ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!

By Web Desk  |  First Published Oct 14, 2019, 5:44 PM IST

ಗಂಡ- ಹೆಂಡತಿ ಇಬ್ಬರದ್ದೂ ವಿಭಿನ್ನ ಅಭಿರುಚಿ. ಗಂಡನಿಗೆ ಇಂದು ಇಷ್ಟವಾದರೆ ಹೆಂಡತಿಗೆ ಅದು ಸುತರಾಂ ಇಷ್ಟವಾಗುವುದಿಲ್ಲ. ಅವನ ಸಾಧನೆ ಬಗ್ಗೆ ಇಡೀ ಜಗತ್ತೇ ಹೊಗಳಿದರೂ ಅವಳು ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ. 


ಅವನು ಬರೆದ ಕವನ ಸಂಕಲನಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿತ್ತು. ಅವನು ಅದ್ಭುತ ಕವಿ. ಅವನು ರಚಿಸಿದ ಕವನದ ಸಾಲುಗಳ ಒಂದೊಂದು ಅಕ್ಷರವೂ ಪ್ರೀತಿಯಲ್ಲಿ ಅದ್ದಿ ಬರೆದಂತಿರುತ್ತಿತ್ತು. ಅವನ ಕವನ ಸಂಕಲನಗಳು ಬಿಡುಗಡೆಯಾದ ದಿನವೇ ಪ್ರತಿಗಳು ದಾಖಲೆರೂಪದಲ್ಲಿ ಖಾಲಿಯಾಗುತ್ತಿದ್ದವು. ಯುವಕರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಆತನ ಕವನದ ಸಾಲುಗಳನ್ನು ಪ್ರೇಮ ಪತ್ರಗಳಲ್ಲಿ ಬಳಸಿಕೊಳ್ಳಲು ಆ ಪುಸ್ತಕ ಖರೀದಿಸುತ್ತಿದ್ದರು. ಕವಿ ಗೋಷ್ಠಿಗಳಲ್ಲಿ, ಸಭಾಕಾರ್ಯಕ್ರಮಗಳಲ್ಲಿ ಅಭಿಮಾನಿಗಳು ಆಟೋಪ್ರಾಫ್‌ಗಾಗಿ ಆತನನ್ನು ಸುತ್ತುವರಿಯುವುದು ತೀರಾ ಸಾಮಾನ್ಯವಾಗಿತ್ತು.

ಇದು ಸಂಸಾರಸ್ಥರಿಗಾಗಿ ಮಾತ್ರ! ನೀವಿದನ್ನು ಓದಲೇಬೇಕು!

Latest Videos

undefined

ಹಾಗೆ ಸುತ್ತುವರಿದವರು ಅವನನ್ನು ಕೇಳುತ್ತಿದ್ದರು. ಸರ್‌, ನಿಮ್ಮ ಕವನದ ಸಾಲುಗಳ ಸ್ಪೂರ್ತಿ ಎಲ್ಲಿ? ನಿಮ್ಮ ಮಡದಿಯನ್ನು ನಮಗೆ ಪರಿಚಯಿಸುವುದಿಲ್ಲವೇ? ‘ಖಂಡಿತಾ ಪರಿಚಯಿಸುತ್ತೇನೆ. ಇಲ್ಲೇ ಎಲ್ಲೋ ಇರ್ಬೇಕು’ ಎಂದು ಅವಳಿಗಾಗಿ ಹುಡುಕುತ್ತಿದ್ದ.

ಅವಳಿಗೆ ಅದ್ಯಾಕೋ ಮೊದಲಿನಿಂದಲೂ ಪತಿ ಕವನಗಳನ್ನು ಬರೆಯುವುದು ಇಷ್ಟವಿರಲಿಲ್ಲ. ಅದರಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಮಿಲನ ಎಂದು ಬರೆದರೆ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಆ ಪುಸ್ತಕಗಳನ್ನು ಓದುವವರೂ, ನಿಮಗೆ ಪ್ರಶಸ್ತಿ ಕೊಡುವವರೂ ಯಾರೂ ಸರಿಯಿಲ್ಲವೆನ್ನುವಂತೆ ಮಾತನಾಡಿಬಿಡುತ್ತಿದ್ದಳು. ನಿಮಗೆ ಬರೆಯಲು ಬೇರೆ ವಿಷಯಗಳೇ ಸಿಗುವುದಿಲ್ಲವೇ ಎಂದು ಎಷ್ಟೋ ಬಾರಿ ಪತಿಯನ್ನು ಪ್ರಶ್ನಿಸಿದ್ದಳು. ಪ್ರಶಸ್ತಿಗಳು ಹಲವಾರು ಬಂದರೂ ಅವನಿಗೆ ದೊಡ್ಡ ಸಂತೋಷವೇನೂ ಆಗುವುದಿಲ್ಲ. ತನ್ನ ಪತ್ನಿಯ ಕಣ್ಣಲ್ಲಿ ತನಗೆ ಬರಬೇಕಾದ ನಿಜವಾದ ಪ್ರಶಸ್ತಿಗಾಗಿ ಕಾಯುತ್ತಲೇ ಇದ್ದ.

 

click me!