ಮದುವೆಯಾಗಲು ಇಷ್ಟವಿಲ್ಲ, ಏನು ಮಾಡಲಿ?

By Kannadaprabha News  |  First Published Oct 30, 2019, 4:16 PM IST

ಹೆಣ್ಣು ಮಗಳೊಬ್ಬಳಿಗೆ ಮದುವೆಯಾಗಲು ಇಷ್ಟವಿಲ್ಲ. ಮನೆಯಲ್ಲಿ ಮದುವೆಯಾಗು ಎಂದು ಒತ್ತಾಯಪಡಿಸುತ್ತಿದ್ದಾರೆ. ಅವರನ್ನು ಒಪ್ಪಿಸುವುದು ಹೇಗೆ? ಆಕೆಗೆ ನಿಮ್ಮ ಸಲಹೆ ನೀಡಿ. 


ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕೆಂಬುವ ಚಿಂತೆ ಎಲ್ಲಾ ತಂದೆ ತಾಯಿಗೂ ಬರುವುದು ಸಹಜ. ಆ ಸಾಲಿನಲ್ಲಿ ನಾನೂ ಇದ್ದೇನೆ. ನನಗೇನು ಅಷ್ಟೊಂದು ಹೇಳಿಕೊಳ್ಳುವ ವಯಸ್ಸೂ ಆಗಿಲ್ಲ. ಸ್ನಾತಕೋತ್ತರ ಮುಗಿಸಿ ಎರಡು ವರ್ಷವಾಗಿದೆ. ಈಗ ಟೀಚರ್ ಕೆಲಸ ಮಾಡಿಕೊಂಡು ಬಿಎಡ್ ಅನ್ನು ಕರೆಸ್ಪಾಂಡೆನ್ಸ್‌ನಲ್ಲಿ ಮಾಡುತ್ತಿದ್ದೇನೆ. ಮದುವೆ ಎಂದ ಮೇಲೆ ಜಾತಕ ನೋಡುವುದು ಸಾಮಾನ್ಯ.
ಈಗ ಅದೇ ಸಮಸ್ಯೆಯಾಗಿದೆ.

ಜಾತಕದ ಪ್ರಕಾರ ಬೇಗ ಮದುವೆ ಮಾಡಬೇಕು, ತಡವಾದರೆ ಎಂಟೊಂಭತ್ತು ವರ್ಷ ಕಾಯಬೇಕು ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಪೋಷಕರು ಈ ವಿಚಾರವಾಗಿ ತಲೆಕೆಡಿಸಿಕೊಂ ಡಿದ್ದಾರೆ. ನನಗೆ ಇಷ್ಟು ಬೇಗ ಮದುವೆಯೂ ಇಷ್ಟವಿಲ್ಲ.

Tap to resize

Latest Videos

ಬಿಎಡ್ ಮುಗಿಸಿ, ಕೆಲಸಕ್ಕೆ ಹೋಗಬೇಕು ಎಂಬ ಆಸೆ ಇದೆ. ಅಲ್ಲದೆ ಅವರು ನೋಡುತ್ತಿರುವ ಯಾವ ಹುಡುಗನೂ ನನಗೆ ಇಷ್ಟವಾಗುತ್ತಿಲ್ಲ. ಪೋಷಕರೂ ಕನ್ವಿನ್ಸ್ ಆಗ್ತಿಲ್ಲ. ಹೀಗಿರುವಾಗ ನಾನೇನು ಮಾಡಲಿ. ಸಲಹೆ ಇದ್ದರೆ ಹೇಳಿ ಪ್ಲೀಸ್...

- ಭಾರತಿ 

ನಿಮ್ಮ ಸಲಹೆಗಳನ್ನು suvarnanewsindia@gmail.com ಗೆ ಮೇಲ್ ಮಾಡಿ 

click me!