
ಜೆನ್ ಝೀ ಹೇಳೋದೇನು?
'ಜೆನ್ ಜಿ' (Generation Z) ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು? ಇತ್ತೀಚೆಗೆ ಬಂದ ಸಮೀಕ್ಷೆ ವರದಿ ಪ್ರಕಾರ, ತೀರಾ ಇತ್ತೀಚಿನ ಜನರೇಶನ್ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಅನ್ನುವ ಸಂಪ್ರದಾಯ, ಪದ್ಧತಿಯನ್ನು ಜೆನ್ ಜಿ ಒಪ್ಪುತ್ತಿಲ್ಲ. ಬದಲಿಗೆ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು ಅದೂ ಇದೂ ಅಂತ ಮಾತನಾಡತೊಡಗಿವೆ ಈ ಜನರೇಶನ್. ಸಮೀಕ್ಷೆ ವರದಿ ಪ್ರಕಾರ ಹೇಳುವುದಾದರೆ, 75% ಕ್ಕಿಂತ ಹೆಚ್ಚಿನ ತರುಣ-ತರುಣಿಯರು ಮದುವೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಸಂಗಾತಿ, ಡೇಟಿಂಗ್, ಲಿವ್‌ಇನ್ ರಿಲೇಶನ್‌ಶಿಪ್ ಹಾಗೂ ಫ್ರೆಂಡ್‌ಶಿಪ್ ಮಾತ್ರ ಇಷ್ಟಪಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣವೇನು?
ಹೌದು, ಇಂದಿನ ಜೆನ್ ಜಿ ಸಮೂದಾಯವು ಮದುವೆ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೇಳುವ ಮುಖ್ಯ ಕಾರಣ, ಮದುವೆ, ಸಂಸಾರ ಎಂಬ ಪದ್ಧತಿಯಲ್ಲಿ ಸ್ವಾತಂತ್ರ್ಯ ಇಲ್ಲ ಎಂಬ ಅವರ ನಿಲುವು. ಇದು ಸರಿ ಅಥವಾ ತಪ್ಪು ಎನ್ನುವುದು ಬೇಡ, ಹೀಗೆ ಯೋಚಿಸುತ್ತಿದ್ದಾರೆ ಎನ್ನಬಹುದು. ಸರಿ-ತಪ್ಪು ಅಂತ ಚರ್ಚೆಗೆ ಹೋದರೆ, ಕೊನೆಗೆ ಅದು 'ಅವರಿಗೆ ಅದು ಸರಿ, ಆದರೆ ಮನೆಯವರ, ಸಮಾಜದ ಪ್ರಕಾರ ಅದು ತಪ್ಪು' ಎಂಬ ಮಾತಲ್ಲಿ ಕೊನೆಗೊಳ್ಳಬಹುದು. ಮದುವೆ ಎನ್ನುವುದು ವೈಯಕ್ತಿಕ ವಿಷಯ ಎಂದು ಅರ್ಥೈಸಿಕೊಂಡು ಹೇಳಬಹುದಾದರೆ, ಅದು ಇಂದು ತೀರಾ ಪರ್ಸನಲ್ ಆಯ್ಕೆ ಎಂಬ ಮಟ್ಟಕ್ಕೆ ಹೋಗಿದೆ.
ಆದರೆ, ಸಮಾಜ ಎನ್ನುವುದು ಶುರುವಾಗುವುದೇ ಮದುವೆ, ಸಂಸಾರ ಹಾಗೂ ಮಕ್ಕಳ ಮೂಲಕವೇ. ಪ್ರತಿಯೊಬ್ಬ ಮಕ್ಕಳೂ ಕೂಡ ಇಂಡಿವ್ಯೂಸ್ವಲ್ ಎಂದು ನಮಗೆ ಎನ್ನಿಸಿದರೂ ಮತ್ತೆ ಅದರ ಮೂಲ ಫ್ಯಾಮಿಲಿಯೇ ಆಗಿದೆ. ಆದರೆ, ಆ ಫ್ಯಾಮಿಲಿ ಆಗುವ ಮದುವೆಯನ್ನೇ ಈಗಿನ ಜನರೇಶನ್ ವಿರೋಧಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ, ಮನೆಮನೆಗಳಲ್ಲೂ ನೋಡುತ್ತಿರುವ ದಿನನತ್ಯದ 'ರಾಮಾಯಣ' ಹಾಗೂ 'ಮಹಾಭಾರತ'ಗಳಂತಹ ಘಟನೆಗಳು ಎನ್ನಬಹುದು. ಅಂದರೆ, ಏಳುಬೀಳುಗಳು ಹಾಗೂ ಜಗಳ-ಕದನಗಳು! ಮನೆಮನೆಗಳಲ್ಲಿ ಇರುವ ಪ್ರೀತಿ-ಅಕ್ಕರೆಗಳು ಇಂದು ಹೊರಗೆ ಬರುತ್ತಿಲ್ಲ ಆದರೆ, ರಣರಂಗ ಆದಾಗ ಅದು ಬೀದಿಯಲ್ಲಿ ಪ್ರದರ್ಶನ ಆಗುತ್ತವೆ.
ಜೆನ್ ಜಿ ಮದುವೆಯನ್ನು ಒಪ್ಪುತ್ತಿಲ್ಲ ಎನ್ನುವುದಕ್ಕ ಸಾವಿರಾರು ಕಾರಣಗಳಿರಬಹುದು ಹಾಗೂ ಅದು ವೈಯಕ್ತಿಕವೂ ಆಗಿರಬಹುದು. ಆದರೆ
'ಜೆನ್ ಜಿ' ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು? ಇತ್ತೀಚೆಗೆ ಬಂದ ಸಮೀಕ್ಷೆ ವರದಿ ಪ್ರಕಾರ, ತೀರಾ ಇತ್ತೀಚಿನ ಜನರೇಶನ್ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಅನ್ನುವ ಸಂಪ್ರದಾಯ, ಪದ್ಧತಿಯನ್ನು ಜೆನ್ ಜಿ ಒಪ್ಪುತ್ತಿಲ್ಲ. ಬದಲಿಗೆ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು ಅದೂ ಇದೂ ಅಂತ ಮಾತನಾಡತೊಡಗಿವೆ ಈ ಜನರೇಶನ್.
ಸಮೀಕ್ಷೆ ವರದಿ ಪ್ರಕಾರ ಹೇಳುವುದಾದರೆ, 75% ಕ್ಕಿಂತ ಹೆಚ್ಚಿನ ತರುಣ-ತರುಣಿಯರು ಮದುವೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಸಂಗಾತಿ, ಡೇಟಿಂಗ್, ಲಿವ್‌ಇನ್ ರಿಲೇಶನ್‌ಶಿಪ್ ಹಾಗೂ ಫ್ರೆಂಡ್‌ಶಿಪ್ ಮಾತ್ರ ಇಷ್ಟಪಡುತ್ತಿದ್ದಾರೆ. ಒಮ್ಮೆ ಮದುವೆ ಆಗುವುದೇ ಆದರೆ ಅದು ಲೇಟ್ ಮ್ಯಾರೇಜ್ ಓಕೆ ಅಂತಿದಾರೆ. ಇದು ಯಾಕೆ, ಈ ಬದಲಾವಣೆಗೆ ಕಾರಣವೇನು? ಆದರೆ, ಫ್ಯಾಮಿಲಿಗಳು ಹಾಗೂ ಸಮಾಜ ಜೆನ್ ಝೀಯ ಈ ಟ್ರೆಂಡ್ ಬಗ್ಗೆ ಅಪಸ್ವರ ಎತ್ತುತ್ತಿವೆ.
ಹೌದು, ಇಂದಿನ ಜೆನ್ ಜಿ ಸಮೂದಾಯವು ಮದುವೆ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೇಳುವ ಮುಖ್ಯ ಕಾರಣ, ಮದುವೆ, ಸಂಸಾರ ಎಂಬ ಪದ್ಧತಿಯಲ್ಲಿ ಸ್ವಾತಂತ್ರ್ಯ ಇಲ್ಲ ಎಂಬ ಅವರ ನಿಲುವು. ಇದು ಸರಿ ಅಥವಾ ತಪ್ಪು ಎನ್ನುವುದು ಬೇಡ, ಹೀಗೆ ಯೋಚಿಸುತ್ತಿದ್ದಾರೆ ಎನ್ನಬಹುದು. ಸರಿ-ತಪ್ಪು ಅಂತ ಚರ್ಚೆಗೆ ಹೋದರೆ, ಕೊನೆಗೆ ಅದು 'ಅವರಿಗೆ ಅದು ಸರಿ, ಆದರೆ ಮನೆಯವರ, ಸಮಾಜದ ಪ್ರಕಾರ ಅದು ತಪ್ಪು' ಎಂಬ ಮಾತಲ್ಲಿ ಕೊನೆಗೊಳ್ಳಬಹುದು. ಮದುವೆ ಎನ್ನುವುದು ವೈಯಕ್ತಿಕ ವಿಷಯ ಎಂದು ಅರ್ಥೈಸಿಕೊಂಡು ಹೇಳಬಹುದಾದರೆ, ಅದು ಇಂದು ತೀರಾ ಪರ್ಸನಲ್ ಆಯ್ಕೆ ಎಂಬ ಮಟ್ಟಕ್ಕೆ ಹೋಗಿದೆ.
ಆದರೆ, ಸಮಾಜ ಎನ್ನುವುದು ಶುರುವಾಗುವುದೇ ಮದುವೆ, ಸಂಸಾರ ಹಾಗೂ ಮಕ್ಕಳ ಮೂಲಕವೇ. ಪ್ರತಿಯೊಬ್ಬ ಮಕ್ಕಳೂ ಕೂಡ ಇಂಡಿಪೆಂಡೆಂಟ್ ಎಂದು ನಮಗೆ ಎನ್ನಿಸಿದರೂ ಮತ್ತೆ ಅದರ ಮೂಲ ಫ್ಯಾಮಿಲಿಯೇ ಆಗಿದೆ. ಆದರೆ, ಆ ಫ್ಯಾಮಿಲಿ ಆಗುವ ಮದುವೆಯನ್ನೇ ಈಗಿನ ಜನರೇಶನ್ ವಿರೋಧಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ, ಮನೆಮನೆಗಳಲ್ಲೂ ನೋಡುತ್ತಿರುವ ದಿನನತ್ಯದ 'ರಾಮಾಯಣ' ಹಾಗೂ 'ಮಹಾಭಾರತ'ಗಳಂತಹ ಘಟನೆಗಳು ಎನ್ನಬಹುದು. ಅಂದರೆ, ಏಳುಬೀಳುಗಳು ಹಾಗೂ ಜಗಳ-ಕದನಗಳು! ಮನೆಮನೆಗಳಲ್ಲಿ ಇರುವ ಪ್ರೀತಿ-ಅಕ್ಕರೆಗಳು ಇಂದು ಹೊರಗೆ ಬರುತ್ತಿಲ್ಲ ಆದರೆ, ರಣರಂಗ ಆದಾಗ ಅದು ಬೀದಿಯಲ್ಲಿ ಪ್ರದರ್ಶನ ಆಗುತ್ತವೆ.
ಜೆನ್ ಜಿ ಮದುವೆಯನ್ನು ಒಪ್ಪುತ್ತಿಲ್ಲ ಎನ್ನುವುದಕ್ಕ ಸಾವಿರಾರು ಕಾಋಣಗಳಿರಬಹುದು ಹಾಗೂ ಅದು ವೈಯಕ್ತಿಕವೂ ಆಗಿರಬಹುದು. ಆದರೆ, ಅದರ ಪರಿಣಾಮ ಮಾತ್ರ ಸಾಮಾಜಿಕ ಹಾಗೂ ಇಡೀ ದೇಶ ಹಾಗೂ ಜಗತ್ತಿಗೇ ಪರಿಣಾಮ ಬೀರಿವಂಥದ್ದು. ಕಾರಣ-ಪರಿಣಾಮಗಳು ಏನೇ ಆಗಿರಬಹುದು ಆದರೆ ಇಂದಿನ ಯುವಜನತೆಗೆ ಮದುವೆ-ಸಂಸಾರ ಎನ್ನುವುದು ಜೀವನಕ್ಕೇ ದೊಡ್ಡ ಅಡ್ಡಗೋಡೆ ಎನ್ನಿಸಕೊಂಡಿದೆಯಾ? ಹೌದು ಎನ್ನುತ್ತಿವೆ ಸಮೀಕ್ಷೆಗಳು. ಆದರೆ, ಅದಕ್ಕೆ ಅನುಗುಣವಾದ, ಆಲ್ಟರ್‌ನೇಟಿವ್ ಎಂಬಂಥಹ ಸಿಸ್ಟಮ್ ಸಮಾಜದಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ಇಂದಿನ ಯುವಜನತೆ ಮಧ್ಯವಯಸ್ಸು ದಾಟುವತನಕ ಮದುವೆ ಮುಂದೂಡಿ, ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನೆಲ್ಲಾ ಈಡೇರಿಸಿಕೊಂಡು ಆ ಬಳಿಕ ‘ಲೈಫಲ್ಲಿ ಇನ್ನೇನಿದೆ’ ಎನ್ನುವ ಹಂತದಲ್ಲಿ ಮದುವೆ ಆಗುತ್ತಿದ್ದಾರೆ. ಮದುವೆಯನ್ನು ಆದಷ್ಟೂ ಮುಂದೂಡಿ, ಲೇಟ್ ಮ್ಯಾರೇಜ್ ಕಡೆ ಮುಖ ಮಾಡುತ್ತಿದೆ ಜೆನ್ ಝೀ ಎನ್ನಬಹುದು!
ಸಮೀಕ್ಷೆ ಯಾವಾಗಲೂ ಅದರಲ್ಲೂ ಭಾಗಿಯಾದವರ ಅಭಿಪ್ರಾಯ. ಸಮಾಜ ಎಂದಮೇಲೆ, ಜೆನ್ ಜಿ ಸಮೂದಾಯ ಎಂದ ಮೇಲೆ ಅವರಲ್ಲೂ ವಿಭಿನ್ನ ಥಿಂಕಿಂಗ್ ಹಾಗೂ ಒಪಿನಿಯನ್ ಇದ್ದೇ ಇರುತ್ತವೆ. ಎಲ್ಲವನ್ನೂ ಇನ್ನೂ ಸಮೀಕ್ಷೆ ಮಾಡಿಲ್ಲ. ಆದರೆ, ಜೆನ್ ಜಿ ಎಂದು ಹೇಳುವ ಇಂದಿನ ಯುವಜನತೆಯಲ್ಲಿ ಹೆಚ್ಚಿನವರ ಅಭಿಪ್ರಾಯ ಇದು ಎನ್ನಲಾಗುತ್ತಿದೆ. ಹೆಸರಾಂತ ಚಿಂತಕ, ಆಧ್ಯಾತ್ಮಿಕ ಗುರು ಹಾಗೂ ಕಳೆದ ಶತಮಾನದ ಫೇಮಸ್ ವ್ಯಕ್ತಿ 'ಓಶೋ' ಅವರು 'ಮುಂದೆ 200 ವರ್ಷಗಳೊಳಗೆ ಈ ಮದುವೆ ಎನ್ನುವ ಪದ್ಧತಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ' ಎಂದಿದ್ದಾರೆ. ಅವರು ಹೇಳಿದಂತೆ ಇದೀಗ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಮುಂದೇನು? ಮುಂದಿನದು ಮುಂದೆ ತಿಳಿಯಲಿದೆ ಎನ್ನಬೇಕಷ್ಟೇ..!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.