Behavior Tips: ಜನ ನಿಮಗೆ ಗೌರವಿಸ್ತಾ ಇಲ್ಲ ಅನಿಸ್ತಾ ಇದ್ಯಾ? ಏನಿರಬಹುದು ಕಾರಣ?

By Suvarna NewsFirst Published Mar 16, 2023, 5:11 PM IST
Highlights

ಜನ ಸುಖಾಸುಮ್ಮನೆ ನಮ್ಮನ್ನು ಗೌರವಿಸುವುದಿಲ್ಲ. ನಾವೂ ಅವರನ್ನು ಗೌರವಿಸಬೇಕು, ಅವರೂ ನಮ್ಮನ್ನು ಗೌರವಿಸುತ್ತಾರೆ. ಸುತ್ತಮುತ್ತಲ ಜನ ನಿಮ್ಮನ್ನು ಗೌರವಿಸುತ್ತಿಲ್ಲ ಎನ್ನುವ ಭಾವನೆ ಮೂಡಿದರೆ ಮೊದಲಿಗೆ, ನಿಮ್ಮ ವರ್ತನೆಯನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.

ಪ್ರತಿಯೊಬ್ಬರೂ ಗೌರವ ಬಯಸುತ್ತಾರೆ. ಆದರೆ, ಇತರರಿಗೆ ನೀಡಲು ಮರೆಯಬಹುದು. ಪ್ರತಿಯೊಬ್ಬರೂ ಸಹಾನುಭೂತಿ ಮತ್ತು ಗೌರವಕ್ಕೆ ಅರ್ಹರು. ಅವರ ಸಾಮಾಜಿಕ ಸ್ಥಾನಮಾನ ಹೇಗೇ ಇರಲಿ, ಏನೇ ಆಗಿರಲಿ. ಪ್ರತಿಯೊಬ್ಬ ಮನುಷ್ಯರನ್ನೂ ಗೌರವಿಸುವುದು ಉತ್ತಮ ಗುಣ. ಗೌರವದ ಭಾವನೆ ಸಾಮಾನ್ಯವಾಗಿ ಪರಸ್ಪರ ಇದ್ದಾಗ ಸಂಬಂಧ ಚೆನ್ನಾಗಿರುತ್ತದೆ. ಆದರೆ, ಕೆಲವರ ಬಗ್ಗೆ ನಮ್ಮಲ್ಲಿ ಗೌರವದ ಭಾವನೆ ಮೂಡುವುದಿಲ್ಲ. ಹಾಗೆಯೇ, ಕೆಲವರಿಗೆ ನಮ್ಮ ಬಗ್ಗೆ ಗೌರವ ಇಲ್ಲದಿರಬಹುದು. ಒಂದೊಮ್ಮೆ, ಜನ ನಿಮಗೆ ಗೌರವ ನೀಡುತ್ತಿಲ್ಲ ಎನ್ನುವ ಭಾವನೆ ಬಂದರೆ ನಿಮ್ಮ ವರ್ತನೆ, ಸ್ವಭಾವಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ಹಾಗೆಯೇ, ಕೆಲವು ಜನರಲ್ಲಿ ಜೀವನದ ಬಗ್ಗೆ ನಕಾರಾತ್ಮಕ ಭಾವನೆ ಇರುತ್ತದೆ. ಅಂಥವರು ಸಹ ಇತರರನ್ನು ಗೌರವಿಸುವುದಿಲ್ಲ. ಸಾಧ್ಯವಾದಷ್ಟು ಉದಾತ್ತ ಭಾವನೆ ಹೊಂದಿರುವುದು ಮತ್ತು ಕರುಣೆ ಭರಿತ ಹೃದಯ ಹೊಂದಿರುವುದು ಉತ್ತಮ ಗುಣ. ಎಲ್ಲರ ಬಗೆಗೂ ಇಂತಹ ಧೋರಣೆ ಹೊಂದಿರಬೇಕು. ಜನರ ಗೌರವ ನಿಮಗೆ ಬೇಕು ಎಂದಾದರೆ, ಕೆಲವು ಹಾನಿಕಾರಕ ವರ್ತನೆಗಳನ್ನು ನಿಮ್ಮದಾಗಿಸಿಕೊಳ್ಳಬೇಡಿ. ಏಕೆಂದರೆ, ಕೆಲವು ರೀತಿಯ ವರ್ತನೆ ಹೊಂದಿರುವ ಜನರನ್ನು ಇತರರು ಇಷ್ಟಪಡುವುದಿಲ್ಲ. ಜನರಿಂದ ಗೌರವ ಪಡೆಯಲು ನಮ್ಮ ನಡೆನುಡಿ ಗೌರವಪೂರ್ಣವಾಗಿಯೂ, ಜವಾಬ್ದಾರಿಯುತವಾಗಿಯೂ ಇರಬೇಕು. ಒಣಜಂಭ, ಅತಿಯಾಗಿ ಹೊಗಳಿಕೊಳ್ಳುವ ಸ್ವಭಾವ ಇಂಥವುಗಳನ್ನು ದೂರವಿಡಬೇಕು.  

•    ಜನರನ್ನು ಓಲೈಸುವ ಗುಣ (People Pleasing Nature)
ನೀವು ಎಲ್ಲರನ್ನೂ ಪ್ಲೀಸ್‌ ಮಾಡುವ ಗುಣ ಹೊಂದಿದ್ದರೆ, ಇತರರ ಅಗತ್ಯಗಳನ್ನು (Needs) ಪೂರೈಸಲು ಬೆನ್ನು ಬಾಗಿ ನಿಂತು ಸೇವೆ ಮಾಡುವ ಧೋರಣೆ ಹೊಂದಿದ್ದರೆ ನಿಮ್ಮೊಳಗೆ ಒಂದು ರೀತಿಯ ಖಾಲಿತನ (Empty) ಇರುತ್ತದೆ. ಸದಾಕಾಲ ಇತರರನ್ನು ಓಲೈಸುವ ಗುಣ ಒಳ್ಳೆಯದಲ್ಲ. ನಿಮ್ಮ ಶಕ್ತಿಯನ್ನೆಲ್ಲ ಇತರರಿಗೆ ವ್ಯಯ ಮಾಡುವುದರಿಂದ ನಿಮಗೇನೂ ಉಳಿಯುವುದಿಲ್ಲ. ಏನೇ ಹೇಳಿದರೂ ನೀವು ಮಾಡಿಕೊಡುತ್ತೀರಿ ಎನ್ನುವ ಲಘುವಾದ ಭಾವನೆ ಬರುತ್ತದೆ. ಹಾಗೂ ಅವಕಾಶವಾದಿಗಳು (Opportunists) ಈ ಗುಣವನ್ನು ಲಾಭ ಮಾಡಿಕೊಳ್ಳುತ್ತಾರೆ. ಇದರರ್ಥ, ಸಹಾಯ (Help) ಮಾಡಬಾರದು ಎಂದಲ್ಲ. ಆದರೆ, ನಿಮ್ಮನ್ನು ಕಡೆಗಣಿಸಿ ಯಾವತ್ತೂ ಬೆನ್ನು ಬಾಗಿಸಿಕೊಂಡಿರುವ ಗುಣ ಒಳ್ಳೆಯದಲ್ಲ. ನಿಮ್ಮ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು.

Parenting Tips: ಮಕ್ಕಳನ್ನು ಈ ರೀತಿ ಬೆಳೆಸಿದ್ರೆ ಪೋಷಕರು ಯಾವಾಗ್ಲೂ ಟೆನ್ಶನ್‌ ಫ್ರೀ ಆಗಿರ್ಬೋದು

•    ಮಿತಿಯ (Boundaries) ಅರಿವಿಲ್ಲವೇ?
ಪ್ರತಿಯೊಂದು ಸಂಬಂಧದಲ್ಲೂ (Relation) ಮಿತಿ ಇರುತ್ತದೆ. ಅದು ಆ ಮಿತಿಯಲ್ಲಿದ್ದರೆ ಮಾತ್ರ ಚಂದ. ನಿಮಗೆ ಈ ಮಿತಿಗಳ ಕುರಿತು ಅರಿವಿಲ್ಲ ಎಂದಾದರೆ, ಜನ (People) ನಿಮ್ಮನ್ನು ಗೌರವಿಸುವುದಿಲ್ಲ. ಸಂಬಂಧದಲ್ಲಿ ಅಭದ್ರತೆ (Insecurity) ಇರುವಾಗ ಎಲ್ಲದರಲ್ಲೂ ಮೂಗು ತೂರಿಸುವ ಅಭ್ಯಾಸ ಕಂಡುಬರುತ್ತದೆ ಎನ್ನುತ್ತದೆ ವಿಜ್ಞಾನ. ಹೀಗಾಗಿ, ಸಂಬಂಧದಲ್ಲಿ ನಿಮಗೆ ತೃಪ್ತಿ ಇಲ್ಲವಾದರೆ, ಮೊದಲಿಗೆ ನಿಮ್ಮ ಧೋರಣೆಗಳನ್ನು (Behaviour) ಪರಿಶೀಲನೆ ಮಾಡಿಕೊಳ್ಳಿ.

•    ಜನರೇ ಹಾಗೆ
ಕೆಲವು ಜನರೇ ಹಾಗಿರುತ್ತಾರೆ, ಅವರಿಗೆ ಇತರರನ್ನು ಗೌರವಿಸಲು (Respect) ಬರುವುದಿಲ್ಲ. ಯಾರನ್ನೂ ನಂಬುವುದಿಲ್ಲ. ಆರೋಗ್ಯಕರ (Healthy) ನಿಲುವನ್ನು ಹೊಂದಿರುವುದಿಲ್ಲ. ಅಂಥವರು ಸಹ ಯಾರನ್ನೂ ಗೌರವಿಸುವುದಿಲ್ಲ. ಅತಿಯಾಗಿ ಸ್ವಾರ್ಥಿಗಳಾಗಿದ್ದು, ತಮ್ಮದೇ ಸೀಮಿತ ದೃಷ್ಟಿಕೋನ ಹೊಂದಿರುತ್ತಾರೆ. ಇವರು ನಿಮ್ಮನ್ನು ಗೌರವಿಸದಿದ್ದರೆ ಏನೂ ಸಮಸ್ಯೆ ಇಲ್ಲ! ಅಲ್ಲದೆ, ಕೆಲವು ಜನರಿಗೆ ನಿಮ್ಮ ಬಗ್ಗೆ ಏನೂ ಗೊತ್ತಿಲ್ಲದೆ ಇರಬಹುದು, ತೀರ ಅಪರಿಚಿತರಾಗಿದ್ದಾಗಲೂ ಅನೇಕರು ಗೌರವ ನೀಡುವುದಿಲ್ಲ.

Behaviour Tips: ಕ್ಲಾಸಿ ಜನ ಎಂದೆನಿಸ್ಬೇಕಾ? ಕ್ಲಾಸಿ ಜನರಲ್ಲಿರೋ ಈ ಗುಣ ಅಳವಡಿಸಿಕೊಳ್ಳಿ

•    ನಿಮಗಾಗಿ ನೀವು
ಜನ ನಮ್ಮನ್ನು ನೋಡುವ ದೃಷ್ಟಿಕೋನ (Veiw), ನಾವು ನಮ್ಮನ್ನು ಹೇಗೆ ನೋಡುತ್ತೇವೆ ಎನ್ನುವುದನ್ನೂ ಅವಲಂಬಿಸಿದೆ. ನೀವು ಸದಾಕಾಲ ಎಲ್ಲರೊಂದಿಗೂ ಹೊಂದಾಣಿಕೆ (Adjustment) ಮಾಡಿಕೊಳ್ಳುತ್ತಿದ್ದರೆ, ಮೌಲ್ಯಗಳೇ (Values) ಇಲ್ಲದಂತೆ ವರ್ತಿಸಿದರೆ, ನಿಮ್ಮ ಕುರಿತು ನಿರ್ಧಾರ ಕೈಗೊಳ್ಳುವ ಕಾರ್ಯವನ್ನು ಇತರರಿಗೆ ಒಪ್ಪಿಸಿದರೆ ನಿಮಗೆ ಗೌರವ ದೊರೆಯುವುದು ಕಡಿಮೆ. 
 

click me!