕೆಲಸ ಎಂಬುದು ಎಲ್ಲರ ತಲೆಯಲ್ಲಿದೆ. ತಪ್ಪು ಮಾಡಿದ್ಮೇಲೆ ಪಶ್ಚಾತಾಪ ಮಾಡ್ಲೇಬೇಕು. ಹಾಗಾಗಿಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದವರು ಹೆಚ್ಚು ದೇವರ ಪ್ರಾರ್ಥನೆ ಮಾಡ್ತಾರೆಂದು ಸಂಶೋಧಕರು ಅಂದಾಜಿಸಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಿಸಿ ಪಾಪ ಮಾಡಿದ್ದೇವೆ ಎಂದು ಭಾವಿಸುವ ಜನರು ಧಾರ್ಮಿಕ ಕಾರ್ಯಗಳ ಮೂಲಕ ದೇವರ ಕ್ಷಮೆ ಕೇಳುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: EXTRA MARITAL AFFAIRS : ಲವ್ವರ್ ಪತ್ನಿಗೆ ಗೊತ್ತಾಗಿದೆ ಅನೈತಿಕ ಸಂಬಂಧ.. ಮುಂದೇನ್ ಮಾಡ್ಲಿ..?
ಸಮೀಕ್ಷೆ (Survey) ವರದಿ : 1,300 ಅಮೆರಿಕನ್ನರ ಮೇಲೆ ಸಮೀಕ್ಷೆ ನಡೆಸಲಾಗಿತ್ತು. 6 ವರ್ಷಗಳ ಡೇಟಾವನ್ನು ವಿಶ್ಲೇಷಿಸಿದ ನಂತ್ರ ಈ ವರದಿ ನೀಡಲಾಗಿದೆ. ಹೆಚ್ಚು ಅಶ್ಲೀಲತೆಯನ್ನು ವೀಕ್ಷಿಸುವ ಜನರು ಬಲವಾದ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದರು ಎಂದು ಸಂಶೋಧಕ ಸ್ಯಾಮ್ಯುಯೆಲ್ ಪೆರ್ರಿ (Samuel Perry ) ಹೇಳಿದ್ದಾರೆ.
ಇದನ್ನೂ ಓದಿ: ಪುರುಷರ ಈ ಗುಣಗಳು ಮಹಿಳೆಯರ ಮೂಡ್ ಆನ್ ಮಾಡತ್ತೆ, ಯಾವುದು ಆ ಗುಣಗಳು?
ಕಡಿಮೆ ಪೋರ್ನ್ ವೀಕ್ಷಣೆ, ಕಡಿಮೆ ಪ್ರಾರ್ಥನೆ : ಸಾಂದರ್ಭಿಕವಾಗಿ ಪೋರ್ನ್ ಚಲನಚಿತ್ರಗಳನ್ನು ನೋಡುವವರಿಗಿಂತ ಪೋರ್ನ್ ವೀಕ್ಷಕರು ಹೆಚ್ಚು ದೇವರನ್ನು ಆರಾಧಿಸುತ್ತಾರೆ. 2006ರಲ್ಲಿ ವಾರಕ್ಕೆ ಮೂರ್ನಾಲ್ಕು ಬಾರಿ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡಿದ ಜನರು 2012ರ ವೇಳೆಗೆ ಹೆಚ್ಚು ಧಾರ್ಮಿಕವಾಗಿದ್ದರು ಎಂದು ಡೇಟಾ ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ತಿಂಗಳಿಗೊಮ್ಮೆ ಪೋರ್ನ್ ಸಿನಿಮಾ ನೋಡುವವರು ಧರ್ಮ ಮತ್ತು ಪ್ರಾರ್ಥನೆಯ ಕಡೆಗೆ ಕಡಿಮೆ ಒಲವು ಹೊಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಜರ್ನಲ್ ಆಫ್ ಸೆಕ್ಸ್ ರಿಸರ್ಚ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿತ್ತು. ಪೋರ್ನ್ ಫಿಲ್ಮ್ ನೋಡದವರು ತಮ್ಮ ಧರ್ಮದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಮತ್ತು ಅವರ ಮನಸ್ಸಿನಲ್ಲಿ ಧರ್ಮದ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.