ಈ ಡೇಟ್‌ನಲ್ಲಿ ಹುಟ್ಟಿದ ಹುಡುಗರ ಮೇಲೆ ಹುಡುಗೀರು ಬೇಗ ಫಿದಾ ಆಗ್ತಾರಂತೆ!

Published : May 19, 2026, 10:27 AM IST
 Boys More Attractive

ಸಾರಾಂಶ

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ವ್ಯಕ್ತಿತ್ವದ ಗುಟ್ಟನ್ನು ಹೇಳುತ್ತದೆ. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದ ಹುಡುಗರು ಪಾರ್ಟಿಗಳ ಜೀವಾಳ ಆಗಿರುತ್ತಾರೆ ಮತ್ತು ಹುಡುಗಿಯರನ್ನು ಬೇಗನೇ ಇಂಪ್ರೆಸ್ ಮಾಡುತ್ತಾರೆ ಎಂದು ನಂಬಲಾಗಿದೆ.

DOB ರಹಸ್ಯಗಳು: ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿಯಲ್ಲಿ, ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಬ್ಬರ ವ್ಯಕ್ತಿತ್ವ, ಆಕರ್ಷಣೆ ಮತ್ತು ಸಂಬಂಧಗಳ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದ ಹುಡುಗರಲ್ಲಿ ಒಂದು ವಿಶೇಷವಾದ ಆಕರ್ಷಣೆ ಮತ್ತು ಆತ್ಮವಿಶ್ವಾಸ ಇರುತ್ತದೆ ಎಂದು ನಂಬಲಾಗಿದೆ. ಇದರಿಂದ ಜನರು, ಅದರಲ್ಲೂ ವಿಶೇಷವಾಗಿ ಹುಡುಗಿಯರು ಇವರ ಮಾತು, ಸ್ಟೈಲ್‌ಗೆ ಬೇಗನೇ ಮರುಳಾಗುತ್ತಾರೆ. ಹಾಗಾದರೆ, ಸಂಖ್ಯಾಶಾಸ್ತ್ರದ ಪ್ರಕಾರ ಹೆಚ್ಚು ಆಕರ್ಷಕ ಎಂದು ಪರಿಗಣಿಸಲಾದ ಆ 4 ದಿನಾಂಕಗಳು ಯಾವುವು ಎಂದು ನೋಡೋಣ ಬನ್ನಿ…
 

1, 10, 19 ಮತ್ತು 28ನೇ ತಾರೀಖಿನಂದು ಜನಿಸಿದ ಹುಡುಗರು

ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ (ಮೂಲಾಂಕ) 1 ಆಗಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ 1ನೇ ಸಂಖ್ಯೆಯನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಇವರು ತುಂಬಾನೇ ಆತ್ಮವಿಶ್ವಾಸಿ, ಸ್ಮಾರ್ಟ್ ಮತ್ತು ನಾಯಕತ್ವದ ಗುಣ ಹೊಂದಿದವರಾಗಿರುತ್ತಾರೆ. ಇವರ ವ್ಯಕ್ತಿತ್ವ ತುಂಬಾ ಸ್ಟ್ರಾಂಗ್ ಇರುವುದರಿಂದ, ಎಲ್ಲಿಗೆ ಹೋದರೂ ಎಲ್ಲರ ಗಮನ ಸೆಳೆಯುತ್ತಾರೆ. ಹುಡುಗಿಯರು ಇವರ ಕಾನ್ಫಿಡೆನ್ಸ್ ಮತ್ತು ಸ್ಟೈಲ್‌ಗೆ ಬೇಗನೇ ಇಂಪ್ರೆಸ್ ಆಗುತ್ತಾರೆ.

3, 12, 21 ಮತ್ತು 30ನೇ ತಾರೀಖಿನಂದು ಜನಿಸಿದ ಹುಡುಗರು

ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ 3. ಇದನ್ನು ಗುರು ಗ್ರಹಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಇವರು ತುಂಬಾ ಕ್ರಿಯೇಟಿವ್, ಬುದ್ಧಿವಂತ ಮತ್ತು ಸದಾ ಚೈತನ್ಯದಿಂದ ಇರುತ್ತಾರೆ. ಇವರ ಮಾತಾಡುವ ಶೈಲಿ ಮತ್ತು ಸಕಾರಾತ್ಮಕ ಸ್ವಭಾವ ಜನರನ್ನು ಬೇಗ ಆಕರ್ಷಿಸುತ್ತದೆ. ತಮ್ಮ ಆತ್ಮವಿಶ್ವಾಸ ಮತ್ತು ಪ್ರತಿಭೆಯಿಂದಲೇ ಇವರು ಎಲ್ಲರ ನಡುವೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ.

5, 14 ಮತ್ತು 23ನೇ ತಾರೀಖಿನಂದು ಜನಿಸಿದ ಹುಡುಗರು

ಇವರ ಜನ್ಮಸಂಖ್ಯೆ 5 ಆಗಿದ್ದು, ಇದನ್ನು ಬುಧ ಗ್ರಹಕ್ಕೆ ಹೋಲಿಸಲಾಗುತ್ತದೆ. ಇವರು ಮಾತಿನಲ್ಲೇ ಜನರನ್ನು ಇಂಪ್ರೆಸ್ ಮಾಡುವುದರಲ್ಲಿ ಎಕ್ಸ್‌ಪರ್ಟ್. ಇವರ ಹಾಸ್ಯಪ್ರಜ್ಞೆ ಕೂಡಾ ಚೆನ್ನಾಗಿರುತ್ತದೆ ಮತ್ತು ಎಲ್ಲರ ಜೊತೆ ಬೇಗ ಬೆರೆಯುತ್ತಾರೆ. ಇದೇ ಕಾರಣಕ್ಕೆ ಇವರ ಸುತ್ತಮುತ್ತ ಯಾವಾಗಲೂ ಹುಡುಗಿಯರು ಇರುತ್ತಾರೆ.

6, 15 ಮತ್ತು 24ನೇ ತಾರೀಖಿನಂದು ಜನಿಸಿದ ಹುಡುಗರು

ಜನ್ಮಸಂಖ್ಯೆ 6 ಅನ್ನು ಪ್ರೀತಿ ಮತ್ತು ಆಕರ್ಷಣೆಯ ಕಾರಕನಾದ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗರು ರೊಮ್ಯಾಂಟಿಕ್, ಕೇರಿಂಗ್ ಮತ್ತು ಸ್ಟೈಲಿಶ್ ಆಗಿರುತ್ತಾರೆ. ಇವರ ವ್ಯಕ್ತಿತ್ವ ತುಂಬಾ ಚಾರ್ಮಿಂಗ್ ಆಗಿದ್ದು, ಸಂಬಂಧಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಹುಡುಗಿಯರು ಇವರ ಮೃದು ಸ್ವಭಾವ ಮತ್ತು ಕಾಳಜಿಯ ಮನೋಭಾವಕ್ಕೆ ಬೇಗ ಮರುಳಾಗುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Boss ಮನೆಮಗಳು ಆಮೇಲೆ, ಮೊದ್ಲು ಅಪ್ಪ-ಅಮ್ಮನ ಮಗಳು; ಅವ್ರೇ ಕೇಳಲ್ಲ, ಇವ್ರೆಲ್ಲಾ ಯಾರು? ಐಶ್ವರ್ಯ ಗರಂ
ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ: ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ