ಪತಿ ಅಕ್ರಮ ಸಂಬಂಧ ಇಟ್ಕೊಳ್ಳೋದು ವರದಕ್ಷಿಣೆ ಕಿರುಕುಳ, ಸಾವಿಗೆ ಕಾರಣವಲ್ಲ: ಹೈಕೋರ್ಟ್‌

Published : Sep 10, 2023, 01:13 PM IST
ಪತಿ ಅಕ್ರಮ ಸಂಬಂಧ ಇಟ್ಕೊಳ್ಳೋದು ವರದಕ್ಷಿಣೆ ಕಿರುಕುಳ, ಸಾವಿಗೆ ಕಾರಣವಲ್ಲ: ಹೈಕೋರ್ಟ್‌

ಸಾರಾಂಶ

ಪುರುಷನ ವಿವಾಹೇತರ ಸಂಬಂಧ ಅಥವಾ ಬೆಟ್ಟಿಂಗ್ ಅಭ್ಯಾಸಗಳಿಂದ ಪತ್ನಿ ಆತ್ಮಹತ್ಯೆ ಮಾಡ್ಕೊಂಡ್ರೆ ಅದಕ್ಕೆ ವರದಕ್ಷಿಣೆ ಕಿರುಕುಳ ಕಾರಣವಲ್ಲ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.  

ಹೊಸದಿಲ್ಲಿ (ಸೆಪ್ಟೆಂಬರ್ 10, 2023): ವರದಕ್ಷಿಣೆ ಕಿರುಕುಳದಿಂದ ಮಹಿಳೆಯರು ಸಾಯೋದು, ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಎಲ್ಲದಕ್ಕೂ ಪತಿಯೆ ಕಾರಣವೆಂದೇನಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಆದರೆ, ಹೈಕೋರ್ಟ್‌ ತೀರ್ಪಿನ ಪ್ರಕರಣದ ವಿವರ ಹೀಗಿದೆ ನೋಡಿ..

ಪುರುಷನ ವಿವಾಹೇತರ ಸಂಬಂಧ ಅಥವಾ ಬೆಟ್ಟಿಂಗ್ ಅಭ್ಯಾಸಗಳಿಂದ ಪತ್ನಿ ಆತ್ಮಹತ್ಯೆ ಮಾಡ್ಕೊಂಡ್ರೆ ಅದಕ್ಕೆ ವರದಕ್ಷಿಣೆ ಕಿರುಕುಳ ಕಾರಣವಲ್ಲ ಎಂದು ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.  ಪತ್ನಿಯ ವರದಕ್ಷಿಣೆ ಮರಣಕ್ಕೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಬಿ ಅಡಿಯಲ್ಲಿ ಪುರುಷನ ವಿವಾಹೇತರ ಸಂಬಂಧ ಅಥವಾ ಬೆಟ್ಟಿಂಗ್ ಅಭ್ಯಾಸಗಳು ಆತನನ್ನು ಒಳಗೊಳ್ಳಲು ಕಾರಣವಾಗುವುದಿಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಅಲ್ಲದೆ, ತನ್ನ ಪತ್ನಿ ಆತ್ಮಹತ್ಯೆಯಿಂದ ಮೃತಪಟ್ಟ ವ್ಯಕ್ತಿಗೆ ಜಾಮೀನು ನೀಡಿದೆ. 

ಇದನ್ನು ಓದಿ: 45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್‌

ಆಗಸ್ಟ್‌ 2022 ರಲ್ಲಿ ಮದುವೆಯಾದ ಎರಡು ವರ್ಷಗಳೊಳಗೆ ಆತ್ಮಹತ್ಯೆ ಮಾಡ್ಕೊಂಡ ಪತ್ನಿ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವಲ್ಲ ಎಂದು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ. IPC ಯ 304B ಸೆಕ್ಷನ್ ಅನ್ನು ಆರೋಪಿ ವಿರುದ್ಧ ದಾಖಲಿಸಲು ಮಹಿಳೆಯ ಸಾವಿಗೆ ಸ್ವಲ್ಪ ಸಮಯ ಮುನ್ನ ಆಕೆಗೆ ಪತಿ ಅಥವಾ ಆತನ ಮನೆಯವರು ಕಿರುಕುಳ ನೀಡಿರಬೇಕು. ಅಲ್ಲದೆ, ಆ ಕಿರುಕುಳವು ವರದಕ್ಷಿಣೆಯ ಬೇಡಿಕೆಗೆ ಸಂಬಂಧಿಸಿರಬೇಕು ಎಂದು ನ್ಯಾಯಮೂರ್ತಿ ಗಮನಿಸಿದರು.

ಇನ್ನು, "ಸಾವಿಗೆ (ಸ್ವಲ್ಪ ಸಮಯ) ಮುಂಚೆ" ಕಿರುಕುಳ ಎಂಬುದು ಸಾಪೇಕ್ಷ ಅಭಿವ್ಯಕ್ತಿಯಾಗಿದೆ. ಸಮಯದ ವಿಳಂಬವು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರಬಹುದು. ವರದಕ್ಷಿಣೆಯ ಬೇಡಿಕೆಯು ಹಳೆಯದಾಗಿರಬಾರದು. ಆದರೆ ಐಪಿಸಿ ಸೆಕ್ಷನ್‌ 304B ಅಡಿಯಲ್ಲಿ ವಿವಾಹಿತ ಮಹಿಳೆಯ ಸಾವಿಗೆ ನಿರಂತರ ಕಾರಣವಾಗಿರಬೇಕು’’ ಎಂದು ದೆಹಲಿ ಹೈಕೋರ್ಟ್‌ ಏಕಸದಸ್ಯ ಪೀಠ ಹೇಳಿದೆ.

ಇದನ್ನೂ ಓದಿ: ಲವ್ ಜಿಹಾದ್‌: ಮದ್ವೆಯಾಗಿದ್ರೂ ಹಿಂದೂ ಹುಡುಗಿ ಜತೆ ಲವ್ ನಾಟಕವಾಡ್ದ ಶಕೀಬ್; ಆತ್ಮಹತ್ಯೆ ಮಾಡ್ಕೊಂಡ ಪಿಂಕಿ ಗುಪ್ತಾ

ಪ್ರಕರಣದ ಹಿನ್ನೆಲೆ..

ತಾನು ಕಾನೂನು ಪದವೀಧರನಾಗಿದ್ದು, ವಕೀಲ ವೃತ್ತಿ ನಡೆಸುತ್ತಿದ್ದೇನೆ ಎಂದು ಮಹಿಳೆಗೆ ಪತಿ ಸುಳ್ಳು ಹೇಳಿದ್ದ. ನಂತರ ಆತನ ವಿವಾಹೇತರ ಸಂಬಂಧ ಮತ್ತು ಬೆಟ್ಟಿಂಗ್ ಅಭ್ಯಾಸಗಳ ಬಗ್ಗೆ ಪತ್ನಿ ತಿಳಿದುಬಂದಿದ್ದು, ಅವರಿಬ್ಬರ ಸಂಬಂಧ ಹಳಸಿದ ಕಾರಣ ವಿಚ್ಛೇದನ ಅರ್ಜಿ ಸೇರಿದಂತೆ ಆತನ ವಿರುದ್ಧ ಹಲವು ಪ್ರಕರಣಗಳನ್ನು ಆಕೆ ದಾಖಲಿಸಿದ್ದಳು. ಅಲ್ಲದೆ, ದಂಪತಿ ಏಪ್ರಿಲ್ 19, 2021 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಮಹಿಳೆ ಆಗಸ್ಟ್ 7, 2022 ರಂದು ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿದುಬಂದಿದೆ.

ಆದರೆ, ಸಂತ್ರಸ್ತೆ ತನ್ನ ಗಂಡನ ಮನೆಯಿಂದ ಹೊರಬಂದ ನಂತರ ಆರೋಪಿಯು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಪ್ರಾಸಿಕ್ಯೂಷನ್ ವಾದದ ಬಳಿಕ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ಅಲ್ಲದೆ, ಆಕೆ ಸಾವಿಗೆ ಮುನ್ನ ಕಿರುಕುಳ ಅನುಭವಿಸಿದ್ದಾಳೆ ಎನ್ನುವುದಕ್ಕೆ ಸಾಕ್ಷಿ ಇಲ್ಲ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಗಗನಸಖಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್‌: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!