ಒಂದು ಮದುವೆ, ಅನೇಕರ ಜೊತೆ ಸಂಬಂಧ! ಭಾರತದಲ್ಲಿ ಹೆಚ್ಚಾಗ್ತಿದೆ ಓಪನ್ ಮ್ಯಾರೇಜ್ ಟ್ರೆಂಡ್

Published : Feb 03, 2025, 02:05 PM ISTUpdated : Feb 03, 2025, 02:49 PM IST
ಒಂದು ಮದುವೆ, ಅನೇಕರ ಜೊತೆ ಸಂಬಂಧ! ಭಾರತದಲ್ಲಿ ಹೆಚ್ಚಾಗ್ತಿದೆ ಓಪನ್ ಮ್ಯಾರೇಜ್ ಟ್ರೆಂಡ್

ಸಾರಾಂಶ

ಸಾಂಪ್ರದಾಯಿಕ ವಿವಾಹ ಪದ್ಧತಿಗೆ ಪರ್ಯಾಯವಾಗಿ ಮುಕ್ತ ವಿವಾಹ ಪರಿಕಲ್ಪನೆ ಭಾರತದಲ್ಲೂ ಹೆಚ್ಚುತ್ತಿದೆ. ಸಂಗಾತಿಯ ಒಪ್ಪಿಗೆಯೊಂದಿಗೆ ಬೇರೆಯವರೊಂದಿಗೆ ಪ್ರಣಯ/ಲೈಂಗಿಕ ಸಂಬಂಧ ಹೊಂದುವ ಸ್ವಾತಂತ್ರ್ಯ ಇರುತ್ತದೆ. ಡೇಟಿಂಗ್ ಆ್ಯಪ್‌ಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಆದರೆ, ಸಾಮಾಜಿಕ ಸ್ವೀಕಾರಾರ್ಹತೆ, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ.

ವಿವಾಹ (Marriage) ಏಳು ಜನ್ಮಗಳ ನಂಟು ಎನ್ನುತ್ತಿದ್ದ ಭಾರತೀಯರ ಮದುವೆ ಕಲ್ಪನೆ ನಿಧಾನವಾಗಿ ಬದಲಾಗ್ತಾ ಇದೆ. ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲೂ ನಾನಾ ರೀತಿಯ ವಿವಾಹಗಳು ಜನಪ್ರಿಯತೆ ಗಳಿಸ್ತಿವೆ. ಈ ಹಿಂದೆ ಅರೇಂಜ್ ಮ್ಯಾರೇಜ್ (arranged marriage), ಲವ್ ಮ್ಯಾರೇಜ್ (love marriage) ಎಂಬ ಎರಡು ಕಾನ್ಸೆಪ್ಟ್ ಮಾತ್ರ ಭಾರತೀಯರಿಗೆ ತಿಳಿದಿತ್ತು. ಆದ್ರೀಗ ಅದಕ್ಕೆ ಹೊಸ ಹೊಸ ಮ್ಯಾರೇಜ್ ಸೇರ್ಪಡೆಯಾಗಿದೆ. ಅದ್ರಲ್ಲಿ ಓಪನ್ ಮ್ಯಾರೇಜ್ ಕೂಡ ಸೇರಿದೆ. ಈ ಓಪನ್ ಮ್ಯಾರೇಜ್ (open marriage) ಅಂದ್ರೇನು? ಅದಕ್ಕೆ ಭಾರತೀಯರು ಎಷ್ಟರಮಟ್ಟಿಗೆ ಆಸಕ್ತಿ ತೋರಿಸ್ತಾ ಇದ್ದಾರೆ ಎಂಬ ವಿವರ ಇಲ್ಲಿದೆ.

ಮುಕ್ತ ವಿವಾಹ ಎಂದ್ರೇನು? : ದಾಂಪತ್ಯ ಸಂಬಂಧ ಎಲ್ಲ ಸಂಬಂಧಗಳಿಗಿಂತ ಭಿನ್ನವಾದದ್ದು. ಇದ್ರಲ್ಲಿ ನಂಬಿಕೆ, ವಿಶ್ವಾಸ ಮುಖ್ಯವಾಗುತ್ತದೆ. ಇಬ್ಬರು ತಮ್ಮ ಇಡೀ ಜೀವನವನ್ನು ಒಟ್ಟಿಗೆ ಕಳೆಯಬೇಕು. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಪರಸ್ಪರ ಬೆಂಬಲವಾಗಿ ನಿಲ್ಬೇಕು. ಸಮರ್ಪಣೆ ಮತ್ತು ನಂಬಿಕೆ ಇಲ್ಲದೆ ದಾಂಪತ್ಯ ಜೀವಂತವಾಗಿರಲು ಸಾಧ್ಯವಿಲ್ಲ. ಆದ್ರೆ ಈ ಮುಕ್ತ ವಿವಾಹದಲ್ಲಿ ಇದ್ಯಾವುದಕ್ಕೂ ಬೆಲೆ ಇಲ್ಲ. ಇದು ಒಂದು ರೀತಿಯ ವಿವಾಹೇತರ ಸಂಬಂಧ. ಇಬ್ಬರು ಪರಸ್ಪರ ಮದುವೆಯಾಗ್ತಾರೆ ನಿಜ. ಆದ್ರೆ ಪರಸ್ಪರ ಒಪ್ಪಿಗೆಯೊಂದಿಗೆ ಇತರರ ಜೊತೆ ಸಂಬಂಧವನ್ನು ಬೆಳೆಸ್ತಾರೆ. ಸಂಗಾತಿ ಜೊತೆಗೆ ವಾಸವಿದ್ರೂ ಅವರಿಗೆ ಬೇರೆಯವರ ಜೊತೆ ಪ್ರಣಯ ಹಾಗೂ ಲೈಂಗಿಕ ಸಂಬಂಧ ಬೆಳೆಸುವ ಸ್ವಾತಂತ್ರ್ಯ, ಒಪ್ಪಿಗೆ ಇರುತ್ತದೆ. ಇಲ್ಲಿ ಮದುವೆಯಾದ ಇಬ್ಬರು ಒಟ್ಟಿಗೆ ವಾಸ ಮಾಡ್ಬೇಕು ಎನ್ನುವ ನಿಯಮವೂ ಇಲ್ಲ. ಒಬ್ಬ ಸಂಗಾತಿ ಬೇರೆಯವರ ಜೊತೆ ಸಂಬಂಧ ಬೆಳೆಸುವುದು ಇನ್ನೊಬ್ಬ ಸಂಗಾತಿಗೆ ತಿಳಿದಿರುತ್ತದೆ. ಇದಕ್ಕೆ ಅವರ ಸಂಪೂರ್ಣ ಒಪ್ಪಿಗೆ ಕೂಡ ಇರುತ್ತದೆ. ಒಂದಕ್ಕಿಂತ ಹೆಚ್ಚು ಸಂಬಂಧವನ್ನು ಹೊಂದಿರುವುದು ಮುಕ್ತ ವಿವಾಹ. ಆದ್ರೆ ಬಹುಪತ್ನಿತ್ವಕ್ಕಿಂತ ಭಿನ್ನವಾಗಿದೆ. ಇಲ್ಲಿ ಸಂಬಂಧ ಬೆಳೆಸಿದ ಎಲ್ಲರ ಜೊತೆ ಮದುವೆಯ ಬಂಧವಿರೋದಿಲ್ಲ. ದೈಹಿಕ ಸಂಬಂಧಕ್ಕಿಂತ ಪ್ರೀತಿ ಹಾಗೂ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಬಿಟ್ಟುಹೋದವರು ಮರಳಿ ಬರಬೇಕೆ? ಇದನ್ನು 108 ಬಾರಿ ಹೇಳಿ ಮ್ಯಾಜಿಕ್​ ನೋಡಿ: ಡಾ.ಸೌಜನ್ಯ ಟಿಪ್ಸ್​

ಭಾರತೀಯರಲ್ಲಿ ಹೆಚ್ಚಾಗಿದೆ ಆಸಕ್ತಿ ! : ವಿದೇಶದಲ್ಲಿ ಪ್ರಚಲಿತವಿದ್ದ ಓಪನ್ ಮ್ಯಾರೇಜ್, ಭಾರತದಲ್ಲೂ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸಿದೆ. ಮೆಟ್ರೋ ಸಿಟಿಗಳಲ್ಲಿ ಇದ್ರ ಗ್ರಾಫ್ ವೇಗವಾಗಿ ಏರ್ತಿದೆ. ಭಾರತೀಯರು ಎಷ್ಟು ಆಸಕ್ತಿ ತೋರುತ್ತಿದ್ದಾರೆ ಎಂಬುದು ವರದಿಯೊಂದರಿಂದ ಬಹಿರಂಗಗೊಂಡಿದೆ.  ಫ್ರಾನ್ಸ್‌ನ ಪ್ರಸಿದ್ಧ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರ ಪ್ರೊಫೈಲ್‌ಗಳಿವೆ. ಇದು ಹೆಚ್ಚುವರಿ ವೈವಾಹಿಕ ಡೇಟಿಂಗ್ ಅಪ್ಲಿಕೇಶನ್ ಆಗಿದ್ದು, ವಿವಾಹಿತರು ಪರಸ್ಪರ ಸುಳ್ಳು ಹೇಳದೆ ಇನ್ನೊಬ್ಬ ಸಂಗಾತಿಯನ್ನು ಇಲ್ಲಿ ಹುಡುಕುತ್ತಾರೆ. 2023ರಲ್ಲಿ ಬಂಬಲ್ ಕೂಡ ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ನಡೆಸಿತ್ತು. ಶೇಕಡಾ 60ರಷ್ಟು ಒಂಟಿ ಭಾರತೀಯರು ಓಪನ್ ಮ್ಯಾರೇಜ್ ನಲ್ಲಿ ಆಸಕ್ತಿ ತೋರಿದ್ದಾರೆ ಎಂಬುದು ಬಹಿರಂಗವಾಗಿತ್ತು.  

ಈ 4 ಗುಟ್ಟುಗಳನ್ನು ನಿಮ್ಮ ಗೆಳೆಯ ಹಾಗೂ ಪತ್ನಿಗೆ ಅಪ್ಪಿತಪ್ಪಿಯೂ ಹೇಳಬೇಡಿ!

ಓಪನ್ ಮ್ಯಾರೇಜ್ ಎಷ್ಟು ಸೂಕ್ತ?  : ಸಾಮಾನ್ಯ ಮದುವೆಯಂತೆ ಓಪನ್ ಮ್ಯಾರೇಜ್ ಕೂಡ ಆರೋಗ್ಯಕರವಾಗಿರಬಹುದು. ಆದ್ರೆ ಅದ್ರಲ್ಲೂ ಕೆಲ ಲಾಭ – ನಷ್ಟಗಳಿವೆ. ವ್ಯಕ್ತಿಯ ಸ್ವಭಾವಕ್ಕೆ ತಕ್ಕಂತೆ ಇದು ಭಿನ್ನವಾಗ್ತಾ ಹೋಗುತ್ತದೆ. ಓಪನ್ ಮ್ಯಾರೇಜ್ ಗೆ ಒಪ್ಪಿಗೆ ನೀಡುವ ಮುನ್ನ ಅದ್ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಸಮಾಜದ ರೂಢಿಗೆ ಇದು ವಿರುದ್ಧವಾಗಿರುವ ಕಾರಣ ಸಾಧಕ – ಬಾಧಕದ ಬಗ್ಗೆ ನೀವು ಚರ್ಚೆ ನಡೆಸಬೇಕು. ತಜ್ಞರಿಂದ ಸಲಹೆ ಪಡೆದು ನಂತ್ರ ನೀವು ನಿರ್ಧಾರ ತೆಗೆದುಕೊಳ್ಳಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ