Optical Illusion: ಜನರ ನಡುವೆ ಇರೋ ಭೂತ ಯಾವ್ದು? ಗುರುತಿಸಿ

Published : Sep 10, 2023, 07:35 PM IST
Optical Illusion: ಜನರ ನಡುವೆ ಇರೋ ಭೂತ ಯಾವ್ದು? ಗುರುತಿಸಿ

ಸಾರಾಂಶ

ಇಲ್ಲೊಂದು ಭ್ರಮಾತ್ಮಕ ಚಿತ್ರವಿದೆ. ಇದರಲ್ಲಿ ಹಲವು ಜನ ಒಂದೆಡೆ ಸೇರಿದ್ದಾರೆ. ಇವರ ನಡುವೆ ಭೂತ ಸೇರಿಕೊಂಡಿದೆ. ಅದು ಯಾವುದು ಎಂದು ಗುರುತಿಸಿ ನೋಡೋಣ.  

ಇಲ್ಲೊಂದು ಚಿತ್ರ ನೋಡಿ. ಹಲವು ಜನರು ನೆರೆದಿದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ ಎಲ್ಲರೂ ಒಂದೆಡೆ ಸೇರಿರುವಂತೆ ಕಂಡುಬರುತ್ತದೆ. ಅದೂ ಸಹ ಅದ್ದೂರಿ ಸಭಾಂಗಣದಲ್ಲಿ. ಆದರೆ, ಈ ಚಿತ್ರದಲ್ಲೂ ಒಂದು ವಿಚಿತ್ರವಿದೆ. ಇಲಲಿ ನೆರೆದಿರುವ ಜನರಲ್ಲಿ ಒಬ್ಬ ಮಾತ್ರ ಮನುಷ್ಯನಲ್ಲ! ಅದು ಭೂತ. ಅಚ್ಚರಿಯಾಗುತ್ತಿದೆಯಾ? ಈ ಚಿತ್ರದ ವಿಶೇಷತೆಯೇ ಅದು. ಆ ಭೂತವನ್ನು ಗುರುತಿಸಿ ನೋಡೋಣ. ಹಾರರ್‌ ಚಿತ್ರಗಳನ್ನು ಸಾಕಷ್ಟು ಜನ ಇಷ್ಟಪಡುತ್ತಾರೆ. ಹಾರರ್‌ ಚಿತ್ರಗಳಿಗೂ ಭಾರೀ ಸಂಖ್ಯೆಯ ವೀಕ್ಷಕರಿದ್ದಾರೆ. ಅವು ಭಯದೊಂದಿಗೆ ಒಂದು ರೀತಿಯ ವಿನೋದವನ್ನೂ ನೀಡುತ್ತವೆ. ನೀವು ಸಹ ಅಂಥದ್ದನ್ನು ಇಷ್ಟಪಡುವವರಾಗಿದ್ದರೆ ಈ ಚಿತ್ರವನ್ನು ಸಹ ಆನಂದಿಸುತ್ತೀರಿ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿರುವ ಆಮಂತ್ರಿತ ಗಣ್ಯರ ಪೈಕಿ ಒಂದು ಭೂತವಿದೆ. ಅದನ್ನು ಪತ್ತೆ ಮಾಡಬೇಕು. ಈ ಪರೀಕ್ಷೆ ನಿಮ್ಮ ಗ್ರಹಿಸುವ ಸಾಮರ್ಥ್ಯವನ್ನು ಬಿಂಬಿಸುತ್ತದೆ. ನೀವು ಎಷ್ಟು ಸೂಕ್ಷ್ಮ ಪರಿಶೀಲನೆ ಹೊಂದಿದ್ದೀರಿ ಎನ್ನುವುದು ತಿಳಿಯುತ್ತದೆ. 

ಭೂತ (Ghost) ಸಿಕ್ಕಿತಾ?
ಒಂದೊಮ್ಮೆ ನೀವು ಚಿತ್ರದಲ್ಲಿ ಭೂತವನ್ನು ಗುರುತಿಸಿದ್ದರೆ ಸರಿ. ನೀವು ಗುರುತಿಸಿದ ಭೂತ ಸರಿಯಾಗಿದೆಯೇ ಇಲ್ಲವೇ ಚೆಕ್‌ (Check) ಮಾಡೋಣ.

Optical Illusion: ಫೋಟೋ ನೋಡಿ, ನೀವೆಷ್ಟು ಒಳ್ಳೆಯ ವ್ಯಕ್ತಿ ತಿಳ್ಕೊಳ್ಳಿ

ನೀವು ಭೂತವನ್ನು ಗುರುತಿಸಲು ಎಷ್ಟು ಸಮಯ (Time) ತೆಗೆದುಕೊಂಡಿರಿ? ಕಿರು ಅವಧಿಯಲ್ಲಿ (Short Duration) ಗುರುತಿಸಿದಿರಾ ಅಥವಾ ಹೆಚ್ಚು ಸಮಯ ಬೇಕಾಯಿತಾ? ಅಥವಾ ಕೆಲವರಿಗೆ ಭೂತವನ್ನು ಗುರುತಿಸಲು ಸಾಧ್ಯವೇ ಆಗದಿರಬಹುದು. ಒಟ್ಟಿನಲ್ಲಿ ಚೆಕ್ ಮಾಡಬೇಕು.

ಫೋಟೋದಲ್ಲಿರೋ ಗೂಬೆ ಹತ್ತೇ ಸೆಕೆಂಡಲ್ಲಿ ಪತ್ತೆ ಹಚ್ಚಿದ್ರೆ ನಿಮ್ಗೆ ಹದ್ದಿನ ಕಣ್ಣಿದೆ ಎಂದರ್ಥ

ಕಾಲುಗಳಿಲ್ಲದ ಹುಡುಗಿ!
ಚಿತ್ರದ ಮೇಲೆ ಮತ್ತೊಮ್ಮೆ ಕಣ್ಣಾಡಿಸಿ. ಅತಿಥಿಗಳ ಸಾಲಿನಲ್ಲಿ ನಿಂತಿರುವವರ ಕಾಲುಗಳನ್ನು ನೋಡಿದಿರಾ? ಚಿತ್ರದ ಎಡಭಾಗದಲ್ಲಿ ಹಸಿರು-ಬಿಳಿ ಬಣ್ಣದ ಗೌನ್‌ ಧರಿಸಿರುವ ಹುಡುಗಿಗೆ (Girl) ಕಾಲು (Feet) ಗಳಿಲ್ಲ. ಹಾಗಾಗಿ ಅದೇ ಭೂತ ಎನ್ನುವ ತೀರ್ಮಾನಕ್ಕೆ ಬಂದಿದ್ದೀರಾ? ಹಾಗಾದರೆ ನಿಮ್ಮ ಗ್ರಹಿಕೆ ಸರಿಯಾಗಿದೆ. ಏಕೆಂದರೆ, ಆಕೆಯೇ ಭೂತ. ಒಂದೊಮ್ಮೆ ಆಕೆಯ ಕಾಲುಗಳನ್ನು ನೀವು ಗ್ರಹಿಸಿಲ್ಲ ಎಂದಾದರೆ ನಿಮಗೆ ಹೆಚ್ಚಿನ ಸೂಕ್ಷ್ಮ ದೃಷ್ಟಿ ಇಲ್ಲ. ಒಂದೊಮ್ಮೆ ಗುರುತಿಸಿ ಗೊಂದಲಕ್ಕೆ ಒಳಗಾಗಿದ್ದರೂ ಪರವಾಗಿಲ್ಲ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?