
ಈಗಿನ ಜನರೇಷನ್ ಹೇಗಿದೆ ಎಂದರೆ ತಂದೆ, ತಾಯಿಗಿಂತ ಮಕ್ಕಳು 10 ಪಟ್ಟು ಚುರುಕಾಗಿರುತ್ತವೆ. ಮಾತು, ನಡವಳಿಕೆ, ಚುರುಕುತನ ಯಾವುದೇ ವಿಷಯವಿರಬಹುದು. ಅಂದರೆ ಫಾಸ್ಟ್ ತಿಂಕಿಂಗ್ ಕ್ಯಾಪ್ಯಾಸಿಟಿ (Thinking Capacity)ಯನ್ನು ಸಣ್ಣ ವಯಸ್ಸಿಗೇ ಬೆಳೆಸಿಕೊಂಡಿರುತ್ತಾರೆ. ಅದು ಸಾಧಕ ಬಾಧಕ (Pro-cons) ಎರಡನ್ನೂ ಒಳಗೊಂಡಿರುತ್ತವೆ. ಇದು ಜೆನೆಟಿಕ್ಸ್ ಅಥವಾ ಹೊರಗಿನ ಪ್ರಪಂದಿಂದ ಬಂದಿರಲೂಬಹುದು. ಆದರೆ ಅವು ಕಲಿಯುವುದು ದೊಡ್ಡವರನ್ನು ನೋಡಿಯೇ ಅಲ್ವೆ? ಹಾಗಾಗಿ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಿ ಎಂದು ಹಿರಿಯರು ಹೇಳಿದ್ದಾರೆ. ನಾವು ಮಕ್ಕಳಿಗೆ ಕಟ್ಟಿ ಕೊಡುವ ಬದುಕಿನ ಫೌಂಡೇಷನ್ ಅವರ ಮುಂದಿನ ಹಾದಿ ಹೇಗೆ ಇರುತ್ತೆ ಎಂಬುದರ ಮೇಲೆ ನಿರ್ಧಾರವಾಗುತ್ತೆ.
ನಾವೆಲ್ಲ ನಮ್ಮ ಹಿರಿಯರನ್ನು (Elders) ನೋಡಿ ಬೆಳಿತೀವಿ. ಅವರು ನಡೆದುಕೊಂಡು ಬಂದ ಹಾದಿಯನ್ನು ಗಮನಿಸಿ, ಅವರಂತೆ ಕೆಲಸವನ್ನು ಕಲಿತು ಅನುಸರಿಸಿಕೊಂಡು ಬರುತ್ತೇವೆ. ಹಾಗೆ ಮನೆಯಲ್ಲಿ ಮಕ್ಕಳಿದ್ದರೆ, ಅವರೂ ನಮ್ಮನ್ನು ಗಮನಿಸಿ ಅನುಸರಿಸುತ್ತಾರೆ ಎಂಬುದನ್ನು ದೊಡ್ಡವರಾದ ನಾವು ಮರೆತುಬಿಡುತ್ತೇವೆ.
Parenting Tips : ಮಕ್ಕಳಿಂದ ಮುಜುಗರ ತಪ್ಪಿಸಲು ಇಲ್ಲಿವೆ ಪರಿಹಾರ
ಕೆಲ ಘಟನೆಗಳು ಇಲ್ಲಿವೆ!
ಎರಡು ವರ್ಷದ ಮಗ ಬ್ಯಾಟರಿಯನ್ನು ಎತ್ತು ಬಿಸಾಕಿದನೆಂದು ಅಮ್ಮ ಅವನಿಗೆ ಜೋರಾಗಿ ಬೈದಿದ್ದಳು. ಅಮ್ಮನ ಬೈಗುಳಕ್ಕೆ ಬೇಸರವಾಗಿ ದುಃಖ ತಡಿಯಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದ. ಅಮ್ಮನ ಮಾತಿನ ತೀವ್ರತೆ ಅವನಿಗೆ ಅವಮಾನಿಸಿದಂತಾಯಿತು. ಮಕ್ಕಳ ತರ್ಲೆ ತುಂಟತನ ಈ ವಯಸ್ಸಿನಲ್ಲಿ ಸಹಜ ಎಂದು ಕೊನೆಗೆ ಏನು ತಿಳಿಯದ ಆತನಿಗೆ ಹಾಗೆ ಬೈದು ಬಿಟ್ಟೆನಲ್ಲ ಎಂದು ನನಗೇ ಬೇಜಾರಾಗಿ ಅವನಿಗೆ ಮುದ್ದು ಮಾಡಿ ಕ್ಷಮೆಯೂ ಕೇಳಿದ್ದೆ.
2. ಹೀಗೆ ಒಂದಿನ ಪಕ್ಕದ ಮನೆಯ ದಂಪತಿ ಏನೋ ಮಾತನಾಡುತ್ತಿದ್ದರು. ಮಾತನಾಡುತ್ತಿರುವಾಗ ವಾದ ವಿವಾದಕ್ಕೆ ತಿರುಗುತ್ತಿತ್ತು. ಧ್ವನಿ ಜೋರಾಗುತ್ತಿತ್ತು. ಅಲ್ಲಿಯೇ ಇದ್ದ ಅವರ ಮಗು ಜೋರಾಗಿ ಅಳುವುದಕ್ಕೆ ಆರಂಭಿಸಿತು. ಅವರ ಕಿತ್ತಾಟ ನಿಲ್ಲಿಸಿ, ಅವರಿಬ್ಬರೂ ಮಗುವನ್ನು ಸಂತೈಸಿದರು. ಅದಾದ ಕೆಲವು ದಿನಗಳ ನಂತರ ಮಗುವಿನ ತಂದೆ ಏನೋ ಹೇಳಿದರೆಂದು ಆ ಮಗು ಏರು ಧ್ವನಿಯಲ್ಲಿ ಮಾತನಾಡಿ, ತಂದೆಯನ್ನೇ ಸುಮ್ಮನಿರಿಸಿತು. ಇದಕ್ಕೆ ಕಾರಣ ಅಂದು ಆ ದಂಪತಿಗಳು (Couples) ಆಡಿದ ಮಾತುಗಳು ಆ ಮಗುವಿನ ಮೇಲೆ ಗಾಢ ಪರಿಣಾಮಬೀರಿತ್ತು.
3.ಮೊನ್ನೆ ಎರಡು ವರ್ಷದ ನನ್ನ ಮಗ ಹೂವಿನ ಗಿಡದ ಬಳಿ ಬಂದ. ಪಕ್ಕದಲ್ಲಿದ್ದ ತುಳಸಿ ಗಿಡ ಬಾಡಿ ಹೋಗಿತ್ತು. ದಿನವೂ ಬೆಳಗ್ಗೆ ಅದಕ್ಕೆ ನೀರು ಹಾಯಿಸುತ್ತಿದ್ದ ನಾನು ಯಾವುದೋ ಕೆಲಸದ ನಡುವೆ ಮರೆತುಬಿಟ್ಟೆ. ಆಗ ತುಳಸಿ ಗಿಡವನ್ನು ಗಮನಿಸಿದ ಅವನು ತಾನೆ ಚೆಂಬಿನಲ್ಲಿ ನೀರು ತಂದು ಹಾಯಿಸಿದ.
ಸಣ್ಣ ಮಕ್ಕಳಿರುವ ಮನೆಯಲ್ಲಿ ಮಾತುಗಳು, ನಡವಳಿಕೆಗಳು (Behavriour) ದೊಡ್ಡವರಿಗೆ ತಿಳಿದಿರಬೇಕು. ಪುಟ್ಟ ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಎಂಬುದು ತಿಳಿದಿರುವುದಿಲ್ಲ. ಅವು ದೊಡ್ಡವರನ್ನು ನೋಡಿ ಕಲಿತಿರುತ್ತವೆ. ನಮ್ಮ ನಡವಳಿಕೆ, ಮಾತು, ಕೆಲಸ ಎಲ್ಲವನ್ನೂ ಅವರು ಗಮನಿಸುತ್ತಿರುತ್ತಾರೆ.
ಮೊಮ್ಮಕ್ಕಳನ್ನು ಎಷ್ಟು ಸಮಯ ಅಜ್ಜ – ಅಜ್ಜಿ ಜೊತೆ ಬಿಡ್ಬೇಕು?
ದೊಡ್ಡವರು ಮಾಡಬೇಕಾದ ಕೆಲಸ ಹೀಗಿರಲಿ:
1. ಮಕ್ಕಳ ಮುಂದೆ ನಯ ವಿನಯದಿಂದ ನಡೆದುಕೊಳ್ಳುವುದು.
2. ತಪ್ಪು ಮಾಡಿದಾಗ ಸಿಟ್ಟು ಮಾಡದೆ, ಸಮಾಧಾನದಿಂದ ತಿಳಿ ಹೇಳಿ. ಹೀಗಲ್ಲ ಹೇಗೆ ಎಂದು ಸರಿ ದಾರಿ ತೋರಿಸುವುದು. ಸಿಟ್ಟು ಮಾಡಿದರೆ ಮಕ್ಕಳ ಮನಸ್ಸಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.
3. ಹಿರಿಯರನ್ನು ಗೌರವಿಸುವುದನ್ನು ಕಲಿಸುವುದು.
4. ಒಳ್ಳೆಯ ಕಥೆ, ಕಲೆ ಹೀಗೆ ಬೇರೆ ಕಡೆ ಮಕ್ಕಳನ್ನು ಆಕರ್ಷಿಸುವುದು.
5. ಮಕ್ಕಳ ಜೊತೆ ಟೈಂ ಸ್ಪೆಂಡ್ (Time Spend) ಮಾಡುವುದು ಬಹಳ ಮುಖ್ಯ. ಇದರಿಂದ ಅವರಿಗೆ ಖುಷಿ ಜೊತೆಗೆ ಇನ್ನಷ್ಟು ಫ್ರೆಂಡ್ಲಿಯಾಗಿರಲು ಸಾಧ್ಯವಾಗುತ್ತದೆ.
6. ಮಕ್ಕಳೊಂದಿಗೆ ಸೂಕ್ತ ವಿಷಯಗಳ ಬಗ್ಗೆ ಚರ್ಚೆ, ಅಭಿಪ್ರಾಯ ಪಡೆಯುವುದು.
7. ಹೊರಗಡೆ ಕರೆದುಕೊಂಡು ಹೋಗುವುದು. ಸ್ನೇಹಿತರೊಂದಿಗೆ (Friends) ಆಟವಾಡಲು ಬಿಡುವುದು.
8. ಊಟ, ತಿಂಡಿ ಜೊತೆಯಲ್ಲಿ ಮಾಡುವುದು.
9. ಮಕ್ಕಳು ಕೇಳಿದ್ದನ್ನು ತಕ್ಷಣ ಕೊಡಿಸಬೇಡಿ. ಅದಕ್ಕಾಗಿ ಸ್ವಲ್ಪ ಕಾಯಿಸಿ ಪಡೆದುಕೊಳ್ಳುವ ಸಾಮರ್ಥ್ಯ ಅವರಲ್ಲಿ ಬೆಳೆಸುವುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.