ಪ್ರೀತಿ ಮಾಡೋವಾಗ ಇಲ್ಲದ ಜಾತಿ ಬೇಧ, ಮದುವೆ ಆಗುವಂತೆ ಕೇಳಿದಾಗ ಅಡ್ಡಬಂತಂತೆ. ಚೆಲುವಿನ ಚಿತ್ತಾರ ಸಿನಿಮಾ ಮಾದರಿಯಲ್ಲಿ ಪ್ರೀತಿ ವೈಫಲ್ಯದಿಂದ ಹುಚ್ಚಿಯಾದ ಯುವತಿ.
ಬಳ್ಳಾರಿ (ಜೂ.30): ರಾಜ್ಯದಲ್ಲಿ ಚೆಲುವಿನಚಿತ್ತಾರ ಸಿನಿಮಾ ಎಂದರೆ ಬಹುತೇಕರಿಗೆ ಚಿರಪರಿಚಿತ ಇದ್ದೇ ಇರುತ್ತದೆ. ಚೆಲುವಿನಚಿತ್ತಾರದಲ್ಲಿ ಶ್ರೀಮಂತ ಮನೆ ಹುಡುಗಿಯನ್ನು ಪ್ರೀತಿಸಿದ ಗ್ಯಾರೇಜ್ ಯುವಕ ಪ್ರೇಮ ವೈಫಲ್ಯದಿಂದ ಕೊನೆಗೆ ಹುಚ್ಚನಾದರೆ, ಬಳ್ಳಾರಿಯಲ್ಲಿ ನಡೆದ ಒಂದು ಲವ್ ಸ್ಟೋರಿಯಲ್ಲಿ ಹುಡುಗಿಯೇ ಹುಚ್ಚಳಾಗಿ ಆತ್ಮಹತ್ಯೆಗೆ ಯತ್ನಿಸುರುವ ಘಟನೆ ನಡೆದಿದೆ.
ಇದು ಚೆಲುವಿನಚಿತ್ತಾರ ಸಿನಿಮಾ ಮಾದರಿಯ ಕತೆಯಾಗಿದೆ. ಸಿನಿಮಾದಲ್ಲಿ ಮದುವೆಯಾದ ಬಳಿಕ ಜಾತಿ ಅಡ್ಡ ಬಂದು ಪೋಷಕರಿಂದ ಬಿಡುಗಡೆಯಾಗಿ ಹಿರೋ ಹುಚ್ಚನಾದರೆ, ಇಲ್ಲಿ ಮದುವೆಯ ವಿಚಾರಕ್ಕೆ ಜಾತಿ ಅಡ್ಡ ಬಂದು ಯುವತಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾಳೆ. ಸಾವು ಬದುಕಿನ ಮಧ್ಯೆ ಕೈ ಕೊಟ್ಟ ಹುಡುಗನ ಮೋಸದ ಕತೆ ಪತ್ರದ ಮೂಲಕ ಬರೆದಿಟ್ಟಿದ್ದಾಳೆ ಹದಿಹರೆಯದ ಹುಡುಗಿ. ಇನ್ನು ಪ್ರೀತಿ ಹೆಸರಲ್ಲಿ ಎಲ್ಲವನ್ನೂ ಅನುಭವಿಸುವಾಗ ಇಲ್ಲದ ಜಾತಿ ತಾರತಮ್ಯ, ಮದುವೆ ಆಗುವಾಗ ಏಕೆ ಬಂದು ಎಂದು ಹುಚ್ಚಿಯಾಗಿದ್ದಾಳೆ.
undefined
ಗಾಂಜಾ ಗುಂಗಿನಲ್ಲಿ ಸ್ನೇಹಿತರು ಪತ್ನಿಯ ಸೆರಗು ಎಳೆದ್ರೂ ಗಂಡ ಸೈಲೆಂಟ್, ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಾಳು ನರಕ!
ಸ್ನೇಹಿತೆ ಮದುವೆಗೆ ಹೋದವಳು ಪ್ರೀತಿ ಬಲೆಗೆ ಬಿದ್ದಳು: ಬಳ್ಳಾರಿಯ ಯುವತಿ ಪಿಯುಸಿ ಮುಗಿದ ಬಳಿಕ ಸ್ನೇಹಿತೆಯ ಮದುವೆಗೆ ಹೋದಾಗ ಆಕೆಯ ಗಂಡನ ಸಹೋದರನ ಜೊತೆ ಪರಿಚಯವಾಗುತ್ತದೆ. ಹುಡುಗಿ ಚೆನ್ನಾಗಿದ್ದಳು ಎಂದು ಸ್ನೇಹವನ್ನು ಬೆಳೆಸಿದ ಯುವಕ ನಿರಂತರವಾಗಿ ಮಾತನಾಡುತ್ತಾ, ಆಕೆಯ ಸ್ನೇಹವನ್ನು ಪ್ರೀತಿಯಾಗಿ ಬದಲಿಸಿದ್ದಾನೆ. ಆಗ ಯುವತಿ ತಾನು ತಳ ಸಮುದಾಯಕ್ಕೆ (ವಡ್ಡರ) ಸೇರಿದ ಯುವತಿಯೆಂದು ಹುಡುಗನಿಗೆ ಹೇಳಿದ್ದಾಳೆ. ಇನ್ನು ಮೇಲ್ಜಾತಿಗೆ (ಬಲಿಜ) ಸೇರಿದ್ದ ಯುವಕ ಯಾವ ಜಾತಿಯನ್ನೂ ಲೆಕ್ಕಿಸದೇ ಮದುವೆಯಾಗುವ ಭರವಸೆಯನ್ನು ನೀಡಿ ಸ್ನೇಹ ಹಾಗೂ ಪ್ರೀತಿ ಹೆಸರಲ್ಲಿ ಹುಡುಗಿಯನ್ನು ಕರೆದುಕೊಂಡು ಸುತ್ತಾಡುತ್ತಾ ಹಾಸಿಗೆ ಹಂಚಿಕೊಂಡಿದ್ದಾನೆ.
ವರಸೆ ಬದಲಿಸಿದ ಯುವಕ: ಇನ್ನು ಯುವತಿ ಮನೆಯವರು ಆಕೆಗೆ ಮದುವೆ ಮಾಡಲು ಮುಂದಾದಾಗ ಹುಡಗನಿಗೆ ನೀನೇ ಮದುವೆಯಾಗು ಎಂದು ಕೇಳಿದ್ದಾಳೆ. ಆಗ ಹುಡುಗ ತನ್ನ ವರಸೆಯನ್ನೇ ಬದಲಿದಿದ್ದಾನೆ. ನೀನು ಕೆಳ ಜಾತಿಯವರು ನಿನ್ನನ್ನು ಮದುವೆ ಆಗುವಯದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಮೊದಲು ಆಘಾತಗೊಂಡ ಯುವತಿ ನಂತರ ಯುವಕನ ಬಳಿ ಗೋಗರೆದು ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾಳೆ. ಸುತಾರಾಂ ಮದುವೆ ಆಗಲು ಒಪ್ಪದ ಯುವಕನಿಗೆ ನೀನು ನನ್ನೊಂದಿಗೆ ಸ್ನೇಹ, ಪ್ರೀತಿ ಹೆಸರಲ್ಲಿ ಹಾಸಿಗೆ ಹಂಚಿಕೊಂಡು ಅತ್ಯಾಚಾರ ಮಾಡಿದಾಗ ಇರದ ಜಾತಿ ಬೇಧ, ಮದುವೆಯಾಗುವಾಗ ಏಕೆ ಬಂದಿದೆ ಎಂದು ಪ್ರಶ್ನೆ ಮಾಡಿದ್ದಾಳೆ.
ಒಬ್ಬರಿಗೆ ಮನಸ್ಸು, ದೇಹ, ಮತ್ತೊಬ್ಬನ ಜೊತೆಗೆ ಮದುವೆ ಅಸಾಧ್ಯ: ಎಷ್ಟೇ ಬೇಡಿಕೊಂಡರೂ, ಕಿತ್ತಾಡಿದರೂ ಮದುವೆಗೆ ನಿರಾಕರಿಸಿದ ಯುವತಿ ಮನಸ್ಸು ಹಾಗೂ ದೇಹವನ್ನು ಹಂಚಿಕೊಂಡ ಮೇಲೆ ಬೇರೊಬ್ಬರೊಂದಿಗೆ ಮದುವೆ ಆಗುವುದು ಸಾಧ್ಯವಿಲ್ಲವೆಂದು ಹುಚ್ಚಿಯಂತೆ ನರಳಿದ್ದಾಳೆ. ನಂತರ, ಬದುಕುವುದೇ ಬೇಡವೆಂದು ದೀರ್ಘವಾದ ಡೆತ್‌ನೋಟ್ ಬರೆದಿಟ್ಟು, ನೇಣಿಗೆ ಶರಣಾಗಿದ್ದಾಳೆ. ಡೆತ್‌ನೋಟ್‌ನಲ್ಲಿ ಮದುವೆ ನಿರಾಕರಿಸಿದ ಯುವಕ ಸುನಿಲ್ ಮಾಡಿದ ಅತ್ಯಾಚಾರದ ಬಗ್ಗೆ ಮತ್ತು ಅವರ ಕುಟುಂಬದವರು ಮಾಡಿದ ನಿಂದನೆ ಬಗ್ಗೆ ಪತ್ರ ಬರೆದಿದ್ದಾಳೆ.
ROMANCE SCAM : ಪ್ರೀತಿ ಹೆಸರಿನಲ್ಲಿ ಲಕ್ಷಾಂತರ ಲೂಟಿ! ಎಚ್ಚರ ತಪ್ಪಿದ್ರೆ ಕಥೆ ಮುಗಿದಂತೆ
ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ: ಇನ್ನು ಯುವತಿ ನೇಣಿಗೆ ಶರಣಾದ ನಂತರ ಸಾಯುವ ಮುನ್ನವೇ ನೋಡಿದ ಕುಟುಂಬ ಸದಸ್ಯರು, ಮಗಳನ್ನು ಹೊತ್ತು ತಂದು ಇದೀಗ ಆಸ್ಪತ್ರೆ ಸೇರಿಸಿದ್ದಾರೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದೆ ಬಡ ಕುಟುಂಬ ನ್ಯಾಯ ಒದಗಿಸುವಂತೆ ಅಂಗಲಾಚುತ್ತಿದ್ದಾರೆ. ಮಗಳನ್ನು ಬೆಳಸಲು ಕಷ್ಟಪಟ್ಟಿದ್ದ ಕುಟುಂಬ ಈಗ ಮದುವೆ ಮಾಡಿ ಗಂಡನ ಮನೆಗೆ ಕಳಿಸಬೇಕು ಎನ್ನುವಾಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.