ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

By Vinutha Perla  |  First Published Aug 2, 2023, 9:26 AM IST

ಲವ್‌ ಅನ್ನೋದು ತುಂಬಾ ಬ್ಯೂಟಿಫುಲ್ ಫೀಲಿಂಗ್. ಆದ್ರೂ ಅಲ್ಲೂ ಸಹ ಕನ್‌ಫ್ಯೂಶನ್ಸ್ ಇದ್ದಿದ್ದೇ. ಹ್ಯಾಪಿ ಎಂಡಿಂಗಾ, ಸ್ಯಾಡ್‌ ಎಂಡಿಂಗಾ, ಹುಡುಗಿ ಕೈ ಕೊಡ್ತಾಳ ಅನ್ನೋ ಬಗ್ಗೆ ಡೌಟ್ ಅಂತೂ ಇದ್ದೇ ಇರುತ್ತೆ. ನಿಮ್ಗೂ ಇಂಥಹದ್ದೇ ಸಮಸ್ಯೆ ಕಾಡ್ತಿದ್ರೆ ಈ ಫೋಟೋ ನೊಡಿ ನಿಮ್ ಲವ್ ಲೈಫ್ ಹೇಗಿರುತ್ತೆ ತಿಳ್ಕೊಳ್ಳಿ.


ಪ್ರೀತಿ ಅಂದ್ಮೇಲೆ ಅಲ್ಲಿ ಗೊಂದಲಗಳು ಇದ್ದಿದ್ದೇ. ಹುಡುಗಿ ಸಿಗ್ತಾಳ ಇಲ್ವಾ, ಹುಡುಗ ಕೈ ಕೊಡ್ತಾನ, ನಮ್ಮಿಬ್ಬರ್ ಲವ್ ಹ್ಯಾಪಿ ಎಂಡಿಂಗಾ ಅಥವಾ ಸ್ಯಾಡ್ ಎಂಡಿಂಗಾ..ಇಬ್ಬರ ಮದುವೆಗೆ ಮನೆ ಬಂದಿ ಒಪ್ತಾರ ಇಲ್ವಾ. ಹೀಗೆ ನಾನಾ ರೀತಿಯಲ ಗೊಂದಲಗಳು ಕಾಡ್ತಾನೆ ಇರ್ತವೆ. ನೀವು ಸಹ ಸಂಬಂಧದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಆಪ್ಟಿಕಲ್ ಇಲ್ಯೂಶನ್ ನೋಡಿ ನಿಮ್ ಲವ್ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳ್ಕೋಬೋದು. ಫೋಟೋವನ್ನು ನೋಡಿದ ತಕ್ಷಣಕ್ಕೆ ನಿಮಗೇನು ಕಾಣಿಸುತ್ತದೆ ಎಂಬುದು ಸಂಬಂಧದಲ್ಲಿ ನೀವು ಎಷ್ಟು ಬದ್ಧತೆಯನ್ನು ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ. ಆಪ್ಟಿಕಲ್ ಭ್ರಮೆಯು ನೀವು ಮೊದಲು ನೋಡುವ ಸಂಬಂಧದ ಮೌಲ್ಯಗಳನ್ನು ನಿರ್ಧರಿಸುತ್ತದೆ

ಟಿಕ್‌ಟಾಕ್‌ನಲ್ಲಿ @mia_yilin ಎಂದು ಕರೆಯಲ್ಪಡುವ ಮಿಯಾ ಯಿಲಿನ್ ಎಂಬವರು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ 111,000ಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. 127 ಮಂದಿ ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. ಮಿಯಾ, ಪ್ರಪಂಚದಾದ್ಯಂತ ತಮ್ಮ 456,000 ಅನುಯಾಯಿಗಳ ಜೊತೆ ವಿವಿಧ ಭ್ರಮೆಗಳು, ಒಗಟುಗಳು ಮತ್ತು ಮೆದುಳಿನ ಕಸರತ್ತುಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿರುತ್ತಾರೆ.

Tap to resize

Latest Videos

Picture and Personality: ಚಿತ್ರ ನೋಡಿದಾಗ ಮೊದಲೇನು ಕಂಡಿತು? ಅದು ನಿಮ್ಮ ವ್ಯಕ್ತಿತ್ವ ಹೇಳುತ್ತೆ!

ಚಿತ್ರವನ್ನು ನೋಡಿದ ತಕ್ಷಣ ಮೊದಲಿಗೆ ನೀವೇನು ನೋಡುತ್ತೀರಿ ಎಂಬ ಶೀರ್ಷಿಕೆಯಡಿಯಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಮತ್ತು ಪೋಟೋದ ಅರ್ಥವೇನು ಎಂಬುದನ್ನು ಪಕ್ಕದಲ್ಲಿ ವಿವರಿಸಲಾಗಿದೆ. ಹಾಗಿದ್ರೆ ಫೋಟೋವನ್ನು ನೋಡಿದ ತಕ್ಷಣ ನಿಮಗೇನು ಕಾಣಿಸುತ್ತದೆ ಮತ್ತು ಅದರ ಅರ್ಥವೇನು ಎಂಬುದನ್ನು ತಿಳಿಯಿರಿ.

ಮೋಡ
ಫೋಟೋವನ್ನು ನೋಡಿದ ತಕ್ಷಣಕ್ಕೆ ಮೋಡದಂತೆ ಕಾಣಿಸಿದರೆ ನೀವು ಹೊರನೋಟಕ್ಕೆ ತುಂಬಾ ಧೈರ್ಯಶಾಲಿ ವ್ಯಕ್ತಿ. ಆದರೆ ಮನಸ್ಸಿನಲ್ಲಿ ತುಂಬಾ ಸೂಕ್ಷ್ಮ ವ್ಯಕ್ತಿತ್ವ (Personality) ಹೊಂದಿದ್ದೀರಿ ಎಂಬುದು ಅರ್ಥವಾಗುತ್ತದೆ. ಪ್ರೀತಿಯ ವಿಚಾರದಲ್ಲಿ ಯಾರಾದರೂ ನಿಮ್ಮ ಮನಸ್ಸನ್ನು ಸುಲಭವಾಗಿ ನೋಯಿಸಬಹುದು. ನೀವು ಪ್ರೀತಿ (Love)ಯನ್ನು ಬೇಗ ಸ್ವೀಕರಿಸುತ್ತೀರಿ ಮತ್ತು ದುಃಖಕ್ಕೆ ಒಳಗಾಗುತ್ತೀರಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಫೋಟೋ ನೋಡಿದ ಕೂಡಲೇ ನಿಮಗೆ ಮೋಡವೇ ಕಾಣಿಸುವ ಕಾರಣ ಸಂಬಂಧದಲ್ಲಿ ನೀವು ನಿಷ್ಠೆ ಬದ್ಧತೆಯ ಕೊರತೆಯನ್ನು ಹೊಂದಿರುತ್ತೀರಿ ಎಂಬುದು ಇದು ತಿಳಿಸುತ್ತದೆ. ನೀವು ಯಾರೊಂದಿಗಾದರೂ ಸೆಟಲ್‌ ಆಗುವ ಕಲ್ಪನೆಯನ್ನು ದ್ವೇಷಿಸುತ್ತೀರಿ ಎಂಬುದು ತಿಳಿದುಬರುತ್ತದೆ.

ಮೀನು
ಮೊದಲು ಚಿತ್ರವನ್ನು ನೋಡಿದ ಮೇಲೆ ತಕ್ಷಣ ಮೀನನ್ನು (Fish) ನೋಡಿದವರು ಪ್ರೀತಿಯ ಜೀವನವನ್ನು ಇಷ್ಟಪಡುತ್ತಾರೆ. ಜೀವನವು ಚಿಕ್ಕದಾಗಿದೆ ಮತ್ತು ನಾವೆಲ್ಲರೂ ಒಂದು ದಿನ ಸಾಯಲಿದ್ದೇವೆ, ನಾವು ಜೀವನವನ್ನು ಪೂರ್ಣವಾಗಿ ಬದುಕಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಮಾತ್ರವಲ್ಲ ಇಂಥವರು ಪ್ರೀತಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತಾರೆ. ತಮ್ಮ ಜೀವನದ (Life) ಅಮೂಲ್ಯ ಸಮಯವನ್ನು ಅರ್ಹರಲ್ಲದವರಿಗೆ ವ್ಯರ್ಥ ಮಾಡಬಾರದು ಎಂಬ ನಿಲುವಿಗೆ ಬದ್ಧರಾಗಿರುತ್ತಾರೆ ಎಂದು ಹೇಳಲಾಗಿದೆ. 

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಈ ಬಗ್ಗೆ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, ನಾನು ಫೋಟೋ ನೋಡಿದ ತಕ್ಷಣ ಮೀನನ್ನು ನೋಡಿದೆ ಮತ್ತು ಲವ್‌, ಸಂಬಂಧದ ಕುರಿತಾಗಿ ನೀವು ಹೇಳಿರುವುದು ನಿಜವಾಗಿದೆ ಎಂದಿದ್ದಾರೆ. ಇನ್ನು ಕೆಲವರು ಫೋಟೋ ನೋಡಿ ಗೊಂದಲಕ್ಕೊಳಗಾದೆ ಎನ್ನುತ್ತಾರೆ. ಫೋಟೋದಲ್ಲಿ ಮೋಡ, ಮೀನು ಎರಡೂ ತಕ್ಷಣಕ್ಕೆ ಗಮನಿಸಿದೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ನಾನು, ಮೀನು, ಮೋಡವನ್ನು ಪ್ರತ್ಯೇಕವಾಗಿ ಅಲ್ಲ ಆದರೆ ನಾನು ಮೀನಿನ ಮೋಡವನ್ನು ನೋಡಿದೆ' ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು, 'ನಾನು ಬೆಕ್ಕನ್ನು ನೋಡುತ್ತಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಎಲ್ಲಾ ಫೋಟೋಗಳು ಒಂದೇ ಸಾರಿಗೆ ಕಂಡರೆ ಏನರ್ಥ' ಎಂದು ಪ್ರಶ್ನಿಸಿದ್ದಾರೆ. 

ನೀವೂ ಸಹ ಫೋಟೋ ನೋಡಿ ನಿಮ್‌ ಲೈಫ್ ಹೇಗಿದೆ ತಿಳ್ಕೊಳ್ಳಿ. ನಿಮಗೆ ಸಂಬಂಧಿಸಿ ಈ ಆಪ್ಟಿಕಲ್ ಇಲ್ಯೂಶ್ ಸರಿಯಾಗಿದ್ಯಾ ಕಾಮೆಂಟ್‌ನಲ್ಲಿ ತಿಳಿಸಿ.

click me!