ಸ್ವತಂತ್ರ ಧೋರಣೆಯ, ಆತ್ಮವಿಶ್ವಾಸ ಹೊಂದಿರುವ ಮಹಿಳೆಯರ ಕುರಿತು ಸಮಾಜದಲ್ಲಿ ಹಲವು ಅಭಿಪ್ರಾಯಗಳು ಬೇರೂರಿವೆ. ಅವು ಹೇಗೆ ಒಡಮೂಡಿದವೋ ಗೊತ್ತಿಲ್ಲ, ಆದರೆ, ಸುಳ್ಳಾಗಿರುವ ಸಾಧ್ಯತೆಯೇ ಅತಿ ಹೆಚ್ಚು. ದೃಢ ನಡೆನುಡಿಯ ಮಹಿಳೆಯರ ಬಗ್ಗೆ ಸಾಕಷ್ಟು ಕೆಟ್ಟ ಕಲ್ಪನೆಗಳೂ ಇವೆ.
ಅಪರೂಪದ ಆತ್ಮವಿಶ್ವಾಸ ಹೊಂದಿರುವ ಮಹಿಳೆಯೊಬ್ಬರು ಮೀಟಿಂಗ್ ರೂಮಿಗೋ, ಎಲ್ಲರೂ ಕುಳಿತಿರುವ ಹಾಲ್ ಗೋ ಪ್ರವೇಶಿಸಿದರೆ ಏನೆಲ್ಲ ಭಾವನೆ ಮೂಡುತ್ತದೆ? ಹಲವು ವಿಚಾರಗಳು ಏಕಾಏಕಿ ಮನಸ್ಸಿನಲ್ಲಿ ಹಾಯುತ್ತವೆ. ಆಕೆಯ ಖಾಸಗಿ ಜೀವನದ ಅಂಶಗಳ ಕುರಿತಾಗಿಯೇ ಹೆಚ್ಚು ಭಾವನೆಗಳು ಮೂಡಬಹುದು. ಆಕೆಯ ಸ್ಟೈಲ್ ಹೀಗಿದ್ದಿರಬಹುದು, ಆಕೆಯಲ್ಲಿ ಸಿಕ್ಕಾಪಟ್ಟೆ ದುಡ್ಡಿರಬಹುದು, ಅವಳು ಯಾರ ಮಾತನ್ನೂ ಕೇಳದಿರಬಹುದು... ಹೀಗೆ. ಇಂತಹ ಅನಿಸಿಕೆಗಳಿಗೆ ಕೊನೆಯೇ ಇಲ್ಲ. ಇದು ನಿಮಗೊಬ್ಬರಿಗೇ ಅಲ್ಲ, ಸಾಮಾನ್ಯವಾಗಿ ಎಲ್ಲರಿಗೂ ಮೂಡುವ ಭಾವನೆಗಳಾಗಿವೆ ಎನ್ನುತ್ತಾರೆ ತಜ್ಞರು. ಆಕೆಯ ಜೀವನ ಸಾಮಾನ್ಯರಿಗಿಂತ ಅತ್ಯಂತ ಭಿನ್ನವಾಗಿರುತ್ತದೆ ಎನ್ನುವ ಅತಿ ರೋಮಾಂಚಕ ಕಲ್ಪನೆಯನ್ನು ಹೊಂದುವವರೂ ಇದ್ದಾರೆ. ಆದರೆ, ಈ ಎಲ್ಲ ಅನಿಸಿಕೆಗಳು ಕೇವಲ ಕಲ್ಪನೆಗಳಾಗಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ, ಆತ್ಮವಿಶ್ವಾಸ ಹೊಂದಿರುವ ಮಹಿಳೆಯರನ್ನು ಕಂಡಾಗ ಸಮಾಜ ಬೇರೆಯದೇ ರೀತಿಯಲ್ಲಿ ಭಾವಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಮುಕ್ತವಾಗಿ ಒಡನಾಡುವ ಮಹಿಳೆಯರು “ಜೋರು’ ಎಂದು ಹೇಳಿಸಿಕೊಳ್ಳುವಂತೆ ಇದೂ ಸಹ. ಸಾಮಾನ್ಯವಾಗಿ ಇಂತಹ ಮಹಿಳೆಯರ ಕುರಿತ ಕಲ್ಪನೆಗಳು ಹೀಗಿರುತ್ತವೆ ನೋಡಿ.
• ಬಾಸಿಸಂ ಮಾಡ್ತಾರೆ
ಆತ್ಮವಿಶ್ವಾಸದ (Confident), ನೇರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮಹಿಳೆಯರು (Women) “ಬಾಸಿಸಂ’ ಮಾಡುತ್ತಾರೆ ಎನ್ನುವುದು ಸಾಮಾನ್ಯ ಕಲ್ಪನೆ. ಪುರುಷರಲ್ಲಿ ಈ ಗುಣವಿದ್ದರೆ ಯಾರೂ ಏನೂ ಭಾವಿಸುವುದಿಲ್ಲ. ಆದರೆ, ಮಹಿಳೆಯರಲ್ಲಿದ್ದರೆ ಸಹಿಸಿಕೊಳ್ಳುವುದಿಲ್ಲ. ಪುರುಷರಿಗೆ ಮಾತ್ರವಲ್ಲ, ಎಷ್ಟೋ ಮಹಿಳೆಯರಿಗೂ ಸಹ ಈ ನೇರವಾದ ನಡೆನುಡಿ (Strait Talking) ಸಹಿಸಿಕೊಳ್ಳುವುದು ಕಷ್ಟ. ವಾಸ್ತವದಲ್ಲಿ ಇದು ಸುಳ್ಳಾಗಿರುತ್ತದೆ. ಬಾಸಿಸಂ ಗುಣ ಆತ್ಮವಿಶ್ವಾಸ ಇಲ್ಲದವರಲ್ಲೇ ಹೆಚ್ಚು. ನಿಲುವುಗಳನ್ನು ವ್ಯಕ್ತಪಡಿಸುವಲ್ಲಿ ಆತ್ಮವಿಶ್ವಾಸ ಇದ್ದರೆ ಹಲವರಿಗೆ ರುಚಿಸುವುದಿಲ್ಲ.
ಬಾಲ್ಯದ ಘಟನೆಗಳಿಂದಲೇ ಮೂಡಿತೇ ಕೀಳರಿಮೆ? ಹೇಗೆ ಗುರುತಿಸಿ, ನಿವಾರಿಸಿಕೊಳ್ಳೋದು?
• ಅತ್ಯಂತ ಸ್ವತಂತ್ರರು (Independent), ಯಾರೂ ಬೇಕಾಗಿಲ್ಲ
ದೃಢ ನಿಲುವಿನ ಮಹಿಳೆಯರು ಸ್ವತಂತ್ರ ಧೋರಣೆ ಹೊಂದಿರುವುದು ಸಹಜ. ತಮ್ಮ ಸುರಕ್ಷತೆಯನ್ನು (Safety) ತಾವು ನೋಡಿಕೊಳ್ಳುವ, ಜೀವನ ನಿರ್ವಹಣೆ ಮಾಡುವ ಸಾಮರ್ಥ್ಯ (Capacity) ಅವರಲ್ಲಿರುತ್ತದೆ. ಅತ್ಯಂತ ಸ್ವಾವಲಂಬಿಯೂ ಆಗಿರುತ್ತಾರೆ. ಆದರೂ, ಅವರಿಗೆ ಪ್ರೀತಿಯ ಬೆಂಬಲ (Support), ಅರ್ಥಪೂರ್ಣ ಸಂಬಂಧ (Relation) ಬೇಕಾಗಿರುತ್ತದೆ. ಆತ್ಮವಿಶ್ವಾಸಿ ಮಹಿಳೆಯರಿಗೆ ಸಂಬಂಧಗಳ ಬಗ್ಗೆ ಗೌರವ (Respect) ಇರುವುದಿಲ್ಲ, ಯಾರನ್ನೂ ಕೇರ್ ಮಾಡುವುದಿಲ್ಲ ಇತ್ಯಾದಿ ಹೇಳಿಕೆಗಳು ಕೇವಲ ಕಲ್ಪನೆಗಳಷ್ಟೆ.
• ಸಂಪರ್ಕಿಸಲು ಸಾಧ್ಯವಿಲ್ಲ
ಆತ್ಮವಿಶ್ವಾಸಿ ಮಹಿಳೆಯರು ಸುಲಭವಾಗಿ ಯಾರ ಸಂಪರ್ಕಕ್ಕೂ ಸಿಗುವುದಿಲ್ಲ, ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ ಇತ್ಯಾದಿ ನಂಬಿಕೆಗಳಿವೆ. ಸ್ನೇಹಪರ (Friendly) ನಿಲುವು ಹೊಂದಿರದೇ ಇರುವುದು ಬೇರೆ, ಅವರ ಬಗ್ಗೆ ಕೇವಲ ಕಲ್ಪನೆ (Imagination) ಹೊಂದುವುದು ಬೇರೆ. ಎಷ್ಟೋ ಬಾರಿ, ಅವರನ್ನು ಮಾತನಾಡಿಸಲು ಜನರೇ ಭಯಪಡಬಹುದು. ಹೀಗಾಗಿ, ಅವರನ್ನು ಮಾತನಾಡಿಸಲು ಆಗುವುದಿಲ್ಲ ಎನ್ನುವಂತಹ ಹೇಳಿಕೆ ನೀಡಿಬಿಡುತ್ತಾರೆ.
• ಸೆಕ್ಸ್ (Sex) ಸಂಬಂಧಿ ಕಲ್ಪನೆ
ಇದಂತೂ ವಿಪರೀತ. ದೃಢ ನಿಲುವು ಹೊಂದಿರುವ ಮಹಿಳೆಯರು ಅತ್ಯಂತ ಸಕ್ರಿಯ (Active) ಹಾಗೂ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ನಡೆಸಬಹುದು ಎನ್ನುವ ವಿಚಿತ್ರ ಕಲ್ಪನೆಯೊಂದು ಆಳವಾಗಿ ಬೇರೂರಿದೆ. ಕಚೇರಿಗಳಲ್ಲಿ ತಮ್ಮ ಕೆಲಸದ ಮೂಲಕವೇ ಗುರುತಿಸಿಕೊಂಡು ಮೇಲಿನ ಹುದ್ದೆಗೆ ಏರಿದ್ದರೂ ಮಹಿಳೆಯರ ಕುರಿತು ಕೇವಲವಾದ ಮಾತುಗಳು ಕೇಳಿಬರುತ್ತವೆ.
ರೇಷ್ಮೆಯಂಥ ಸಾಫ್ಟ್ ಕೂದಲು ಇರೋರ ಸ್ವಭಾವ ಎಂಥದ್ದು?
• ಬೇಸರಕ್ಕೆ ತುತ್ತಾಗುವುದಿಲ್ಲ
ದೃಢ ನಡೆನುಡಿಯ ಮಹಿಳೆಯರ ಬಗ್ಗೆ ಯಾರು ಏನೇ ಮಾತನಾಡಿದರೂ, ಅವರನ್ನು ತಿರಸ್ಕಾರ (Reject) ಮಾಡಿದರೂ, ಎಷ್ಟೇ ಅವಮಾನಕ್ಕೆ ತುತ್ತಾದರೂ ಅವರಿಗೆ ಬೇಸರವಾಗುವುದಿಲ್ಲ, ಬೇಸರಕ್ಕೆ ಅವರು ಆಸ್ಪದ ನೀಡುವುದಿಲ್ಲ ಎನ್ನುವುದು ಸಹ ಅತಿರಂಜಿತ ಕಲ್ಪನೆ. ಎಷ್ಟೇ ಆತ್ಮವಿಶ್ವಾಸ ಹೊಂದಿದ್ದರೂ ಅವರೂ ಮನುಷ್ಯರೇ. ಎಲ್ಲರಿಗೂ ಆಗುವಂತೆ ಅವರಿಗೂ ನೋವು-ನಲಿವುಗಳಿರುತ್ತದೆ. ಆಫ್ ಕೋರ್ಸ್, ಸಂಕಷ್ಟದ (Conflict) ಸಮಯವನ್ನು ಅವರು ಚೆನ್ನಾಗಿ ನಿಭಾಯಿಸಬಹುದಷ್ಟೆ, ನೋವೇ (Pain) ಆಗುವುದಿಲ್ಲ ಎನ್ನುವುದು ತಪ್ಪು.